Home
ಮೊಬೈಲ್

ನಾಳೆ ಅಬ್ಬರಿಸಲು ಬರುತ್ತಿದೆ Honor X60i ಫೋನ್: 512GB ಸ್ಟೋರೇಜ್‌, 35W ಚಾರ್ಜಿಂಗ್.. ಬೆಲೆ ಎಷ್ಟು?

ಜಾಗತಿಕ ಮೊಬೈಲ್‌ ಮಾರುಕಟ್ಟೆಯಲ್ಲಿ ಹಾನರ್ ಸ್ಮಾರ್ಟ್‌ಫೋನ್‌ಗಳಿಗೆ ಭಾರೀ ಬೇಡಿಕೆ ಇದೆ. ಕಂಪನಿಯು ನೂತನ ಮಾಡೆಲ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದೀಗ ತನ್ನ ಸ್ಮಾರ್ಟ್‌ಫೋನ್‌ಗಳ ಪಟ್ಟಿಗೆ ಹೊಸ ಸೇರ್ಪಡೆ ಮಾಡಲು ಸಿದ್ಧತೆ ನಡೆಸಿದೆ. ಇದುವೇ ಹಾನರ್ ಎಕ್ಸ್‌60i (Honor X60i) ಮೊಬೈಲ್. ಇನ್ನು ಈ ಬಹುನಿರೀಕ್ಷಿತ ಹೊಸ ಫೋನ್‌ ಐಫೋನ್ ರೀತಿಯ ವಿನ್ಯಾಸದೊಂದಿಗೆ ನಾಳೆ (ಜುಲೈ 26) ಚೀನಾದ ಮಾರುಕಟ್ಟೆಗೆ ಗ್ರ್ಯಾಂಡ್‌ ಎಂಟ್ರಿ ಕೊಡಲಿದೆ. ಶೀಘ್ರದಲ್ಲೇ ಭಾರತದಲ್ಲೂ ಬಿಡುಗಡೆಯಾಲಿದೆ. ಈ ಹೊಸ ಫೋನಿನ ಬೆಲೆ ಎಷ್ಟು? ಯಾವೆಲ್ಲಾ ಫೀಚರ್ಸ್ ಹೊಂದಿರಲಿದೆ? ಈ ಬಗ್ಗೆ ತಿಳಿಯೋಣ ಬನ್ನಿ.

ಹಾನರ್ ಕಂಪನಿಯ 'X' ಸರಣಿಯ ಹೊಸ Honor X60i ಸ್ಮಾರ್ಟ್‌ಫೋನ್ ನಾಳೆ ಬಿಡುಗಡೆಯಾಗಲಿದೆ. ಈಗಾಗಲೇ ಸೋರಿಕೆಯಾಗಿರುವ ಹಲವು ಫೀಚರ್‌ಗಳು ಮೊಬೈಲ್ ಪ್ರಿಯರನ್ನು ಆಕರ್ಷಿಸಿದೆ. ಇದು 6.7-ಇಂಚಿನ FullHD+ LCD ಡಿಸ್ಲ್ಪೇಯನ್ನು ಹೊಂದಿರಲಿದೆ. 12GB RAM + 512GB ಸ್ಟೋರೇಜ್‌, ಮೀಡಿಯಾ ಟೆಕ್ ಡೈಮೆನ್ಶನ್ 6080 ಆಕ್ಟಾಕೋರ್ ಪ್ರೊಸೆಸರ್‌ ಒಳಗೊಂಡಿರಲಿದೆ. 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಫ್ರಂಟ್‌ ಕ್ಯಾಮೆರಾ ಹೊಂದಿದೆ. ಈ ಫೋನ್ 5,000mAh ಬ್ಯಾಟರಿ ಬ್ಯಾಕಪ್ ಹೊಂದಿರುತ್ತದೆ.

Honor: ನಾಳೆ ಬರುತ್ತೆ ಹೊಸ ಹಾನರ್ ಫೋನ್! ಬೆಲೆ ಎಷ್ಟು, ವಿಶೇಷತೆಗಳೇನು?

Honor X60i ಫೋನಿನ ಬೆಲೆ ಎಷ್ಟು?

