Home
ಮೊಬೈಲ್

HONOR: 108MP ಕ್ಯಾಮೆರಾ.. 5230mAh ಬ್ಯಾಟರಿ.. 20,000 ಬಜೆಟ್.. ಸದ್ದಿಲ್ಲದೆ ಹೊಸ ಫೋನ್ ಲಾಂಚ್

ಟೆಕ್ ಬ್ರ್ಯಾಂಡ್ ಹಾನರ್ ಸದ್ದಿಲ್ಲದೆ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಮೂಲಕ ತನ್ನ ಗ್ರಾಹಕರಿಗೆ ಸರ್ಪ್ರೈಸ್ ಉಡುಗೊರೆ ನೀಡಿದೆ. ಹೌದು, ಕಂಪನಿಯು ಬಹುನಿರೀಕ್ಷಿತ ಹಾನರ್ 400 ಲೈಟ್ 5G (HONOR 400 Lite 5G) ಅನ್ನು ಅಧಿಕೃತವಾಗಿ ರಿಲೀಸ್ ಮಾಡಿದೆ. ಈ ಮೊಬೈಲ್ ಎಐ (ಕೃತಕ ಬುದ್ಧಿಮತ್ತೆ) ಆಧರಿಸಿದ ಹೊಸ ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿದೆ. ವಿಶೇಷವೆಂದರೆ, ಮಧ್ಯಮ ಶ್ರೇಣಿಯ ಫೋನ್‌ಗಳಲ್ಲಿ ಈವರೆಗೆ ಇವು ಲಭ್ಯವಿಲ್ಲ. ಈ ಹೊಸ ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ಹಾನರ್ 400 ಲೈಟ್ ಮೊಬೈಲ್‌ನ ಎಲ್ಲಾ ವೈಶಿಷ್ಟ್ಯಗಳನ್ನು ವೆಬ್‌ಸೈಟ್‌ನಲ್ಲಿ ಪಟ್ಟಿಮಾಡಲಾಗಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7025 ಅಲ್ಟ್ರಾ ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 6.70 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದರೊಂದಿಗೆ 5230mAh ಬ್ಯಾಟರಿ, 35W ಚಾರ್ಜಿಂಗ್ ಮತ್ತು 16GB RAM + 256GB ಸ್ಟೋರೇಜ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಫೋನಿ ಬೆಲೆ ತಿಳಿಯಲು ಮುಂದೆ ಓದಿ.

108MP ಕ್ಯಾಮೆರಾ, 5230mAh ಬ್ಯಾಟರಿ.. ಸದ್ದಿಲ್ಲದೆ ಹೊಸ HONOR ಫೋನ್ ಲಾಂಚ್

ಹಾನರ್ 400 ಲೈಟ್ 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಹಾನರ್ 400 ಲೈಟ್ 5G ಮೊಬೈಲ್ 6.70 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2,412 x 1,080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ ಬರುತ್ತದೆ. ಈ ಫೋನಿನ ಸ್ಕ್ರೀನ್ 120Hz ರಿಫ್ರೆಶ್ ದರ, 3500 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್, 3840Hz OWM ಡಿಮ್ಮಿಂಗ್ ಮತ್ತು ಮಲ್ಟಿ ಟಚ್ ಗೆಸ್ಚರ್ ಬೆಂಬಲದೊಂದಿಗೆ ಬರುತ್ತದೆ. ಇದು ಅಲ್ಟ್ರಾಸಾನಿಕ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಹ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಹಾನರ್ 400 ಲೈಟ್ 5G ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7025 ಅಲ್ಟ್ರಾ ಆಕ್ಟಾ ಕೋರ್ ಪ್ರೊಸೆಸರ್‌ ಹೊಂದಿದೆ. ಇದನ್ನು 6 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ತಯಾರಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ಮ್ಯಾಜಿಕ್ ಓಎಸ್ 9.0 ಜೊತೆಗೆ ಕೆಲಸ ಮಾಡುತ್ತದೆ. ಈ ಫೋನ್ 12GB RAM ಮತ್ತು 256GB ಆಂತರಿಕ ಸ್ಟೋರೇಜ್ ಆಯ್ಕೆ ಒಳಗೊಂಡಿದೆ.

