'ಹಾನರ್ ವ್ಯೂ 20' ಮೇಲೆ 12 ಸಾವಿರ ಡಿಸ್ಕೌಂಟ್!..ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ!

|

ಅಮೆಜಾನ್ ಆಯೋಜಿಸಿರುವ ವಿಶೇಷ ಹಾನರ್ ಫ್ರೆಂಡ್‌ಶಿಪ್ ಡೇ ಸೇಲ್‌ನಲ್ಲಿ 'ಹಾನರ್ ವ್ಯೂ 20' ಸ್ಮಾರ್ಟ್‌ಫೋನ್ ಕಣ್ಣುಕುಕ್ಕುತ್ತಿದೆ. ಈ ಮೊದಲು ದೇಶದಲ್ಲಿ 37,999 ರೂ. ಗಳಿಗೆ ಬಿಡುಗಡೆಯಾಗಿದ್ದ 'ಹಾನರ್ ವ್ಯೂ 20' ಸ್ಮಾರ್ಟ್‌ಫೋನ್ ಮೇಲ್ 12 ಸಾವಿರ ರೂಪಾಯಿಗಳ ಡಿಸ್ಕೌಂಟ್ಸ್ ಪ್ರಕಟಿಸಲಾಗಿದ್ದು, ಇದೀಗ ಸ್ಮಾರ್ಟ್‌ಫೋನ್ ಕೇವಲ 25,999 ರೂ.ಗಳಿಗೆ ಲಭ್ಯವಿದೆ.

ಹೌದು, ಒನ್‌ಪ್ಲಸ್ ಕಂಪೆನಿಗೆ ಬ್ರೇಕ್ ಹಾಕುವ ಸಲುವಾಗಿ ಬಂದಿದ್ದ 'ಹಾನರ್ ವ್ಯೂ 20' ಫೋನ್ ಬೆಲೆ ಊಹಿಸಲಾಗದಷ್ಟು ಕಡಿಮೆಯಾಗಿದ್ದು, 48 ಮೆಗಾಪಿಕ್ಸೆಲ್ ಕ್ಯಾಮೆರಾ, 19.25:9 ಅನುಪಾತದ ಡಿಸ್‌ಪ್ಲೇ ಮತ್ತು 7MM ಹಿಸಿಲಿಕಾನ್ ಕಿರಿನ್ ಆಕ್ಟಾ ಕೋರ್ ಪ್ರೊಸೆಸರ್ನಂತಹ ಭಾರೀ ಫೀಚರ್ಸ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಮುಂದಾಗಿದೆ.

'ಹಾನರ್ ವ್ಯೂ 20' ಮೇಲೆ 12 ಸಾವಿರ ಡಿಸ್ಕೌಂಟ್!..ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ!

ಈ ಫೋನಿನ ಪ್ರಮುಖ ಆಕರ್ಷಣೆಯೇ ಕ್ಯಾಮರಾ ಆಗಿದ್ದು, 48 ಮೆಗಾಪಿಕ್ಸಲ್ ರಿಯರ್ ಕ್ಯಾಮರಾ ಹಾಗೂ 25 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರಾವು ಮೊಬೈಲ್ ಪ್ರಿಯರನ್ನು ಸೆಳೆಯುತ್ತಿವೆ. ಹಾಗಾದರೆ, ಭಾರೀ ಬೆಲೆ ಕಳೆದುಕೊಂಡಿರುವ ನೂತನ 'ಹಾನರ್ ವ್ಯೂ 20' ಸ್ಮಾರ್ಟ್‌ಫೋನ್ ಹೇಗಿದೆ? ಸ್ಮಾರ್ಟ್‌ಫೋನಿನ ವಿಶೇಷತೆಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹಾನರ್ ವ್ಯೂ 20 ವಿನ್ಯಾಸ!

ಹಾನರ್ ವ್ಯೂ 20 ವಿನ್ಯಾಸ!

