Home
ಮೊಬೈಲ್

ಧೂಳೆಬ್ಬಿಸಲು ಬಂತು Honor GT ಫೋನ್; 1TB ಸ್ಟೋರೇಜ್.. 100W ಸ್ಪೀಡ್ ಚಾರ್ಜಿಂಗ್.. ಇಷ್ಟೆನಾ ಬೆಲೆ?

ಗೇಮಿಂಗ್ ಪ್ರಿಯರಿಗೆ ಸಿಹಿಸುದ್ದಿ ಇದೆ. ಹೊಸ ಹಾನರ್ ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಇದು ಅತ್ಯುತ್ತಮ ಗೇಮಿಂಗ್ ಸ್ಮಾರ್ಟ್‌ಫೋನ್ ಆಗಿದೆ. ಹೌದು, ಕಂಪನಿಯು ಸೈಲೆಂಟ್‌ ಆಗಿಯೇ ಹಾನರ್ GT (Honor GT) ಫೋನನ್ನು ಬಿಡುಗಡೆ ಮಾಡಿದೆ. ನೀವು 25,000 ರೂ.ಗಳ ಬಜೆಟ್‌ನಲ್ಲಿ ಈ ಫೋನನ್ನು ಖರೀದಿಸಬಹುದು. ಈ ಫೋನ್ 120Hz ರಿಫ್ರೆಶ್‌ ದರ ಮತ್ತು ಓಯಸಿಸ್ ಐ ಪ್ರೊಟೆಕ್ಷನ್ ಗೇಮಿಂಗ್ ಡಿಸ್ಪ್ಲೇಯನ್ನು ಹೊಂದಿದೆ. ಬನ್ನಿ, ಈ ಹೊಸ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಹಾನರ್ GT ಫೋನನ್ನು ಒಟ್ಟು ಐದು ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಈ ಮೊಬೈಲ್ 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಹೊಂದಿದೆ. ಸೆಲ್ಫಿ ಪ್ರಿಯರಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಇದು ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಜೊತೆಗೆ 1TB ಸ್ಟೋರೇಜ್, 5300mAh ಬ್ಯಾಟರಿ ಮತ್ತು 100W ವೇಗದ ಚಾರ್ಜಿಂಗ್‌ ಸೇರಿದಂತೆ ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೊಸ Honor GT ಫೋನ್ ಲಾಂಚ್; 1TB ಸ್ಟೋರೇಜ್.. 5300mAh ಬ್ಯಾಟರಿ.. ಬೆಲೆ ಎಷ್ಟು?

ಹಾನರ್ GT ಫೋನಿನ ಬೆಲೆ

12GB + 256GB ಸ್ಟೋರೇಜ್ ಬೆಲೆ = 25,630 ರೂ.
16GB + 256GB ಸ್ಟೋರೇಜ್ ಬೆಲೆ = 27,960 ರೂ.
12GB + 512GB ಸ್ಟೋರೇಜ್ ಬೆಲೆ = 30,295 ರೂ.
16GB + 512GB ಸ್ಟೋರೇಜ್ ಬೆಲೆ = 33,790 ರೂ.
16GB + 1TB ಸ್ಟೋರೇಜ್ ಬೆಲೆ = 38,450 ರೂ.

ಹಾನರ್ GT ಫೋನ್ 25,630 ರೂ. ಆರಂಭಿಕ ಬೆಲೆಯಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಇದು ಫ್ಯಾಂಟಮ್ ಬ್ಲ್ಯಾಕ್, ಐಸ್ ಕ್ರಿಸ್ಟಲ್ ವೈಟ್ ಮತ್ತು ಅರೋರಾ ಗ್ರೀನ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಪ್ರಸ್ತುತ ಈ ಫೋನ್ ಬುಕಿಂಗ್‌ಗೆ ಲಭ್ಯವಿದೆ. ಇದೇ ಡಿಸೆಂಬರ್ 24 ರಿಂದ ಚೀನಾದಲ್ಲಿ ಮೊದಲ ಮಾರಾಟ ಪ್ರಾರಂಭಿಸಲಿದೆ.

ಹಾನರ್ GT ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಹಾನರ್ GT ಮೊಬೈಲ್ 6.7 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಓಎಲ್‌ಇಡಿ ಡಿಸ್ಪ್ಲೇ ಹೊಂದಿದೆ. ಇದು 2664 x 1200 ಪಿಕ್ಸೆಲ್‌ ರೆಸಲ್ಯೂಶನ್ ಬೆಂಬಲ ಪಡೆದಿದೆ. ಡಿಸ್ಪ್ಲೇಯು 120Hz ರಿಫ್ರೆಶ್‌ ದರ ಮತ್ತು 4000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ನೂತನ ಹಾನರ್ GT ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿದೆ. ಇದು 4nm ಆಕ್ಟಾಕೋರ್ ಪ್ರೊಸೆಸರ್ ಆಗಿದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ 750 ಜಿಪಿಯು ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ ಮ್ಯಾಜಿಕ್ ಯುಐ 9.0 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೆಲಸ ಮಾಡುತ್ತದೆ.

ಸ್ಟೋರೇಜ್ ಆಯ್ಕೆ

ಹಾನರ್ GT ಫೋನ್‌ 12GB ಮತ್ತು 16GB RAM ಹೊಂದಿದೆ. ಈ ಫೋನಿನಲ್ಲಿ 256GB, 512GB ಮತ್ತು 1TB ಸ್ಟೋರೇಜ್ ಆಯ್ಕೆ ಲಭ್ಯವಿದೆ.

ಹೊಸ Honor GT ಫೋನ್ ಲಾಂಚ್; 1TB ಸ್ಟೋರೇಜ್.. 5300mAh ಬ್ಯಾಟರಿ.. ಬೆಲೆ ಎಷ್ಟು?

ಕ್ಯಾಮೆರಾ ಸೆಟಪ್

ಹೊಸ ಹಾನರ್ GT ಮೊಬೈಲ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಫೋನಿನಲ್ಲಿ 12 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು ಎಲ್‌ಇಡಿ ಫ್ಲ್ಯಾಷ್ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 16 ಮೆಗಾಪಿಕ್ಸೆಲ್ ಫ್ರಂಟ್‌ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ಹಾನರ್ GT ಫೋನನ್ನು 5300mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲ, 100W ಸೂಪರ್‌ಚಾರ್ಜ್ ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಹಾನರ್ GT ಸ್ಮಾರ್ಟ್‌ಫೋನ್‌ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್‌ ಸಂವೇದಕ ಹೊಂದಿದೆ. ಹಾಗೆಯೇ ಡ್ಯುಯಲ್ ಸಿಮ್, ಯುಎಸ್‌ಬಿ ಟೈಪ್ ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು ಲಭ್ಯವಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ 5G SA, , ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್ 5.3, ಜಿಪಿಎಸ್‌, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
HONOR GT with Snapdragon 8 Gen 3 launched: price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+