ಚೀನಾದಲ್ಲಿ ಹವಾ ಎಬ್ಬಿಸಿದ್ದ 'ಹಾನರ್​ ಪ್ಲೇ' ಮಾರಾಟ ಭಾರತದಲ್ಲಿ ಆರಂಭ!!

|

ಭಾರತೀಯ ಬಜೆಟ್ ಸ್ಮಾರ್ಟ್‌ಫೋನ್ ಪ್ರಿಯರ ನಾಡಿಮಿಡಿತವನ್ನು ಅರಿತಿರುವ ಚೀನಾದ ಪ್ರಖ್ಯಾತ ಮೊಬೈಲ್ ಸಂಸ್ಥೆ ಹುವಾವೇ ಭಾರತದ ಮೊಬೈಲ್ ಮಾರುಕಟ್ಟೆಗೆ ಮತ್ತೊಂದು ಅದ್ಬುತ ಸ್ಮಾರ್ಟ್‌ಫೋನ್ ಒಂದನ್ನು ಪರಿಚಯಿಸಿದೆ. ಚೀನಾದಲ್ಲಿ ಜೂನ್​ ತಿಂಗಳಿನಲ್ಲಿ ಬಿಡುಗಡೆಯಾಗಿ ಹವಾ ಎಬ್ಬಸಿದ್ದ 'ಹಾನರ್​ ಪ್ಲೇ' ಸ್ಮಾರ್ಟ್‌ಫೋನ್ ಇದೀಗ ಭಾರತದಲ್ಲಿ ಬಿಡುಗಡೆಯಾಗಿದೆ.

ಗೇಮಿಂಗ್ ಮತ್ತು ವಿಡಿಯೋ ವೀಕ್ಷಕ ಪ್ರಿಯರಿಗಾಗಿಯೇ ಹೇಳಿ ಮಾಡಿಸಿದಂತೆ ತಯಾರಾಗಿರುವ ಹಾನರ್​ ಪ್ಲೇ ಸ್ಮಾರ್ಟ್‌ಫೋನ್ ಮಾರಾಟ ಭಾರತದಲ್ಲಿ ಸೋಮವಾರ(ಆ.06)ದಿಂದಲೇ ಆರಂಭವಾಗಿದೆ. 4GB RAM ಮತ್ತು 6GB RAM ಹಾಗೂ 64 ಜಿಬಿ ಆಂತರಿಕ ಮೆಮೊರಿ ಹೊಂದಿರುವ ಎರಡು ಮಾದರಿಯಲ್ಲಿ ಸ್ಮಾರ್ಟ್‌ಫೋನ್ ಅನ್ನು ಅಮೆಜಾನ್​ನಲ್ಲಿ ಖರೀದಿಸಬಹುದಾಗಿದೆ.

ಚೀನಾದಲ್ಲಿ ಹವಾ ಎಬ್ಬಿಸಿದ್ದ 'ಹಾನರ್​ ಪ್ಲೇ' ಮಾರಾಟ ಭಾರತದಲ್ಲಿ ಆರಂಭ!!

4GB RAM ಮತ್ತು 64GB ಆಂತರಿಕ ಮೆಮೊರಿ ವೆರಿಯಂಟ್ ಸ್ಮಾರ್ಟ್‌ಫೋನ್ ಬೆಲೆ 19,999ರೂಪಾಯಿಗಳಾಗಿದ್ದರೆ, 6GB RAM ಮತ್ತು 64GB ಆಂತರಿಕ ಮೆಮೊರಿ ವೆರಿಯಂಟ್ ಸ್ಮಾರ್ಟ್‌ಫೋನ್ ಬೆಲೆ 23,999 ರೂಪಾಯಿಗಳಾಗಿವೆ. ಹಾಗಾದರೆ, ಇದೀಗ ಭಾರತಕ್ಕೆ ಕಾಲಿಟ್ಟಿರುವ ಹಾನರ್​ ಪ್ಲೇ ಫೋನಿನ ಫೀಚರ್ಸ್ ಮತ್ತು ವಿಶೇಷತೆಗಳನ್ನು ಮುಂದೆ ತಿಳಿಯಿರಿ.

ಸ್ಮಾರ್ಟ್‌ಫೋನ್ ವಿನ್ಯಾಸ ಮತ್ತು ಡಿಸ್‌ಪ್ಲೇ!

ಸ್ಮಾರ್ಟ್‌ಫೋನ್ ವಿನ್ಯಾಸ ಮತ್ತು ಡಿಸ್‌ಪ್ಲೇ!

