Honor ಕಮ್ಬ್ಯಾಕ್.. ಸೈಲೆಂಟ್ ಆಗಿಯೇ ಹೊಸ ಫೋನ್ ಲಾಂಚ್: ಡಿಸೈನ್‌ಗೆ ಫಿದಾ ಆಗ್ತೀರಾ
ವಿಶ್ವದ ದೈತ್ಯ ಟೆಕ್ ಕಂಪನಿಗಳಲ್ಲಿ ಒಂದಾಗಿರುವ ಹಾನರ್ ಕಂಪನಿ, ಮತ್ತೊಮ್ಮೆ ತನ್ನ ಹೊಚ್ಚ ಹೊಸ ಫೋನ್‌ನಿಂದ ಸುದ್ದಿ ಮಾಡುತ್ತಿದೆ. ಹಾನರ್ ಮೊಬೈಲ್‌ಗಳು ಮಾರುಕಟ್ಟೆಯಲ್ಲಿ ಮ್ಯಾಜಿಕ್ ಮಾಡುವುದು ಹೊಸತೇನಲ್ಲ. ವಿಭಿನ್ನ ಪ್ರೊಸೆಸರ್ ಹಾಗೂ ಕಾರ್ಯಕ್ಷತೆಯ ಕಾರಣಕ್ಕೆ ಹಾನರ್ ಕಂಪನಿ ಸೈ ಎನಿಸಿಕೊಂಡಿದೆ. ಇದೀಗ, ಸೈಲೆಂಟ್ ಆಗಿಯೇ ಹಾನರ್ ಕಂಪನಿ ಹೊಸದಾಗಿ Honor X60 Plus ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಇದು 50MP ಸೆನ್ಸಾರ್‌ನ ಮುಖ್ಯ ಕ್ಯಾಮೆರಾ, 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದೆ. ಈ ಸ್ಮಾರ್ಟ್‌ಫೋನ್ ಎಂಟ್ರಿಯಲ್ಲಿಯೇ ಅಬ್ಬರದ ಸೌಂಡ್ ಮಾಡುತ್ತಿದೆ. ಈ ನೂತನ ಫೋನ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಹಾನರ್ X60 ಪ್ಲಸ್ ಮೊಬೈಲ್ ಅಬ್ಬರಕ್ಕೆ ಟೆಕ್ ವಲಯ ಕಂಗಾಲಾಗುವ ಮುನ್ಸೂಚನೆ ದೊರೆತಿದೆ. ಸದ್ದಿಲ್ಲದೇ ಎಂಟ್ರಿ ನೀಡಿದ್ದರೂ ತನ್ನ ಕ್ಯಾಮೆರಾ ರಚನೆಯ ಮೂಲಕವೇ ಸಖತ್ ಸೌಂಡ್ ಮಾಡುತ್ತಿದೆ. ಪ್ರಸ್ತುತ ಚೀನಾ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ಈ ಫೋನ್ ಇನ್ನೇನು ಕೆಲವೇ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಹಾಗಾದ್ರೆ, ಹಾನರ್ X60 ಪ್ಲಸ್ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ? ಬೆಲೆ ಎಷ್ಟು? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Honor X60 Plus ಫೋನ್‌ನ ವಿಶೇಷತೆಗಳು
ಹಾನರ್‌ನ ಹೊಸ ಬಜೆಟ್ ಸ್ಮಾರ್ಟ್‌ಫೋನ್, ಹಾನರ್ X60 ಪ್ಲಸ್ (ಇದನ್ನು ಪ್ಲೇ 60 ಪ್ಲಸ್ ಎಂದೂ ಕರೆಯಲಾಗುತ್ತದೆ) ಚೀನಾದಲ್ಲಿ ಬಿಡುಗಡೆಯಾಗಿದೆ. ಈ ಮೊಬೈಲ್ 12GB RAM, 512GB ಸ್ಟೋರೇಜ್, 35W ವೇಗದ ಚಾರ್ಜಿಂಗ್, 6000mAh ಸಾಮರ್ಥ್ಯದ ಬ್ಯಾಟರಿ ಮತ್ತು 50MP ಮುಖ್ಯ ಕ್ಯಾಮೆರಾದಂತಹ ವಿಶೇಷತೆಗಳನ್ನು ಹೊಂದಿದೆ. ಇದು ಪ್ರೀಮಿಯಂ ವಿನ್ಯಾಸ ಮತ್ತು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP64 ರೇಟಿಂಗ್ ಅನ್ನು ಸಹ ಪಡೆದಿದೆ.
