Home
ಮೊಬೈಲ್

Honor Magic 6 Pro ಬಿಡುಗಡೆ ದಿನಾಂಕ ಬಹಿರಂಗ: ಯಾವಾಗ ನೋಡಿ

ಚೀನಾದ ಪ್ರಸಿದ್ಧ ಮೊಬೈಲ್ ತಯಾರಕ ಕಂಪನಿ ಹಾನರ್ (Honor) ಒಂದರ ಹಿಂದೆ ಒಂದರಂತೆ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇದೆ. ಇತ್ತೀಚೆಗೆ ಭಾರತದಲ್ಲಿ ಹಾನರ್ 200 ಸರಣಿಯನ್ನು ಪರಿಚಯಿಸಿತು. ಇದೀಗ, ತನ್ನ ಮತ್ತೊಂದು ಹೊಸ ಹಾನರ್‌ ಮ್ಯಾಜಿಕ್ 6 ಪ್ರೊ (Honor Magic 6 Pro) ಫೋನನ್ನು ದೇಶದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಪ್ರಸ್ತುತ, ಈ ಮೊಬೈಲ್‌ನ ಭಾರತೀಯ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಬಹಿರಂಗಪಡಿಸಲಾಗಿದೆ. ಇದು ಲಾಂಚ್ ಆದ ಬಳಿಕ Amazonನಲ್ಲಿ ಖರೀದಿಗೆ ಲಭ್ಯವಿರುತ್ತದೆ. ಬನ್ನಿ, ಈ ಫೋನಿನ ಬಿಡುಗಡೆ ದಿನಾಂಕ ಮತ್ತು ಫೀಚರ್ಸ್‌ಗಳನ್ನು ತಿಳಿಯೋಣ.

ಹಾನರ್ ಕಂಪನಿಯು ಮತ್ತೊಮ್ಮೆ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ, ಕಂಪನಿಯು ಪ್ರತಿ ತಿಂಗಳು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಅದರಂತೆ, ಈಗ ಕಂಪನಿಯ ಮತ್ತೊಂದು ಹೊಸ Honor Magic 6 Pro ಫೋನ್ ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಫೋನ್ ಭಾರತದಲ್ಲಿ ಆಗಸ್ಟ್ 2 ರಂದು ಮಧ್ಯಾಹ್ನ 12.30ಕ್ಕೆ ಲಾಂಚ್ ಆಗಲಿದೆ ಎಂದು ಅಮೆಜಾನ್ ಪೋಸ್ಟ‌ರ್ ಮತ್ತು ಮೈಕ್ರೋಸೈಟ್ ಖಚಿತಪಡಿಸಿದೆ.

Honor Magic 6 Pro ಬಿಡುಗಡೆ ದಿನಾಂಕ ಬಹಿರಂಗ: ಯಾವಾಗ ನೋಡಿ

ಈ ಫೋನ್‌ AI ಫೀಚರ್ಸ್‌ಗಳೊಂದಿಗೆ ಬರಲಿದೆ ಎಂದು ಕಂಪನಿ ಹೇಳಿದೆ. ಇದು 6.8 ಇಂಚಿನ ಡಿಸ್ಪ್ಲೇ, 50MP ಮುಖ್ಯ ಕ್ಯಾಮೆರಾ, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್ ಮತ್ತು ಪ್ರಮುಖ ವಿಶೇಷತೆಗಳನ್ನು ಒಳಗೊಂಡಿರಲಿದೆ. ಈ ಪ್ರಮುಖ ಫೋನನ್ನು ಐದು DXOMARK 2024 ಗೋಲ್ಡ್ ಲೇಬಲ್‌ಗಳೊಂದಿಗೆ ನೀಡಲಾಗಿದೆ. ಇದು ಅತ್ಯಾಕರ್ಷಕ ಮುಖ್ಯ ಮತ್ತು ಸೆಲ್ಫಿ ಕ್ಯಾಮೆರಾ, ಅದ್ಭುತ ಆಡಿಯೋ, ವರ್ಣರಂಜಿತ ಡಿಸ್ಲ್ಪೇ ಮತ್ತು ದೀರ್ಘಾವಧಿಯ ಬ್ಯಾಟರಿ ಬಾಳಿಕೆಗಾಗಿ ಗೋಲ್ಡ್ ಲೇಬಲ್‌ನೊಂದಿಗೆ ಬರಲಿದೆ.

