Home
ಮೊಬೈಲ್

ಅಬ್ಬರಿಸಲು ಬಂತು ಹೊಸ HONOR ಫೋನ್; 200MP ಕ್ಯಾಮೆರಾ.. 1TB ಸ್ಟೋರೇಜ್.. 100W ಚಾರ್ಜಿಂಗ್; ಬೆಲೆ ಎಷ್ಟು ಗೊತ್ತಾ?

ಸ್ಮಾರ್ಟ್‌ಫೋನ್ ಪ್ರಿಯರು ಖುಷಿ ಪಡಲು ಇಷ್ಟು ಸಾಕು! 200MP ಟೆಲಿಫೋಟೋ ಕ್ಯಾಮೆರಾ.. 100W ಸ್ಪೀಡ್ ಚಾರ್ಜಿಂಗ್.. 5850mAh ಸಾಮರ್ಥ್ಯದ ಬ್ಯಾಟರಿ.. ಈ ಫೊನಿನ ಸ್ಟೈಲಿಶ್‌ ಲುಕ್‌, ಅತ್ಯಾಕರ್ಷಕ ವೈಶಿಷ್ಟ್ಯಗಳು ಗ್ರಾಹಕರನ್ನು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ. ಹೌದು, ಹಾನರ್‌ ಸದ್ದಿಲ್ಲದೆ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಇದು ಹಾನರ್ ಮ್ಯಾಜಿಕ್7 RSR ಪೋರ್ಷೆ ಡಿಸೈನ್ (HONOR Magic7 RSR Porsche Design) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಬನ್ನಿ, ಈ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಹಾನರ್ ಮ್ಯಾಜಿಕ್7 RSR ಪೋರ್ಷೆ ಡಿಸೈನ್ ಎರಡು ಸ್ಟೋರೇಜ್‌ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಈ ಫೋನ್ ಪ್ರೀಮಿಯಂ ವಿನ್ಯಾಸ ಹೊಂದಿದೆ. ಇದು 6.8 ಇಂಚಿನ ಕ್ವಾಡ್ ಕರ್ವ್ಡ್ ಡಿಸ್ಪ್ಲೇ ಹೊಂದಿದೆ. ಈ ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್‌ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಜೊತೆಗೆ 1TB ಸ್ಟೋರೇಜ್ ಮತ್ತು 80W ವೈರ್‌ಲೆಸ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೊಸ HONOR ಫೋನ್ ಲಾಂಚ್; 200MP ಕ್ಯಾಮೆರಾ, 50MP ಸೆಲ್ಫಿ ಕ್ಯಾಮೆರಾ.. ಬೆಲೆ ನೋಡಿ

ಹಾನರ್ ಮ್ಯಾಜಿಕ್7 RSR ಪೋರ್ಷೆ ಡಿಸೈನ್ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಹಾನರ್ ಮ್ಯಾಜಿಕ್7 RSR ಪೋರ್ಷೆ ಡಿಸೈನ್ ಮೊಬೈಲ್ 6.8 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು ಕ್ವಾಡ್ ಕರ್ವ್ಡ್ ಓಎಲ್‌ಇಡಿ ಡಿಸ್ಪ್ಲೇ ಆಗಿದೆ. ಡಿಸ್ಪ್ಲೇಯು 1280 × 2800 ಪಿಕ್ಸೆಲ್‌ ರೆಸಲ್ಯೂಶನ್, 120Hz ರಿಫ್ರೆಶ್‌ ದರ, 5000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಹಾನರ್ ಮ್ಯಾಜಿಕ್7 RSR ಪೋರ್ಷೆ ಡಿಸೈನ್ ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್‌ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಇದು 3nm ಆಕ್ಟಾಕೋರ್ ಪ್ರೊಸೆಸರ್ ಆಗಿದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ 830 ಜಿಪಿಯು ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ 15 ಆಧಾರಿತ ಮ್ಯಾಜಿಕ್ UI 9.0 ಓಎಸ್‌ನಲ್ಲಿ ಕೆಲಸ ಮಾಡುತ್ತದೆ.

