Subscribe to Gizbot

ಮುಂದೆ ಬಿಡುಗಡೆಯಾಗಲಿರುವ ಸ್ಮಾರ್ಟ್‌ಫೋನ್‌ ಟ್ಯಾಬ್ಲೆಟ್‌ಗಳು

Posted By:

ಗೂಗಲ್‌ ಕಿಟ್‌ಕ್ಯಾಟ್‌ ಓಎಸ್‌ ಬಿಡುಗಡೆ ಮಾಡಿದ ಬಳಿಕ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ತಯಾರಿಸುವ ಕಂಪೆನಿಗಳು ಹೊಸ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಮುಂದಾಗುತ್ತಿದ್ದಾರೆ. ಮುಂದಿನ ಕೆಲವು ತಿಂಗಳಿನಲ್ಲಿ ಹೊಸ ಓಎಸ್‌ ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಲಿದೆ. ಈ ಮಧ್ಯೆ ಮೈಕ್ರೋಸಾಫ್ಟ್‌ ಸಹ ತನ್ನ ವಿಂಡೋಸ್‌ ಫೋನ್‌ 8 ಸಾಫ್ಟ್‌ವೇರ್‌ನ್ನು ಆಪ್‌ಡೇಟ್‌ ಮಾಡಿದ್ದು ನೋಕಿಯಾ ಸ್ಮಾರ್ಟ್‌ಫೋನ್‌ನ್ನು ಹೊಸ ಓಎಸ್‌ನಲ್ಲಿ ಬಿಡುಗಡೆ ಮಾಡಲಿದೆ.

ಹೀಗಾಗಿ ಇಲ್ಲಿ ಮುಂದೆ ನೋಕಿಯಾ,ಸ್ಯಾಮ್‌ಸಂಗ್‌,ಸೋನಿ,ಗೂಗಲ್‌,ಮೋಟರೋಲಾ ಕಂಪೆನಿಗಳು ಬಿಡುಗಡೆ ಮಾಡಲಿರುವ ಹೊಸ ಸ್ಮಾರ್ಟ್‌ಫೋನ್‌/ಟ್ಯಾಬ್ಲೆಟ್‌ಗಳ ವಿವರವಿದೆ. ಈ ಗ್ಯಾಜೆಟ್‌ಗಳ ವಿಶೇಷತೆ ಬಗ್ಗೆ ಕಂಪೆನಿಗಳು ಹೇಳದಿದ್ದರೂ ವಿಶೇಷತೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದೆ.

ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸೋನಿ ಎಕ್ಸ್‌ಪೀರಿಯಾ ಝಡ್‌ಐಎಸ್‌(Sony Xperia Z1S)

ಮುಂದೆ ಬಿಡುಗಡೆಯಾಗಲಿರುವ ಗ್ಯಾಜೆಟ್‌ಗಳು


20.7 ಎಂಪಿ ಕ್ಯಾಮೆರಾ,4.3 ಇಂಚಿನ ಸ್ಕ್ರೀನ್‌ ,ಆಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌, 2,300mAh ಬ್ಯಾಟರಿಯನ್ನು ಇ ಸ್ಮಾರ್ಟ್‌ಫೋನ್‌ ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ.

ಅಷ್ಟೇ ಅಲ್ಲದೇ 16GB ಆಂತರಿಕ ಮಮೊರಿ,2GB ರ್‍ಯಾಮ್‌ ವಿಶೇಷತೆಯೊಂದಿಗೆ ಈ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

 ನೋಕಿಯಾ ಗೋಲ್ಡ್‌ಫಿಂಗರ್‌ ಮತ್ತು ಮನಿಪೆನ್ನಿ:

ಮುಂದೆ ಬಿಡುಗಡೆಯಾಗಲಿರುವ ಗ್ಯಾಜೆಟ್‌ಗಳು


ನೋಕಿಯಾ ಗೋಲ್ಡ್‌ಫಿಂಗರ್‌ ಮತ್ತು ಮನಿಪೆನ್ನಿ ಎರಡು ಸ್ಮಾರ್ಟ್‌ಫೋನ್‌ ವಿಂಡೋಸ್‌ ಫೋನ್‌ 8.1 ಓಎಸ್‌ನಲ್ಲಿ ಬಿಡುಗಡೆಯಾಗಲಿದ್ದು 3 ಡಿ ಟಚ್‌ ಟೆಕ್ನಾಲಜಿ ಒಳಗೊಂಡಿರುತ್ತದೆ. 2014ರಲ್ಲಿ ನಡೆಯುವ ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ನಲ್ಲಿ ಸ್ಮಾರ್ಟ್‌ಫೋನ್‌ ನ್ನು ನೋಕಿಯಾ ಬಿಡುಗಡೆ ಮಾಡುವ ಸಾಧ್ಯತೆಯಿದೆ.

