Home
ಮೊಬೈಲ್

ನಾಳೆ ಅಬ್ಬರಿಸಲು ಬರ್ತಿದೆ ಹೊಸ Honor ಫೋನ್: 180MP ಕ್ಯಾಮೆರಾ ಫಿಕ್ಸ್!

ಮೊಬೈಲ್‌ ಪ್ರಿಯರಿಗೆ ಆಗಸ್ಟ್ ತಿಂಗಳು ಹಬ್ಬವೇ ಸರಿ! ತಿಂಗಳ ಮೊದಲ ದಿನವೇ Motorola Edge 50 ಮತ್ತು Poco M6 Plus 5G ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಿವೆ. ಇದೀಗ, ಎರಡನೇ ದಿನ ಹೊಸ ಹಾನರ್‌ ಫೋನ್ ಬಿಡುಗಡೆಗೆ ಸಜ್ಜಾಗಿದೆ. ಹೌದು, ಹಾನರ್ (Honor) ಕಂಪನಿಯ ಬಹುನಿರೀಕ್ಷಿತ ಹೊಸ ಫೋನ್‌ ನಾಳೆ (ಆಗಸ್ಟ್ 2) ಭಾರತಕ್ಕೆ ಎಂಟ್ರಿ ಕೊಡಲಿದೆ. ಇದುವೇ ಹಾನರ್‌ ಮ್ಯಾಜಿಕ್ 6 ಪ್ರೊ (Honor Magic 6 Pro) ಸ್ಮಾರ್ಟ್‌ಫೋನ್‌. ಈ ಫೋನಿನ ಫೀಚರ್ಸ್‌ಗಳು ಈಗಾಗಲೇ, ಮೊಬೈಲ್‌ ಪ್ರಿಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ಹೌದು, ಚೀನಾದ ಪ್ರಸಿದ್ಧ ಮೊಬೈಲ್ ತಯಾರಕ ಕಂಪನಿ ಹಾನರ್, ಒಂದರ ಹಿಂದೆ ಒಂದರಂತೆ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇತ್ತೀಚೆಗೆ ಭಾರತದಲ್ಲಿ ಹಾನರ್ 200 ಸರಣಿಯನ್ನು ಲಾಂಚ್ ಮಾಡಿತ್ತು. ಇದೀಗ, ಹಾನರ್‌ ಮ್ಯಾಜಿಕ್ 6 ಪ್ರೊ ಬಿಡುಗಡೆ ಮಾಡಲು ಮುಂದಾಗಿದೆ. ಈ ಮೂಲಕ ಕಂಪನಿಯು ಮತ್ತೊಮ್ಮೆ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಲು ಸಿದ್ಧವಾಗಿದೆ. ಬನ್ನಿ, ಈ ಹೊಸ ಫೋನಿನ ಬೆಲೆ, ಫೀಚರ್ಸ್‌ ಮತ್ತು ಇತ್ಯಾದಿ ವಿವರಗಳನ್ನು ತಿಳಿಯೋಣ.

ನಾಳೆ ಅಬ್ಬರಿಸಲು ಬರ್ತಿದೆ ಹೊಸ Honor ಫೋನ್: 180MP ಕ್ಯಾಮೆರಾ ಫಿಕ್ಸ್!

ಹಾನರ್‌ ಮ್ಯಾಜಿಕ್ 6 ಪ್ರೊ ಬಿಡುಗಡೆ, ಲಭ್ಯತೆ

ಹಾನರ್‌ ಮ್ಯಾಜಿಕ್ 6 ಪ್ರೊ ನಾಳೆ( ಆಗಸ್ಟ್ 2) ಮಧ್ಯಾಹ್ನ 12.30ಕ್ಕೆ ಲಾಂಚ್ ಆಗಲಿದೆ. ಬಿಡುಗಡೆ ಬಳಿಕ ಅಮೆಜಾನ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇದು ಎಪಿಕ್ ಗ್ರೀನ್ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಿರುತ್ತದೆ. ಈ ಫೋನ್‌ AI ಫೀಚರ್ಸ್‌ಗಳೊಂದಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ. ಇದು 6.8 ಇಂಚಿನ ಡಿಸ್ಪ್ಲೇ, 50MP ಮುಖ್ಯ ಕ್ಯಾಮೆರಾ, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್ ಮತ್ತು ಪ್ರಮುಖ ವಿಶೇಷತೆಗಳನ್ನು ಒಳಗೊಂಡಿರಲಿದೆ.

