6.3 ಇಂಚ್ ಡಿಸ್ ಪ್ಲೇಯ ಹಾನರ್ ಪ್ಲೇ ಮಾರ್ಕೆಟ್ ಗೆ ಕಾಲಿಟ್ಟಾಯ್ತು...ಇಲ್ಲಿದೆ ಫೀಚರ್ಸ್..!
ಹುವಾಯಿ ಕಂಪೆನಿಯ ಲೇಟೇಸ್ ಸ್ಮಾರ್ಟ್ ಫೋನ್ ಹಾನರ್ ಪ್ಲೇ ಬಿಡುಗಡೆಗೊಂಡಿದೆ. ಹೊಸ ಹ್ಯಾಂಡ್ ಸೆಟ್ ಚೀನಾದಲ್ಲಿ ಬಿಡುಗಡೆಗೊಂಡಿದ್ದು. ಇದರ ಪ್ರಮುಖ ವೈಶಿಷ್ಟ್ಯತೆಗಳೆಂದರೆ 6.3 ಇಂಚಿನ ಡಿಸ್ಪ್ಲೇ ಜೊತೆಗೆ 19.5:9 ಮತ್ತು ನೋಚ್ ಇದೆ. HiSilicon Kirin 970 ಸಾಕೆಟ್ ಇದ್ದು 6ಜಿಬಿ RAM ,GPU ಟರ್ಬೋ ಟೆಕ್ನಾಲಜಿ ಮತ್ತು ಇನ್ನು ಹಲವು ವಿಶೇಷತೆಗಳಿವೆ.
ಪ್ರಮುಖವಾಗಿ 4D ಗೇಮಿಂಗ್ ಅನುಭವನ್ನು ರಿಯಲ್ ಟೈಮ್ ನಲ್ಲಿ ಪಡೆಯಲು ಸಾಧ್ಯವಿದೆ. GPU ಟರ್ಬೋ ಟೆಕ್ ನಿಂದಾಗಿ ನೀವು ಗೇಮ್ ಆಡಲು ಆರಂಭವಾಗಿರುವುದನ್ನು ಗುರುತಿಸಿ ಫೋನಿನ ಫರ್ಫಾಮೆನ್ಸ್ ನ್ನು ಹೆಚ್ಚಿಸುತ್ತೆ. ಇದು EMUI 8.2 ಬೇಸ್ಡ್ ಆಂಡ್ರಾಯ್ಡ್ 8.1 ನಿಂದ ರನ್ ಆಗುತ್ತೆ.

ಹಾನರ್ ಪ್ಲೇ ದರ
ಹಾನರ್ ಪ್ಲೇ ಚೀನಾದಲ್ಲಿ CNY 1,999 ( ಅಂದಾಜು 21,000 ಬೆಲೆ)ಯನ್ನು 4ಜಿಬಿ RAM ನ ಮೊಬೈಲ್ ಗೆ ನಿಗದಿಪಡಿಸಲಾಗಿದೆ.ಇನ್ನು 6ಜಿಬಿ RAM ಮಾಡೆಲ್ ನ ಸ್ಮಾರ್ಟ್ ಫೋನ್ ನ ಬೆಲೆ CNY 2,399(ಅಂದಾಜು 25,100ರುಪಾಯಿ).ಹ್ಯಾಂಡ್ ಸೆಟ್ ಈಗಾಗಲೇ ಪ್ರೀ ಆರ್ಡರ್ ಮಾಡಲು ಲಭ್ಯವಿದ್ದು, ಚೀನಾದಲ್ಲಿ ಜೂನ್ 11 ರಿಂದ ಮಾರಾಟ ಆರಂಭಿಸಲಿದೆ., ಕಪ್ಪು, ನೀಲಿ, ಬೂದು ಬಣ್ಣಗಳ ವೇರಿಯಂಟ್ ನಲ್ಲಿ ನಿಮಗೆ ಆಯ್ಕೆಗಳಿದ್ದು,ನಿಮ್ಮಿಷ್ಟದ ಬಣ್ಣದ ಫೋನ್ ಖರೀದಿಸಬಹುದು.
ಹಾನರ್ ಪ್ಲೇ ವೈಶಿಷ್ಟ್ಯತೆಗಳು
ಎರಡು ನ್ಯಾನೋ ಸಿಮ್ ಕಾರ್ಡ್ ಗಳನ್ನು ಹಾನರ್ ಪ್ಲೇ ನಲ್ಲಿ ಬಳಸಬಹುದು. EMUI 8.2 ಬೇಸ್ ಆಗಿರುವ ಆಂಡ್ರಾಯ್ಡ್ 8.1 ರಿಂದ ಹಾನರ್ ಪ್ಲೇ ರನ್ ಆಗುತ್ತೆ. 6.3-ಇಂಚಿನ ಫುಲ್-HD+ (1080x2340 ಪಿಕ್ಸಲ್ಸ್) ಜೊತೆಗೆ 85 ಶೇಕಡಾ NTSC colour gamut ಇರಲಿದೆ.ಅಕ್ಟಾ-ಕೋರ್-ಹುವಾಯಿ HiSilicon Kirin 970 ಸಾಕೆಟ್ ನ Mali-G72 GPU ಜೊತೆಗೆ ಮತ್ತು NPU( ನ್ಯೂಟ್ರಲ್ ಪ್ರೊಸೆಸಿಂಗ್ ಯುನಿಟ್ ) ಬಿಲ್ಟ್ ಇನ್ ಆಗಿ ಇರಲಿದೆ. ಎರಡು ram ನ ವೇರಿಯಂಟ್ ನಲ್ಲಿ ಫೋನ್ ಲಭ್ಯವಾಗಲಿದ್ದು 4ಜಿಬಿ ಮತ್ತು 6 ಜಿಬಿ ಆಗಿರುತ್ತದೆ.

