Home
ಮೊಬೈಲ್

ಬಜೆಟ್ ಫೋನ್‌ಗಳ ಕಾದಾಟ:ಹೋಲಿ 2 ಪ್ಲಸ್ V/S ರೆಡ್ಮೀ 3 ಡಿವೈಸ್

By Shwetha

ಭಾರತದ ಸ್ಮಾರ್ಟ್‌ಫೋನ್ ಮರುಕಟ್ಟೆಯಲ್ಲಿ ವೈವಿಧ್ಯಮಯ ಆಯ್ಕೆಗಳಿದ್ದು ಇವುಗಳು ಅನುರೂಪದ ವಿಶೇಷತೆಗಳಿಂದ ಕೂಡಿದ್ದು ಬೆಲೆಯು ಕೈಗೆಟಕುವಂತಿದೆ. ಫೋನ್ ಕ್ಷೇತ್ರದಲ್ಲಿ ಪೈಪೋಟಿಯನ್ನು ನೀಡುವ ಕಂಪೆನಿಗಳಾದ ಹುವಾವೆಯ ಆನ್‌ಲೈನ್ ನಿರ್ದಿಷ್ಟ ಬ್ರಾಂಡ್ ಹೋನರ್, ಇತ್ತೀಚೆಗೆ ತಾನೇ ಹೋಲಿ 2 ಪ್ಲಸ್ ಫೋನ್ ಅನ್ನು ಮಾರುಕಟ್ಟೆಗೆ ಪ್ರಸ್ತುತಪಡಿಸಿದ್ದು ಪ್ರಸ್ತುತ ಮಾರುಕಟ್ಟೆಯನ್ನಾಳುತ್ತಿರುವ ಡಿವೈಸ್‌ಗಳಿಗೆ ಭರ್ಜರಿ ಸ್ಪರ್ಧೆಯನ್ನೊಡ್ಡಿದೆ.

ಫೋನ್ ಭಾರತದಲ್ಲಿ ರೂ 8,499 ಕ್ಕೆ ಲಾಂಚ್ ಆಗಿದ್ದು, ಈ ಬೆಲೆಯಲ್ಲೂ ಕೂಡ ಆಕರ್ಷಕ ಫೀಚರ್‌ಗಳನ್ನು ಒಳಗೊಂಡಿದೆ. ಶ್ಯೋಮಿ ರೆಡ್ಮೀ 3 ಗೆ ಈ ಡಿವೈಸ್ ಪೈಪೋಟಿಯನ್ನು ನೀಡಿದ್ದು ಮಾರುಕಟ್ಟೆಯಲ್ಲಿ ಉತ್ತಮ ಸಂಚಲವನ್ನುಂಟು ಮಾಡಿದೆ. ತಮ್ಮ ಬೆಲೆಗಳಲ್ಲಿ ಈ ಎರಡೂ ಫೋನ್‌ಗಳೂ ಉತ್ತಮ ಭವಿಷ್ಯವನ್ನು ಪಡೆದುಕೊಂಡಿದ್ದು ಆಕರ್ಷಕ ಫೀಚರ್‌ಗಳ ಮೂಲಕ ಗ್ರಾಹಕರ ಮನವನ್ನು ಸೆಳೆಯುವುದು ಖಂಡಿತ. ಇಂದಿನ ಲೇಖನದಲ್ಲಿ ಹೋನರ್ ಹೋಲಿ 2 ಪ್ಲಸ್ ಮತ್ತು ಶ್ಯೋಮಿ ರೆಡ್ಮೀ 3 ಗೆ ಇರುವ ವ್ಯತ್ಯಾಸವನ್ನು ಕಂಡುಕೊಳ್ಳೋಣ.

#1

#1

ಫೋನ್‌ನ ಡಿಸ್‌ಪ್ಲೇಯು ಫೋನ್‌ಗೆ ಅತಿಮುಖ್ಯ ಎಂದೆನಿಸಿದ್ದು ಎರಡೂ ಸ್ಮಾರ್ಟ್‌ಫೋನ್‌ಗಳಾದ ಹುವಾವೆ ಹೋಲಿ 2 ಪ್ಲಸ್ ಮತ್ತು ಶ್ಯೋಮಿ ರೆಡ್ಮೀ 3 ಯು 5 ಇಂಚಿನ ಐಪಿಎಸ್ ಎಲ್‌ಸಿಡಿ ಎಚ್‌ಡಿ ಸ್ಕ್ರೀನ್ ಅನ್ನು ಒಳಗೊಂಡಿವೆ ಇವುಗಳ ಪಿಕ್ಸೆಲ್ ರೆಸಲ್ಯೂಶನ್ 1280x720 ಆಗಿದೆ. ಎರಡೂ ಕೂಡ ಒಂದೇ ಗಾತ್ರವನ್ನು ಪಡೆದುಕೊಂಡಿದ್ದು, ಬ್ರೈಟ್‌ನೆಸ್, ಕಾಂಟ್ರಾಸ್ಟ್, ಬಣ್ಣಗಳಲ್ಲಿ ವೈವಿಧ್ಯತೆಗಳನ್ನು ಗುರುತಿಸಬಹುದಾಗಿದೆ.

