ಬಳಕೆದಾರರನ್ನು ಅರ್ಥೈಸಿಕೊಳ್ಳುವ "ಹಾನರ್ ವೀವ್ 10 ಎಐ" ಫೋನ್!!..ಖರೀದಿಸಲು ಬೆಸ್ಟ್ ಏಕೆ?

  ಪ್ರಸ್ತುತ ತಂತ್ರಜ್ಞಾನ ಪ್ರಪಂಚದಲ್ಲಿ ಕೃತಕ ಬುದ್ದಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಎಂಬ ಪದಕ್ಕೆ ಇನ್ನಿಲ್ಲದ ವಿಶೇಷ ಸ್ಥಾನಮಾನ ಸಿಕ್ಕಿದೆ. ಭವಿಷ್ಯದಲ್ಲಿ ಮಾನವನ ಜೀವನವನ್ನು ಸರಳೀಕರಿಸುವ ಕೃತಿಕ ಬುದ್ದಿಮತ್ತೆ ಈಗಾಗಲೇ ಎಲೆಕ್ಟ್ರಾನಿಕ್ ಪ್ರಪಂಚವನ್ನು ಆವರಿಸಿಕೊಂಳ್ಳುತ್ತಾ ನಮ್ಮೆಲ್ಲರ ಸಹಾಯಕನಾಗಿ ಬದಲಾಗಿದೆ.!!

  ಆದರೆ, ಈ ಕೃತಕ ಬುದ್ದಿಮತ್ತೆ ಎಂಬುದು ಕೇವಲ ರೋಬೋಟ್‌ಗಳಿಗೆ ಮಾತ್ರ ಸೀಮಿತವಾಗದೆ ಎಂದರೆ ಅದು ತಪ್ಪಾಗಬಹುದು.! ಏಕೆಂದರೆ ರೋಬೋಟ್‌ಗಳಿಗಿಂತಲೂ ಹೆಚ್ಚಾಗಿ ಸ್ಮಾರ್ಟ್‌ಫೋನ್ ಪ್ರಂಪಚದ ಮೇಲೆ ಪ್ರಭಾವ ಬೀರುತ್ತಿದೆ. ಕೃತಕ ಬುದ್ದಿಮತ್ತೆಯೇ ಭವಿಷ್ಯದ ಸ್ಮಾರ್ಟ್‌ಪೋನ್ ಜೀವಾಳವಾಗಿದೆ.!!

  ಬಳಕೆದಾರರನ್ನು ಅರ್ಥೈಸಿಕೊಳ್ಳುವ

  ಮೊಬೈಲ್‌ನ ಎಲ್ಲಾ ಕಾರ್ಯಗಳ ಮೇಲೆ ಕೃತಕ ಬುದ್ದಿಮತ್ತೆ ಪ್ರಭಾವ ಬೀರುತ್ತಿರುವುದರಿಂದ ಅದಕ್ಕೆ ಪೂರಕವಾದ ಸ್ಮಾರ್ಟ್‌ಫೋನ್ ಸಹ ಮುಖ್ಯವಾಗಿದೆ!! ಹಾಗಾದರೆ, ಅಂತಹ ಒಂದು ಸ್ಮಾರ್ಟ್‌ಫೋನ್ ಯಾವುದೆಂದು ಹುಡುಕಿದರೆ "ಹಾನರ್ ವೀವ್ 10 ಎಐ" ಸ್ಮಾರ್ಟ್‌ಫೋನ್ ನಮಗೆ ಕಾಣಿಸುತ್ತದೆ.!!

  ಹೌದು, ಇತ್ತೀಚಿಗೆ ಬಿಡುಗಡೆಯಾಗಿರುವ "ಹಾನರ್ ವೀವ್ 10 ಎಐ" ಸ್ಮಾರ್ಟ್‌ಫೋನ್ ಬುದ್ದಿಮತ್ತೆಗೆ ಪೂರಕವಾದ ಹಾರ್ಡ್‌ವೇರ್ ಮತ್ತು ಕಾರ್ಯಾಚರಣೆಯನ್ನು ಹೊಂದಿದೆ.!! ಹಾಗಾದರೆ, ಹಾನರ್ ವೀವ್ 10 ಎಐ ಸ್ಮಾರ್ಟ್‌ಫೋನ್ ಕೃತಕ ಬುದ್ದಿಮತ್ತೆಗೆ ಹೇಗೆ ಪೂರಕವಾಗಿದೆ? ಖರೀದಿಸಿದರೆ ಏನೆಲ್ಲಾ ಲಾಭ ಎಂದು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಕಿರಿನ್ 970 AI CPU ಕೋರ್!!