ಬಜೆಟ್ ವೇರಿಯಂಟ್‌ಗಳಲ್ಲೇ ಈ ಫೋನ್ ಬೆಸ್ಟ್
ಹಾನರ್ X60 ಪ್ಲಸ್ ಫೋನ್ 6.77-ಇಂಚಿನ LCD ಡಿಸ್ಪ್ಲೇ ಜೊತೆಗೆ 720 x 1610 ಪಿಕ್ಸೆಲ್‌ಗಳ HD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿದೆ. ಡಿಸ್ಲ್ಪೇಯು LCD ಆಗಿದೆ, ಇದು ಬಜೆಟ್ ವೇರಿಯಂಟ್‌ಗಳಲ್ಲಿ ವಿಶಿಷ್ಟವಾಗಿದೆ. ಆದರೆ, ಹೆಚ್ಚಿನ ರಿಫ್ರೆಶ್ ದರವು ವಿಶೇಷ ಸೇರ್ಪಡೆಯಾಗಿದೆ. ಈ ಮೊಬೈಲ್ ಆಂಡ್ರಾಯ್ಡ್ 14 ಆಧಾರಿತ ಮ್ಯಾಜಿಕ್ ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಈ ಫೋನ್‌ನ ಪ್ರೊಸೆಸರ್ ಏನು?
ಹುಡ್ ಅಡಿಯಲ್ಲಿ, ಈ ಫೋನ್ Qualcomm Snapdragon 4 Gen 2 SoC ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಬಜೆಟ್ ಸ್ನೇಹಿ ಬೆಲೆಯಲ್ಲಿ ಮಧ್ಯಮ ಶ್ರೇಣಿಯ ಕಾರ್ಯಕ್ಷಮತೆಯನ್ನು ಖಚಿತಪಡೆಸುತ್ತದೆ. ಇದು ವರ್ಚುವಲ್ 8GB RAM ಬೆಂಬಲವನ್ನು ಸಹ ಒಳಗೊಂಡಿದೆ. ಮೆಮೊರಿ ರೂಪಾಂತರಗಳು ಎರಡು ಆಯ್ಕೆಗಳಲ್ಲಿ ಲಭ್ಯವಿದೆ. 12GB RAM + 256GB ಸ್ಟೋರೇಜ್ ಮತ್ತು 12GB RAM + 512GB ಸ್ಟೋರೇಜ್ ಹೊಂದಿದೆ.
ಈ ಫೋನ್‌ನ ಬ್ಯಾಟರಿಗೆ ಸಾಟಿಯೇ ಇಲ್ಲ!
ಈ ಫೋನ್ 35W ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಬ್ಯಾಟರಿ ಬ್ಯಾಕಪ್ ಹೊಂದಿದೆ. ಇದಲ್ಲದೆ, ಈ ಮೊಬೈಲ್ 8.24mm ದಪ್ಪದಲ್ಲಿ ಸ್ಲಿಮ್ ಪ್ರೊಫೈಲ್ ಅನ್ನು ನಿರ್ವಹಿಸುತ್ತದೆ ಮತ್ತು ಕೇವಲ 198 ಗ್ರಾಂ ತೂಕವಿದೆ. ಡ್ಯುಯಲ್ ನ್ಯಾನೊ ಸಿಮ್ ಸ್ಲಾಟ್‌ಗಳನ್ನು ಪಡೆದಿದೆ. 3.5mm ಹೆಡ್‌ಫೋನ್ ಜ್ಯಾಕ್ ಹೊಂದಿದೆ ಮತ್ತು ಕೆಳಭಾಗದಲ್ಲಿ ಪೋರ್ಟ್ ಮಾಡಲಾದ ಸ್ಪೀಕರ್ ಅನ್ನು ಹೊಂದಿದೆ. USB ಟೈಪ್-C ಪೋರ್ಟ್ ಅನ್ನು ಪಡೆದಿದೆ.
ಈ ಫೋನ್ ಬೆಲೆ ಎಷ್ಟು?
ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಈ ಫೋನ್‌ನ ಬೆಲೆ ಎಷ್ಟು? ಭಾರತದಲ್ಲಿ ಯಾವಾಗ ಲಾಂಚ್ ಆಗುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಹಾನರ್ X60 ಪ್ಲಸ್‌ನ 12GB RAM + 256GB ಸ್ಟೋರೇಜ್ ಹೊಂದಿರುವ ಮಾದರಿಯ ಬೆಲೆ ಸುಮಾರು 17,205 ರೂ.ನಿಂದ (CNY 1,299) ಪ್ರಾರಂಭವಾಗುತ್ತದೆ. 12GB RAM + 512GB ಸ್ಟೋರೇಜ್ ವೇರಿಯಂಟ್‌ನ ಬೆಲೆ ಸುಮಾರು 19,543 ರೂ. (CNY 1,499) ಇದೆ.

ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯ
ಹಾನರ್ X60 ಪ್ಲಸ್ ಮೊಬೈಲ್ ಮೂರು ಬಣ್ಣಗಳ ಆಯ್ಕೆಗಳನ್ನು ಪಡೆದಿದೆ. ಫ್ಯಾಂಟಮ್ ನೈಟ್ ಬ್ಲಾಕ್, ಮೂನ್ ಶ್ಯಾಡೋ ವೈಟ್ ಮತ್ತು ವಂಡರ್ಲ್ಯಾಂಡ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ. ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ ಆಗಿದ್ದರೂ ಈ ಆಯ್ಕೆಗಳು ಅದರ ಪ್ರೀಮಿಯಂ ನೋಟವನ್ನು ಸೇರಿಸುತ್ತವೆ. ಈ ಫೋನ್ ಪ್ರಸ್ತುತ ಚೈನಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ ಮತ್ತು ಶೀಘ್ರದಲ್ಲೇ ಭಾರತ ಮತ್ತು ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಆಗಮಿಸುವ ನಿರೀಕ್ಷೆಯಿದೆ.
ಈ ಫೋನ್‌ನ ಡಿಸೈನ್‌ಗೆ ಗ್ರಾಹಕರು ಫಿದಾ!
ಹಾನರ್ (Honor) ಈ ಹಿಂದೆ ಭಾರತದಲ್ಲಿ Honor 90 ಮತ್ತು Honor X9b ಫೊನ್‌ಗಳನ್ನು ಬಿಡುಗಡೆ ಮಾಡಿದೆ. ಮೊಬೈಲ್ ಪ್ರಿಯರಿಂದ ಉತ್ತಮವಾದ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಬಜೆಟ್ ಕೇಂದ್ರಿತ Honor X60 Plus ಅದರ ಸ್ಪರ್ಧಾತ್ಮಕ ಬೆಲೆ 20,000 ರೂ. ಇರುವ ಕಾರಣ ಭಾರತೀಯ ಗ್ರಾಹಕರ ಗಮನವನ್ನು ಸೆಳೆಯುವ ನಿರೀಕ್ಷೆಯಿದೆ. ಈ ಹೊಸ ಫೋನ್ ಶೀಘ್ರದಲ್ಲೇ ದೇಶದಲ್ಲಿ ಪ್ರಾರಂಭವಾಗಲಿದ್ದು, ಗ್ರಾಹಕರು ಈ ಫೋನ್‌ಗಾಗಿ ಕಾಯುವಂತೆ ಮಾಡಿದೆ.
ಹಾನರ್ X60 ಪ್ಲಸ್ 5G ಸಂಪೂರ್ಣ ಫೀಚರ್ಸ್
- ಅಳತೆ: 166.9 x 76.8 x 8.24 mm
- ತೂಕ: 198 ಗ್ರಾಂ
- ಬಣ್ಣಗಳು: ಫ್ಯಾಂಟಮ್ ನೈಟ್ ಬ್ಲ್ಯಾಕ್, ಮೂನ್ ಶ್ಯಾಡೋ ವೈಟ್, ವಂಡರ್ಲ್ಯಾಂಡ್ ಗ್ರೀನ್
- ಡಿಸ್ಲ್ಪೇ: 6.77 ಇಂಚಿನ HD+ LCD
- ರಿಫ್ರೆಶ್ ದರ: 1610 x 720 ಪಿಕ್ಸೆಲ್‌ಗಳು, 120Hz ರಿಫ್ರೆಶ್ ದರ
- ಪ್ರೊಸೆಸರ್: ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4 Gen 2 ಮತ್ತು 4nm, ಆಕ್ಟಾ ಕೋರ್, 2.2GHz ವರೆಗೆ
- ಸ್ಟೋರೇಜ್: 2GB RAM ವರೆಗೆ (+8GB ವಿಸ್ತೃತ ಮೆಮೊರಿ), 512GB ವರೆಗಿನ ಸ್ಟೋರೇಜ್
- ಕ್ಯಾಮೆರಾ: ಡ್ಯುಯಲ್ ಹಿಂಬದಿಯ ಕ್ಯಾಮೆರಾ, 50MP ಮುಖ್ಯ ಕ್ಯಾಮೆರಾ, 2MP ಆಕ್ಸಿಲರಿ ಲೆನ್ಸ್, 5MP ಸೆಲ್ಫಿ ಶೂಟರ್
- ಸಿಮ್: ಡುಯೆಲ್ (ಎರಡು) ಸಿಮ್
- ಕನೆಕ್ಟಿವಿಟಿ ಆಯ್ಕೆಗಳು: 5G, 4G LTE, Wi-Fi, ಬ್ಲೂಟೂತ್, ಜಿಪಿಎಸ್, USB ಟೈಪ್-C, 3.5mm ಆಡಿಯೋ ಜಾಕ್
- ಪ್ರೊಟೆಕ್ಷನ್: IP64 ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧ
- OS: MagicOS (Android 14)
- ಬ್ಯಾಟರಿ: 6000mAh ಬ್ಯಾಟರಿ, 35W ವೇಗದ ಚಾರ್ಜಿಂಗ್


Click it and Unblock the Notifications








