Home
ಮೊಬೈಲ್

ಹೊಸ Honor ಫೋನ್‌ ಲಾಂಚ್; 200MP ಕ್ಯಾಮೆರಾ.. 512GB ಸ್ಟೋರೇಜ್.. ಯಾವುದು, ಬೆಲೆ ಇಷ್ಟೊಂದಾ?

ಹಾನರ್‌ ಸದ್ದಿಲ್ಲದೆ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಈ ಮೊಬೈಲ್ 200MP ಕ್ಯಾಮೆರಾ, 50MP ಸೆಲ್ಫಿ ಕ್ಯಾಮೆರಾ ಮತ್ತು 100W ಸ್ಪೀಡ್ ಚಾರ್ಜಿಂಗ್ ಒಳಗೊಂಡಿದೆ. ಹೌದು, ನೂತನ ಹಾನರ್ ಮ್ಯಾಜಿಕ್ 7 ಪ್ರೊ (Honor Magic7 Pro) ಫೋನ್‌ ಮಾರುಕಟ್ಟೆಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದೆ. ವಿಶೇಷವೆಂದರೆ, ಈ ಮೊಬೈಲ್‌ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ ಹೊಂದಿದೆ. ಈ ಫೋನಿನ ಬೆಲೆ ಬರೋಬ್ಬರಿ 1,15,000 ರೂ.ಗಿಂತ ಅಧಿಕ ಇದೆ. ಬನ್ನಿ, ಈ ಹೊಸ ಫೋನಿನ ವಿಶೇಷತೆಗಳನ್ನು ತಿಳಿಯೋಣ.

ಹೌದು, ಕಂಪನಿಯು ಹಾನರ್ ಮ್ಯಾಜಿಕ್ 7 ಪ್ರೊ ಫೋನನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದು ಲೂನರ್ ಸ್ಯಾಡೋ ಗ್ರೇ, ಬ್ರೀಜ್ ಬ್ಲೂ ಮತ್ತು ಕಪ್ಪು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ 6.8 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 12GB RAM + 512GB ಸ್ಟೋರೇಜ್, 5270mAh ಬ್ಯಾಟರಿ ಒಳಗೊಂಡಿದೆ. ಈ ಫೋನಿನಲ್ಲಿ ಅನೇಕ ಎಐ ಫೀಚರ್ಸ್‌ ಲಭ್ಯವಿದೆ. ಈ ಹೊಸ ಫೋನಿನ ಬೆಲೆ ತಿಳಿಯಲು ಮುಂದೆ ಓದಿ.

ಹೊಸ Honor ಫೋನ್‌ ಲಾಂಚ್; 200MP ಕ್ಯಾಮೆರಾ.. 512GB ಸ್ಟೋರೇಜ್.. ಬೆಲೆ ಎಷ್ಟು?

ಹಾನರ್ ಮ್ಯಾಜಿಕ್ 7 ಪ್ರೊ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಹಾನರ್ ಮ್ಯಾಜಿಕ್ 7 ಪ್ರೊ ಸ್ಮಾರ್ಟ್‌ಫೋನ್ 6.8 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಓಎಲ್‌ಇಡಿ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ, 5000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, 1280 × 2800 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಹಾನರ್ ಮ್ಯಾಜಿಕ್ 7 ಪ್ರೊ ಮೊಬೈಲ್ ಸ್ನಾಪ್‌ಡ್ರಾಗನ್ 8 ಎಲೈಟ್ ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 15 ಆಧಾರಿತ ಮ್ಯಾಜಿಕ್ UI 9.0 ನಲ್ಲಿ ಕೆಲಸ ನಿರ್ವಹಿಸುತ್ತದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ 830 ಜಿಪಿಯು ಸಹ ಹೊಂದಿದೆ. ಈ ಫೋನ್ 16GB RAM ಮತ್ತು 1TB ವರೆಗೆ ಸ್ಟೋರೇಜ್ ಹೊಂದಿದೆ.

ಕ್ಯಾಮೆರಾ ಸೆಟಪ್

ಹಾನರ್ ಮ್ಯಾಜಿಕ್ 7 ಪ್ರೊ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಜೊತೆಗೆ 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 200 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ, 3D ಡೆಪ್ತ್ ಕ್ಯಾಮೆರಾಗಳಿವೆ. ಈ ಫೋನ್ 3x ಆಪ್ಟಿಕಲ್ ಜೂಮ್, 100x ಡಿಜಿಟಲ್ ಜೂಮ್, 4K 60fps ವಿಡಿಯೋ ರೆಕಾರ್ಡಿಂಗ್ ಬೆಂಬಲ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಹಾನರ್ ಮ್ಯಾಜಿಕ್ 7 ಪ್ರೊ ಫೋನ್ 5270mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದನ್ನು ಚಾರ್ಜ್ ಮಾಡಲು, 100W ವೇಗದ ಚಾರ್ಜಿಂಗ್ ಮತ್ತು 80W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಹಾನರ್ ಮ್ಯಾಜಿಕ್ 7 ಪ್ರೊ ಮೊಬೈಲ್‌ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ. ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP69+IP68 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ 5G, ಡ್ಯುಯಲ್ 4G VoltE, ವೈ-ಫೈ 7, ಬ್ಲೂಟೂತ್ 5.4, ಜಿಪಿಎಸ್, ಎಜಿಪಿಎಸ್, ಯುಎಸ್‌ಬಿ ಟೈಪ್ ಸಿ, ಎನ್‌ಎಫ್‌ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

ಹಾನರ್ ಮ್ಯಾಜಿಕ್ 7 ಪ್ರೊ ಬೆಲೆ ಮತ್ತು ಲಭ್ಯತೆ

ಹಾನರ್ ಮ್ಯಾಜಿಕ್ 7 ಪ್ರೊ ಮೊಬೈಲ್ 12GB RAM + 512GB ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆಯಾಗಿದೆ. ಇದರ ಬೆಲೆ 1,15,880 ರೂ. ಆಗಿದೆ. ಪ್ರಸ್ತು, ಈ ಫೋನ್ ಯುರೋಪ್‌ನಲ್ಲಿ ಖರೀದಿಗೆ ಲಭ್ಯವಿದೆ. ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

Best Mobiles in India

English summary
HONOR Magic7 Pro with Snapdragon 8 Elite, 200MP telephoto camera launched: check price, specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+