Home
ಮೊಬೈಲ್

ಹೊಸ Honor GT Pro ಫೀಚರ್ಸ್‌ ಲೀಕ್; 6000mAh ಬ್ಯಾಟರಿ.. 50MP ಕ್ಯಾಮೆರಾ.. ಬೆಲೆ ಎಷ್ಟು?

ಹಾನರ್ ಕಂಪನಿಯು ಹೊಸ ಮೊಬೈಲ್ ಬಿಡುಗಡೆಗೆ ಸಜ್ಜಾಗಿದೆ. ಈ ಫೋನಿನ ಪ್ರಮುಖ ವೈಶಿಷ್ಟ್ಯಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಹೌದು, ಹಾನರ್ ತನ್ನ ಹಾನರ್ GT (Honor GT) ಸ್ಮಾರ್ಟ್‌ಫೋನ್ ಅನ್ನು ಕಳೆದ ವರ್ಷ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಇದೀಗ, ಪ್ರೊ ಮಾಡೆಲ್ ಹಾನರ್ GT ಪ್ರೊ (Honor GT Pro) ಲಾಂಚ್‌ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಬನ್ನಿ, ಮುಂಬರುವ ಹಾನರ್ GT ಪ್ರೊ ಫೋನಿನ ಯಾವೆಲ್ಲಾ ವಿಶೇಷತೆಗಳನ್ನು ಹೊಂದಿರುತ್ತದೆ ಎನ್ನುವುದನ್ನು ತಿಳಿಯೋಣ.

ಹಾನರ್ GT ಪ್ರೊ ಫೋನಿನ ಬಿಡುಗಡೆಯ ಸುದ್ದಿ ಆನ್‌ಲೈನ್‌ನಲ್ಲಿ ನಿರಂತರವಾಗಿ ಬರುತ್ತಿವೆ. ಇದೀಗ ಲಭ್ಯವಾಗಿರುವ ವಿವರಗಳು ಈ ಹಿಂದೆಯೂ ಸಹ ಸೋರಿಕೆಯಾಗಿದ್ದವು. ಆದರೆ, ಇದೀಗ ಮಹತ್ವದ ಅಪ್ಡೇಟ್ ಲಭ್ಯವಾಗಿದೆ. ಹಾನರ್ GT ಪ್ರೊ ಮೊಬೈಲ್ ಶಕ್ತಿಶಾಲಿ ಸ್ನಾಪ್‌ಡ್ರಾಗನ್ ಎಲೈಟ್ ಪ್ರೊಸೆಸರ್ ಹೊಂದಿರುತ್ತದೆ. ಈ ಫೋನ್ 6000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಸೇರಿದಂತೆ ಹಲವು ಉತ್ತಮ ಗುಣಮಟ್ಟದ ವೈಶಿಷ್ಟ್ಯಗಳು ಲಭ್ಯವಿರುತ್ತವೆ. ಇತ್ತೀಚಿನ ಸೋರಿಕೆಯಲ್ಲಿ ಟಿಪ್‌ಸ್ಟರ್ ಬಹಿರಂಗಪಡಿಸಿರುವ ವಿವರಗಳನ್ನು ತಿಳಿಯಲು ಮುಂದೆ ಓದಿ.

Honor GT Pro ಫೀಚರ್ಸ್‌ ಲೀಕ್; 6000mAh ಬ್ಯಾಟರಿ, 50MP ಕ್ಯಾಮೆರಾ.. ಬೆಲೆ ನೋಡಿ

ಹಾನರ್ GT ಪ್ರೊ ವೈಶಿಷ್ಟ್ಯಗಳು (ಸೋರಿಕೆ)

ಡಿಸ್ಪ್ಲೇ ವಿವರ

ಹಾನರ್ GT ಪ್ರೊ ಮೊಬೈಲ್ 6.78 ಇಂಚಿನ ಫ್ಲಾಟ್ OLED ಡಿಸ್ಪ್ಲೇಯನ್ನು ಹೊಂದಿರುವ ನಿರೀಕ್ಷೆಯಿದೆ. ಇದು 1.5K ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು ತೀಕ್ಷ್ಣವಾದ ದೃಶ್ಯ ಮತ್ತು ಉತ್ತಮ ವೀಕ್ಷಣೆ ಅನುಭವವನ್ನು ಒದಗಿಸುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ವರದಿಯ ಪ್ರಕಾರ, ಹಾನರ್ GT ಪ್ರೊ ಫೋನ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿರುತ್ತದೆ ಎಂದು ಹೇಳಲಾಗಿದೆ. ಇದು ಈ ಶಕ್ತಿಶಾಲಿ ಪ್ರೊಸೆಸರ್ ಹೊಂದಿರುವ ಅತ್ಯಂತ ಕೈಗೆಟುಕುವ ಸ್ಮಾರ್ಟ್‌ಫೋನ್ ಆಗಿರಲಿದೆ. ಈ ಪ್ರೊಸೆಸರ್ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಉತ್ತಮ ಗೇಮಿಂಗ್ ಅನುಭವವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಈವರೆಗಿನ ಅತ್ಯಂತ ವೇಗವಾದದ್ದು ಎಂದು ಹೇಳಲಾಗಿದೆ.