#2

#2

ಹಾರ್ಡ್‌ವೇರ್ ವಿಭಾಗದಲ್ಲಿ ಕೊಂಚ ಭಿನ್ನತೆಯನ್ನು ನಮಗೆ ಕಂಡುಕೊಳ್ಳಬಹುದಾಗಿದೆ. ಹುವಾವೆ ಹೋನರ್ ಹೋಲಿ 2 ಪ್ಲಸ್ MT6735 ಕ್ವಾಡ್ ಕೋರ್ ಚಿಪ್‌ಸೆಟ್ ಅನ್ನು ಒಳಗೊಂಡಿದ್ದು, ಶ್ಯೋಮಿ ರೆಡ್ಮೀ 3 ಹೆಚ್ಚು ಶಕ್ತಿಯುತ ಸ್ನ್ಯಾಪ್‌ಡ್ರ್ಯಾಗನ್ 616 ಪ್ರೊಸೆಸರ್ ಓಕ್ಟಾ ಕೋರ್ಸ್ ಹಾಗೂ ಅಡ್ರೆನೊ 405 ಜಿಪಿಯುವನ್ನು ಒಳಗೊಂಡಿದೆ. ಅಂತೂ ಎರಡೂ ಡಿವೈಸ್‌ಗಳು ಉತ್ತಮ ಪವರ್ ಮತ್ತು ಕಾರ್ಯಕ್ಷಮತೆಯನ್ನು ಪಡೆದುಕೊಂಡಿದೆ.

#3

#3

ಎರಡೂ ಫೋನ್‌ಗಳು 2 ಜಿಬಿ RAM ಅನ್ನು ಪಡೆದುಕೊಂಡಿದ್ದು ಫೋನ್‌ನ ಆಂತರಿಕ ಸಂಗ್ರಹಣೆ 16 ಜಿಬಿಯಾಗಿದೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು. ಹೋಲಿ 2 ಪ್ಲಸ್ ಸಂಗ್ರಹಣೆಯನ್ನು 32 ಜಿಬಿವರೆಗೆ ವಿಸ್ತರಿಸಬಹುದಾಗಿದ್ದು ರೆಡ್ಮೀ 3 ಯಲ್ಲಿ ಹೆಚ್ಚುವರಿ ಸಂಗ್ರಹಣೆಯನ್ನು 128 ಜಿಬಿವರೆಗೆ ವಿಸ್ತರಿಸಬಹುದು.

#4

#4

ಸ್ಮಾರ್ಟ್‌ಫೋನ್ ಯಾವುದಾಗಿದ್ದರೂ ಅದರ ಬ್ಯಾಟರಿ ಸಾಮರ್ಥ್ಯ ಅತ್ಯುತ್ತಮವಾಗಿರಬೇಕು ಅಲ್ಲವೇ? ಬ್ಯಾಟರಿ ಕಾರ್ಯಕ್ಷಮತೆ ಉತ್ತಮವಾಗಿದ್ದರೆ ಅದನ್ನು ಬಳಸುವ ಬಳಕೆದಾರರು ಖುಷಿಯಾಗಿರುತ್ತಾರೆ. ದೀರ್ಘ ಕಾಲ ಕಾರ್ಯನಿರ್ವಹಿಸುವ ಬ್ಯಾಟರಿಯನ್ನೇ ಫೋನ್ ಬಳಕೆದಾರ ಬಯಸುತ್ತಾರೆ. ಬ್ಯಾಟರಿ ವಿಭಾಗದಲ್ಲಿ ಎರಡೂ ಫೋನ್‌ಗಳು ಹೋನರ್ 2 ಪ್ಲಸ್ ಹಾಗೂ ರೆಡ್ಮೀ 3 ಉತ್ತಮ ಸಾಮರ್ಥ್ಯದ ಬ್ಯಾಟರಿಯನ್ನು ಪಡೆದುಕೊಂಡಿದೆ. 4000mAh ಬ್ಯಾಟರಿಯನ್ನು ಹೋನರ್ ಹೋಲಿ 2 ಪ್ಲಸ್ ಡಿವೈಸ್ ಪಡೆದುಕೊಂಡಿದ್ದರೆ, ರೆಡ್ಮೀ 3 ಸ್ವಲ್ಪ ದೊಡ್ಡದಾದ 4100mAh ಬ್ಯಾಟರಿಯನ್ನು ಒಳಗೊಂಡಿದೆ. ಇವೆರಡೂ ಫೋನ್‌ಗಳು ವೇಗವಾದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಿವೆ.