  ಕಿರಿನ್ 970 ಎಐ ಸಿಪಿಯು ಹಾನರ್ ವೀವ್ 10 ಸ್ಮಾರ್ಟ್ ವ್ಯವಸ್ಥೆಯನ್ನು ಮೀರಿಸುತ್ತದೆ. ಈ ಚಿಪ್‌ಸೆಟ್ ಕೇವಲ ಒಂದು ಸೆಂ.ಮೀ ವ್ಯಾಪ್ತಿಯಲ್ಲಿ 5.5 ಶತಕೋಟಿ ಟ್ರಾನ್ಸಿಸ್ಟರ್‌ಗಳನ್ನು ಸಂಯೋಜಿಸುವ ಸಾಮರ್ಥ್ಯ ಹೊಂದಿರುವುದರಿಂದ ಕಂಪ್ಯೂಟಿಂಗ್ ಕಾರ್ಯಕ್ಷಮತೆ ನೀಡಲಿದೆ. ಪ್ಲೇಬ್ಯಾಕ್, ಬ್ಯಾಟರಿ ಬಳಕೆ, ಗೇಮಿಂಗ್ ಎಲ್ಲದಕ್ಕೂ ಹೇಳಿ ಮಾಡಿಸಿದ ಚಿಪ್‌ಸೆಟ್ ಇದಾಗಿದೆ.!!

  Honor 9 Lite with four cameras (KANNADA)
  ಕ್ಯಾಮರಾ ಕಾರ್ಯಕ್ಷಮತೆ ಅದ್ಬುತವಾಗಿದೆ!!

  ಕ್ಯಾಮರಾ ಕಾರ್ಯಕ್ಷಮತೆ ಅದ್ಬುತವಾಗಿದೆ!!

  ಹಾನರ್ ವೀವ್ 10 ಸ್ಮಾರ್ಟ್‌ಫೋನ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಚಾಲಿತ ರಿಯಲ್-ಟೈಮ್ ದೃಶ್ಯ ಮತ್ತು ಆಬ್ಜೆಕ್ಟ್ ರೆಕಗ್ನಿಷನ್ ತಂತ್ರಜ್ಞಾನವನ್ನು ಹೊಂದಿದೆ, ಇದು ವಿವಿಧ ರೀತಿಯ ದೃಶ್ಯಗಳನ್ನು ಮತ್ತು ವಸ್ತುಗಳನ್ನು ಗುರುತಿಸಲು ನೆರವಾಗುತ್ತದೆ. ಇನ್ನು ಹಾಡ್ಯುಯಲ್-ಲೆನ್ಸ್ ಕ್ಯಾಮೆರಾ ಸೆಟಪ್ ಹೊಂದಿರುವ ವೀವ್ 10 ಸ್ವಯಂ ಮೋಡ್‌ನಲ್ಲಿ ಬಣ್ಣ, ಕಾಂಟ್ರಾಸ್ಟ್ ಎಲ್ಲವನ್ನು ಸ್ಪಷ್ಟವಾಗಿ ಗುರಿತಿಸುತ್ತದೆ.!!

  ಉತ್ತಮ ಗೇಮಿಂಗ್ ಅನುಭವ!!

  ಸ್ಮಾರ್ಟ್‌ಫೋನ್‌ನಲ್ಲಿ ಗೇಮ್ ಆಡುವಾಗ ಕಂಪ್ಯೂಟರ್‌ನಲ್ಲಿ ಗೇಮ್ ಆಡಿದ ಅನುಭವವನ್ನು ಹಾನರ್ ವೀವ್ 10 ಸ್ಮಾರ್ಟ್‌ಫೋನ್ ನೀಡಲಿದೆ. ಮಾಲಿ- G72 12-ಕೋರ್ ಜಿಪಿಯು ಹೊಂದಿರುವ ಈ ಫೋನ್ ಇತರೆ ಫೋನ್‌ಗಳಿಗಿಂತ 20% ಉತ್ತಮ ಗ್ರಾಫಿಕ್ ಸಂಸ್ಕರಣಾ ಕಾರ್ಯಕ್ಷಮತೆ ಹೊಂದಿದೆ. ಉತ್ತಮವಾದ ಕಾರ್ಯಕ್ಷಮತೆಯಲ್ಲಿ 3D ಆಟಗಳನ್ನು ಆಡುವ ಫೀಲ್ ಇತೆರೆ ಸ್ಮಾರ್ಟ್‌ಫೋನ್‌ಗಳಿಗಿಂದ ಹಲವು ಪಟ್ಟು ಉತ್ತಮವಾಗಿದೆ ಎನ್ನಬಹುದು.!!