Honor GT Pro ಫೀಚರ್ಸ್‌ ಲೀಕ್; 6000mAh ಬ್ಯಾಟರಿ, 50MP ಕ್ಯಾಮೆರಾ.. ಬೆಲೆ ನೋಡಿ

ಕ್ಯಾಮೆರಾ ಸೆಟಪ್

ಹಾನರ್ GT ಪ್ರೊ ಸ್ಮಾರ್ಟ್‌ಫೋನ್ ಅದ್ಭುತ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಫ್ಲ್ಯಾಗ್‌ಶಿಪ್ ದರ್ಜೆಯ ಮುಖ್ಯ ಕ್ಯಾಮೆರಾ ಲಭ್ಯವಿರುವ ಸಾಧ್ಯತೆಯಿದೆ. ಇದು ಉತ್ತಮ ಫೋಟೋಗ್ರಫಿ ಅನುಭವವನ್ನು ನೀಡುತ್ತದೆ. ಹಾನರ್ GT ಪ್ರೊ ಗೇಮಿಂಗ್‌ಗಾಗಿ ಅತ್ಯುತ್ತಮವಾಗಿರುವುದರಿಂದ, ಈ ಫೋನಿನ ಕ್ಯಾಮೆರಾ ಸೆಟಪ್‌ನಲ್ಲಿ 12 ಮೆಗಾಪಿಕ್ಸೆಲ್ ದ್ವಿತೀಯ (ಅಲ್ಟ್ರಾ ವೈಡ್ ಲೆನ್ಸ್) ಕ್ಯಾಮೆರಾ ಸಹ ಒಳಗೊಂಡಿದೆ. ಇದು ವೈಡ್ ಆಂಗಲ್ ಶಾಟ್‌ಗಳನ್ನು ಕ್ಲಿಕ್ಕಿಸಲು ಸಹಾಯ ಮಾಡುತ್ತದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ವರದಿಯ ಪ್ರಕಾರ, ಮುಂಬರುವ ಹಾನರ್ GT ಪ್ರೊ ಮೊಬೈಲ್ ದೊಡ್ಡ ಬ್ಯಾಟರಿಯನ್ನು ಹೊಂದಿರುತ್ತದೆ. ಈ ಹಾನರ್ ಫೋನ್ 6,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇದು ಸ್ಟ್ಯಾಂಡರ್ಡ್ GT ಫೋನಿಗಿಂತ ಪ್ರಮುಖ ಅಪ್‌ಗ್ರೇಡ್ ಆಗಿದೆ. ಇದರಲ್ಲಿ 5,300mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಮೊಬೈಲ್ 100W ವೇಗದ ಚಾರ್ಜಿಂಗ್ ಬೆಂಬಲ ಹೊಂದಿದೆ. ನೀವು ಕಡಿಮೆ ಸಮಯದಲ್ಲಿ ತ್ವರಿತವಾಗಿ ಈ ಬ್ಯಾಟರಿಯನ್ನು ಚಾರ್ಜ್ ಮಾಡಬಹುದು. ಇದಲ್ಲದೆ, ನೀವು ದೀರ್ಘಕಾಲದವರೆಗೆ ಬ್ಯಾಟರಿ ಬ್ಯಾಕಪ್‌ನ ಲಾಭ ಪಡೆಯಬಹುದು.

ಇತರೆ ವೈಶಿಷ್ಟ್ಯಗಳು

ಹಾನರ್ GT ಪ್ರೊ ಸ್ಮಾರ್ಟ್‌ಫೋನ್ ಭದ್ರತೆಗಾಗಿ ಅಲ್ಟ್ರಾಸಾನಿಕ್ ಇನ್ ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿರುತ್ತದೆ. ಇದು ಬಳಕೆದಾರರಿಗೆ ವೇಗದ ಮತ್ತು ಸುರಕ್ಷಿತ ಅನ್‌ಲಾಕಿಂಗ್ ವ್ಯವಸ್ಥೆಯನ್ನು ನೀಡುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ 5G SA/NSA, ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿರುತ್ತದೆ.

Best Mobiles in India

English summary
Honor GT Pro Official Specifications Leaked: Snapdragon 8 Elite, 6,000mAh battery 50MP Camera and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+