ಸ್ಟೋರೇಜ್ ಆಯ್ಕೆ

ಹಾನರ್ ಮ್ಯಾಜಿಕ್7 RSR ಪೋರ್ಷೆ ಡಿಸೈನ್ ಸ್ಮಾರ್ಟ್‌ಫೋನ್ 16GB ಮತ್ತು 24GB RAM ಹೊಂದಿದೆ. ಈ ಫೋನಿನಲ್ಲಿ 512GB ಮತ್ತು 1TB ಸ್ಟೋರೇಜ್ ಲಭ್ಯವಿದೆ.

ಹೊಸ HONOR ಫೋನ್ ಲಾಂಚ್; 200MP ಕ್ಯಾಮೆರಾ, 50MP ಸೆಲ್ಫಿ ಕ್ಯಾಮೆರಾ.. ಬೆಲೆ ನೋಡಿ

200 ಮೆಗಾಪಿಕ್ಸೆಲ್ ಕ್ಯಾಮೆರಾ

ಹಾನರ್ ಮ್ಯಾಜಿಕ್7 RSR ಪೋರ್ಷೆ ಡಿಸೈನ್ ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 200 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಹೊಂದಿದೆ. ಇದು 3x ಆಪ್ಟಿಕಲ್ ಜೂಮ್, 100x ಡಿಜಿಟಲ್ ಜೂಮ್ ಮತ್ತು OIS ಬೆಂಬಲ ಬರುತ್ತದೆ. ಫೋನಿನಲ್ಲಿ 4K ವಿಡಿಯೋ 60fps ರೆಕಾರ್ಡಿಂಗ್‌ ಸಫೋರ್ಟ್‌ ಮತ್ತು ಸಿಂಗಲ್ ಎಲ್ಇಡಿ ಫ್ಲ್ಯಾಷ್ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಹಾನರ್ ಮ್ಯಾಜಿಕ್7 RSR ಪೋರ್ಷೆ ಡಿಸೈನ್ ಫೋನ್ 5850mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 100W ವೈರ್ಡ್ ಸೂಪರ್‌ಚಾರ್ಜ್ ಮತ್ತು 80W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಹಾನರ್ ಮ್ಯಾಜಿಕ್7 RSR ಪೋರ್ಷೆ ಡಿಸೈನ್ ಸ್ಮಾರ್ಟ್‌ಫೋನ್‌ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP68 + IP68 ರೇಟಿಂಗ್ ಪಡೆದಿದೆ. ಇದು ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸಂವೇದಕ ಸಹ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್ 5.4, ಜಿಪಿಎಸ್‌, ಗೆಲಿಲಿಯೋ, ಯುಎಸ್‌ಸಿ ಟೈಪ್ ಸಿ, ಎನ್‌ಎಫ್‌ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

ಹಾನರ್ ಮ್ಯಾಜಿಕ್7 RSR ಪೋರ್ಷೆ ಡಿಸೈನ್ ಬೆಲೆ

ಹಾನರ್ ಮ್ಯಾಜಿಕ್7 RSR ಪೋರ್ಷೆ ವಿನ್ಯಾಸದ ಮೊಬೈಲ್ ನೇರಳೆ ಮತ್ತು ಬೂದು ಬಣ್ಣಗಳಲ್ಲಿ ಬಿಡುಗಡೆಯಾಗಿದೆ. ಫೋನಿನ 16GB RAM + 512 GB ಸ್ಟೋರೇಜ್‌ ರೂಪಾಂತರವು 93,270 ರೂ.ಗೆ (CNY 7,999) ಬಿಡುಗಡೆಯಾಗಿದೆ. 24GB RAM + 1TB ಸ್ಟೋರೇಜ್ ರೂಪಾಂತರದ ಬೆಲೆಯು 1,04,905 ರೂ. (CNY 8,919) ಆಗಿದೆ. ಈ ಸ್ಮಾರ್ಟ್‌ಫೋನ್ ಪ್ರಸ್ತುತ, ಚೀನಾದಲ್ಲಿ ಮುಂಗಡ ಬುಕಿಂಗ್‌ಗೆ ಲಭ್ಯವಿದೆ. ನಾಳೆ (ಡಿಸೆಂಬರ್ 24) ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ.

Best Mobiles in India

English summary
HONOR Magic7 RSR Porsche Design with Snapdragon 8 Elite launched: know Price, Specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+