  ಬ್ಯಾಟರಿ ಕಾರ್ಯಕ್ಷಮತೆ!!

  ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆಯಲ್ಲಿ ಕೃತಕ ಬುದ್ದಿಮತ್ತೆ ಹೇಗೆಲ್ಲಾ ಉಪಯೋಗವಾಗಲಿದೆ ಎನ್ನುವುದಕ್ಕೆ ಹಾನರ್ ವೀವ್ 10 ಸ್ಮಾರ್ಟ್‌ಫೋನ್ ಬ್ಯಾಟರಿ ಬಾಳಿಕೆ ಒಂದು ಉದಾಹರಣೆ ಎನ್ನಬಹುದು. ಕಿರಿನ್ 970 ಎಐ ಚಿಪ್‌ಸೆಟ್ ಕಂಪ್ಯೂಟಿಂಗ್ ಕಾರ್ಯಗಳನ್ನು ಹೆಚ್ಚು ವೇಗವಾಗಿ ನಿರ್ವಹಿಸಿದರೂ ಬ್ಯಾಟರಿ ಬಳಕೆಯನ್ನು ಕಡಿಮೆಗೊಳಿಸುವ ತಂತ್ರಜ್ಞಾನ ಹೊಂದಿದೆ. ಕೇವಲ 30 ನಿಮಿಷಗಳಲ್ಲಿ 50 ಪ್ರತಿಶತ ಚಾರ್ಜ್ ಆಗುವ ಸಾಮರ್ಥ್ಯ ಕೂಡ ಕೃತಕ ಬುದ್ದಿಮತ್ತೆಯ ಸಹಾಯದಿಂದಲೇ ಆಗಿದೆ.!!

  ಒಟ್ಟಾರೆ ಸ್ಮಾರ್ಟ್‌ಫೋನ್ ಅನುಭವ!!

  ಇತೆರೆ ಎಲ್ಲಾ ಪ್ರತಿಸ್ಪರ್ಧಿ ಸ್ಮಾರ್ಟ್‌ಫೋನ್‌ಗಳಿಗಿಂತ ಹಾನರ್ ವೀವ್ 10 ಅತ್ಯುತ್ತಮ ಸ್ಮಾರ್ಟ್‌ಫೋನ್ ಎನ್ನಬಹುದು.! 29,999 ರೂ. ಬೆಲೆ ಹೊಂದಿರುವ ಎಐ ಮ್ಯಾನೇಜ್ಮೆಂಟ್ ಟೆಕ್ನಾಲಜಿ ಹೊಂದಿರುವ ಈ ಫೋನ್ ಗರಿಷ್ಠ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳುವ ಮತ್ತು ಬಳಕೆದಾರರನ್ನು ಅರ್ಥಮಾಡಿಕೊಂಡು ಸೇವೆಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ.! ಗೇಮಿಂಗ್ ಅಥವಾ ಮಲ್ಟಿಟಾಸ್ಕಿಂಗ್ ಆಗಿರಲಿ ಪ್ರತಿ ಹಂತದಲ್ಲಿಯೂ ವೇಗವರ್ಧಿತ ಕಾರ್ಯಕ್ಷಮತೆಯನ್ನು ಈ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಒದಗಿಸಲಿದೆ.!!

  ಓದಿರಿ:ಗೂಗಲ್ ಆಂಡ್ರಾಯ್ಡ್ ‘ಗೊ' ಆವೃತ್ತಿಯ 2 ಸಾವಿರದ ಸ್ಮಾರ್ಟ್‌ಫೋನ್!..ಬೆಚ್ಚಿಬೀಳಲಿವೆ ಆಪಲ್, ಶಿಯೋಮಿ!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Honor View 10 is an AI-focused smartphone that is available for purchase at Rs. 29,999. You can get to know more about the capabilities of this smartphone from here. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more