ಕ್ಯಾಮೆರಾ ಪ್ರಿಯರಿಗೆ ಬೆಸ್ಟ್ 4 ಕ್ಯಾಮೆರಾ ಫೋನ್ "ಹಾನರ್ 9 ಲೈಟ್"!..10,999ರೂ.ಗೆ ಇಷ್ಟೆಲ್ಲಾ ಫೀಚರ್ಸ್!!

Written By:

ಇಡೀ ವಿಶ್ವಕ್ಕೆ ಅತಿಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು ಪೂರೈಸುತ್ತಿರುವ ಚೀನಾ ದೇಶದಲ್ಲಿಯೇ 'ಹುವಾವೆ' ಮೊಬೈಲ್ ಕಂಪೆನಿ ಮೊದಲ ಸ್ಥಾನದಲ್ಲಿದೆ ಎಂದರೆ ಆ ಕಂಪೆನಿಯ ಸ್ಮಾರ್ಟ್‌ಫೋನ್‌ಗಳ ಗುಣಮಟ್ಟವನ್ನು ನಾವು ತಿಳಿಯಬಹುದು.! ಹಾಗಾಗಿಯೇ, ಹುವಾವೆ ಇಂದು ವಿಶ್ವದಲ್ಲಿಯೇ ಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಮೊಬೈಲ್ ಕಂಪೆನಿ ಎಂಬ ಹೆಗ್ಗಳಿಕೆ ಪಡೆದಿದೆ.!!

ಅತ್ಯುತ್ತಮ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ಯಾವಾಗಲೂ ಮುಂದಿರುವ ಹುವಾವೆ ಕಂಪೆನಿ ಬಜೆಟ್ ಬೆಲೆಯಲ್ಲಿ ಅವುಗಳನ್ನು ಗ್ರಾಹಕರಿಗೆ ನೀಡುತ್ತಿದೆ.ಅದರಲ್ಲಿಯೂ ಇಂದಿನ ಡ್ಯುಯಲ್ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳಿಗೆ ಒಂದು ರೂಪಕೊಟ್ಟ ಹೆಗ್ಗಳಿಕೆ ಹುವಾವೆ ಕಂಪೆನಿಯ ಹೆಸರಿನಲ್ಲಿಯೇ ಇರುವುದು ಈ ಕಂಪೆನಿಯ ವಿಶೇಷವಾಗಿದೆ.!!

ಕ್ಯಾಮೆರಾ ಪ್ರಿಯರಿಗೆ ಬೆಸ್ಟ್ 4 ಕ್ಯಾಮೆರಾ ಫೋನ್

ಭಾರತದಲ್ಲಿ ಹಾನರ್ ಬ್ರಾಂಡಿನಲ್ಲಿ ಹುವಾವೆಯ ಹಲವು ಸ್ಮಾರ್ಟ್‌ಪೋನ್‌ಗಳು ಬಿಡುಗಡೆಯಾಗಿದೆ. ಇದೀಗ 10,999ರೂಪಾಯಿಗಳಿಗೆ "ಹಾನರ್ 9 ಲೈಟ್" ಸ್ಮಾರ್ಟ್‌ಫೋನ್ ಬಿಡುಗಡೆಯಾಗಿ ಸಖತ್ ಸದ್ದು ಮಾಡುತ್ತಿದೆ.! 4 ಕ್ಯಾಮೆರಾಗಳನ್ನು ಹೊಂದಿರುವ ಅತೀ ಕಡಿಮೆ ಬೆಲೆಯಲ್ಲಿನ ಫೋನ್ ಎಂಬ ಖ್ಯಾತಿಗೆ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಪಾತ್ರವಾಗಿದೆ.!!

