'ಹಾನರ್ ಮ್ಯಾಜಿಕ್' ಸ್ಮಾರ್ಟ್‌ಫೋನ್‌ ಲಾಂಚ್: ಮ್ಯಾಜಿಕ್‌ ಏನು ಗೊತ್ತೇ?

Written By:

ಹುವಾವೆ ಟರ್ಮಿನಲ್ಸ್ ಹಾನರ್ ಬ್ರ್ಯಾಂಡ್ ಶುಕ್ರವಾರ 'ಹಾನರ್ ಮ್ಯಾಜಿಕ್' ಸ್ಮಾರ್ಟ್‌ಫೋನ್ ಅನ್ನು ಅನಾವರಣಗೊಳಿಸಿದೆ. ಹಾನರ್ ಮ್ಯಾಜಿಕ್ ಶುಕ್ರವಾರದಿಂದಲೇ ಚೀನಾದಲ್ಲಿ ಖರೀದಿಗೆ ಲಭ್ಯವಾಗಿದ್ದು CNY 3,699 (ಸುಮಾರು ರೂ.36,000). ಅಂದಹಾಗೆ ಸ್ಮಾರ್ಟ್‌ಫೋನ್ ಚೀನಾದ ವಿಮಾಲ್, ಟಿಮಾಲ್ ಮತ್ತು ಜೆಡಿ.ಕಾಂ'ಗಳಲ್ಲಿ ಲಭ್ಯ.

ಚೀನಾ ಕಂಪನಿ ಆದ ಹುವಾವೆ 'ಹಾನರ್ ಮ್ಯಾಜಿಕ್' ಡಿವೈಸ್ ಜಾಗತಿಕವಾಗಿ ಇತರೆ ದೇಶಗಳಲ್ಲಿ ಮಾರಟ ಮಾಡುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಡಿವೈಸ್ ಲಾಂಚ್‌ನೊಂದಿಗೆ ಹಾನರ್ ತನ್ನ ಮೂರನೇ ವಾರ್ಷಿಕೋತ್ಸವವನ್ನು ಸ್ಮರಿಸುತ್ತಿದೆ. ಹಾನರ್ ಮ್ಯಾಜಿಕ ಡಿವೈಸ್‌ನ ವಿಶೇಷ ಫೀಚರ್‌ಗಳೇನು ಎಂದು ಮುಂದೆ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಕ್ರೀನ್ ನೋಡಿ ಫೋನ್‌ ಅನ್‌ಲಾಕ್ ಮಾಡಬಹುದು

ಸ್ಕ್ರೀನ್ ನೋಡಿ ಫೋನ್‌ ಅನ್‌ಲಾಕ್ ಮಾಡಬಹುದು

ಹಾನರ್ ಮ್ಯಾಜಿಕ್, ಇಂಟೆಲಿಜೆಂಟ್ ಸೆನ್ಸಾರ್ ಮತ್ತು ಗುರುತಿಸುವಿಕೆ ಟೆಕ್ನಾಲಜಿಯನ್ನು ಬಳಕೆದಾರರ ಸುರಕ್ಷತೆ ದೃಷ್ಟಿಯಿಂದ ಹೊಂದಿದೆ. ವೈಸ್‌ಸ್ಕ್ರೀನ್‌ ಸೆನ್ಸಾರ್‌ನೊಂದಿಗೆ ಬಂದಿದ್ದು, ಡಿವೈಸ್‌ ಬಳಕೆದಾರರು ಸ್ಕ್ರೀನ್ ನೋಡಿ ಫೋನ್‌ ಅನ್‌ಲಾಕ್ ಮಾಡಬಹುದು. ಅಲ್ಲದೇ ಫೋನ್‌ ಅನ್ನು ಕೆಳಗೆ ಎಸೆದರೆ ಅಥವಾ ಜೇಬಿನಲ್ಲಿ ಹಾಕಿದ ತಕ್ಷಣ ಸ್ಕ್ರೀನ್‌ ಟರ್ನ್‌ ಆಫ್‌ ಆಗುತ್ತದೆ ಮತ್ತು ಫೋನ್‌ ಲಾಕ್‌ ಆಗುತ್ತದೆ.

