Home
ಮೊಬೈಲ್

Honor Magic 6 Pro: 108MP ಕ್ಯಾಮೆರಾ ಇರೋ ಹೊಸ ಫೋನ್​ ಬರ್ತಿದೆ! ನಿಮ್ಗೂ ಬೇಕಾ?

ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ಭರಾಟೆ ಪ್ರಾರಂಭವಾಗಿದೆ. ಆಗಸ್ಟ್ ಮೊದಲ ದಿನವೇ ಮೊಟೊರೊಲಾ ಮತ್ತು ಪೊಕೊ ಕಂಪನಿಯ ಎರಡು ಹೊಸ ಮೊಬೈಲ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇದೀಗ, ಹಾನರ್ ಮೊಬೈಲ್‌ನ ಸರದಿ. ಹೌದು, ಹಾನರ್ (Honor) ಕಂಪನಿಯು ಇಂದು ತನ್ನ ಹೊಸ ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇದುವೇ Honor Magic 6 Pro ಸ್ಮಾರ್ಟ್‌ಫೋನ್‌. ಈ ಫೋನ್‌ ತನ್ನ ಸ್ಟೈಲಿಶ್ ಲುಕ್ ಮತ್ತು ವಿಭಿನ್ನ ಫೀಚರ್ಸ್‌ಗಳಿಂದ ಮೊಬೈಲ್‌ ಪ್ರಿಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ಹೌದು, ಹಾನರ್ ಕಂಪನಿಯ ಬಹುನಿರೀಕ್ಷಿತ ಹೊಸ ಫೋನ್‌ ಇಂದು (ಆಗಸ್ಟ್ 2) ಭಾರತಕ್ಕೆ ಎಂಟ್ರಿ ಕೊಡಲಿದೆ. 6.8 ಇಂಚಿನ ಡಿಸ್ಲ್ಪೇ, ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್‌ ಹೊಂದಿರಲಿದೆ. ಇದು ಟ್ರಿಪಲ್‌ ಕ್ಯಾಮೆರಾ ರಚನೆಯೊಂದಿಗೆ 50MP ಮುಖ್ಯ ಕ್ಯಾಮೆರಾ, ಹೊಂದಿರಲಿದೆ. 5,600mAh ಬ್ಯಾಟರಿ ಮತ್ತು 80W ವೈರ್ಡ್ ಮತ್ತು 66W ವೈರ್‌ಲೆಸ್ ಚಾರ್ಜಿಂಗ್ ಒಳಗೊಂಡಿರಲಿದೆ. ಬನ್ನಿ, ಈ ಹೊಸ ಫೋನಿನ ಬಿಡುಗಡೆ ವಿವರ, ಬೆಲೆ ಮತ್ತು ಇತ್ಯಾದಿ ವಿವರಗಳನ್ನು ತಿಳಿಯೋಣ.

108MP ಕ್ಯಾಮೆರಾ ಇರೋ ಹೊಸ Honor ಫೋನ್​ ಬರ್ತಿದೆ! ನಿಮ್ಗೂ ಬೇಕಾ?

ಹಾನರ್ 200 ಸರಣಿ ಬಳಿಕ ಬರುತ್ತಿದೆ ಹೊಸ ಫೋನ್

ಇತ್ತೀಚೆಗೆ ಕಂಪನಿಯು ಭಾರತದಲ್ಲಿ ಹಾನರ್ 200 ಸರಣಿಯ ಫೊನ್‌ಗಳನ್ನು ಬಿಡುಗಡೆ ಮಾಡಿತ್ತು. ಇದೀಗ, ಹಾನರ್‌ ಮ್ಯಾಜಿಕ್ 6 ಪ್ರೊ ಬಿಡುಗಡೆಗೆ ಸಜ್ಜಾಗಿದೆ. ಈ ಹೊಸ ಫೋನ್ ಇಂದು (ಆಗಸ್ಟ್ 2) ಮಧ್ಯಾಹ್ನ 12.30 ಗಂಟೆಗೆ ಅದ್ದೂರಿಯಾಗಿ ಲಾಂಚ್ ಆಗಲಿದೆ. ಬಿಡುಗಡೆ ಬಳಿಕ ಅಮೆಜಾನ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇದು ಎಪಿಕ್ ಗ್ರೀನ್ ಮತ್ತು ಕಪ್ಪು ಬಣ್ಣದಲ್ಲಿ ಬರುತ್ತದೆ. ಈ ಫೋನ್‌ AI ಫೀಚರ್ಸ್‌ಗಳೊಂದಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ.

ಹಾನರ್‌ ಮ್ಯಾಜಿಕ್ 6 ಪ್ರೊ ಬೆಲೆ ಎಷ್ಟಿರಲಿದೆ?