ಇದು ಹೈ ಎಂಡ್ ಸ್ಮಾರ್ಟ್‌ಫೋನ್ ಎಂದು ಆಗಿರುವುದರಿಂದ ನೀವು ಈ ಫೋನಿನ ವಿನ್ಯಾಸವನ್ನು ಊಹಿಸಬಹುದು. ನಿಮ್ಮ ಊಹೆಯಂತೆಯೇ ಹಾನರ್ ವ್ಯೂ 20 ಸ್ಮಾರ್ಟ್‌ಫೋನ್ ವಿನ್ಯಾಸ ಅದ್ಭುತವಾಗಿದೆ. ಶೇ. 91.8 ರಷ್ಟು ಪರದೆಯಿಂದ ದೇಹದ ಅನುಪಾತ ಹೊಂದಿರುವುದರಿಂದ ಈ ಸ್ಮಾರ್ಟ್‌ಫೋನ್ ಸಂಪೂರ್ಣ ಬೆಜೆಲ್ ಲೆಸ್ (ಕಡಿಮೆ ಅಂಚುಗಳು) ವಿನ್ಯಾಸದಲ್ಲಿದೆ ಎಂದು ಹೇಳಬಹುದು. ಇನ್ನು ಹಿಂಬಾಗದಲ್ಲಿ ಡ್ಯುಯಲ್ ಕ್ಯಾಂಎರಾ ಮತ್ತು ಫಿಂಗರ್‌ಪ್ರಿಂಟ್ ಆಯ್ಕೆಯನ್ನು ನೀಡಲಾಗಿದೆ.

ಹಾನರ್ ವ್ಯೂ 20 ಡಿಸ್‌ಪ್ಲೇ ಸಾಮರ್ಥ್ಯ

ಹಾನರ್ ವ್ಯೂ 20 ಡಿಸ್‌ಪ್ಲೇ ಸಾಮರ್ಥ್ಯ

ಹಾನರ್ ವ್ಯೂ 20 ಸ್ಮಾರ್ಟ್‌ಫೋನಿನಲ್ಲಿ 6.4 ಇಂಚಿನ ಟಿಎಫ್‌ಟಿ ಎಲ್ಸಿಡಿ ಫುಲ್ ಹೆಚ್‌ಡಿ ಪರದೆಯನ್ನು ನೀಡಲಾಗಿದೆ. 19.5:9ರ ಅನುಪಾತದಲ್ಲಿ 1080x2310 ಪಿಕ್ಸಲ್ ಸಾಮರ್ಥ್ಯವನ್ನು ಹೊಂದಿರುವ ಫೋನಿನ ಸ್ಕ್ರೀನ್ 91.8 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಬಂದಿದೆ. ಇನ್ನು ಸ್ಕ್ರೀನ್ ಹೊರಭಾಗದಲ್ಲಿ ನಾಲ್ಕು ಮೂಲೆ ರೌಂಡೆಡ್ ಕರ್ವ ಇರುವುದು ಸ್ಮಾರ್ಟ್‌ಫೋನಿಗೆ ಸ್ಮಾರ್ಟ್‌ ಅಂದ ತಂದುಕೊಟ್ಟಿದೆ.

