ಕೇವಲ 14,190 ಸಾಕು! 108MP ಕ್ಯಾಮೆರಾ.. ಬಿಗ್ ಬ್ಯಾಟರಿ.. ಯಾವ ಫೋನ್?
ಹಾನರ್ (Honor) ಕಂಪನಿಯು ಸದ್ದಿಲ್ಲದೆ ಎರಡು ಹೊಸ ಮೊಬೈಲ್‌ಗಳನ್ನು ಬಿಡುಗಡೆ ಮಾಡಿದೆ. ಇವು, ಹಾನರ್ X60 5G (Honor X60 5G) ಮತ್ತು ಹಾನರ್ X60 ಪ್ರೊ 5G (Honor X60 Pro 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಮೂಲಕ ಕಂಪನಿಯು ಜಾಗತಿಕ ಮಾರುಕಟ್ಟೆಯಲ್ಲಿ Honor X60 ಸರಣಿಯನ್ನು ವಿಸ್ತರಿಸಿದೆ. ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗೂ ಪರಿಚಯಿಸಲಾಗುತ್ತದೆ. ನಾವು ಈ ಲೇಖನದಲ್ಲಿ ಹಾನರ್ X60 5G ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಕಂಪನಿಯು ಹಾನರ್ X60 5G ಅನ್ನು 15 ಸಾವಿರ ಒಳಗಿನ ಬಜೆಟ್‌ನಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಶನ್ 7025 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಇದರಲ್ಲಿ 6.8 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಫೋನಿನಲ್ಲಿ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಸೆಲ್ಫಿ ಶೂಟರ್ ಲಭ್ಯವಿದೆ. ಜೊತೆಗೆ, 12GB RAM ಮತ್ತು 512GB ಸ್ಟೋರೇಜ್, 5800mAh ಬ್ಯಾಟರಿ ಮತ್ತು 35W ವೇಗದ ಚಾರ್ಜಿಂಗ್ ಸೇರಿದಂತೆ ಮುಂತಾದ ವಿಶೇಷತೆಗಳನ್ನು ಒಳಗೊಂಡಿದೆ.

ಹಾನರ್ X60 5G ಫೋನಿನ ಬೆಲೆ
ಕಂಪನಿಯು ಹಾನರ್ X60 5G ಅನ್ನು ಚೀನಾದಲ್ಲಿ 4 ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟ ಮಾಡಲಿದೆ. ಫೋನಿನ 8GB RAM + 128GB ಸ್ಟೋರೇಜ್ ಬೆಲೆ 14,190 ರೂ. (1199 ಯುವಾನ್) ಇದೆ. 8GB RAM + 256GB ಸ್ಟೋರೇಜ್ ರೂಪಾಂತರವನ್ನು 16,490 ರೂ.ಗೆ (1399 ಯುವಾನ್) ಪರಿಚಯಿಸಲಾಗಿದೆ. 12GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ 18,890 ರೂ.ಗೆ (1599 ಯುವಾನ್) ಲಭ್ಯವಿದೆ.
ಹಾನರ್ X60 5G ಫೋನಿನ ಟಾಪ್ ರೂಪಾಂತರ 12GB RAM + 512GB ಸ್ಟೋರೇಜ್ ಅನ್ನು 21,290 ರೂ. (1799 ಯುವಾನ್) ಬೆಲೆಗೆ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಮೂನ್ ಶ್ಯಾಡೋ ವೈಟ್, ಸೀ ಲೇಕ್ ಬ್ಲೂ ಮತ್ತು ಲಲಿತ ಕಪ್ಪು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.
ಹಾನರ್ X60 5G ಫೋನಿನ ಫೀಚರ್ಸ್
ಡಿಸ್ಪ್ಲೇ ವಿವರ
ಹಾನರ್ X60 5G ಮೊಬೈಲ್ 6.8 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 850 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲಿಸುವ ಎಲ್‌ಸಿಡಿ ಡಿಸ್ಪ್ಲೇ ಆಗಿದೆ.
ಪ್ರೊಸೆಸರ್ ಸಾಮರ್ಥ್ಯ
ಹಾನರ್ X60 5G ಫೋನ್ ಮೀಡಿಯಾ ಟೆಕ್ ಡೈಮೆನ್ಶನ್ 7025 ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಇದನ್ನು 6 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಈ ಫೋನನ್ನು ಆಂಡ್ರಾಯ್ಡ್ 14 ನಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಮ್ಯಾಜಿಕ್ ಓಎಸ್ 8 (MagicOS 8) ನೊಂದಿಗೆ ಕೆಲಸ ನಿರ್ವಹಿಸುತ್ತದೆ.
ಸ್ಟೋರೇಜ್ ಆಯ್ಕೆ
ಹಾನರ್ X60 5G ಅನ್ನು 8GB RAM ಮತ್ತು 12GB RAM ಬೆಂಬಲಿಸುವ ಎರಡು RAM ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ. ಇದು 128GB, 256GB ಮತ್ತು 512GB ಸ್ಟೋರೇಜ್ ಹೊಂದಿದೆ.

ಕ್ಯಾಮೆರಾ ಸೆಟಪ್
ಹಾನರ್ X60 5G ಫೋನ್ 108 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ HM6 ಮುಖ್ಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್‌ನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.
ಬ್ಯಾಟರಿ ಬ್ಯಾಕಪ್
ಕಂಪನಿಯು ಹಾನರ್ X60 5G ಅನ್ನು 5,800mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಈ ದೊಡ್ಡ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, ಇದು 35W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.


Click it and Unblock the Notifications








