ಸಿಮ್‌ನ್ನು ಮೈಕ್ರೋ ಸಿಮ್‌,ನ್ಯಾನೋ ಸಿಮ್ ಆಗಿ ಪರಿವರ್ತಿಸುವುದು ಹೇಗೆ?

By Ashwath
|

ಸದ್ಯ ಹೊಸದಾಗಿ ಬಿಡುಗಡೆಯಾಗುತ್ತಿರುವ ಸ್ಮಾರ್ಟ್‌ಫೋನ್‌ ಮತ್ತು ಸೆಲ್ಯೂಲರ್‌ ಕನೆಕ್ಟಿವಿಟಿ ಇರುವ ಟ್ಯಾಬ್ಲೆಟ್‌ಗಳಲ್ಲಿ ಮಾಮೂಲಿ ಸಿಮ್‌ ಕಾರ್ಡ್‌ ಬದಲಾಗಿಮೈಕ್ರೋ ಸಿಮ್‌ ಅಥವಾ ನ್ಯಾನೋ ಸಿಮ್‌ಗಳನ್ನು ಹಾಕಬೇಕಾಗುತ್ತದೆ. ಮೈಕ್ರೋಸಿಮ್‌ ,ನ್ಯಾನೋ ಸಿಮ್‌ ಅಂದರೆ ಬೇರೆ ಸಿಮ್‌ ಖರೀದಿಸಿ ಹಾಕುವುದಲ್ಲ. ಬದಲಾಗಿ ಈಗ ಬಳಸುತ್ತಿರುವ ಸಿಮ್‌ನ ಗಾತ್ರವನ್ನು ಕಡಿಮೆ ಮಾಡಿ ಹಾಕಬೇಕಾಗುತ್ತದೆ.

ಮೊಬೈಲ್‌ ಕಂಪೆನಿಗಳಲ್ಲಿ ಗ್ರಾಹಕರು ಬೇಡಿಕೆ ಸಲ್ಲಿಸಿದ್ದರೆ ಕಂಪೆನಿಗಳು ಗ್ರಾಹಕರಿಗೆ ಬೇಕಾದ ಸಿಮ್‌ಗಳನ್ನು ವಿತರಿಸುತ್ತದೆ. ಆದರೆ ವಿತರಿಸಲು ಕೆಲ ಸಮಯ ಹಿಡಿಯುತ್ತದೆ. ಆದರೆ ಮೊಬೈಲ್‌ ಸೇವಾ ಕಂಪೆನಿಗಳೇ ಈ ಸಿಮ್‌ಗಳನ್ನು ತಯಾರಿಸಿ ಕೊಡಬೇಕಿಲ್ಲ. ಗ್ರಾಹಕರೇ ತಮ್ಮಲ್ಲಿರುವ ಸಿಮ್‌ ಕಾರ್ಡ್‌ನ್ನು ಕತ್ತರಿಸಿ ಮೈಕ್ರೋ ಸಿಮ್‌ ಅಥವಾ ನ್ಯಾನೋ ಸಿಮ್‌ ಆಗಿ ಪರಿವರ್ತಿಸಬಹುದು.ಸಿಮ್‌ ಕಾರ್ಡ್‌ನ್ನು ಹೇಗೆ ಕತ್ತರಿಸಬೇಕು ಎಂಬುದಕ್ಕೆ ಮುಂದಿನ ಪುಟದಲ್ಲಿ ವಿವರ ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ನಿರಂತರ ಸುದ್ದಿ ಪಡೆಯಲು ಫೇಸ್‌ಬುಕ್‌ನಲ್ಲಿ ಕನ್ನಡ ಗಿಝ್‌ಬಾಟ್‌ನ್ನು Like ಮಾಡಿ ಟ್ವೀಟರ್‌ನಲ್ಲಿ Follow ಮಾಡಿ

1

1


ಮೈಕ್ರೋ ಸಿಮ್‌‌ 15.00 ಮಿ ಮೀಟರ್‌ ಉದ್ದ,12.00 ಮಿ.ಮೀ ಅಗಲ, 0.76 ಮಿ.ಮೀ ತೆಳ್ಳಗಿರುತ್ತದೆ.

2

2


ನ್ಯಾನೋ ಸಿಮ್‌ 12.30 ಮಿ.ಮೀಟರ್‌ ಉದ್ದ,8.80 ಮಿ.ಮೀ ಅಗಲ 0.67 ಮಿ.ಮೀ ತೆಳ್ಳಗಿರುತ್ತದೆ.

3

3


ನಾರ್ಮ‌ಲ್‌ ಸಿಮ್‌ ನ್ನು ಈ ಹಿಂದಿನ ಪುಟದಲ್ಲಿ ತಿಳಿಸಿದಂತೆ ಮೈಕ್ರೋ ಸಿಮ್‌,ನ್ಯಾನೋ ಸಿಮ್‌ ಆಗಿ ಕತ್ತರಿಯಲ್ಲಿ ಕತ್ತರಿಸಬಹುದು.ಆದರೆ ಅಳತೆ ಮಾಡಿ ಬಹಳ ಜಾಗೃತೆಯಿಂದ ಕತ್ತರಿಸಬೇಕಾಗುತ್ತದೆ.ಸ್ವಲ್ಪ ಅಳತೆ ತಪ್ಪಿದ್ದರೂ ಸಿಮ್‌ನ್ನುಮತ್ತೆ ಪುನಃ ಬಳಕೆ ಮಾಡಲು ಸಾಧ್ಯವಿಲ್ಲ.

4

4


ಆನ್‌ಲೈನ್‌ ಶಾಪಿಂಗ್‌ ತಾಣದಲ್ಲಿ ರಿಟೇಲ್‌ ಅಂಗಡಿಗಳಲ್ಲಿ ಮೈಕ್ರೋ,ನ್ಯಾನೋ ಡ್ಯುಯಲ್‌ ಸಿಮ್‌ ಕಟ್ಟರ್‌ ಇದ್ದು ಇದನ್ನು ಖರೀದಿಸಿದ್ದಲ್ಲಿ ಬೇಕಾದ ಅಳತೆಯಲ್ಲಿ ಸಿಮ್‌ನ್ನು ಕತ್ತರಿಸಬಹುದು. ಅಥವಾ ಮೊಬೈಲ್‌ ರಿಚಾರ್ಜ್‌ ಅಂಗಡಿಗಳಲ್ಲಿ ಡ್ಯುಯಲ್‌ ಸಿಮ್‌ ಕಟ್ಟರ್‌ ಸಾಧಾರಣವಾಗಿ ಲಭ್ಯವಿರುತ್ತದೆ.ಇಲ್ಲಿ ಗ್ರಾಹಕರು ನಿಗದಿ ಪಡಿಸಿದ ದರವನ್ನು ನೀಡಿ ಸಿಮ್‌ನ್ನು ಕತ್ತರಿಸಬಹುದು.

5


ವಿಡಿಯೋ ವೀಕ್ಷಿಸಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X