ಹಾನರ್ ವ್ಯೂ 20 ತಾಂತ್ರಿಕ ವಿಶೇಷತೆಗಳು

ಹಾನರ್ ವ್ಯೂ 20 ತಾಂತ್ರಿಕ ವಿಶೇಷತೆಗಳು

ಆಂಡ್ರಾಯ್ಡ್ 9 ನೊಂದಿಗೆ, ಆಕ್ಟಾಕೋರ್ ಹಿಸಿಲಿಕೊನ್ ಕಿರಿನ್ 980 ಉತ್ತಮ ಪ್ರೊಸೆಸರ್ ಹೊಂದಿರುವ ಹಾನರ್ ವ್ಯೂ 20 ಸ್ಮಾರ್ಟ್‌ಫೋನ್ 6 ಜಿಬಿ RAM ಮತ್ತು 64 ಜಿಬಿ ಆಂತರಿಕ ಶೇಖರಣಾ ಮತ್ತು 6 ಜಿಬಿ RAM ಮತ್ತು 128 ಜಿಬಿ ಶೇಖರಣಾ ಸಾಮರ್ಥ್ಯದಲ್ಲಿ ಬಿಡುಗಡೆಯಾಗಿದೆ. 64GB/128 GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನಿನಲ್ಲಿ ಬಾಹ್ಯ ಮೆಮೊರಿ ಸಂಗ್ರಹಕ್ಕೆ ಅವಕಾಶ ನೀಡಿಲ್ಲ.

ಹಾನರ್ ವ್ಯೂ 20 ಕ್ಯಾಮೆರಾ ಸಾಮರ್ಥ್ಯ

ಹಾನರ್ ವ್ಯೂ 20 ಕ್ಯಾಮೆರಾ ಸಾಮರ್ಥ್ಯ

20 ಎಫ್ / 2.0 ಅಪರ್ಚರ್ ಮತ್ತು ಸ್ಥಿರ ಫೋಕಸ್ ಲೆನ್ಸ್‌ನೊಂದಿಗೆ 25 ಮೆಗಾಪಿಕ್ಸೆಲ್ ಫ್ರಂಟ್-ಫೇಸ್ ಕ್ಯಾಮೆರಾ ಹಾಗೂ f / 1.8 ದ್ಯುತಿರಂಧ್ರದೊಂದಿಗೆ 48 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮರಾವು ಸೋನಿ IMX586 ಸಂವೇದಕಗಳನ್ನು ನೀಡಲಾಗಿದೆ. ಡೆಪ್ತ್ ಚಿತ್ರಗಳನ್ನು ಸೆರೆಹಿಡಿಯಲು ದ್ವಿತೀಯ 3D ಫ್ಲೈಟ್ (ToF) ಸಂವೇದಕವು ಹಲವಾರು 3D ಮತ್ತು ಸುಂದರಗೊಳಿಸುವ ಅಪ್ಲಿಕೇಶನ್‌ಗಳೊಂದಿಗೆ ವಿನ್ಯಾಸವಾಗಿದೆ. 960fps ನಿಧಾನ-ಚಲನೆಯ ವೀಡಿಯೊ ರೆಕಾರ್ಡಿಂಗ್, AI HDR, ಮ್ಯಾಜಿಕ್ UI ಅನ್ನು ಕ್ಯಾಮೆರಾ ತಂತ್ರಜ್ಞಾನದಲ್ಲಿ ನೋಡಬಹುದು.

ಹಾನರ್ ವ್ಯೂ 20 ಇತರೆ ವಿಶೇಷತೆಗಳು

ಹಾನರ್ ವ್ಯೂ 20 ಇತರೆ ವಿಶೇಷತೆಗಳು

ಹಾನರ್ ವ್ಯೂ 20 ಸ್ಮಾರ್ಟ್‌ಫೋನ್ 4000mAh ಸಾಮರ್ಥ್ಯದ ಪವರಫುಲ್ ಬ್ಯಾಟರಿ ಹೊಂದಿರುವುದನ್ನು ನೋಡಬಹುದಾಗಿದ್ದು, ಬ್ಯಾಟರಿ ತಂತ್ರಜ್ಞಾನ 4.5V / 5A ಬೆಂಬಲದೊಂದಿಗೆ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದೆ. ಬ್ಲೂಟೂತ್ ವಿ 5.0, ವೈ-ಫೈ, ಜಿಪಿಎಸ್ / ಎ-ಜಿಪಿಎಸ್, ಮತ್ತು ಯುಎಸ್ಬಿ ಟೈಪ್-ಸಿಯಂತಹ ಹೈ ಎಂಡ್ ಫೀಚರ್ಸ್ ಜೊತೆಗೆ ಕೆಂಪು, ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

Best Mobiles in India

English summary
Honor Friendship Days Sale: Honor View 20 has More Discounted on Amazon.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X