ಸದ್ದಿಲ್ಲದೆ Honor X9c Smart 5G ಲಾಂಚ್; 108MP ಕ್ಯಾಮೆರಾ.. 5800mAh ಬ್ಯಾಟರಿ.. ಬೆಲೆ ಎಷ್ಟು?
ಹಾನರ್ ಸದ್ದಿಲ್ಲದೆ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಇದು ಹಾನರ್ X9c ಸ್ಮಾರ್ಟ್ 5G (Honor X9c Smart 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೌದು, ಕಂಪನಿಯು ಕಳೆದ ತಿಂಗಳು ಹಾನರ್ X9c ಮೊಬೈಲ್ ಅನ್ನು ಬಿಡುಗಡೆ ಮಾಡಿತ್ತು. ಇದು 6600mAh ಬ್ಯಾಟರಿಯೊಂದಿಗೆ ಬಂದಿತ್ತು. ಇದೀಗ, ಈ ಸರಣಿಯ ಹಾನರ್ X9c ಸ್ಮಾರ್ಟ್ 5G ಫೋನನ್ನು ಅನಾವರಣಗೊಳಿಸಿದೆ. ಬನ್ನಿ, ಹೊಸ ಮೊಬೈಲ್‌ನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಹಾನರ್ X9c ಸ್ಮಾರ್ಟ್ 5G ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಕಂಪನಿಯು ಶೀಘ್ರದಲ್ಲೇ ಇದನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಫೋನ್ 108 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7025 ಅಲ್ಟ್ರಾ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಫೋನಿನಲ್ಲಿ 8GB RAM ಮತ್ತು 256GB ಸ್ಟೋರೇಜ್ ಲಭ್ಯವಿದೆ. ಜೊತೆಗೆ 6.8 ಇಂಚಿನ ಡಿಸ್ಪ್ಲೇ, 5800mAh ಬ್ಯಾಟರಿ ಮತ್ತು 35W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹಾನರ್ X9c ಸ್ಮಾರ್ಟ್ 5G ಬೆಲೆ
ನೂತನ ಹಾನರ್ X9c ಸ್ಮಾರ್ಟ್ 5G ಫೋನ್ 8GB RAM ಮತ್ತು 256GB ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಮೂನ್‌ಲೈಟ್ ವೈಟ್ ಮತ್ತು ಓಷನ್ ಸಯಾನ್ ಬಣ್ಣಗಳಲ್ಲಿ ಮಾರಾಟವಾಗಲಿದೆ. ಪ್ರಸ್ತುತ, ಕಂಪನಿಯು ಈ ಫೋನಿನ ಬೆಲೆಯನ್ನು ಬಹಿರಂಗಪಡಿಸಿಲ್ಲ. ಮುಂಬರುವ ದಿನಗಳಲ್ಲಿ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾಹಿತಿ ನೀಡಲಿದೆ.
ಹಾನರ್ X9c ಸ್ಮಾರ್ಟ್ 5G ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಹಾನರ್ X9c ಸ್ಮಾರ್ಟ್ 5G ಮೊಬೈಲ್ 6.8 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು 2412 x 1080 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 850 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಹಾನರ್ X9c ಫೋನನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 7025 ಅಲ್ಟ್ರಾ ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಧಾರಿತ ಮ್ಯಾಜಿಕ್ ಓಎಸ್ 8.0 ನಲ್ಲಿ ಕೆಲಸ ನಿರ್ವಹಿಸುತ್ತದೆ.
ಸ್ಟೋರೇಜ್ ಆಯ್ಕೆ
ನೂತನ ಹಾನರ್ X9c ಸ್ಮಾರ್ಟ್ 5G ಮೊಬೈಲ್ ಮಲೇಷ್ಯಾ ಮಾರುಕಟ್ಟೆಯಲ್ಲಿ 8GB RAM ನೊಂದಿಗೆ ಬಿಡುಗಡೆಯಾಗಿದೆ. ಈ ಫೋನ್ 8GB ಟರ್ಬೊ RAM ಸಹ ಹೊಂದಿದೆ. ನೀವು, ಭೌತಿಕ RAMಗೆ 8GB ವರ್ಚುವಲ್ RAM ಸೇರಿಸುವ ಮೂಲಕ 16GB ಬಳಸಬಹುದು. ಇದು 256GB ಆಂತರಿಕ ಸ್ಟೋರೇಜ್ ಆಯ್ಕೆ ಹೊಂದಿದೆ.

ಕ್ಯಾಮೆರಾ ಸೆಟಪ್
ಹಾನರ್ X9c ಸ್ಮಾರ್ಟ್ 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ, 5 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜರ್
ಹಾನರ್ X9c ಸ್ಮಾರ್ಟ್ 5G ಸ್ಮಾರ್ಟ್‌ಫೋನ್ 5800mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 35W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ಈ ಹಾನರ್ X9c ಸ್ಮಾರ್ಟ್ 5G ಮೊಬೈಲ್ ಮ್ಯಾಜಿಕ್ ಪೋರ್ಟಲ್, ಎಐ (AI) ಎರೇಸರ್ ಮತ್ತು ಮ್ಯಾಜಿಕ್ ಕ್ಯಾಪ್ಸುಲ್ ವೈಶಿಷ್ಟ್ಯಗಳನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ ಬ್ಲೂಟೂತ್ 5.3, 5GHz ವೈ-ಫೈ, ಎನ್‌ಎಫ್‌ಸಿ (NFC) ಮತ್ತು OTG ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