ಆಪ್ಟಿಕ್ಸ್ ಗಳ ವಿಚಾರಕ್ಕೆ ಬರುವುದಾದರೆ ಡುಯಲ್ ಕ್ಯಾಮರಾ ಸೆಟ್ ಅಪ್ ನ್ನು ಈ ಫೋನ್ ಹೊಂದಿರುತ್ತದೆ. ಒಂದು 16 ಮೆಗಾಪಿಕ್ಸಲ್ ಪ್ರೈಮರಿ ಲೆನ್ಸ್ f/2.2 ದ್ಯುತಿರಂದ್ರ ಮತ್ತು PDAF ಆಗಿದ್ದರೆ, ಇನ್ನೊಂದು 2 ಮೆಗಾಪಿಕ್ಸಲ್ ಸೆಂಕೆಂಡರಿ ಲೆನ್ಸ್ ಜೊತೆಗೆ f/2.4 ದ್ಯುತಿರಂದ್ರವನ್ನು ಹೊಂದಿದೆ. ಮುಂಭಾಗದಲ್ಲಿ 16 ಮೆಗಾಪಿಕ್ಸಲ್ ನ ಕ್ಯಾಮರಾವು f/2.0 ದ್ಯುತಿರಂದ್ರವನ್ನು ಹೊಂದಿದೆ.
64 ಜಿಬಿ ಬಿಲ್ಟ್ ಇನ್ ಸ್ಟೋರೇಜ್ ನ್ನು ಇದ ಹೊಂದಿದ್ದು, ಮೈಕ್ರೋ ಎಸ್ ಡಿ ಕಾರ್ಡ್ ಮುಖಾಂತರ 256 ಜಿಬಿ ವರೆಗೂ ಹಿಗ್ಗಿಸಿಕೊಳ್ಳುವ ಅವಕಾಶವಿರುತ್ತೆ. ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ 4G VoLTE, ವೈ-ಫೈ 802.11ac, ಬ್ಲೂಟೂತ್ 4.2, ಜಿಪಿಎಸ್, ಮತ್ತು USB ಟೈಪ್-C ಯನ್ನು ಹೊಂದಿದೆ. ಸೆನ್ಸರ್ ಗಳಲ್ಲಿ ಎಕ್ಸೆಲೋಮೀಟರ್, ಏಂಬಿಯಂಟ್ ಲೈಟ್ ಸೆನ್ಸಾರ್, gyroscope ಮತ್ತು ಪ್ರಾಕ್ಸಿಮಿಟಿ ಸೆನ್ಸರ್ ಗಳನ್ನು ಒಳಗೊಂಡಿರುತ್ತದೆ.
3750mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ಅವಕಾಶವೂ ಇದೆ. ಒಟ್ಟು ಫೋನಿನ ಅಳತೆ 157.91x74.27x7.48ಎಂಎಂ ಮತ್ತು ತೂಕ 176 ಗ್ರಾಂ ಆಗಿರುತ್ತದೆ.


Click it and Unblock the Notifications