Honor 9 Lite with four cameras (KANNADA)
ಕ್ಯಾಮೆರಾ ಪ್ರಿಯರಿಗೆ ಬೆಸ್ಟ್ 4 ಕ್ಯಾಮೆರಾ ಫೋನ್

ಹಾಗಾಗಿ, ಫೋಟೊಗ್ರಫಿ ಜೊತೆಗೆ ಸಾಮಾನ್ಯವಾಗಿ ಚಿತ್ರಗಳನ್ನು ಸೆರೆ ಹಿಡುವವರಿಗಾಗಿ ಒಳ್ಳೆಯ ಲುಕ್ ಇರುವ ಸ್ಮಾರ್ಟ್‌ಪೋನ್ ಇದಾಗಿದ್ದು, ಹಾಗಾದರೆ, ಹಾನರ್ 9 ಲೈಟ್ ಫೋನಿನ ಇನ್ನಿತರ ಫೀಚರ್ಸ್‌ಗಳು ಯಾವುವು? ಹಾನರ್ ಫೋನ್ ಕ್ಯಾಮೆರಾ ಫೀಚರ್ಸ್‌ಗಳೇನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಾನರ್ 9 ಲೈಟ್ ಫೀಚರ್ಸ್‌ಗಳು!!

ಹಾನರ್ 9 ಲೈಟ್ ಫೀಚರ್ಸ್‌ಗಳು!!

5.56 (1080x2160) ಇಂಚ್ ಡಿಸ್‌ಪ್ಲೇ ಹೊಂದಿರುವ ಹಾನರ್ 9 ಲೈಟ್ 4GB RAM, 64GB ಮೆಮೊರಿ ಹಾಗೂ 1.7GBz ಪ್ರೊಸೆಸರ್ ಹೊಂದಿದೆ. 3000mAh ಬ್ಯಾಟರಿ ಹೊಂದಿರುವ ಈ ಫೋನ್ ಆಂಡ್ರಾಯ್ಡ್
ಓರಿಯೋ ಅಪ್‌ಡೇಟ್ ಹೊಂದಿದೆ.! ರಿಯರ್ ಮತ್ತು ಸೆಲ್ಫಿ ಎರಡೂ ಕ್ಯಾಮೆರಾಗಳು 13+2mp ಮೆಗಾಪಿಕ್ಸೆಲ್ ಇರುವುದು ಈ ಫೋನಿನ ಪ್ರಮುಖ ವಿಶೇಷತೆ ಎನ್ನಬಹುದು.!!

ಹಾನರ್ 9 ಲೈಟ್ ಕ್ಯಾಮೆರಾ ವಿಶೇಷತೆಗಳು!!

ಹಾನರ್ 9 ಲೈಟ್ ಕ್ಯಾಮೆರಾ ವಿಶೇಷತೆಗಳು!!

ಹಾನರ್ 9 ಲೈಟ್ ಸ್ಮಾರ್ಟ್‌ಫೋನಿನಲ್ಲಿ ಒಟ್ಟು ನಾಲ್ಕು ಕ್ಯಾಮೆರಾವನ್ನು ನೀಡಲಾಗಿದ್ದು, ಉತ್ತಮ ಡೆಪ್ಡ್ ಆಫ್ ಫೀಲ್ಡ್ ಚಿತ್ರಗಳನ್ನು ಸೆರೆಹಿಡಿಯಲಿದೆ. ಉತ್ತಮ ಫೋಟೋಗಳನ್ನು ಸೆರೆಹಿಡಿಯುವ ಎಲ್ಲಾ ಆಯ್ಕೆಗಳನ್ನು ಈ ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದ್ದು, ಪೋಟರೆಟ್ ಮೋಡ್, ವೈಡ್ ಆಪರ್ಚರ್ ಮೋಡ್, ಮೂವಿಂಗ್ ಪಿಚ್ಚರ್ಸ್ ಮತ್ತು ಬ್ಯೂಟಿ ಮೋಡ್ ಅನ್ನು ಈ ಸ್ಮಾರ್ಟ್‌ಫೋನ್ ಕ್ಯಾಮೆರಾ ಹೊಂದಿದೆ.!!

ನೈಸರ್ಗಿಕ ಬಣ್ಣಗಳಲ್ಲಿ ಗುಣಮಟ್ಟದ ಫೋಟೋ!!

ನೈಸರ್ಗಿಕ ಬಣ್ಣಗಳಲ್ಲಿ ಗುಣಮಟ್ಟದ ಫೋಟೋ!!

ಬೇರೆ ಕ್ಯಾಮೆರಾಗಳಿಗೆ ಹೋಲಿಕೆ ಮಾಡಿಕೊಂಡರೆ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ನಲ್ಲಿ ಇರುವ ಕ್ಯಾಮೆರಾಗಳು ಉತ್ತಮ ಗುಣಮಟ್ಟದಾಗಿವೆ. ನೈಸರ್ಗಿಕ ಬಣ್ಣಗಳಲ್ಲಿಯೇ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲಿರುವ ಈ ಫೋನ್ ಬಳಕೆದಾರರಿಗೆ ಹೆಚ್ಚಿನ ಗುಣಮಟ್ಟದ ಫೋಟೋಗಳನ್ನು ಒದಗಿಸಲಿದೆ. ಅಲ್ಲದೇ ಕಡಿಮೆ ಬೆಳಕಿನಲ್ಲಿಯೂ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲಿರುವ ಅತ್ಯುತ್ತಮ ಕ್ಯಾಮೆರಾ ತಂತ್ರಜ್ಞಾನ ಈ ಫೋನಿನಲ್ಲಿದೆ.!!

ಅದ್ಬುತ ಫೋಟೋ ಫಿಲ್ಟರ್‌ಗಳು!!

ಅದ್ಬುತ ಫೋಟೋ ಫಿಲ್ಟರ್‌ಗಳು!!

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ನಲ್ಲಿ ಅತ್ಯುತ್ತಮ ಫೋಟೋ ಫಿಲ್ಟರ್‌ಗಳ ಸಂಗ್ರಹವೇ ಇದೆ. GPS, ಟೈಮರ್, ಟಚ್ ಕಾಪ್ಚರ್ ಸೇರಿದಂತೆ ಹಲವು ಆಯ್ಕೆಗಳು, ಫ್ರೋ ಪೋಟೋ, ವಿಡಿಯೋ, ಪ್ರೋ ವಿಡಿಯೋ, HDR, ನೈಟ್ ಶೂಟ್, ಪನೋರಾಮ ಸೇರಿದಂತೆ ಹಲವು ಫಿಲ್ಟರ್ ಗಳನ್ನು ಕಾಣಬಹುದಾಗಿದ್ದು, ಗ್ರೂಪ್ ಸೆಲ್ಪಿ ಹಾಗೂ ಸಿಂಗಲ್ ಸೆಲ್ಪಿಗೆ ಬೇರೆ ಬೇರೆ ಆಧ್ಯತೆಯನ್ನು ನೀಡಿರುವುದು ಸ್ಮಾರ್ಟ್‌ಪೋನಿನ ಮತ್ತೊಂದು ವಿಶೇಷತೆ.!!

ಇಮೇಜ್ ಫೋಕಸ್ ಆಯ್ಕೆಯಲ್ಲಿ ಎತ್ತಿದ ಕೈ!!

ಇಮೇಜ್ ಫೋಕಸ್ ಆಯ್ಕೆಯಲ್ಲಿ ಎತ್ತಿದ ಕೈ!!

13MP + 2MPಯ ನಾಲ್ಕು ಕ್ಯಾಮೆರಾಗಳು ಬಳಕೆದಾರರಿಗೆ ವಿಶಿಷ್ಠ ಫೋಟೋ ತೆಗೆಯುವ ಅನುಭವನ್ನು ನೀಡಲಿದ್ದು, ಇಮೇಜ್ ಫೋಕಸ್‌ನಲ್ಲಿ ಡಿಎಸ್‌ಎಲ್ಆರ್‌ಗೂ ಸೆಡ್ಡುಹೊಡೆಯುವಂತಹ ಆಯ್ಕೆಯನ್ನು ಈ ಸ್ಮಾರ್ಟ್‌ಫೋನಿನಲ್ಲಿಯೇ ಪಡೆಯಬಹುದಾಗಿದೆ.! ಇನ್ನು ಪೋಟ್ರೆಟ್ ಮೋಡ್ ನಲ್ಲಿ ಫೋಟೋ ತೆಗೆಯುವ ಪೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದ್ದು ಹಾನರ್ 9 ಲೈಟ್ ಕ್ಯಾಮೆರಾ ಈ ಫೋಟೋಗಳು ಸೆಡ್ಡು ಹೊಡೆಯುತ್ತವೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Honor 9 Lite works on a surprisingly feature packed camera app. Here we have listed all the hidden tips and tricks that will help you click amazing pictures from this budget smartphone. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot