Home
ಮೊಬೈಲ್

ಭಾರತದಲ್ಲಿ ಕಡಿಮೆ ಬೆಲೆಯ Honor X7c 5G ಫೋನ್ ಬಿಡುಗಡೆ: ಇಂದಿನಿಂದಲೇ ಸೇಲ್!

ಚೀನಾ ಮೂಲದ ಜನಪ್ರಿಯ ಮೊಬೈಲ್ ಹಾನರ್ ತನ್ನ ಇತ್ತೀಚಿನ ಸ್ಮಾರ್ಟ್‌ಫೋನ್ 'ಹಾನರ್ X7c 5G' ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ಮೂಲಕ ತನ್ನ X-ಸರಣಿಯ ಶ್ರೇಣಿಯನ್ನು ವಿಸ್ತರಿಸಿದೆ. ಈ ಹೊಸ ಸಾಧನವು ಮಧ್ಯಮ-ಶ್ರೇಣಿಯ ಮಾರುಕಟ್ಟೆಯಲ್ಲಿ ಗಣನೀಯ ಪ್ರವೇಶವನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಉತ್ತಮ ವೈಶಿಷ್ಟ್ಯಗಳು ಮತ್ತು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಹಾಗೂ ಈ ಫೋನಿನ ಸೇಲ್ ಇಂದಿನಿಂದಲೇ ಆರಂಭವಾಗುತ್ತಿದೆ. ಇದರ ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಾನರ್ X7c 5G: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಹಾನರ್ X7c 5G ಪೋನ್ ಕೇವಲ ಒಂದು ಮಾದರಿಯಲ್ಲಿ ಪರಿಚಯಗೊಂಡಿದೆ. 8GB RAM ಮತ್ತು 256GB ಆಂತರಿಕ ಸಂಗ್ರಹಣೆಯನ್ನು ಹೊಂದಿರುವ ಈ ಪೋ್ ಮಾದರಿಯ ಬೆಲೆ ₹14,999. ಸ್ಮಾರ್ಟ್‌ಫೋನ್ ಎರಡು ಆಕರ್ಷಕ ಬಣ್ಣಗಳಾದ ಫಾರೆಸ್ಟ್ ಗ್ರೀನ್ ಮತ್ತು ಮೂನ್‌ಲೈಟ್ ವೈಟ್‌ನಲ್ಲಿ ಲಭ್ಯವಿದೆ. ಈ ಫೋನ್ ಅಮೆಜಾನ್ ಇಂಡಿಯಾ ಮೂಲಕ ಖರೀದಿಗೆ ಸಿಗುತ್ತದೆ ಮತ್ತು ಇಂದಿನಿಂದ (ಆಗಸ್ಟ್ 20) ರಿಂದ ಇದರ ಮೊದಲ ಮಾರಾಟ ಆರಂಭವಾಗಲಿದೆ. ಈ ಬೆಲೆಗೆ, ಮತ್ತು ಫೀಚರ್ಸ್‌ಗಳಿಂದಾಗಿ ಈ ಫೋನ್ ಬಳಕೆದಾರರಿಗೆ ಉತ್ತಮ ಮೌಲ್ಯವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಹಾನರ್ X7c 5G: ಪ್ರಮುಖ ವೈಶಿಷ್ಟ್ಯಗಳು
ಹೊಸ ಹಾನರ್ X7c 5G ಫೋನ್ 6.8-ಇಂಚಿನ ಪೂರ್ಣ HD+ ಡಿಸ್‌ಪ್ಲೇಯನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್ ಮತ್ತು 850 ನಿಟ್ಸ್ ಗರಿಷ್ಠ ಹೊಳಪನ್ನು ನೀಡುತ್ತದೆ. ಇದು ಸ್ಪಷ್ಟ ಮತ್ತು ಸುಗಮ ವೀಕ್ಷಣೆಯ ಅನುಭವವನ್ನು ಒದಗಿಸುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ.

ಕಾರ್ಯಕ್ಷಮತೆಗಾಗಿ, ಈ ಸಾಧನವು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4 Gen 2 ಪ್ರೊಸೆಸರ್‌ನಿಂದ ಶಕ್ತಿಯನ್ನು ಪಡೆಯುತ್ತದೆ. ಇದರೊಂದಿಗೆ, 8GB LPDDR4x RAM ಮತ್ತು 256GB UFS 3.1 ಸಂಗ್ರಹಣೆ ಇದೆ.

ಸಾಫ್‌ವೇರ್ ವಿಭಾಗದಲ್ಲಿ, ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ಇತ್ತೀಚಿನ ಮ್ಯಾಜಿಕ್‌ಓಎಸ್ 8.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಸಂಪರ್ಕ ಆಯ್ಕೆಗಳಲ್ಲಿ 5G, Wi-Fi 5, ಬ್ಲೂಟೂತ್ 5.0, GPS, 3.5mm ಆಡಿಯೊ ಜ್ಯಾಕ್ ಮತ್ತು USB-C ಪೋರ್ಟ್ ಇವೆ.

ಭಾರತದಲ್ಲಿ ಕಡಿಮೆ ಬೆಲೆಯ Honor X7c 5G ಫೋನ್ ಬಿಡುಗಡೆ: ಇಂದಿನಿಂದಲೇ ಸೇಲ್!

ಕ್ಯಾಮೆರಾ ವಿಭಾಗದಲ್ಲಿ, ಈ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ f/1.8 ಅಪರ್ಚರ್ ಇರುವ 50MP ಮುಖ್ಯ ಕ್ಯಾಮೆರಾ ಮತ್ತು 2MP ಡೆಪ್ತ್ ಸೆನ್ಸರ್ ಇದೆಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಮುಂಭಾಗದಲ್ಲಿ 5MP ಕ್ಯಾಮೆರಾ ಇದೆ.

ಬ್ಯಾಟರಿ ವಿಭಾಗದಲ್ಲಿ, ಈ ಫೋನ್ 5200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ ಮತ್ತು 35W ವೇಗದ ವೈರ್ಡ್ ಚಾರ್ಜಿಂಗ್‌ಗೆ ಬೆಂಬಲಿಸುತ್ತದೆ. ಸುರಕ್ಷತೆಗಾಗಿ, ಈ ಫೋನ್ ಬದಿಯಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ.

ಇನ್ನುಳಿದಂತೆ, ಈ ಫೋನ್ IP64 ರೇಟಿಂಗ್‌ನೊಂದಿಗೆ ಧೂಳು ಮತ್ತು ನೀರಿನಿಂದ ರಕ್ಷಿಸಲ್ಪಟ್ಟಿದೆ. ಹೆಚ್ಚುವರಿಯಾಗಿ, ಇದು ಸ್ಟೀರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಈ ಫೋನಿನ ಒಟ್ಟಾರೆ ತೂಕ 193 ಗ್ರಾಂ ಇದ್ದು, ಸುಲಭವಾಗಿ ಹಿಡಿದುಕೊಳ್ಳಲು ಅನುಕೂಲಕರವಾಗಿದೆ.

ಈ ಮೇಲಿನ ವೈಶಿಷ್ಟ್ಯಗಳು, ಅದರ ಬೆಲೆಯೊಂದಿಗೆ ಸೇರಿ, ಹಾನರ್ X7c 5G ಫೋನ್ ಭಾರತೀಯ ಗ್ರಾಹಕರಿಗೆ ಒಂದು ಆಕರ್ಷಕ ಆಯ್ಕೆಯನ್ನಾಗಿ ಮಾಡಿದೆ ಎನ್ನಬಹುದು. ಈ ಹೊಸ ಫೋನ್ ಕುರಿತು ನಿಮ್ಮ ಅನಿಸಿಕೆ ಏನು?,ಈ ಬೆಲೆಗೆ ಉತ್ತಮ ಫೀಚರ್ಸ್ ಹೊಂದಿದೆಯಾ ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Honor has launched the X7c 5G in India, powered by the Qualcomm Snapdragon 4 Gen 2 processor. The smartphone is now available for purchase starting today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+