Home
ಮೊಬೈಲ್

Honor: ಬಂತು ಹೊಸ ಫೋನ್; 108MP ಕ್ಯಾಮೆರಾ.. 6000mAh ಬ್ಯಾಟರಿ.. ಕಡಿಮೆ ಬೆಲೆ!

ಹಾನರ್‌ (Honor) ಸಂಸ್ಥೆಯ ಹೊಸ ಮೊಬೈಲ್ ಸದ್ದಿಲ್ಲದೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಅದುವೇ, ಹಾನರ್ X7c (Honor X7c) ಸ್ಮಾರ್ಟ್‌ಫೋನ್. ಕೆಲವು ದಿನಗಳ ಹಿಂದೆ ಈ ಫೋನಿನ ಬಗ್ಗೆ ಮಾಹಿತಿ ಸೋರಿಕೆಯಾಗಿತ್ತು. ಕಂಪನಿಯು, ಇದೀಗ ಹಾನರ್ X7c ಮೊಬೈಲ್ ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದನ್ನು 20,000 ರೂ. ಒಳಗಿನ ಬಜೆಟ್‌ನಲ್ಲಿ ಪರಿಚಯಿಸಲಾಗಿದೆ. ಬನ್ನಿ, ಈ ಹೊಸ ಫೋನಿನ ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಕಂಪನಿಯು ಹಾನರ್ X7c ಅನ್ನು ಎರಡು ಸ್ಟೋರೇಜ್‌ ಆಯ್ಕೆ ಮತ್ತು ಮೂರು ಬಣ್ಣಗಳಲ್ಲಿ ಪರಿಚಯಿಸಿದೆ. ಈ ಫೋನ್ 6.77 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿದೆ. ಇದರಲ್ಲಿ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ, ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್‌, 8GB RAM, 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಮತ್ತು 35W ವೇಗದ ಚಾರ್ಜಿಂಗ್ ಬೆಂಬಲ ಸೇರಿದಂತೆ ಮುಂತಾದ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಮುಂಬರುವ ದಿನಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ.

Honor: ಬಂತು ಹೊಸ ಫೋನ್; 108MP ಕ್ಯಾಮೆರಾ.. 6000mAh ಬ್ಯಾಟರಿ.. ಬೆಲೆ ಇಷ್ಟೆನಾ?

ಹಾನರ್ X7c ಫೋನಿನ ವಿನ್ಯಾಸ

ಹಾನರ್ X7c 4G ಮೊಬೈಲ್ ಮೂರು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ನೀವು ಫಾರೆಸ್ಟ್ ಗ್ರೀನ್, ಮಿಡ್‌ನೈಟ್ ಬ್ಲಾಕ್, ಮೂನ್‌ಲೈಟ್ ವೈಟ್ ಬಣ್ಣದಲ್ಲಿ ಖರೀದಿಸಬಹುದು. ಈ ಫೋನ್ ಫ್ಲಾಟ್ ಅಂಚುಗಳನ್ನು ಮತ್ತು ಹಿಂಭಾಗದಲ್ಲಿ ಚದರ ಕ್ಯಾಮೆರಾ ಮಾಡ್ಯೂಲ್ ಹೊಂದಿದೆ. ಮುಂಭಾಗದಲ್ಲಿ ಪಂಚ್ ಹೋಲ್ ಡಿಸ್ಪ್ಲೇ ಇದೆ. ಹಿಂದಿನ ಪ್ಯಾನೆಲ್‌ನಲ್ಲಿ ಹಾನರ್ ಬ್ರ್ಯಾಂಡಿಂಗ್ ಸಹ ಕಾಣಬಹುದು. ಬಲಭಾಗದಲ್ಲಿ ಪವರ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಇದು ಬಜೆಟ್ ಶ್ರೇಣಿಯಲ್ಲಿ ಉತ್ತಮವಾಗಿ ಸ್ಮಾರ್ಟ್‌ಫೋನ್‌ ಆಗಿದೆ.

ಹಾನರ್ X7c ಫೋನಿನ ಬೆಲೆ ಎಷ್ಟು?

ಕಂಪನಿಯು ಹಾನರ್ X7c 4G ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಮಾರಾಟ ಮಾಡಲಿದೆ. ಫೋನಿನ 6GB RAM + 128GB ಸ್ಟೋರೇಜ್‌ ರೂಪಾಂತರದ ಬೆಲೆ ಸುಮಾರು 17,000 ರೂ. (AZN 360) ಆಗಿದೆ. 8GB RAM + 256GB ಸ್ಟೋರೇಜ್‌ ವೇರಿಯಂಟ್ ಬೆಲೆ ಸುಮಾರು 20,000 ರೂ. (AZN 410) ಇದೆ.

ಹಾನರ್ X7c 4G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಹಾನರ್ X7c 4G ಮೊಬೈಲ್ 6.77 ಇಂಚಿನ ಎಚ್‌ಡಿ ಪ್ಲಸ್ TFT ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು 1610 x 720 ಪಿಕ್ಸೆಲ್ ರೆಸಲ್ಯೂಶನ್, 850 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಮತ್ತು 120Hz ರಿಫ್ರೆಶ್ ದರದ ಬೆಂಬಲ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಈ ಹಾನರ್ ಫೋನ್ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್‌ ಅನ್ನು ಹೊಂದಿದೆ. 8GB ವರೆಗೆ RAM ಮತ್ತು 256GB ವರೆಗಿನ ಆಂತರಿಕ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಈ ಫೋನ್ ಮ್ಯಾಜಿಕ್ಓಎಸ್ 8.0 ಜೊತೆಗೆ ಆಂಡ್ರಾಯ್ಡ್ 14 ಅನ್ನು ರನ್ ಮಾಡುತ್ತದೆ.

ಕ್ಯಾಮೆರಾ ಸೆಟಪ್

ಹಾನರ್ X7c 4G ಮೊಬೈಲ್ 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ. ಜೊತೆಗೆ, 2 ಮೆಗಾಪಿಕ್ಸೆಲ್ ಸೆಕೆಂಡರಿ ಸಂವೇದ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ಹಾನರ್ X7c 4G ಸ್ಮಾರ್ಟ್‌ಫೋನ್‌ ಅನ್ನು 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಇದು 35W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.

ಇತರೆ ವೈಶಿಷ್ಟ್ಯಗಳು

ನೂತನ ಹಾನರ್ ಮೊಬೈಲ್ 166.9 x 76.8 x 8.1 ಮಿಮೀ ಅಳತೆ ಮತ್ತು 196 ಗ್ರಾಂ ತೂಕ ಹೊಂದಿದೆ. ಇದು ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP64 ರೇಟಿಂಗ್ ಪಡೆದಿದೆ.

Best Mobiles in India

English summary
Honor X7c 4G smartphone with 108MP Camera Launched globally: price, specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+