Home
ಮೊಬೈಲ್

Honor: ಶೀಘ್ರದಲ್ಲೆ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹಾನರ್‌ ಮ್ಯಾಜಿಕ್ 6 ಸರಣಿ; ಫೀಚರ್ಸ್‌, ಬೆಲೆ..?

ಹಾನರ್‌ ಸ್ಮಾರ್ಟ್‌ಫೋನ್‌ಗಳು (Honor smartphone) ಸ್ಮಾರ್ಟ್‌ಫೋನ್‌ ವಲಯದಲ್ಲಿ ದೊಡ್ಡ ಅಲೆಯನ್ನೇ ಉಂಟು ಮಾಡುತ್ತಿವೆ. ಈ ನಡುವೆ ಸಂಸ್ಥೆಯು ಹಾನರ್‌ ಮ್ಯಾಜಿಕ್ 6 ಮತ್ತು ಹಾನರ್ ಮ್ಯಾಜಿಕ್ 6 ಪ್ರೊ ಸರಣಿಯ ಮೊಬೈಲ್‌ಗಳನ್ನು ಜನವರಿ ತಿಂಗಳಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಿದೆ. ಇದೀಗ ಚೀನಾದ ಟೆಕ್ ಬ್ರ್ಯಾಂಡ್ ಹಾನರ್‌ನ ಈ ಪ್ರಮುಖ ಸರಣಿಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

ಭಾರತದಲ್ಲಿ HTech ಮೂಲಕ ಹಾನರ್ ಫೋನ್‌ಗಳನ್ನು ಮಾರಾಟ ಮಾಡಲಾಗುತ್ತಿದೆ, ಇನ್ನೂ ಕೂಡ ಈ ನೂತನ ಮ್ಯಾಜಿಕ್ ಸರಣಿ ಭಾರತದಲ್ಲಿ ಬಿಡುಗಡೆ ಮಾಡುವ ಕುರಿತು ಯಾವುದೇ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಆದರೆ ಟಿಪ್‌ಸ್ಟರ್‌ಗಳು ಈ ಫೋನ್‌ಗಳ ಬಿಡುಗಡೆ ಕುರಿತು ಸಂಭಾವ್ಯ ದಿನಾಂಕ ತಿಳಿಸಿದ್ದಾರೆ.

Honor ಶೀಘ್ರದಲ್ಲೆ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹಾನರ್‌ ಮ್ಯಾಜಿಕ್ 6 ಸರಣಿ

ಹಾನರ್ ಮ್ಯಾಜಿಕ್ 6 (Honor Magic 6) ಮತ್ತು ಹಾನರ್ ಮ್ಯಾಜಿಕ್ 6 ಪ್ರೋ ಗಳು (Honor Magic 6 Pro) MagicOS 8.0 ಸ್ಕಿನ್‌ನಲ್ಲಿ ರನ್ ಆಗಲಿವೆ ಮತ್ತು ಸ್ನಾಪ್‌ಡ್ರಾಗನ್ 8 Gen SoC ನಿಂದ (Snapdragon 8 Gen 3 SoC) ನಡೆಯಲಿವೆ. ಅವುಗಳು LTPO OLED ಡಿಸ್‌ಪ್ಲೇ ಮತ್ತು ಟ್ರಿಪಲ್ ಬ್ಯಾಕ್ ಕ್ಯಾಮೆರಾಗಳನ್ನು ಹೊಂದಿವೆ.

ಹಾನರ್ ಮ್ಯಾಜಿಕ್ 6 ಸರಣಿ ಭಾರತದಲ್ಲಿ ಬಿಡುಗಡೆ:

ಟಿಪ್‌ಸ್ಟರ್ ಪರಾಸ್ ಗುಗ್ಲಾನಿ (@passionategeekz) ಅವರ ಟ್ವೀಟ್‌ನ ಪ್ರಕಾರ ಹಾನರ್ ಮ್ಯಾಜಿಕ್ 6 ಸರಣಿಯು ಶೀಘ್ರದಲ್ಲೇ ಭಾರತಕ್ಕೆ ಆಗಮಿಸಲಿದ್ದು, ಹಾನರ್ ಮ್ಯಾಜಿಕ್ 6 ಪ್ರೋ ಜುಲೈನಲ್ಲಿ ದೇಶದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಎಕ್ಸ್‌ ಮೂಲಕ ಮಾಹಿತಿ ನೀಡಿದ್ದಾರೆ.

ಹಾನರ್ ಮ್ಯಾಜಿಕ್ 6 ಸರಣಿಯು ಭಾರತದಲ್ಲಿ ಬಿಡುಗಡೆಯಾಗುವ ಕುರಿತು ಮಾರ್ಚ್‌ನಿಂದಲೇ ನಿರೀಕ್ಷೆಗಳಿದ್ದು, HTechನ ಸಿಇಒ ಮಾಧವ್ ಶೇತ್ ಅವರು ಎಕ್ಸ್‌ ಮೂಲಕ ಮೊಬೈಲ್‌ ಆಗಮನದ ಕುರಿತು ಹಿಂಟ್ ನೀಡಿದ್ದರು. ಅವರು ಹಾನರ್ ಮ್ಯಾಜಿಕ್ 6 ಅಲ್ಟಿಮೇಟ್ ಮತ್ತು ಪೋರ್ಷೆ ಡಿಸೈನ್ ಮ್ಯಾಜಿಕ್ 6 RSR ಎರಡರ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ದೇಶದಲ್ಲಿ ಅವುಗಳ ಬಿಡುಗಡೆ ಕುರಿತು ಸುಳಿವು ನೀಡಿದ್ದರು. ಅವರು ಇತ್ತೀಚೆಗೆ ಭಾರತಕ್ಕೆ ಹಾನರ್ ಮ್ಯಾಜಿಕ್ V2 ಫೋಲ್ಡಬಲ್ ಫೋನ್‌ ಆಗಮಿಸುವ ಕುರಿತು ಕೂಡ ಹಿಂಟ್ ನೀಡಿದ್ದಾರೆ.

