ಭಾರತಕ್ಕೆ ಬಂದೇಬಿಡ್ತು Honor Magic 6 Pro ಫೋನ್: ಬೆಲೆ ಎಷ್ಟು?
ಭಾರತೀಯ ಮಾರುಕಟ್ಟೆಗೆ ಪ್ರತಿದಿನ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಬರುತ್ತಿವೆ. ಅದರಲ್ಲೂ ಚೀನಾದ ಸ್ಮಾರ್ಟ್‌ಫೋನ್ ದೈತ್ಯ ಕಂಪನಿಗಳು ಕಡಿಮೆ ಬೆಲೆಗೆ ಫೋನ್‌ಗಳನ್ನು ಪರಿಚಯಿಸುತ್ತಿವೆ. ಅದರಂತೆಯೇ, ಪ್ರಸಿದ್ಧ ಸ್ಮಾರ್ಟ್‌ಫೋನ್ ದೈತ್ಯ ಹಾನರ್ ಹೊಸ ಫೋನನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ Honor Magic 6 Pro ಹೆಸರಿನಲ್ಲಿ ಭಾರತಕ್ಕೆ ಎಂಟ್ರಿ ಕೊಟ್ಟಿದೆ. ಹಾಗಾದ್ರೆ, ಈ ಫೋನಿನಲ್ಲಿ ಏನೆಲ್ಲಾ ಫೀಚರ್‌ಗಳಿವೆ? ಬೆಲೆ ಎಷ್ಟು? ಈ ಕುರಿತ ಸಂಪೂರ್ಣ ವಿವರಗಳನ್ನು ತಿಳಿಯೋಣ ಬನ್ನಿ.
ಸ್ಮಾರ್ಟ್‌ಫೋನ್ ಪ್ರಿಯರ ಕಾಯುವಿಕೆ ಮುಗಿಯಿತು..! ನಿರೀಕ್ಷೆಯಂತೆಯೇ, ಹಾನರ್ ಮ್ಯಾಜಿಕ್ 6 ಪ್ರೊ (Honor Magic 6 Pro) ಇಂದು ಅಧಿಕೃತವಾಗಿ ಬಿಡುಗಡೆಯಾಗಿದೆ. ಇದು 6.8 ಇಂಚಿನ ಕ್ವಾಡ್ ಕರ್ವ್ ಡಿಸ್ಲ್ಪೇಯನ್ನು ಹೊಂದಿದೆ. ಸ್ನಾಪ್‌ಡ್ರಾಗನ್ 8 Gen 3 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ 50MP ಮುಖ್ಯ ಕ್ಯಾಮೆರಾ ಹೊಂದಿದೆ. 5,600mAh ಬ್ಯಾಟರಿ ಮತ್ತು 80W ವೈರ್ಡ್ ಮತ್ತು 66W ವೈರ್‌ಲೆಸ್ ಚಾರ್ಜಿಂಗ್ ಒಳಗೊಂಡಿದೆ.

ಹಾನರ್ ಮ್ಯಾಜಿಕ್ 6 ಪ್ರೊ ಬಿಡುಗಡೆ, ಲಭ್ಯತೆ
ಹಾನರ್ ಮ್ಯಾಜಿಕ್ 6 ಪ್ರೊ ಎಪಿಕ್ ಗ್ರೀನ್ ಮತ್ತು ಕಪ್ಪು ಬಣ್ಣಗಳಲ್ಲಿ ಬರುತ್ತದೆ. ಇದನ್ನು ಕೇವಲ ಒಂದೇ 12GB + 512GB ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಬೆಲೆ 89,999 ರೂ. ಆಗಿದೆ. ಇದು Amazon.in, ಆಫ್‌ಲೈನ್ ಸ್ಟೋರ್‌ಗಳು ಮತ್ತು explorehonor.com ಮೂಲಕ ಆಗಸ್ಟ್ 15 ರಂದು ಮಾರಾಟ ಪ್ರಾರಂಭಿಸಲಿದೆ. ಚೀನಾದಲ್ಲಿ ಈ ಫೋನನ್ನು ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಅಲ್ಲಿ 16GB RAM + 512GB ಸ್ಟೋರೇಜ್ ಬೆಲೆ 68,000 ರೂ. ಆಗಿದೆ.
ಹಾನರ್ ಮ್ಯಾಜಿಕ್ 6 ಪ್ರೊ ಫೀಚರ್ಸ್
ಡಿಸ್ಲ್ಪೇ: ಇದು 6.8 ಇಂಚಿನ FHD+ 120Hz LTPO (1-120Hz) ಕ್ವಾಡ್-ಕರ್ವ್ಡ್ OLED ಡಿಸ್ಲ್ಪೇ ಹೊಂದಿದೆ. 1280 x 2800 ಪಿಕ್ಸೆಲ್, 5,000nits ಬ್ರಿಟ್‌ನೆಸ್ ಮತ್ತು ಡಾಲ್ಟಿ ವಿಷನ್ ಬೆಂಬಲದೊಂದಿಗೆ ಬರಲಿದೆ.
ಪ್ರೊಸೆಸರ್: ಹಾನರ್ ಮ್ಯಾಜಿಕ್ 6 ಪ್ರೊ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 Gen 3 4nm ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು Android 14 ಆಧಾರಿತ Magic UI 8.0ನಲ್ಲಿ ರನ್ ಆಗಲಿದೆ.

ಕ್ಯಾಮೆರಾ: ಇದು ಟ್ರಿಪಲ್ ಕ್ಯಾಮೆರಾ ಸೆಟಪ್ ಒಳಗೊಂಡಿದೆ. ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ, 50MP ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 180MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 50MP ಫ್ರಂಟ್ ಕ್ಯಾಮೆರಾ ಇದೆ. ಇದು 3D ಫೇಸ್ ಅನ್ಲಾಕ್ ಬೆಂಬಲಿಸುತ್ತದೆ. 4K ವಿಡಿಯೋ ರೆಕಾರ್ಡಿಂಗ್ ಕೂಡ ಸಪೋರ್ಟ್ ಮಾಡಲಿದೆ.
ಬ್ಯಾಟರಿ: ಹಾನರ್ ಮ್ಯಾಜಿಕ್ 6 ಪ್ರೊ ಸ್ಮಾರ್ಟ್‌ಫೋನ್ 5,600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. 80W ವೈರ್ಡ್ ಮತ್ತು 66W ವೈರ್‌ಲೆಸ್ ಹಾನರ್ ಸೂಪರ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಕೇವಲ 40 ನಿಮಿಷಗಳಲ್ಲಿ ಈ ಫೋನ್ 100% ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ.
ಇತರೆ ಫೀಚರ್ಸ್: ಈ ಫೋನ್ 162.5 x 75.8 x 8.9mm ಅಳತೆ ಮತ್ತು 229 ಗ್ರಾಂ ತೂಕ ಹೊಂದಿದೆ. IP68 ಧೂಳು ಮತ್ತು ನೀರಿನ ಪ್ರತಿರೋಧವನ್ನು ಪಡೆದಿದೆ. DTS: X ಅಲ್ಟ್ರಾ ಸೌಂಡ್ ಎಫೆಕ್ಟ್‌ಗಳೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, 5G SA/NSA, ಡ್ಯುಯಲ್ 4G VoLTE, Wi-Fi 7, ಬ್ಲೂಟೂತ್ 5.3, USB ಟೈಪ್-C, NFC ನಂತಹ ಸೌಲಭ್ಯ ಒಳಗೊಂಡಿದೆ.


Click it and Unblock the Notifications