ಮಧ್ಯಮ ಬೆಲೆಯಲ್ವ 'ಹಾನರ್​ ಪ್ಲೇ' ಸ್ಮಾರ್ಟ್‌ಫೋನ್ ವಿನ್ಯಾಸ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳನ್ನು ಸಹ ನಾಚಿಸುವಂತಿದೆ. 6.3-ಇಂಚಿನ ಫುಲ್-HD+ (1080x2340 ಪಿಕ್ಸಲ್ಸ್) ಜೊತೆಗೆ 85 ಶೇಕಡಾ NTSC colour gamut ಇರುವ ಡಿಸ್‌ಪ್ಲೇ ಅತ್ಯುತ್ತಮ ಅನುಭವವನ್ನು ನೀಡಲಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಹಾಗೂ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಈ ಫೋನ್ ಹೊಂದಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಅಕ್ಟಾ-ಕೋರ್-ಹುವಾಯಿ HiSilicon Kirin 970 ಸಾಕೆಟ್‌, Mali-G72 GPU ಜೊತೆಗೆ ಮತ್ತು NPU( ನ್ಯೂಟ್ರಲ್ ಪ್ರೊಸೆಸಿಂಗ್ ಯುನಿಟ್) ಬಿಲ್ಟ್ ಇನ್ ಆದ ಪ್ರೊಸೆಸರ್ ಶಕ್ತಿ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆಯ ಹೊಣೆ ಹೊತ್ತಿದೆ. ಇನ್ನು ಮೊದಲೇ ಹೇಳಿದಂತೆ 4ಜಿಬಿ ಮತ್ತು 6ಜಿಬಿಯ ಎರಡು ವೆರಿಯಂಟ್‌ಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಡ್ಯುಯಲ್ ರಿಯರ್ ಕ್ಯಾಮೆರಾ !

ಡ್ಯುಯಲ್ ರಿಯರ್ ಕ್ಯಾಮೆರಾ !

ಹಾನರ್​ ಪ್ಲೇ' ಡ್ಯುಯಲ್ ರಿಯರ್ ಕ್ಯಾಮೆರಾ ಡ್ಯುಯಲ್ ಕ್ಯಾಮರಾ ಸೆಟ್‌ಅಪ್ ಅನ್ನು ಹೊಂದಿದ್ದು, ಒಂದು 16 ಮೆಗಾಪಿಕ್ಸಲ್ ಪ್ರೈಮರಿ ಲೆನ್ಸ್ f/2.2 ದ್ಯುತಿರಂದ್ರ ಮತ್ತು PDAF ಆಗಿದ್ದರೆ, ಇನ್ನೊಂದು 2 ಮೆಗಾಪಿಕ್ಸಲ್ ಸೆಂಕೆಂಡರಿ ಲೆನ್ಸ್ ಜೊತೆಗೆ f/2.4 ದ್ಯುತಿರಂದ್ರವನ್ನು ಹೊಂದಿದೆ. ಮುಂಭಾಗದಲ್ಲಿ 16 ಮೆಗಾಪಿಕ್ಸಲ್ ನ ಕ್ಯಾಮರಾವು f/2.0 ದ್ಯುತಿರಂದ್ರವನ್ನು ಹೊಂದಿದೆ.

ಬ್ಯಾಟರಿ ಸಾಮರ್ಥ್ಯ?

ಬ್ಯಾಟರಿ ಸಾಮರ್ಥ್ಯ?

ಮುಖ ಗುರುತುವಿಸುವಿಕೆ, ಆಂಡ್ರಾಯ್ಡ್ ಓರಿಯೋದಂತಹ ಫೀಚರ್ಸ್ ಹೊಂದಿರುವ ಹಾನರ್​ ಪ್ಲೇ ಸ್ಮಾರ್ಟ್‌ಫೋನ್ 3750 mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಒಂದೇ ಚಾರ್ಜ್‌ನಲ್ಲಿ ಸಂಪೂರ್ಣ ಒಂದು ದಿನ ಅನಿಯಮಿತ ಬ್ಯಾಟರಿ ಬಳಕೆಯನ್ನು ಈ ಸ್ಮಾರ್ಟ್‌ಫೋನಿನಿಂದ ನಿರೀಕ್ಷೆ ಮಾಡಬಹುದಾಗಿದ್ದು, ಬ್ಯಾಟರಿ ಬಾಳಿಕೆ ಉತ್ತಮವಾಗಿದೆ ಎನ್ನಬಹುದು.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಎಸ್‌ಡಿ ಕಾರ್ಡ್ಮುಖಾಂತರ 256 ಜಿಬಿ ವರೆಗೂ ಹಿಗ್ಗಿಸಿಕೊಳ್ಳುವ ಅವಕಾಶವಿರುವ ಈ ಫೋನಿನಲ್ಲಿ ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ 4G VoLTE, ವೈ-ಫೈ 802.11ac, ಬ್ಲೂಟೂತ್ 4.2, ಜಿಪಿಎಸ್, ಮತ್ತು USB ಟೈಪ್-C ಯನ್ನು ಹೊಂದಿದೆ. ಸೆನ್ಸರ್ ಗಳಲ್ಲಿ ಎಕ್ಸೆಲೋಮೀಟರ್, ಏಂಬಿಯಂಟ್ ಲೈಟ್ ಸೆನ್ಸಾರ್, gyroscope ಮತ್ತು ಪ್ರಾಕ್ಸಿಮಿಟಿ ಸೆನ್ಸರ್ ಗಳನ್ನು ಒಳಗೊಂಡಿರುತ್ತದೆ.

Best Mobiles in India

English summary
Honor Play first impressions: This phone can provide capabilities of a good mid-range smartphone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X