ಹಾನರ್ ಮ್ಯಾಜಿಕ್ 6 ಸರಣಿಯ ಬೆಲೆ ಮತ್ತು ಫೀಚರ್ಸ್:

ಹಾನರ್ ಮ್ಯಾಜಿಕ್ 6 ಸರಣಿಯನ್ನು ಹಾನರ್ ಸಂಸ್ಥೆ ತನ್ನ ತಾಯ್ನಾಡಿನಲ್ಲಿ ಜನವರಿ ತಿಂಗಳಿನಲ್ಲಿ ಲಾಂಚ್ ಮಾಡಿದೆ. ಬಳಿಕ ಪೋರ್ಷೆ ಡಿಸೈನ್ ಮ್ಯಾಜಿಕ್ 6 RSR ಮತ್ತು ಮ್ಯಾಜಿಕ್ 6 ಅಲ್ಟಿಮೇಟ್ ರೂಪಾಂತರಗಳನ್ನು ಪರಿಚಯಿಸುವ ಮ್ಯಾಜಿಕ್ ಸೀರಿಸ್ ಅನ್ನು ವಿಸ್ತರಿಸಿತ್ತು.

ಹಾನರ್ ಮ್ಯಾಜಿಕ್‌ 6‍‍, 12GB + 256GB RAM ನ ಬೆಲೆ ಸುಮಾರು 50,000 ರೂ. ಮೂಲ ಬೆಲೆ, ಹಾನರ್ ಮ್ಯಾಜಿಕ್ 6 Pro 12GB + 256GB ಮಾದರಿಯ ಬೆಲೆ ಸುಮಾರು 65,000 ರೂ. ಮೂಲ ಬೆಲೆ ಹೊಂದಿದೆ ಎಂದು ಫೆಬ್ರವರಿಯಲ್ಲಿ MWC ನಲ್ಲಿ ಘೋಷಣೆ ಮಾಡಲಾಗಿದೆ.

ಹಾನರ್ ಮ್ಯಾಜಿಕ್ 6 ಸರಣಿಯು ಆಂಡ್ರಾಯ್ಡ್ 14 ಆಧಾರಿತ ಮ್ಯಾಜಿಕ್ OS 8.0 ಸ್ಕಿನ್‌ ಮೂಲಕ ಕಾರ್ಯನಿರ್ವಹಿಸುತ್ತದೆ ಮತ್ತುಕ್ವಾಲ್ಕಾಮ್ ( Qualcomm) ಇತ್ತೀಚಿನ ಸ್ನಾಪ್‌ಡ್ರಾಗನ್ 8 Gen 3 SoC ನಿಂದ ಸಂಚರಿಸಲಿದೆ. ಅವುಗಳು LTPO ಓಲ್‌ಡ್ (OLED) ಡಿಸ್‌ಪ್ಲೆ ಹೊಂದಿದ್ದು, ಟ್ರಿಪಲ್ ಬ್ಯಾಕ್ ಕ್ಯಾಮೆರಾ, ವೆನಿಲ್ಲಾ ಮಾದರಿಯು 6.78 ಇಂಚಿನ ಪರದೆಯನ್ನು ಹೊಂದಿದ್ದರೆ, ಪ್ರೊ ಆವೃತ್ತಿಯು 6.8 ಇಂಚಿನ ಡಿಸ್‌ಪ್ಲೇ ಹೊಂದಿದೆ. ಮೊದಲನೆಯದು 50-ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದ್ದರೆ, ಎರಡನೆಯದು 180-ಮೆಗಾಪಿಕ್ಸೆಲ್ ಜೊತೆಗೆ ಪೆರಿಸ್ಕೋಪ್ ಸೆನ್ಸಾರ್‌ ಹೊಂದಿದೆ.

ಹಾನರ್ ಮ್ಯಾಜಿಕ್ 6 ಇದು 5,450mAh ಬ್ಯಾಟರಿ ಹೊಂದಿದ್ದು, ಪ್ರೊ ಮಾದರಿಯು 5,600mAh ಬ್ಯಾಟರಿ ಹೊಂದಿದೆ. ಈ ಮೊಬೈಲ್‌ಗಳು ಧೂಳು ಮತ್ತು ನೀರಿನಿಂದ ರಕ್ಷಣೆ ಪಡೆಯಲು IP68 ರೇಟಿಂಗ್ ತಂತ್ರಜ್ಞಾನವನ್ನು ಸಹ ಹೊಂದಿವೆ.

Best Mobiles in India

English summary
Honor launched the Honor Magic 6 and Honor Magic 6 Pro series of mobile phones in China in the month of January. Now the Chinese tech brand Honor is gearing up to launch this flagship series in the Indian market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+