#5

#5

ಕ್ಯಾಮೆರಾ ವಿಭಾಗದಲ್ಲಿ 13 ಎಮ್‌ಪಿ ಕ್ಯಾಮೆರಾಗಳ ಜೊತೆಗೆ ಎಲ್‌ಇಡಿ ಫ್ಲ್ಯಾಶ್ ಅನ್ನು ಡಿವೈಸ್‌ನಲ್ಲಿ ಕಂಡುಕೊಳ್ಳಬಹುದಾಗಿದ್ದು ಸೆಲ್ಫಿ ಮುಂಭಾಗ ಕ್ಯಾಮೆರಾ 5 ಎಮ್‌ಪಿಯಾಗಿದೆ. ಎರಡೂ ಡಿವೈಸ್‌ಗಳು ಸಮಾನ ವಿಶೇಷತೆಗಳನ್ನು ಪಡೆದುಕೊಂಡಿದ್ದು, ಅವುಗಳ ಕಾರ್ಯಕ್ಷಮತೆಯನ್ನು ಅರಿತುಕೊಂಡು ಯಾವುದು ಉತ್ತಮ ಎಂಬುದನ್ನು ಕಂಡುಕೊಳ್ಳಬೇಕು.

#6

#6

ಸಂಪರ್ಕ ವಿಭಾಗದಲ್ಲಿ ಎರಡೂ ಫೋನ್‌ಗಳು 4ಜಿ ಎಲ್‌ಟಿಇ ಬೆಂಬಲವನ್ನು ಒದಗಿಸಿವೆ, ಡ್ಯುಯಲ್ ಸಿಮ್, ವೈ-ಫೈ, ಬ್ಲ್ಯೂಟೂತ್ ಮತ್ತು ಇತರ ಸ್ಟ್ಯಾಂಡರ್ಡ್ ಆಯ್ಕೆಗಳನ್ನು ಪಡೆದುಕೊಂಡಿವೆ. ಡ್ಯುಯಲ್ ಸಿಮ್‌ಗಳನ್ನು ಬಳಸಬಹುದಾಗಿದ್ದು ಹಾಗೂ ಎಸ್‌ಡಿ ಕಾರ್ಡ್ ಸೌಲಭ್ಯವನ್ನು ರೆಡ್ಮೀ 3 ನಲ್ಲೂ ಉಪಯೋಗಿಸಬಹುದಾಗಿದೆ.

#7

#7

ಸಾಫ್ಟ್‌ವೇರ್‌ಗಾಗಿ, ಎರಡೂ ಫೋನ್‌ಗಳು ಆಂಡ್ರಾಯ್ಡ್ 5.1 ಲಾಲಿಪಪ್ ಅನ್ನು ಒಳಗೊಂಡಿದ್ದು, ಕಂಪೆನಿಯ ಯುಐಯನ್ನು ಒಂದು ಡಿವೈಸ್ ಪಡೆದುಕೊಂಡಿದೆ. ಹೋನರ್ ಹೋಲಿ 2 ಪ್ಲಸ್‌ನಲ್ಲಿ EMUI 3.1 ಅನ್ನು ನೋಡಬಹುದಾಗಿದ್ದು, ಶ್ಯೋಮಿ ರೆಡ್ಮೀ 3 ಯು MIUI 7 ಅನ್ನು ಪಡೆದುಕೊಂಡಿದೆ. ಈ ಯುಐಗಳು ಕಸ್ಟಮೈಸೇಶನ್ ಮತ್ತು ಹೆಚ್ಚುವರಿ ಫೀಚರ್‌ಗಳನ್ನು ಒಳಗೊಂಡಿದೆ. ಇದು ಬಳಕೆದಾರರ ಅನುಭವವನ್ನು ಭಿನ್ನವಾಗಿಸುವುದು ಖಂಡಿತ.

#8

#8

ಹೋನರ್ ಹೋಲಿ 2 ಪ್ಲಸ್ ರೂ ಭಾರತದಲ್ಲಿ 8,499 ಕ್ಕೆ ಲಭ್ಯವಿದ್ದರೆ ರೆಡ್ಮೀ 3 ಬೆಲೆ ರೂ 7,490 ಆಗಿದೆ.

ಇದನ್ನೂ ಓದಿ

ಇದನ್ನೂ ಓದಿ

Best Mobiles in India

English summary
Today we bring to you a specs comparison of the Honor Holly 2 Plus and the Xiaomi Redmi 3 to get a better idea of how these phones vary in terms of specifications and features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+