ಕಂಪನಿಯು ಈ ಹೊಸ ಫೋನಿನ ಬೆಲೆಯನ್ನು ಬಹಿರಂಗಪಡಿಸಿಲ್ಲ. ಭಾರತದಲ್ಲಿ ಈ ಫೋನಿನ ಬೆಲೆಯು ಚೀನಾದಲ್ಲಿ ಬಿಡುಗಡೆಯಾದ ಸ್ಮಾರ್ಟ್‌ಫೋನಿನಂತೆಯೇ ಇರುವ ಸಾಧ್ಯತೆಯಿದೆ. ಚೀನಾದಲ್ಲಿ 12GB RAM+256GB ಸ್ಟೋರೇಜ್‌ನ ಬೆಲೆ 65,000 ರೂ. ಇದೆ. 16GB RAM+512GB ಸ್ಟೋರೇಜ್‌ನ ಬೆಲೆ 68,000 ರೂ. ಮತ್ತು 16GB RAM+1 TB ಸ್ಟೋರೇಜ್ ಮಾದರಿಯು 77,000 ರೂ.ಗೆ ಬಿಡುಗಡೆಯಾಗಿದೆ.

ಹಾನರ್‌ ಮ್ಯಾಜಿಕ್ 6 ಪ್ರೊ ನಿರೀಕ್ಷಿತ ಫೀಚರ್ಸ್‌

ಹಾನರ್‌ ಮ್ಯಾಜಿಕ್ 6 ಪ್ರೊ ಫೊನ್ 6.8 ಇಂಚಿನ LTPO OLED 120Hz ಡಿಸ್ಲ್ಪೇ ಹೊಂದಿರಲಿದೆ. 5,000nits HDR ಬ್ರಿಟ್‌ನೆಸ್ ಮತ್ತು ಡಾಲ್ಟಿ ವಿಷನ್ ಬೆಂಬಲದೊಂದಿಗೆ ಬರಲಿದೆ. ಈ ಫೋನ್ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಮತ್ತು ಈ ಫೋನ್ Android 14 ಆಧಾರಿತ MagicOS 8.0ನಲ್ಲಿ ಕಾರ್ಯನಿರ್ವಹಿಸುತ್ತದೆ.

ಟ್ರಿಪಲ್‌ ಕ್ಯಾಮೆರಾ ಸೆಟಪ್, 50MP ಸೆಲ್ಫಿ ಶೂಟರ್ ಖಚಿತ!

ಇದು ಟ್ರಿಪಲ್‌ ಕ್ಯಾಮೆರಾ ರಚನೆ ಹೊಂದಿರಲಿದೆ. ಸೆಲ್ಪಿ ಮತ್ತು ವಿಡಿಯೋ ಕರೆಗಾಗಿ 50MP ಸೆಲ್ಫಿ ಶೂಟರ್ ಇರಲಿದೆ. ಹಿಂಭಾಗದಲ್ಲಿ 50MP OIS + 50MP ಅಲ್ಟಾವೈಡ್ + 180MP ಪೆರಿಸ್ಕೋಪ್ ಕ್ಯಾಮೆರಾ ಹೊಂದಿರಲಿದೆ. ಇದು ಹಾನರ್ AI ಮೋಷನ್ ಸೆನ್ಸಿಂಗ್ ಕ್ಯಾಪ್ಟರ್ ಅನ್ನು ಒಳಗೊಂಡಿರಲಿದೆ.

ಹಾನರ್‌ ಮ್ಯಾಜಿಕ್ 6 ಪ್ರೊ ಫೋನ್ 5,600mAh ಬ್ಯಾಟರಿಯನ್ನು ಹೊಂದಿರಲಿದೆ. 80W ವೈರ್ಡ್ ಮತ್ತು 66W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ. ಕೇವಲ 40 ನಿಮಿಷಗಳಲ್ಲಿ 100% ಬ್ಯಾಟರಿಯನ್ನು ಚಾರ್ಜ್ ಆಗುತ್ತದೆ. ಈ ಫೋನ್ IP68 ಧೂಳು ಮತ್ತು ನೀರಿನ ಪ್ರತಿರೋಧವನ್ನು ಹೊಂದಿರಲಿದೆ.

ಈ ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi 7, ಬ್ಲೂಟೂತ್ 5.3, NFC ಮತ್ತು ಚಾರ್ಜಿಂಗ್‌ಗಾಗಿ USB ಟೈಪ್-C ಪೋರ್ಟ್ ನಂತಹ ಸೌಲಭ್ಯ ಹೊಂದಿರಲಿದೆ. ಮತ್ತು ಸ್ಟೀರಿಯೋ ಸ್ಪೀಕರ್‌ಗಳೊಂದಿಗೆ ಬರಲಿದೆ. ಇದು 162.5 x 75.8 x 8.9mm ಅಳತೆ ಹೊಂದಿರಲಿದೆ.

Best Mobiles in India

English summary
Honor Magic 6 Pro will be launching in India Today: Launch Batch Details, Expected specs, price and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+