Honor Magic 6 Pro ಭಾರತದ ಬೆಲೆ

Honor Magic 6 Pro ಫೋನಿನ ಭಾರತದ ಬೆಲೆಯು ಚೀನಾದಲ್ಲಿ ಬಿಡುಗಡೆಯಾದ ಫೋನಿನಂತೆಯೇ ಇರುವ ಸಾಧ್ಯತೆಯಿದೆ. 12GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ಚೀನಾದಲ್ಲಿ ಸುಮಾರು 65,000 ರೂ.ಗೆ ಬಿಡುಗಡೆ ಮಾಡಲಾಗಿದೆ. 16GB RAM ಮತ್ತು 512GB ಸ್ಟೋರೇಜ್‌ನ ಬೆಲೆ ಸುಮಾರು 68,000 ರೂ. ಇದೆ. ಇನ್ನೂ, 16GB RAM ಮತ್ತು 1 TB ಸ್ಟೋರೇಜ್ ಬೆಲೆ ಅಂದಾಜು 77,000 ರೂ.ಗೆ ಬಿಡುಗಡೆ ಮಾಡಲಾಗಿದೆ.

Honor Magic 6 Pro ಫೀಚರ್ಸ್‌

ಸ್ಮಾರ್ಟ್‌ಫೋನ್ 6.8 ಇಂಚಿನ LTPO OLED 120Hz ಡಿಸ್ಲ್ಪೇಯನ್ನು ಹೊಂದಿದೆ. 5,000nits HDR ಬ್ರಿಟ್‌ನೆಸ್ ಮತ್ತು ಡಾಲ್ಟಿ ವಿಷನ್ ಬೆಂಬಲದೊಂದಿಗೆ ಬರಲಿದೆ. ಹುಡ್ ಅಡಿಯಲ್ಲಿ, ಮ್ಯಾಜಿಕ್ 6 ಪ್ರೊ ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್‌ನಲ್ಲಿ ರನ್ ಆಗುತ್ತದೆ. ಮತ್ತು ಮ್ಯಾಜಿಕ್ಓಎಸ್ 8.0 ನಲ್ಲಿ ಬೂಟ್ ಆಗುತ್ತದೆ (ಆಂಡ್ರಾಯ್ಡ್ 14 ನಲ್ಲಿ ಬಹುಶಃ). ಈ ಫೋನ್ IP68 ಧೂಳು ಮತ್ತು ನೀರಿನ ಪ್ರತಿರೋಧವನ್ನು ಪಡೆಯುತ್ತದೆ.

180MP ಟ್ರಿಪಲ್‌ ಕ್ಯಾಮೆರಾ ಖಚಿತ

ಇದು ಟ್ರಿಪಲ್‌ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಹಿಂಭಾಗದಲ್ಲಿ 50MP OIS + 50MP ಅಲ್ಟಾವೈಡ್ + 180MP ಪೆರಿಸ್ಕೋಪ್ ಸಂವೇದಕ ಮತ್ತು 50MP ಸೆಲ್ಫಿ ಶೂಟರ್ ಅನ್ನು ಹೊಂದಿದೆ. ಹಾನರ್ AI ಮೋಷನ್ ಸೆನ್ಸಿಂಗ್ ಕ್ಯಾಪ್ಟರ್ ಅನ್ನು ನೀಡುತ್ತದೆ. ಇದು 80W ವೈರ್ಡ್ ಮತ್ತು 66W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 5,600mAh ಬ್ಯಾಟರಿಯನ್ನು ಹೊಂದಿದೆ. ಇದು ಎಪಿಕ್ ಗ್ರೀನ್ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಿರುತ್ತದೆ.

ಇದು Android 14 ಆಧಾರಿತ MagicOS 8.0ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್‌ನೊಂದಿಗೆ ಬರುತ್ತದೆ. ಇದು ಸ್ಟೀರಿಯೋ ಸ್ಪೀಕರ್‌ಗಳೊಂದಿಗೆ ಬರಲಿದೆ. 162.5 x 75.8 x 8.9mm ಅಳತೆ ಹೊಂದಿರಲಿದೆ. ಈ ಸ್ಮಾರ್ಟ್‌ಫೋನ್ Wi-Fi 7, ಬ್ಲೂಟೂತ್ 5.3, NFC ಮತ್ತು ಚಾರ್ಜಿಂಗ್‌ಗಾಗಿ USB ಟೈಪ್-C ಪೋರ್ಟ್ ಅನ್ನು ಹೊಂದಿರಲಿದೆ.

Best Mobiles in India

English summary
Honor Magic 6 Pro india launch date confirmed for august 2: Expected specs, price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+