Honor ಅಬ್ಬರ ಶುರು.. ಬಂದೇಬಿಡ್ತು ಹೊಸ ಫೋನ್: ಇದರ ಬೆಲೆ ಕೇಳಿದ್ರೆ ತಲೆ ತಿರುಗಿ ಬೀಳ್ತೀರಾ!
ಹಾನರ್ ಸ್ಮಾರ್ಟ್‌ಫೋನ್‌ಗಳನ್ನು ಎದುರು ನೋಡುತ್ತಿದ್ದ ಮೊಬೈಲ್ ಪ್ರಿಯರ ಕಾಯುವಿಕೆ ಅಂತ್ಯವಾಗಿದೆ. ಹಾನರ್ (Honor) ತನ್ನ ಬಹುನಿರೀಕ್ಷಿತ ನೂತನ ಫೋಲ್ಡಬಲ್ ಫೋನ್‌ಗಳಾದ Honor Magic V3 ಮತ್ತು Magic Vs3 ಚೀನಾದಲ್ಲಿ ಬಿಡುಗಡೆ ಮಾಡಿದೆ. ಈ ಎರಡೂ ಫೋಲ್ಡಬಲ್ ಫೋನ್‌ಗಳು ಸಾಕಷ್ಟು ವೈಶಿಷ್ಟ್ಯಗಳೊಂದಿಗೆ ಲೋಕಾರ್ಪಣೆಗೊಂಡಿವೆ. Honor Magic V3 ಮತ್ತು Magic Vs3 ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳು 50MP ಕ್ಯಾಮೆರಾ, ಸ್ಯಾಟಲೈಟ್ ಫೀಚರ್‌ಗಳು ಸೇರಿದಂತೆ ಕೆಲವು ಹೊಸ ವಿಶೇಷತೆಗಳನ್ನು ಪಡೆದಿವೆ. Honor Magic V3 ಸ್ಮಾರ್ಟ್‌ಫೋನ್‌ನ ವಿಶೇಷತೆಗಳನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.
Honor Magic V3 ಸ್ಮಾರ್ಟ್‌ಫೋನ್ ಬಹುತೇಕ Honor Magic Vs3 ಮಾದರಿಯಲ್ಲಿರುವ ಫೀಚರ್ಸ್‌ಗಳನ್ನು ಹೊಂದಿದೆ. ಇದು 50MP ಪ್ರಾಥಮಿಕ ಕ್ಯಾಮೆರಾ, 120Hz ರಿಫ್ರೆಶ್ ದರದೊಂದಿಗೆ 7.92 ಇಂಚಿನ ಡಿಸ್ಪ್ಲೇಯನ್ನು ಪಡೆದಿದೆ. ಈ ಫೋನ್ Snapdragon 8 Gen 3 ಚಿಪ್‌ಸೆಟ್, 5150mAh ಬ್ಯಾಟರಿಯನ್ನು ಹೊಂದಿದೆ. ಇನ್ನುಳಿದಂತೆ Honor Magic V3ನ ಬೆಲೆ ಎಷ್ಟು? ಏನೆಲ್ಲಾ ಫೀಚರ್ಸ್ ಹೊಂದಿದೆ? ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಹಾನರ್ ಮ್ಯಾಜಿಕ್ ವಿ3 ಬೆಲೆ ಎಷ್ಟು?
ಚೀನಾದಲ್ಲಿ Honor Magic V3ನ 12GB ಮತ್ತು 256GB ಸ್ಟೋರೇಜ್ ವೇರಿಯಂಟ್ ಅಂದಾಜು 1,03,600 ರೂ. (ಬೆಲೆ CNY 8,999) ಇದೆ. ಇನ್ನೂ 16GB ಮತ್ತು 512GB ಸ್ಟೋರೇಜ್ ಮಾದರಿಯ ಬೆಲೆ ಅಂದಾಜು 1,15,100 ರೂ. (CNY 9,999) ಮತ್ತು 1TB ಸ್ಟೋರೇಜ್‌ನೊಂದಿಗೆ 16GB RAM ರೂಪಾಂತರವು ಅಂದಾಜು 1,26,600 ರೂ. (CNY 10,999) ಬೆಲೆಯನ್ನು ಹೊಂದಿದೆ.
ಹಾನರ್ ಮ್ಯಾಜಿಕ್ ವಿ3 ವಿಶೇಷತೆಗಳೇನು?
ಹಾನರ್ ಮ್ಯಾಜಿಕ್ ವಿ3 ಮಡಿಸಿದಾಗ ಕೇವಲ 9.2 ಎಂಎಂ ತೆಳ್ಳಗಿರುತ್ತದೆ. ಮತ್ತು ಓಪನ್ ಮಾಡಿದಾಗ 4.35 ಎಂಎಂ ತೆಳ್ಳಗಿರುತ್ತದೆ. ಇದು 20:9 ಆಕಾರ ಅನುಪಾತದೊಂದಿಗೆ 6.43 ಇಂಚಿನ ಹೊರ ಕವರ್ ಡಿಸ್ಲ್ಪೇಯನ್ನು ಹೊಂದಿದೆ. 2376 x 1060 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್, 5000nits ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಡಿಸ್ಲೇಯು ರೈನೋ ಗ್ಲಾಸ್ ರಕ್ಷಣೆಯನ್ನು ಪಡೆದಿದೆ.
ಒಳಗಿರುವ LTPO OLED ಡಿಸ್ಲ್ಪೇಯು 7.92 ಇಂಚಿನ ಗಾತ್ರದಲ್ಲಿದೆ. ಇದು 120Hz ರಿಫ್ರೆಶ್ ದರ, 2344 x 2156 ಪಿಕ್ಸೆಲ್‌ಗಳ ರೆಸಲ್ಯೂಶನ್ ಒಳಗೊಂಡಿದೆ. ಎರಡೂ ಡಿಸ್ಪ್ಲೇಗಳು 10 ಬಿಟ್ ಬಣ್ಣದ ಆಳವನ್ನು ಬೆಂಬಲಿಸುತ್ತವೆ ಮತ್ತು DCI-P3 ಬಣ್ಣದ ಹರವು 100% ವರೆಗೆ ಆವರಿಸಬಹುದು. ಎರಡೂ ಡಿಸ್ಲ್ಪೇಗಳಿಗೆ ಸ್ಟೈಲಸ್ ಸಪೋರ್ಟ್ ಇದೆ.
ಹಾನರ್ ಮ್ಯಾಜಿಕ್ ವಿ3 ಪ್ರೊಸೆಸರ್ ಏನು?
ಇದು Snapdragon 8 Gen 3 ಚಿಪ್‌ಸೆಟ್ ಅನ್ನು ಹೊಂದಿದೆ. ಫೋನ್ ಆಂಡ್ರಾಯ್ಡ್ 14 ಆಧಾರಿತ ಮ್ಯಾಜಿಕ್ ಓಎಸ್ 8.0.1 ಅನ್ನು ಬೂಟ್ ಮಾಡುತ್ತದೆ.

ಮ್ಯಾಜಿಕ್ ವಿ3ನ ಕ್ಯಾಮೆರಾ ಸೆಟಪ್ ಹೇಗಿದೆ?
ಇದು ಟ್ರಿಪಲ್ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ OIS ಜೊತೆಗೆ 50MP f/1.6 ಪ್ರಾಥಮಿಕ ಕ್ಯಾಮೆರಾ, ಆಟೋಫೋಕಸ್ ಮತ್ತು ಮ್ಯಾಕ್ರೋ ಮೋಡ್ ಬೆಂಬಲದೊಂದಿಗೆ 40MP f/2.2 ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು OIS ಮತ್ತು f/ ಜೊತೆಗೆ 50MP ಟೆಲಿಫೋಟೋ ಸ್ನ್ಯಾಪರ್ ಒಳಗೊಂಡಿದೆ. 3.0 ಅಪರ್ಚರ್ ಆಗಿದೆ. ಹೆಚ್ಚುವರಿಯಾಗಿ, ಇದು 20MP f/2.2 ಶೂಟರ್‌ಗಳನ್ನು ಹೊಂದಿದೆ.
5150mAh ಬ್ಯಾಟರಿ, 50W ವೈರ್‌ಲೆಸ್ ಚಾರ್ಜಿಂಗ್
ಹಾನರ್ ಮ್ಯಾಜಿಕ್ ವಿ3 ಫೋನ್ 5,150mAh ಬ್ಯಾಟರಿಯನ್ನು ಹೊಂದಿದೆ. ಇದು 66W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ವೈಶಿಷ್ಟ್ಯಗಳು ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಒಳಗೊಂಡಿವೆ. DTSಗೆ ಬೆಂಬಲದೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು ಬರುತ್ತವೆ.
ಕನೆಕ್ಟಿವಿಟಿ ಆಯ್ಕೆಗಳ ಬಗ್ಗೆ ಹೇಳುವುದಾದರೆ, ಇದು ಡ್ಯುಯಲ್ ಸಿಮ್, 5G, ವೈಫೈ 7, ಬ್ಲೂಟೂತ್ 5.3, GNSS, IR ಬ್ಲಾಸ್ಟರ್, NFC ಮತ್ತು USB 3.1 Gen1 (ಟೈಪ್-ಸಿ) ಅನ್ನು ಒಳಗೊಂಡಿದೆ.


Click it and Unblock the Notifications