ಕ್ಯಾಮೆರಾ ಸೆಟಪ್

ಹಾನರ್ 400 ಲೈಟ್ 5G ಫೋನ್‌ ಫೋಟೋಗ್ರಫಿ ಇಷ್ಟಪಡುವವರಿಗೆ ಉತ್ತಮ ಆಯ್ಕೆಯಾಗಿದೆ. ಈ ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅಳವಡಿಸಲಾಗಿದೆ. ಈ ಮೊಬೈಲ್ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಹಾಗೆಯೇ ಎರಡನೇ ಕ್ಯಾಮೆರಾವು 5 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

108MP ಕ್ಯಾಮೆರಾ, 5230mAh ಬ್ಯಾಟರಿ.. ಸದ್ದಿಲ್ಲದೆ ಹೊಸ HONOR ಫೋನ್ ಲಾಂಚ್

ಬ್ಯಾಟರಿ ಮತ್ತು ಚಾರ್ಜಿಂಗ್

ಹಾನರ್ 400 ಲೈಟ್ ದೀರ್ಘ ಬ್ಯಾಕಪ್‌ಗಾಗಿ ದೊಡ್ಡ 5230mAh ಬ್ಯಾಟರಿಯನ್ನು ಹೊಂದಿದೆ. ಇದು 35W ಹಾನರ್ ಸೂಪರ್‌ಚಾರ್ಜ್ ಬೆಂಬಲವನ್ನು ಪಡೆಯುತ್ತದೆ, ಇದು ಹಾನರ್ 400 ಲೈಟ್ ಸ್ಮಾರ್ಟ್‌ಫೋನ್ 5,230mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ತ್ವರಿತವಾಗಿ ಚಾರ್ಜ್ ಮಾಡಲು, 35W ಹಾನರ್ ಸೂಪರ್‌ ಚಾರ್ಜಿಂಗ್ ತಂತ್ರಜ್ಞಾನವನ್ನು ಒದಗಿಸಲಾಗಿದೆ. ಈ ಫೋನನ್ನು ತ್ವರಿತವಾಗಿ ಚಾರ್ಜ್ ಮಾಡಬಹುದು.

ಇತರ ವೈಶಿಷ್ಟ್ಯಗಳು

ಹಾನರ್ 400 ಲೈಟ್ ಮೊಬೈಲ್ ಹಲವು ಎಐ (AI) ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮ್ಯಾಜಿಕ್ ಲಾಕ್ ಸ್ಕ್ರೀನ್, ಮ್ಯಾಜಿಕ್ ಕ್ಯಾಪ್ಸುಲ್, ಎಐ ಟ್ರಾನ್ಸ್‌ಲೇಟ್, ಹಾನರ್ ನೋಟ್ಸ್, ಹಾನರ್ RAM ಟರ್ಬೊ, ಎಐ ಕ್ಯಾಮೆರಾ ಬಟನ್, ಎಐ ಎರೇಸರ್ ಮತ್ತು ಎಐ ಔಟ್‌ಪೇಂಟಿಂಗ್‌ ಸೇರಿದಂತೆ ಹಲವು ವೈಶಿಷ್ಟ್ಯಗಳಿವೆ. ಇದು ಧೂಳು ಮತ್ತು ನೀರಿನ ವಿರುದ್ಧ ರಕ್ಞಣೆಗಾಗಿ IP65 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್ 5G, ಬ್ಲೂಟೂತ್ ಮತ್ತು ಎನ್‌ಎಫ್‌ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

ಹಾನರ್ 400 ಲೈಟ್ 5G ಬೆಲೆ

ಕಂಪನಿಯು ಹಾನರ್ 400 ಲೈಟ್‌ ಫೋನಿನ ಬೆಲೆ ಮತ್ತು ಲಭ್ಯತೆಯ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಘೋಷಿಸಿಲ್ಲ. ವರದಿಯ ಪ್ರಕಾರ, ಈ ಸ್ಮಾರ್ಟ್‌ಫೋನ್‌ 16GB RAM + 256GB ಸ್ಟೋರೇಜ್ ಹೊಂದಿದೆ. ಇದರ ಬೆಲೆ 27,675 ರೂ. ಆಗಿದೆ. ಹಾನರ್ 400 ಲೈಟ್ 5G ಫೋನಿನ ​​ಆರಂಭಿಕ ಬೆಲೆ 20,000 ರೂ.ನಿಂದ 22,000 ರೂ. ಇರಲಿದೆ. ಇದು ಮಾರ್ಸ್ ಗ್ರೀನ್, ವೆಲ್ವೆಟ್ ಬ್ಲ್ಯಾಕ್ ಮತ್ತು ವೆಲ್ವೆಟ್ ಗ್ರೇ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ವಿಶೇಷವೆಂದರೆ, ಹಾನರ್ ಕಂಪನಿಯು ಹಲವು ತಿಂಗಳುಗಳಿಂದ ಭಾರತದಲ್ಲಿ ತನ್ನ ಹೊಸ ಮೊಬೈಲ್ ಬಿಡುಗಡೆ ಮಾಡಿಲ್ಲ. ಕಂಪನಿಯು ಶೀಘ್ರದಲ್ಲೇ ಭಾರತದಲ್ಲಿ ಈ ಫೋನಿನ ಮಾರಾಟದ ಬಗ್ಗೆ ಮಾಹಿತಿ ಘೋಷಿಸಲಿದೆ.

Best Mobiles in India

English summary
Honor officially launched Honor 400 Lite smartphone in global market: check Price, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+