 ಸ್ಯಾಮ್‌ಸಂಗ್‌ ಎಸ್‌ಎಂ- ಪಿ905:

ಮುಂದೆ ಬಿಡುಗಡೆಯಾಗಲಿರುವ ಗ್ಯಾಜೆಟ್‌ಗಳು

ಸ್ಯಾಮ್‌ಸಂಗ್‌ 12 ಇಂಚಿನ ಸ್ಕ್ರೀನಿನ ಟ್ಯಾಬ್ಲೆಟ್‌ ತಯಾರಿಸಲು ಮುಂದಾಗಿದೆ.ಎಸ್‌ಎಂ- ಪಿ905 ಹೆಸರಿನ ಟ್ಯಾಬ್ಲೆಟ್‌ನ್ನು ತಯಾರಿಸುತ್ತಿದ್ದು ಆರಂಭದಲ್ಲಿ ಗೂಗಲ್‌ ಜತೆ ಸೇರಿ ನಿರ್ಮಾಣವಾಗಲಿದೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಈಗ ಸ್ಯಾಮ್‌ಸಂಗ್‌ ಒಂದೇ ಈ ಟ್ಯಾಬ್ಲೆಟ್‌ ತಯಾರಿಸುತ್ತಿದೆ. 2.26GHz ಪ್ರೊಸೆಸರ್‌,3GB ರ್‍ಯಾಮ್‌,8 ಎಂಪಿ ಕ್ಯಾಮೆರಾ ವಿಶೇಷತೆಯೊಂದಿಗೆ ಟ್ಯಾಬ್ಲೆಟ್‌ ಬಿಡುಗಡೆಯಾಗಲಿದೆ.

 ನೋಕಿಯಾ ಲೂಮಿಯಾ 525

ಮುಂದೆ ಬಿಡುಗಡೆಯಾಗಲಿರುವ ಗ್ಯಾಜೆಟ್‌ಗಳು

ನೋಕಿಯಾ ಲೂಮಿಯಾ ಸರಣಿಯಲ್ಲಿ ಅತಿ ಕಡಿಮೆ ಬೆಲೆಯಿರುವ ಲೂಮಿಯಾ 520ಯಂತೆ ಕಡಿಮೆ ಬೆಲೆಯಲ್ಲಿಈ ಸ್ಮಾರ್ಟ್‌ಫೋನ್‌ ನೋಕಿಯಾ ಬಿಡುಗಡೆ ಮಾಡಲಿದೆ.

1GHz ಡ್ಯುಯಲ್ ಕೋರ್‌ ಪ್ರೊಸೆಸರ್‍ ,4 ಇಂಚಿನ ಸ್ಕ್ರೀನ್‌,1GB ರ್‍ಯಾಮ್‌, 8GB ಆಂತರಿಕ ಮೆಮೊರಿ, 64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ,ವಿಂಡೋಸ್‌ ಫೋನ್‌ 8 ಓಎಸ್‌ನ ವಿಶೇಷತೆ ಹೊಂದಿರುತ್ತದೆ ಎನ್ನಲಾಗಿದೆ.

