Home
ಮೊಬೈಲ್

ಐಫೋನ್ 17 ಪ್ರೊಗಾಗಿ ಎಷ್ಟು ದಿನ ದುಡಿಯಬೇಕು?..ಭಾರತ vs ಜಗತ್ತಿನ ಅಂತರ ನೋಡಿ!

2026ರ ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಆಪಲ್‌ನ iPhone 17 Pro (256GB) ವಿಶ್ವದಾದ್ಯಂತ ಅತ್ಯಂತ ಹೆಚ್ಚ ಗಮನ ಸೆಳೆಯುತ್ತಿದೆ. ಹೊಸ ತಂತ್ರಜ್ಞಾನ, ಶಕ್ತಿಶಾಲಿ ಚಿಪ್‌ಸೆಟ್ ಮತ್ತು ಪ್ರೀಮಿಯಂ ವಿನ್ಯಾಸದಿಂದಾಗಿ ಈ ಫೋನ್ ಅನೇಕ ಬಳಕೆದಾರರ ಆಸೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ ಜಗತ್ತಿನ ಎಲ್ಲ ದೇಶಗಳಲ್ಲೂ ಈ ಐಫೋನ್ ಖರೀದಿಯು ಒಂದೇ ಮಾದರಿಯಾಗಿರುವುದಿಲ್ಲ.ನೀವು ಕೆಲಸ ಮಾಡುವ ದೇಶ ಮತ್ತು ಅಲ್ಲಿ ಇರುವ ಸರಾಸರಿ ಆದಾಯವೇ ಇದರ ಕೈಗೆಟುಕುವಿಕೆಯನ್ನು ನಿರ್ಧರಿಸುತ್ತದೆ. ಇಂತಹ ಒಂದು ಪಟ್ಟಿಯಲ್ಲಿ ಭಾರತದ ಸ್ಥಾನವು ಊಹಿಸಲಾಗದಷ್ಟು ಹಿಂದಿದೆ.!

ಹೌದು, iPhone Affordability Index ಈ ಅಂತರವನ್ನು ಸ್ಪಷ್ಟವಾಗಿ ತೋರಿಸಿದೆ. ಈ ಸೂಚ್ಯಂಕವು ವಿವಿಧ ದೇಶಗಳಲ್ಲಿ ಸರಾಸರಿ ಸಂಬಳ ಪಡೆಯುವ ಉದ್ಯೋಗಿಯೊಬ್ಬರು ದಿನಕ್ಕೆ 8 ಗಂಟೆಗಳ ಕೆಲಸದ ಆಧಾರದಲ್ಲಿ iPhone 17 Pro ಖರೀದಿಸಲು ಎಷ್ಟು ದಿನ ಕೆಲಸ ಮಾಡಬೇಕಾಗುತ್ತದೆ ಎಂಬುದನ್ನು ಲೆಕ್ಕ ಹಾಕುತ್ತದೆ. ಇದರ ಮೂಲಕ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ನಿಜವಾದ ಬೆಲೆ ಮತ್ತು ಜಾಗತಿಕ ಆದಾಯ ವ್ಯತ್ಯಾಸ ಸ್ಪಷ್ಟವಾಗುತ್ತದೆ. ಈ ವರದಿಯ ಆಧಾರದ ಮೇಲೆ iPhone 17 Pro ಖರೀದಿಸಲು ಯಾವ ಯಾವ ದೇಶದವರಿಗೆ ಎಷ್ಟು ಸಮಯ ಬೇಕಾಗಬಹುದು ಎಂಬುದನ್ನು ನೋಡೋಣ ಬನ್ನಿ.

ಐಫೋನ್ 17 ಪ್ರೊಗಾಗಿ ಎಷ್ಟು ದಿನ ದುಡಿಯಬೇಕು?..ಭಾರತ vs ಜಗತ್ತಿನ ಅಂತರ ನೋಡಿ!

iPhone 17 Pro (256GB) ಖರೀದಿಸಲು ಕೈಗೆಟುಕುವಿಕೆಯಲ್ಲಿ ಅಗ್ರಸ್ಥಾನದಲ್ಲಿರುವ ದೇಶಗಳು ಯುರೋಪ್‌ನ ಕೆಲವು ಶ್ರೀಮಂತ ರಾಷ್ಟ್ರಗಳಾಗಿವೆ. ಲಕ್ಸಂಬರ್ಗ್ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಉದ್ಯೋಗಿಯೊಬ್ಬರು ಕೇವಲ ಮೂರು ಕೆಲಸದ ದಿನಗಳಲ್ಲಿ iPhone 17 Pro ಖರೀದಿಸಬಹುದು. ಅಮೆರಿಕಾ, ಬೆಲ್ಜಿಯಂ, ಡೆನ್ಮಾರ್ಕ್, ನೆದರ್‌ಲ್ಯಾಂಡ್ಸ್ ಮತ್ತು ನಾರ್ವೆ ದೇಶಗಳಲ್ಲಿ ಸುಮಾರು ನಾಲ್ಕು ದಿನಗಳ ಕೆಲಸ ಸಾಕು. ಇನ್ನು ಆಸ್ಟ್ರೇಲಿಯಾ, ಆಸ್ಟ್ರಿಯಾ, ಫಿನ್‌ಲ್ಯಾಂಡ್, ಐರ್ಲೆಂಡ್, ಜರ್ಮನಿ ಮತ್ತು ಕೆನಡಾದಂತಹ ಅಭಿವೃದ್ಧಿಯಾದ ಆರ್ಥಿಕತೆಗಳಲ್ಲಿ ಐದು ಕೆಲಸದ ದಿನಗಳು ಅಗತ್ಯವಿದೆ.

ಫ್ರಾನ್ಸ್ ಮತ್ತು ಸ್ವೀಡನ್‌ನಲ್ಲಿ ಆರು ದಿನಗಳು ಬೇಕಾದರೆ, ಯುಕೇ ಮತ್ತು ನ್ಯೂಜಿಲೆಂಡ್‌ನಲ್ಲಿ ಏಳು ದಿನಗಳ ಕೆಲಸದ ನಂತರ ಈ ಐಫೋನ್ ಕೈಗೆಟುಕುತ್ತದೆ.ದಕ್ಷಿಣ ಯುರೋಪ್ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಪರಿಸ್ಥಿತಿ ಮತ್ತಷ್ಟು ಕಠಿಣವಾಗುತ್ತದೆ. ಸಿಂಗಾಪುರ, ಇಟಲಿ ಮತ್ತು ಯುಎಇ ದೇಶಗಳಲ್ಲಿ ಎಂಟು ದಿನಗಳ ಕೆಲಸ ಬೇಕಾದರೆ, ಸ್ಪೇನ್‌ನಲ್ಲಿ ಒಂಬತ್ತು ದಿನಗಳು ಅಗತ್ಯ. ಈ ದೇಶಗಳಲ್ಲಿ iPhone ಇನ್ನೂ ದುಬಾರಿಯೇ ಆದರೂ, ಸಂಪೂರ್ಣ ಅಸಾಧ್ಯವೆಂದು ಅನಿಸುವುದಿಲ್ಲ.

ಮಧ್ಯ ಮತ್ತು ಪೂರ್ವ ಯುರೋಪ್‌ನಲ್ಲಿ ಈ ಅಂತರ ಇನ್ನೂ ಹೆಚ್ಚಾಗುತ್ತದೆ. ಚೆಕ್ ಗಣರಾಜ್ಯದಲ್ಲಿ 12 ದಿನಗಳು, ಪೋಲೆಂಡ್‌ನಲ್ಲಿ 17 ದಿನಗಳು, ಪೋರ್ಟುಗಲ್‌ನಲ್ಲಿ 24 ದಿನಗಳು ಮತ್ತು ಹಂಗೇರಿಯಲ್ಲಿ 27 ದಿನಗಳಷ್ಟು ದುಡಿಯಬೇಕು.ಅಭಿವೃದ್ಧಿಶೀಲ ಮಾರುಕಟ್ಟೆಗಳಲ್ಲಿ iPhone 17 Pro ಖರೀದಿ ದೊಡ್ಡ ಸವಾಲಾಗಿದೆ. ಚಿಲಿಯಲ್ಲಿ 32 ದಿನಗಳು, ಮಲೇಶಿಯಾದಲ್ಲಿ 45 ದಿನಗಳು ಮತ್ತು ಥೈಲ್ಯಾಂಡ್‌ನಲ್ಲಿ 61 ದಿನಗಳ ಕೆಲಸ ಬೇಕಾಗುತ್ತದೆ. ಬ್ರೆಜಿಲ್‌ನಲ್ಲಿ ಇದು 77 ದಿನಗಳಿಗೆ ಏರುತ್ತದೆ. ಟರ್ಕಿಯಲ್ಲಿ ಉದ್ಯೋಗಿಯೊಬ್ಬರು ಸುಮಾರು 89 ದಿನಗಳಷ್ಟು ಕೆಲಸ ಮಾಡಬೇಕಾಗುತ್ತದೆ

ದಕ್ಷಿಣ ಪೂರ್ವ ಏಷ್ಯಾ ಮತ್ತು ಭಾರತವು ಪಟ್ಟಿಯ ಕೊನೆಯಲ್ಲಿ ಕಾಣಿಸಿಕೊಳ್ಳುತ್ತವೆ. ವಿಯೆಟ್ನಾಂನಲ್ಲಿ iPhone 17 Pro ಖರೀದಿಸಲು 99 ದಿನಗಳ ಕೆಲಸ ಬೇಕಾದರೆ, ಫಿಲಿಪ್ಪೀನ್ಸ್‌ನಲ್ಲಿ 101 ದಿನಗಳು ಅಗತ್ಯ. ಭಾರತದಲ್ಲಿ ಪರಿಸ್ಥಿತಿ ಅತ್ಯಂತ ಕಠಿಣವಾಗಿದೆ. ಭಾರತದಲ್ಲಿ ಸರಾಸರಿ ಸಂಬಳದ ಉದ್ಯೋಗಿಯೊಬ್ಬರು ಸುಮಾರು 160 ಕೆಲಸದ ದಿನಗಳು, ಅಂದರೆ ಅರ್ಧ ವರ್ಷಕ್ಕಿಂತ ಹೆಚ್ಚು ಕಾಲ ದುಡಿಯಬೇಕಾಗುತ್ತದೆ.! ಭಾರತದಂತಹ ಮಾರುಕಟ್ಟೆಗಳಲ್ಲಿ EMI ಆಯ್ಕೆಗಳು, ಹಳೆಯ iPhone ಮಾದರಿಗಳು ಮತ್ತು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು ಏಕೆ ಹೆಚ್ಚು ಜನಪ್ರಿಯವಾಗಿವೆ ಎಂಬುದಕ್ಕೆ ಇದು ಸ್ಪಷ್ಟ ಉತ್ತರ ನೀಡುತ್ತದೆ.

ಈ iPhone Affordability Index ನಮಗೆ ಒಂದು ಪ್ರಮುಖ ಸಂಗತಿಯನ್ನು ತಿಳಿಸುತ್ತದೆ. ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳ ಬೆಲೆ ಕೇವಲ ಟ್ಯಾಗ್ ಪ್ರೈಸಿನ ವಿಷಯವಲ್ಲ. ಸ್ಥಳೀಯ ಸಂಬಳ, ಖರೀದಿ ಶಕ್ತಿ, ತೆರಿಗೆ ಮತ್ತು ಆರ್ಥಿಕ ಸ್ಥಿತಿಯೇ ನಿಜವಾದ ವೆಚ್ಚವನ್ನು ನಿರ್ಧರಿಸುತ್ತದೆ. ಒಂದೇ ಫೋನ್ ಜಾಗತಿಕವಾಗಿ ಮಾರಾಟವಾಗುತ್ತಿದ್ದರೂ, ಅದನ್ನು ಹೊಂದುವ ಅನುಭವ ದೇಶದಿಂದ ದೇಶಕ್ಕೆ ಸಂಪೂರ್ಣವಾಗಿ ಬದಲಾಗುತ್ತದೆ. ನಿಮಗೆ ಹೇಳಬೇಕಿರುವ ಮತ್ತೊಂದು ಆಶ್ಚರ್ಯಕರ ವಿಷಯವೇನೆಂದರೆ, ಭಾರತದಲ್ಲಿ 2015 ನೇ ವರ್ಷ ಅತ್ಯಂತ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಎಂದು ಅದು Iphone 16.!

Best Mobiles in India

English summary
The iPhone 17 Pro (256GB) may be a premium smartphone, but its affordability varies widely across countries. Based on the iPhone Affordability Index, Indian consumers need to work significantly more days compared to global counterparts, highlighting stark income and purchasing power differences worldwide.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+