ಹೊಸ Honor Magic 7 Lite ಫೋನ್ ಲಾಂಚ್; 108MP ಕ್ಯಾಮೆರಾ.. 6600mAh ಬ್ಯಾಟರಿ.. ಬಜೆಟ್ ಬೆಲೆ!
ಸದ್ದಿಲ್ಲದೆ ಹೊಸ ಹಾನರ್ ಫೋನ್ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್ ಹಾನರ್ ಮ್ಯಾಜಿಕ್ 7 ಲೈಟ್ (Honor Magic 7 Lite) ಹೆಸರಿನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಹೌದು, ಕಂಪನಿಯು ಈ ಫೋನನ್ನು ಬಜೆಟ್ ಬೆಲೆಯಲ್ಲಿ ಪರಿಚಯಿಸಿದೆ. ಇದು ಎರಡು ಸ್ಟೋರೇಜ್ ರೂಪಾಂತರ ಮತ್ತು ಎರಡು ಬಣ್ಣಗಳಲ್ಲಿ ರಿಲೀಸ್ ಆಗಿದೆ. ಈ ಫೋನಿನ ಸ್ಟೈಲಿಶ್ ಲುಕ್ ಮತ್ತು ವೈಶಿಷ್ಟ್ಯಗಳು ಮೊಬೈಲ್ ಪ್ರಿಯರನ್ನು ಆಕರ್ಷಿಸುತ್ತಿದೆ. ಬನ್ನಿ, ಈ ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಹಾನರ್ ಮ್ಯಾಜಿಕ್ 7 ಲೈಟ್ ಮೊಬೈಲ್ 6.78 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 6 ಜೆನ್ 1 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 108 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಇದು 8GB RAM + 512GB ಸ್ಟೋರೇಜ್, 6600mAh ಬ್ಯಾಟರಿ ಮತ್ತು 66W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಫೋನಿನ ಬೆಲೆ, ಇನ್ನಿತರ ಫೀಚರ್ಸ್ ತಿಳಿಯಲು ಮುಂದೆ ಓದಿ.

ಡಿಸ್ಪೇ ವಿವರ
ಹಾನರ್ ಮ್ಯಾಜಿಕ್ 7 ಲೈಟ್ ಸ್ಮಾರ್ಟ್‌ಫೋನ್ 6.78 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 4,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, 2700 × 1224 ಸ್ಕ್ರೀನ್ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಹಾನರ್ ಮ್ಯಾಜಿಕ್ 7 ಲೈಟ್ ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 6 ಜೆನ್ 1 ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 14 ಆಧಾರಿತ ಮ್ಯಾಜಿಕ್ ಓಎಸ್ 8.0 ನೊಂದಿಗೆ ಕೆಲಸ ನಿರ್ವಹಿಸಲಿದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ A710 ಜಿಪಿಯು ಸಹ ಹೊಂದಿದೆ. ಈ ಮೊಬೈಲ್ 8GB RAM + 512GB ಸ್ಟೋರೇಜ್ ಆಯ್ಕೆ ಹೊಂದಿದೆ.
ಕ್ಯಾಮೆರಾ ಸೆಟಪ್
ಹಾನರ್ ಮ್ಯಾಜಿಕ್ 7 ಲೈಟ್ ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 5 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್
ಹಾನರ್ ಮ್ಯಾಜಿಕ್ 7 ಲೈಟ್ ಸ್ಮಾರ್ಟ್‌ಫೋನ್ 6,600mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 66W ವೇಗದ ಚಾರ್ಜಿಂಗ್ ಸೌಲಭ್ಯ ಒದಸಲಾಗಿದೆ.
ಇತರ ವೈಶಿಷ್ಟ್ಯಗಳು
ಹಾನರ್ ಮ್ಯಾಜಿಕ್ 7 ಲೈಟ್ ಮೊಬೈಲ್ ಫಿಂಗರ್‌ಪ್ರಿಂಟ್ ಸಂವೇದಕ, ಎಐ (AI) ವೈಶಿಷ್ಟ್ಯಗಳು ಮತ್ತು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, ಡ್ಯುಯಲ್-ಬ್ಯಾಂಡ್ ವೈಫೈ, ಬ್ಲೂಟೂತ್ 5.1, ಯುಎಸ್‌ಬಿ ಟೈಪ್ ಸಿ ಫೋರ್ಟ್ ಮತ್ತು ಎನ್‌ಎಫ್‌ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.
ಹಾನರ್ ಮ್ಯಾಜಿಕ್ 7 ಲೈಟ್ ಬೆಲೆ ಮತ್ತು ಲಭ್ಯತೆ
ಹಾನರ್ ಮ್ಯಾಜಿಕ್ 7 ಲೈಟ್ ಸ್ಮಾರ್ಟ್‌ಫೋನ್ ಟೈಟಾನಿಯಂ ಪರ್ಪಲ್ ಮತ್ತು ಟೈಟಾನಿಯಂ ಬ್ಲಾಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನಿನಿ 8GB RAM + 256GB ಸ್ಟೋರೇಜ್ ರೂಪಾತರದ ಬೆಲೆ 32,736 ರೂ. ಆಗಿದೆ. 8GB RAM + 512GB ಸ್ಟೋರೇಜ್ ರೂಪಾತರವು 35,391 ರೂ.ಗೆ ಬಿಡುಗಡೆಯಾಗಿದೆ. ಪ್ರಸ್ತುತ, ಈ ಮೊಬೈಲ್ ಜಾಗತಿಕ ಮಾರುಕಟ್ಟೆಯಲ್ಲಿ(ಇಟಲಿಯ ವೆಬ್‌ಸೈಟ್) ಖರೀದಿಗೆ ಲಭ್ಯವಿದೆ.


Click it and Unblock the Notifications