 ಸ್ಯಾಮ್‌ಸಂಗ್‌ ಜಿಟಿ-ಐ 8800 ರೆಡ್‌ವುಡ್‌:

ಮುಂದೆ ಬಿಡುಗಡೆಯಾಗಲಿರುವ ಗ್ಯಾಜೆಟ್‌ಗಳು

ಸ್ಯಾಮ್‌ಸಂಗ್‌ ಮೊದಲ ಲೈನಕ್ಸ್‌ ಟೈಜನ್‌ ಓಎಸ್‌‌ ಹೊಂದಿರುವ ಸ್ಮಾರ್ಟ್‌ಫೋನ್‌ ನಿರ್ಮಿಸಲು ಮುಂದಾಗಿದೆ ಎನ್ನುವ ವದಂತಿಯಿದೆ. ಸುದ್ದಿ ಪ್ರಕಾರ ಮುಂದಿನ ವರ್ಷದ ಜನವರಿಯಲ್ಲಿ ಈ ಸ್ಮಾರ್ಟ್‌‌ಫೋನ್‌ ಬಿಡುಗಡೆಯಾಗುವ ಸಾಧ್ಯತೆಯಿದೆ.

 ಮೋಟರೋಲಾ ಫಾಲ್ಕನ್‌:

ಮುಂದೆ ಬಿಡುಗಡೆಯಾಗಲಿರುವ ಗ್ಯಾಜೆಟ್‌ಗಳು


ಮೋಟರೋಲಾ ಕಂಪೆನಿ ಐಫೋನ್‌ 5 ಎಸ್‌ ಮತ್ತು ಎಚ್‌ಟಿ ಒನ್‌ ಮ್ಯಾಕ್ಸ್‌ನಲ್ಲಿರುವಂತೆ ಮೋಟರೋಲಾ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌ ಹೊಂದಿರುವ ಸ್ಮಾರ್ಟ್‌‌ಫೋನ್‌ ಮೋಟರೋಲಾ ಫಾಲ್ಕನ್‌ ತಯಾರಿಸಲು ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ. ಮೊದಲ ಫಿಂಗರ್‌ ಪ್ರಿಂಟ್ ಸ್ಕ್ಯಾನರ್‌ ಸ್ಮಾರ್ಟ್‌ಫೋನ್‌ ಮೋಟರೋಲಾ ಅಟ್ರಿಕ್ಸ್‌ 2011ರಲ್ಲಿ ಬಿಡುಗಡೆ ಮಾಡಿತ್ತು. Authentec ಕಂಪೆನಿಯ ತಯಾರಿಸಿದ ಈ ಫಿಂಗರ್‌ ಪ್ರಿಂಟ್ ಸ್ಕ್ಯಾನರ್‌ ತಂತ್ರಜ್ಞಾನವನ್ನು ಅಳವಡಿಸಿತ್ತು. ನಂತರ 2012ರಲ್ಲಿ Authentec ಕಂಪೆನಿಯನ್ನು ಆಪಲ್‌ ಖರೀದಿಸಿ ತನ್ನ ಐಫೋನ್‌ಗೆ ಈ ತಂತ್ರಜ್ಞಾನವನ್ನು ಬಳಸಲು ಆರಂಭಿಸಿದೆ.

1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‌, ಆಂಡ್ರಾಯ್ಡ್‌ 4.4 ಕಿಟ್‌ಕ್ಯಾಟ್‌ ಓಎಸ್‌ ವಿಶೇಷತೆಯೊಂದಿಗೆ ಈ ಸ್ಮಾರ್ಟ್‌ಪೋನ್‌ ಬಿಡುಗಡೆಯಾಗುವ ಸಾಧ್ಯತೆಯಿದೆ.

 ನೋಕಿಯಾ ಲೂಮಿಯಾ 929

ನೋಕಿಯಾ ಲೂಮಿಯಾ 929


ನೋಕಿಯಾ ಇತ್ತೀಚಿಗಷ್ಟೆ ಆರು ಇಂಚಿನ ಸ್ಕ್ರೀನ್‌ ಹೊಂದಿರುವ ಲೂಮಿಯಾ 1520 ಬಿಡುಗಡೆ ಮಾಡಿತ್ತು.ಈಗ ಐದು ಇಂಚಿನ ಸ್ಕ್ರೀನ್‌ ಹೊಂದಿರುವ ಲೂಮಿಯಾ 929 ಸ್ಮಾರ್ಟ್‌ಫೋನ್‌ ತಯಾರಿಸುತ್ತಿದ್ದು ಈ ಫೋನಿಗೆ ಲೂಮಿಯಾ 1520ಯಲ್ಲಿರುವ ವಿಶೇಷತೆಯನ್ನು ನೀಡುತ್ತಿದೆ ಎಂದುಹೇಳಲಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot