Home
ಮೊಬೈಲ್

ಶೀಘ್ರದಲ್ಲೇ Honor Magic V3 ಬಿಡುಗಡೆ; ಬೆಲೆ ಕಡಿಮೆ, ವಿಶೇಷತೆಗಳೇನು?

ಹಾನರ್‌ (Honor) ಕಂಪನಿಯು ತನ್ನ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಜುಲೈನಲ್ಲಿ ಚೀನಾದಲ್ಲಿ ಬಿಡುಗಡೆಯಾದ ಹಾನರ್ ಮ್ಯಾಜಿಕ್ V3 (Honor Magic V3) ಫೋನ್ ಶೀಘ್ರದಲ್ಲೇ ಜಾಗತಿಕ ಮಾರುಕಟ್ಟೆಯಲ್ಲೂ ಬಿಡುಗಡೆಯಾಗಲಿದೆ. ಇತ್ತೀಚೆಗೆ, ಹಾನರ್‌ ಮ್ಯಾಜಿಕ್ V3 ಹೊಸ ಫೋನನ್ನು ಬೆಂಚ್‌ಮಾರ್ಕಿಂಗ್ ವೆಬ್‌ಸೈಟ್‌ನಲ್ಲಿ ಗುರುತಿಸಲಾಗಿದೆ. ಈ ಮೂಲಕ ಶೀಘ್ರದಲ್ಲೇ ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಡುವ ಸುಳಿವು ನೀಡಿದೆ. ಈ ಫೋನ್ ಚೀನಾದಲ್ಲಿ ಲಾಂಚ್‌ ಆದ ಮೊಬೈಲ್‌ನಂತಯೇ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಹೌದು, ಹಾನರ್ ಮ್ಯಾಜಿಕ್ V3 ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಭಾರತದಲ್ಲಿ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ಫೋನ್‌ 12GB RAM ಜೊತೆಗೆ Snapdragon 8 Gen 3 ಪ್ರೊಸೆಸರ್‌ ಅನ್ನು ಹೊಂದಿರಲಿದೆ. ಈ ಫೋನನ್ನು ಮೂರು ಸ್ಟೋರೇಜ್‌ ಆಯ್ಕೆಗಳೊಂದಿಗೆ ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. ಕಪ್ಪು, ಹಸಿರು, ಕೆಂಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಈ ಫೋನಿನ ಬೆಲೆ ಮತ್ತು ಇನ್ನಿತರ ವೈಶಿಷ್ಟ್ಯಗಳನ್ನು ತಿಳಿಯಲು ಮುಂದೆ ಓದಿ.

ಶೀಘ್ರದಲ್ಲೇ Honor Magic V3 ಬಿಡುಗಡೆ; ಬೆಲೆ ಕಡಿಮೆ, ವಿಶೇಷತೆಗಳೇನು?

ಹಾನರ್ ಮ್ಯಾಜಿಕ್ V3 ವಿಶೇಷತೆಗಳೇನು?

ಹಾನರ್ ಮ್ಯಾಜಿಕ್ V3 ಫೋನ್‌ ಕಂಪನಿಯ ಅತ್ಯಂತ ಜನಪ್ರಿಯ ಫೋನ್ ಆಗಿದೆ. ಕಂಪನಿಯು ಇದೀಗ, ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಹಾನರ್ ಮ್ಯಾಜಿಕ್ V3 ಜಾಗತಿಕ ಮಾದರಿಯನ್ನು ಬೆಂಚ್‌ಮಾರ್ಕ್ ಪ್ಲಾಟ್‌ಫಾರ್ಮ್ ಗೀಕ್‌ಬೆಂಚ್‌ನಲ್ಲಿ ಗುರುತಿಸಲಾಗಿದೆ. ಇಲ್ಲಿ ಇದರ ಮಾದರಿ ಸಂಖ್ಯೆ FCP-N49 ಅನ್ನು ಉಲ್ಲೇಖಿಸಲಾಗಿದೆ. ಇದು Qualcomm Snapdragon 8 Gen 3 SoC ಪ್ರೊಸೆಸರ್ ಹೊಂದಿರಲಿದೆ. ಇದು 8 ಕೋರ್ ಚಿಪ್‌ಸೆಟ್ ಆಗಿರಲಿದೆ. ಇದರ ಗರಿಷ್ಠ ಗಡಿಯಾರದ ವೇಗ 3.30GHz ಎಂದು ಹೇಳಲಾಗಿದೆ.

ಮುಂಬರುವ ಈ ಫೋನ್ 12GB RAM ಅನ್ನು ಹೊಂದಿರುತ್ತದೆ. ಗ್ರಾಫಿಕ್ಸ್‌ಗಾಗಿ Adreno 750 GPU ಅನ್ನು ಒಳಗೊಂಡಿರುತ್ತದೆ. ಇದಲ್ಲದೆ, ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ಮ್ಯಾಜಿಕ್ ಓಎಸ್ 8.0 ನೊಂದಿಗೆ ಬರಬಹುದು. ಈ ಫೋನ್ ಸಿಂಗಲ್ ಕೋರ್ ಟೆಸ್ಟ್‌ನಲ್ಲಿ1914 ಅಂಕಗಳನ್ನು ಗಳಿಸಿದೆ. ಮಲ್ಟಿ ಕೋರ್ ಟೆಸ್ಟ್‌ನಲ್ಲಿ 5354 ಅಂಕಗಳನ್ನು ಗಳಿಸಿದೆ.

ಹಾನರ್ ಮ್ಯಾಜಿಕ್ V3 ಬೆಲೆ ಎಷ್ಟು?

ಹಾನರ್ ಮ್ಯಾಜಿಕ್ V3 ಫೋನನ್ನು ಮೂರು ಸ್ಟೋರೇಜ್ ಆಯ್ಕೆಗಳೊಂದಿಗೆ ಬಿಡುಗಡೆ ಮಾಡಲಾಗಿದೆ. 12GB + 256GB ಸ್ಟೋರೇಜ್‌ ವೇರಿಯಂಟ್ ಬೆಲೆ ಸುಮಾರು 1,03,645 ರೂ. ಇದೆ. ಇನ್ನೂ, 16GB + 512GB ಸ್ಟೋರೇಜ್‌ ಮಾದರಿಯ ಬೆಲೆ ಸುಮಾರು 1,15,160 ರೂ. ಆಗಿದೆ. ಮತ್ತು 16GB + 1TB ಸ್ಟೋರೇಜ್‌ ಆಯ್ಕೆಯು ಸುಮಾರು 1,26,680 ರೂ.ಗೆ ಬಿಡುಗಡೆಯಾಗಿದೆ.

ಹಾನರ್ ಮ್ಯಾಜಿಕ್ V3 ನಿರೀಕ್ಷಿತ ಫೀಚರ್ಸ್‌

ಡಿಸ್ಲ್ಪೇ: ಹಾನರ್ ಮ್ಯಾಜಿಕ್ V3 ಫೋನಿನ ಚೀನಾದ ಆವೃತ್ತಿಯು 7.92 ಇಂಚಿನ ಪ್ರಾಥಮಿಕ LTPO OLED ಡಿಸ್ಲ್ಪೇ ಜೊತೆಗೆ 6.43 ಇಂಚಿನ LTPO OLED ಕವರ್ ಡಿಸ್ಪ್ಲೇಯನ್ನು ಹೊಂದಿದೆ. ಎರಡೂ ಡಿಸ್ಪ್ಲೇಗಳು ಸ್ಟೈಲಸ್ ಬೆಂಬಲದೊಂದಿಗೆ ಬರುತ್ತವೆ. ಈ ಫೋನ್ 16GB RAM ಮತ್ತು 512GB ವರೆಗೆ ಸಂಗ್ರಹಣೆಯೊಂದಿಗೆ Snapdragon 8 Gen 3 ಚಿಪ್‌ಸೆಟ್ ಅನ್ನು ಹೊಂದಿದೆ.

ಪ್ರೊಸೆಸರ್: ಇದು ಉನ್ನತ ಮಟ್ಟದ ಸ್ನಾಪ್‌ಡ್ರಾಗನ್ ಚಿಪ್‌ಸೆಟ್ ಅನ್ನು ಹೊಂದಿರುವ ಸಾಧ್ಯತೆಯಿದೆ. ಹಾನರ್‌ ಮ್ಯಾಜಿಕ್ V3 ಸ್ನಾಪ್‌ಡ್ರಾಗನ್ 8 Gen 3 ಚಿಪ್‌ಸೆಟ್ ಅನ್ನು ಆಧರಿಸಿದೆ. ಈ ಫೋನ್ Android 14 ಆಧಾರಿತ MagicOS 8.0.1 ಅನ್ನು ಹೊಂದಿದೆ.

ಕ್ಯಾಮೆರಾ: ಇದು ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು 40 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ ಇದೆ.

ಬ್ಯಾಟರಿ: ಈ ಫೋನ್ 5,150mAh ಬ್ಯಾಟರಿಯನ್ನು ಹೊಂದಿದೆ. ಇದು 66W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಧೂಳು ಮತ್ತು ನೀರಿನಿಂದ ರಕ್ಷಿಸಲು IPX8 ರೇಟಿಂಗ್ ಪಡೆದಿದೆ.

Best Mobiles in India

English summary
Honor Magic V3 Foldable Phone Will Soon Be Launched Globally, Listed on Geekbench: Expected Specs, Price and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+