Home
ಮೊಬೈಲ್

ಬಿಡುಗಡೆಗೂ ಮೊದಲೇ.. Honor X60i ಫೋನಿನ ಬೆಲೆ ಸೋರಿಕೆ! ಎಷ್ಟಿರಲಿದೆ ನೀವೆ ನೋಡಿ

ಮೊಬೈಲ್‌ ಪ್ರಿಯರಿಗೆ ಎರಡು ಸಿಹಿ ಸುದ್ದಿ ಇದೆ. ಮೊದಲನೆಯದು, ಹಾನರ್ ಕಂಪನಿಯ Honor 200 ಮತ್ತು Honor 200 Pro ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಜುಲೈ 18 ರಂದು ಬಿಡುಗಡೆಯಾಗಲಿವೆ. ಮತ್ತೊಂದು, ಈ ಎರಡು ಮೊಬೈಲ್‌ಗಳು ಭಾರತೀಯ ಮಾರುಕಟ್ಟೆಗೆ ಬರುವ ಮುನ್ನವೇ, ಇದೇ ಬ್ರ್ಯಾಂಡ್‌ನ 'X' ಸರಣಿಯ ಹೊಸ ಸ್ಮಾರ್ಟ್‌ಫೋನ್ ಲಾಂಚ್ ಆಗಲಿದೆ. ಈ ಮೊಬೈಲ್ Honor X60i ಆಗಿರಲಿದೆ. ಇದನ್ನು ಚೀನಾದ ಪ್ರಮಾಣೀಕರಣ ಸೈಟ್ TENAAನಲ್ಲಿ ಪಟ್ಟಿಮಾಡಲಾಗಿದೆ. ಈ ವೆಬ್‌ಸೈಟ್‌ನಲ್ಲಿ ಇದರ ಫೀಚರ್ಸ್‌ಗಳು ಮತ್ತು ಬೆಲೆಯೊಂದಿಗೆ ಸ್ಮಾರ್ಟ್‌ಫೋನ್‌ನ ಫೋಟೋ ಕೂಡ ಸೋರಿಕೆಯಾಗಿದೆ. ಈ ಕುರಿತ ಸಂಪೂರ್ಣ ವಿವರಗಳನ್ನು ತಿಳಿಯೋಣ ಬನ್ನಿ.

ಸೋರಿಕೆಯಾಗಿರುವ Honor X60i ಸ್ಮಾರ್ಟ್‌ಫೋನ್‌ನ ಹಲವು ವಿಶೇಷತೆಗಳು ಸ್ಮಾರ್ಟ್‌ಫೋನ್‌ ಪ್ರಿಯರನ್ನು ಆಕರ್ಷಿಸುತ್ತಿದೆ. ವರದಿಯ ಪ್ರಕಾರ, ಈ ಫೋನ್‌ 6.7-ಇಂಚಿನ FullHD+ LCD ಡಿಸ್ಲ್ಪೇಯನ್ನು ಹೊಂದಿರಲಿದೆ. 12GB RAM + 512GB ಸ್ಟೋರೇಜ್‌ ಒಳಗೊಂಡಿರಲಿದೆ. ಇದು ಮೀಡಿಯಾ ಟೆಕ್ ಡೈಮೆನ್ಶನ್ 6080 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಫ್ರಂಟ್‌ ಕ್ಯಾಮೆರಾ ಹೊಂದಿದೆ. ಇನ್ನೂ, 5,000mAh ಬ್ಯಾಟರಿಯನ್ನು ಈ ಫೋನ್ ಹೊಂದಿರುತ್ತದೆ.

ಬಿಡುಗಡೆಗೂ ಮೊದಲೇ.. Honor X60i ಫೋನಿನ ಬೆಲೆ ಲೀಕ್! ಎಷ್ಟಿರಲಿದೆ ನೀವೆ ನೋಡಿ

Honor X60i ಫೋನಿನ ಬೆಲೆ ಲೀಕ್: ಎಷ್ಟಿರಲಿದೆ?

TENAA ಪ್ರಕಾರ, Honor X60i ಎರಡು RAM ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. ಈ ಫೋನ್‌ 8GB RAM ಜೊತೆಗೆ 256GB ಸ್ಟೋರೇಜ್‌ ಆಯ್ಕೆಯನ್ನು ಹೊಂದಿರಲಿದೆ. ಇದರ ಬೆಲೆ ಸುಮಾರು 19,500 ರೂ. (1699 ಯುವಾನ್) ಇರಲಿದೆ. ಈ ಮೊಬೈಲ್‌ನ 12GB RAM ಮಾದರಿಯನ್ನು 256GB ಮತ್ತು 512GB ಸ್ಟೋರೇಜ್‌ನೊಂದಿಗೆ ಪ್ರಾರಂಭಿಸುವ ಸಾಧ್ಯತೆಯಿದೆ.

ಇದರ ಬೆಲೆ 1,899 ಯುವಾನ್ ಮತ್ತು 2,099 ಯುವಾನ್ ಆಗಿರುತ್ತದೆ. ಭಾರತೀಯ ಕರೆನ್ಸಿ ಪ್ರಕಾರ, ಈ ಬೆಲೆ ಕ್ರಮವಾಗಿ 21,900 ರೂ. ಮತ್ತು 24,000 ರೂ. ಆಗಿದೆ. ಈ ಮೊಬೈಲ್ ಜುಲೈ 26 ರಂದು ಚೀನಾದಲ್ಲಿ ಫ್ಯಾಂಟಮ್ ನೈಟ್ ಬ್ಲ್ಯಾಕ್, ಕ್ಲೌಡ್ ವಾಟರ್ ಬ್ಲೂ, ಮೂನ್ ಶ್ಯಾಡೋ ವೈಟ್ ಮತ್ತು ಕೋರಲ್ ಪರ್ಪಲ್ ಬಣ್ಣಗಳಲ್ಲಿ ಲಭ್ಯವಿರುತ್ತದೆ.

ಹಾನರ್ X60i ಏನೆಲ್ಲಾ ಫೀಚರ್ಸ್‌ ಹೊಂದಿದೆ?

ಡಿಸ್‌ಪ್ಲೇ: ಹಾನರ್ X60i ಸ್ಮಾರ್ಟ್‌ಫೋನ್‌ನಲ್ಲಿ 1080 x 2412 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 6.7-ಇಂಚಿನ FullHD+ ಡಿಸ್‌ಪ್ಲೇಯನ್ನು ಕಾಣಬಹುದು. ಈ ಡಿಸ್ಲ್ಪೇಯನ್ನು IPS LCD ಪ್ಯಾನೆಲ್‌ನಲ್ಲಿ ಮಾಡಲಾಗುವುದು. ಇದರಲ್ಲಿ ಮಾತ್ರೆ ಆಕಾರದ ನಾಚ್ ನೀಡಬಹುದು.

ಪ್ರೊಸೆಸರ್: Tena ಪ್ರಕಾರ, ಈ ಹಾನರ್ ಮೊಬೈಲ್ Android 14 ನಲ್ಲಿ ಬಿಡುಗಡೆಯಾಗುತ್ತದೆ. ಮತ್ತು MagicOS 8.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಮೀಡಿಯಾ ಟೆಕ್ ಡೈಮೆನ್ಶನ್ 6080 ಆಕ್ಟಾಕೋರ್ ಪ್ರೊಸೆಸರ್ ಅನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ನೋಡಬಹುದಾಗಿದೆ. ಇದು 2.4 GHz ಗಡಿಯಾರದ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ ಸೆಟಪ್: ಹಾನರ್ X60i ಸ್ಮಾರ್ಟ್‌ಫೋನ್‌ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿರುವ ನಿರೀಕ್ಷೆಯಿದೆ. 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ ಅನ್ನು ಅದರ ಹಿಂಭಾಗದಲ್ಲಿ ಕಾಣಬಹುದು. ಮತ್ತು ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಈ ಫೊನ್‌ ಹೊಂದಿರುತ್ತದೆ.

ಬ್ಯಾಟರಿ ಬ್ಯಾಕಪ್: Tena ಪ್ರಕಾರ, ಈ ಸ್ಮಾರ್ಟ್‌ಫೋನ್ ಪವರ್ ಬ್ಯಾಕಪ್‌ಗಾಗಿ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಈ ದೊಡ್ಡ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 35W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಮೊಬೈಲ್‌ನಲ್ಲಿ ಪಡೆಯಬಹುದು.

ಇತರೆ ಫೀಚರ್ಸ್‌: ಹಾನರ್ X60i ಅನ್ನು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕದೊಂದಿಗೆ ಒದಗಿಸಲಾಗುವುದು ಎಂದು ತಿಳಿದುಬಂದಿದೆ. ವರದಿಯ ಪ್ರಕಾರ, ಈ ಮೊಬೈಲ್‌ನ ತೂಕ 172 ಗ್ರಾಂ ಇರುತ್ತದೆ. ಮತ್ತು ಈ ಫೋನ್‌ 161.05 x 74.55 x 7.18 ಮಿಮೀ ಅಳತೆ ಹೊಂದಿರಲಿದೆ.

ಕಳೆದ ವರ್ಷ ಜುಲೈನಲ್ಲಿ ಬಿಡುಗಡೆಯಾದ Honor X50iನ ಉತ್ತರಾಧಿಕಾರಿಯಾಗಿ Honor X60i ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲಾಗುವುದು. ಮುಂಬರುವ ದಿನಗಳಲ್ಲಿ ಈ ನೂತನ ಫೋನಿನ ಕೆಲವು ವಿವರಗಳನ್ನು ಕಂಪನಿಯು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಯಿದೆ.

Best Mobiles in India

English summary
Honor X60i launching in China on July 26: Honor X60i price, variants and specifications leak ahead of launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+