8GB RAM + 256GB ಬೆಲೆ : ರೂ. 19,500
12GB RAM + 256GB ಬೆಲೆ : ರೂ. 21,900
12GB RAM + 512GB ಬೆಲೆ : ರೂ. 24,000

Honor X60i ಫೋನ್ ಎರಡು RAM ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. 8GB RAM + 256GB ಸ್ಟೋರೇಜ್‌ ಬೆಲೆ ಸುಮಾರು 19,500 ರೂ. (1699 ಯುವಾನ್) ಆಗಿರಲಿದೆ. 12GB RAM ಮಾದರಿಯನ್ನು 256GB ಮತ್ತು 512GB ಸ್ಟೋರೇಜ್‌ನೊಂದಿಗೆ ಪ್ರಾರಂಭಿಸುವ ಸಾಧ್ಯತೆಯಿದೆ. ಇದರ ಬೆಲೆ ಕ್ರಮವಾಗಿ 21,900 ರೂ. (1,899 ಯುವಾನ್) ಮತ್ತು 24,000 ರೂ. (2,099 ಯುವಾನ್) ಆಗಿದೆ.

ಹಾನರ್ X60i ನಿರೀಕ್ಷಿತ ಫೀಚರ್ಸ್‌ಗಳೇನು?

ಡಿಸ್‌ಪ್ಲೇ: ಈ ಫೋನ್ 6.7-ಇಂಚಿನ FullHD+ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್ಲ್ಪೇಯನ್ನು IPS LCD ಪ್ಯಾನೆಲ್‌ನಲ್ಲಿ ಮಾಡಲಾಗುವುದು. ಇದು 1080 x 2412 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ.

ಪ್ರೊಸೆಸರ್: ಹಾನರ್ X60i ಫೋನ್ ಮೀಡಿಯಾ ಟೆಕ್ ಡೈಮೆನ್ಶನ್ 6080 ಆಕ್ಟಾಕೋರ್ ಪ್ರೊಸೆಸರ್ ಹೊಂದಿರಲಿದೆ. ಇದು Android 14 ಜೊತೆಗೆ MagicOS 8.0 ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 2.4 GHz ಗಡಿಯಾರದ ವೇಗದಲ್ಲಿ ರನ್ ಆಗಲಿದೆ.

Honor: ನಾಳೆ ಬರುತ್ತೆ ಹೊಸ ಹಾನರ್ ಫೋನ್! ಬೆಲೆ ಎಷ್ಟು, ವಿಶೇಷತೆಗಳೇನು?

ಕ್ಯಾಮೆರಾ: ಹೊಸ ಹಾನರ್ ಸ್ಮಾರ್ಟ್‌ಫೋನ್‌ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಹೊಂದಿರುವ ನಿರೀಕ್ಷೆಯಿದೆ. 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ ಕಾಣಬಹುದು. ಮತ್ತು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಈ ಫೊನ್‌ ಹೊಂದಿರುತ್ತದೆ.

ಬ್ಯಾಟರಿ: ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು 35W ವೇಗದ ಚಾರ್ಜಿಂಗ್ ಸಪೋರ್ಟ್‌ನೊಂದಿಗೆ ಬರಲಿದೆ.

ಇತರ ಫೀಚರ್ಸ್‌: ವರದಿಯ ಪ್ರಕಾರ, ಈ ಮೊಬೈಲ್‌ನ ತೂಕ 172 ಗ್ರಾಂ ಇರುತ್ತದೆ. ಈ ಫೋನ್‌ 161.05 x 74.55 x 7.18 ಮಿಮೀ ಅಳತೆ ಹೊಂದಿರಲಿದೆ. ಹಾನರ್ X60i ಫೋನನ್ನು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕದೊಂದಿಗೆ ಪರಿಚಯಿಸಲಾಗುವುದು.

ಬಣ್ಣಗಳು: ಈ ಮೊಬೈಲ್ ನಾಳೆ (ಜುಲೈ 26) ಚೀನಾದಲ್ಲಿ ಫ್ಯಾಂಟಮ್ ನೈಟ್ ಬ್ಲ್ಯಾಕ್, ಕ್ಲೌಡ್ ವಾಟರ್ ಬ್ಲೂ, ಮೂನ್ ಶ್ಯಾಡೋ ವೈಟ್ ಮತ್ತು ಕೋರಲ್ ಪರ್ಪಲ್ ಬಣ್ಣಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

Best Mobiles in India

English summary
Honor X60i launching in China on July 26: Honor X60i price, variants and specifications leak ahead of launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+