ಹಾನರ್‌ ಮ್ಯಾಜಿಕ್ 6 ಪ್ರೊ ನಿರೀಕ್ಷಿತ ಬೆಲೆ

12GB RAM + 256GB ಸ್ಟೋರೇಜ್ ಬೆಲೆ = ರೂ. 65,000
16GB RAM + 512GB ಸ್ಟೋರೇಜ್‌ ಬೆಲೆ = ರೂ. 68,000
16GB RAM + 1 TB ಸ್ಟೋರೇಜ್ ಬೆಲೆ = ರೂ. 77,000

ಚೀನಾದಲ್ಲಿ ಈ ಫೋನನ್ನು ಮೂರು ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಭಾರತದ ಬೆಲೆಯು ಚೀನಾದಲ್ಲಿ ಬಿಡುಗಡೆಯಾದ ಸ್ಮಾರ್ಟ್‌ಫೋನಿನಂತೆಯೇ ಇರುವ ಸಾಧ್ಯತೆಯಿದೆ. 12GB RAM+256GB ಸ್ಟೋರೇಜ್‌ನ ಬೆಲೆ 65,000 ರೂ. ಇದೆ. 16GB RAM+512GB ಸ್ಟೋರೇಜ್‌ನ ಬೆಲೆ 68,000 ರೂ. ಮತ್ತು 16GB RAM+1 TB ಸ್ಟೋರೇಜ್ ಮಾದರಿಯನ್ನು 77,000 ರೂ.ಗೆ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿಯೂ ಇದೇ ಬೆಲೆ ಇರುವ ಸಾಧ್ಯತೆಯಿದೆ.

ಹಾನರ್‌ ಮ್ಯಾಜಿಕ್ 6 ಪ್ರೊ ನಿರೀಕ್ಷಿತ ಫೀಚರ್ಸ್‌

ಡಿಸ್ಲ್ಪೇ: ಇದು 6.8 ಇಂಚಿನ LTPO OLED 120Hz ಡಿಸ್ಲ್ಪೇ ಹೊಂದಿರಲಿದೆ. 5,000nits HDR ಬ್ರಿಟ್‌ನೆಸ್ ಮತ್ತು ಡಾಲ್ಟಿ ವಿಷನ್ ಬೆಂಬಲದೊಂದಿಗೆ ಬರಲಿದೆ.

ಪ್ರೊಸೆಸರ್: ಈ ಫೋನ್ ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್‌ನಲ್ಲಿ ರನ್ ಆಗುತ್ತದೆ. ಇದು Android 14 ಆಧಾರಿತ MagicOS 8.0ನಲ್ಲಿ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ: ಇದು ಟ್ರಿಪಲ್‌ ಕ್ಯಾಮೆರಾ ರಚನೆ ಹೊಂದಿರಲಿದೆ. ಹಿಂಭಾಗದಲ್ಲಿ 50MP OIS + 50MP ಅಲ್ಟಾವೈಡ್ + 180MP ಪೆರಿಸ್ಕೋಪ್ ಸಂವೇದಕ ಮತ್ತು 50MP ಸೆಲ್ಫಿ ಶೂಟರ್ ಇರಲಿದೆ. ಹಾನರ್ AI ಮೋಷನ್ ಸೆನ್ಸಿಂಗ್ ಕ್ಯಾಪ್ಟರ್ ಅನ್ನು ನೀಡುತ್ತದೆ.

ಬ್ಯಾಟರಿ: ಇದು 5,600mAh ಬ್ಯಾಟರಿಯನ್ನು ಹೊಂದಿರಲಿದೆ. 80W ವೈರ್ಡ್ ಮತ್ತು 66W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ. 40 ನಿಮಿಷಗಳಲ್ಲಿ ಈ ಫೋನ್ 100% ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ.

ಇತರೆ ಫೀಚರ್ಸ್: ಈ ಫೋನ್ 162.5 x 75.8 x 8.9mm ಅಳತೆ ಹೊಂದಿರಲಿದೆ. IP68 ಧೂಳು ಮತ್ತು ನೀರಿನ ಪ್ರತಿರೋಧವನ್ನು ಹೊಂದಿರಲಿದೆ. Wi-Fi 7, ಬ್ಲೂಟೂತ್ 5.3, NFC ಮತ್ತು ಚಾರ್ಜಿಂಗ್‌ಗಾಗಿ USB ಟೈಪ್-C ಪೋರ್ಟ್ ಮತ್ತು ಸ್ಟೀರಿಯೋ ಸ್ಪೀಕರ್‌ಗಳೊಂದಿಗೆ ಬರಲಿದೆ.

Best Mobiles in India

English summary
Honor Magic 6 Pro will be launching in India Tomorrow : Expected specs, price and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+