 ಫೇಸ್‌ಕೋಡ್ ಗುರುತಿಸುವಿಕೆ

ಫೇಸ್‌ಕೋಡ್ ಗುರುತಿಸುವಿಕೆ

ಹಾನರ್ ಮ್ಯಾಜಿಕ್ ಸ್ಮಾರ್ಟ್‌ಫೋನ್‌ ಫೇಸ್‌ಕೋಡ್ ಇಂಟೆಲಿಜೆನ್ಸ್ ಗುರುತಿಸುವಿಕೆ ಫೀಚರ್‌ನೊಂದಿಗೆ ಬಂದಿದ್ದು, ಯಾವುದೇ ನೋಟಿಫಿಕೇಶನ್‌ಗಳನ್ನು, ಸ್ಮಾರ್ಟ್‌ಫೋನ್‌ ಬಳಸುವ ಬಳಕೆದಾರನಿಗೆ ಮಾತ್ರ ಫೇಸ್‌ಕೋಡ್ ಗುರುತಿಸಿ ತೋರಿಸುತ್ತದೆ. ಇತರರು ಫೋನ್ ಬಳಸಿದ್ದಲ್ಲಿ ನೋಟಿಫಿಕೇಶನ್ ತೋರಿಸುವುದಿಲ್ಲ. ಕಂಪನಿ, ಡಿವೈಸ್‌ನಲ್ಲಿ ಗೂಗಲ್‌ ನೌ ಫೀಚರ್ ಅನ್ನು ಪರಿಚಯಿಸಿದೆ.

ಡಿಸ್‌ಪ್ಲೇ ಫೀಚರ್

ಡಿಸ್‌ಪ್ಲೇ ಫೀಚರ್

5.09 ಇಂಚಿನ (1440*2560p) ಕ್ವಾಡ್‌ ಎಚ್‌ಡಿ ಅಮೋಲ್ಡ್ 3D ಕರ್ವ್‌ಡ್ ಡಿಸ್‌ಪ್ಲೇ ಹೊಂದಿದೆ. ಹಾನರ್ ಮ್ಯಾಜಿಕ್ ಕಂಪನಿಯ ಆಕ್ಟಾ-ಕೋರ್ ಕಿರಿನ್ 950 ಪ್ರೊಸೆಸರ್ ಕ್ಲಾಕ್‌ 1.8GHz ಜೊತೆಗೆ 4GB RAM ಹೊಂದಿದೆ.

ಸಾಫ್ಟ್‌ವೇರ್‌ ಮತ್ತು ಮೆಮೊರಿ

ಸಾಫ್ಟ್‌ವೇರ್‌ ಮತ್ತು ಮೆಮೊರಿ

ಹಾನರ್ ಮ್ಯಾಜಿಕ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಹಾನರ್ ಯೂಸರ್ ಇಂಟರ್ಫೇಸ್ ಓಎಸ್ ಚಾಲಿತವಾಗಿದೆ. 64GB ಇನ್‌ಬಿಲ್ಟ್ ಸ್ಟೋರೇಜ್ ಹೊಂದಿದೆ.

ಕ್ಯಾಮೆರಾ ಮತ್ತು ಬ್ಯಾಟರಿ ಫೀಚರ್

ಕ್ಯಾಮೆರಾ ಮತ್ತು ಬ್ಯಾಟರಿ ಫೀಚರ್

12MP ಡ್ಯುಯಲ್ ಹಿಂಭಾಗ ಕ್ಯಾಮೆರಾ ಸಫೋರ್ಟ್‌ ಜೊತೆಗೆ ಡ್ಯುಯಲ್ ಟೋನ್ ಎಲ್‌ಇಡಿ ಫ್ಲ್ಯಾಶ್ ಮತ್ತು F/2.2 ಅಪರ್ಚರ್ ಸಫೋರ್ಟ್ ಹೊಂದಿದೆ. 8MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಫಾಸ್ಟ್‌ ಚಾರ್ಜಿಂಗ್ ಸಫೋರ್ಟ್‌ನ 2900mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಕೇವಲ 20 ನಿಮಿಷಗಳಲ್ಲಿ ಶೇ.70 ರಷ್ಟು ಚಾರ್ಜ್‌, 10 ನಿಮಿಷದಲ್ಲಿ ಶೇ.40 ರಷ್ಟು ಚಾರ್ಜ್‌ ಆಗುತ್ತದೆ ಎಂದು ಕಂಪನಿ ಹೇಳಿದೆ.

 ಹಾನರ್ ಮ್ಯಾಜಿಕ್ ಸಂಪರ್ಕ ಫೀಚರ್‌ಗಳು

ಹಾನರ್ ಮ್ಯಾಜಿಕ್ ಸಂಪರ್ಕ ಫೀಚರ್‌ಗಳು

ಹಾನರ್ ಮ್ಯಾಜಿಕ್ 146.1x69.9x7.8mm ಅಳತೆ ಹೊಂದಿದ್ದು, 145 ಗ್ರಾ ತೂಕವಿದೆ. 4G LTE, 3G, ಜಿಪಿಆರ್‌ಎಸ್/ಎಡ್ಜ್‌, ಬ್ಲೂಟೂತ್ 4.2, ಜಿಪಿಎಸ್/ ಎ-ಜಿಪಿಎಸ್ ಸಂಪರ್ಕ ಫೀಚರ್‌ಗಳನ್ನು ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Honor Magic Smartphone Launched: Price, Specifications, and More. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot