Home
ಮೊಬೈಲ್

ಹೆಚ್ಚು RAMನಿಂದ ಈ ಸಮಸ್ಯೆ ಪಕ್ಕಾ! ಹಾಗಿದ್ರೆ, ಎಷ್ಟು GB RAM ಮೊಬೈಲ್ ಖರೀದಿಸಬೇಕು?: ಇಲ್ಲಿದೆ ಮಾಹಿತಿ

ಮೊಬೈಲ್‌ (Smartphone) ಖರೀದಿಸುವಾಗ ಅನೇಕರಿಗೆ ಗೊಂದಲಗಳಿರುತ್ತವೆ. ಬಹು ಬೇಡಿಕೆಯ ಮೊಬೈಲ್‌ಗಳೆಲ್ಲವೂ ಹೆಚ್ಚು GB RAM ಹೊಂದಿರುತ್ತವೆ. 12GB, 16GB ಮತ್ತು 24GB RAMನ ಅತ್ಯುತ್ತಮ Android ಮೊಬೈಲ್‌ಗಳು ಲಭ್ಯವಿದೆ. ಮತ್ತೊಂದೆಡೆ, ಬಜೆಟ್ ಫ್ರೆಂಡ್ಲಿ ಮೊಬೈಲ್‌ಗಳು 4GB RAM ಹೊಂದಿವೆ. ಇದಲ್ಲದೇ, 6GB ಮತ್ತು 8GB RAMನ ಮೊಬೈಲ್‌ಗಳೂ ಇವೆ. ಹಾಗಾದರೆ, ನಾವು ಎಷ್ಟು GB RAMನ ಮೊಬೈಲ್ ಖರೀದಿಸಬೇಕು? ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಮೊಬೈಲ್‌ ಕೊಂಡುಕೊಳ್ಳುವಾಗ ಬಹುತೇಕರು ಗೊಂದಲಕ್ಕೀಡಾಗುವುದು, ನಾನು ಎಷ್ಟು GB RAMನ ಮೊಬೈಲ್‌ ಖರೀದಿಸ ಬೇಕು? ಅಂತ. ಈ ಕುರಿತು ಹಲವರಿಗೆ ಐಡಿಯಾ ಇರುವುದಿಲ್ಲ. ಕೆಲವರು, ಏನು ಅರಿಯದೇ ಅಧಿಕ RAMನ ಮೊಬೈಲ್‌ ಆಯ್ಕೆ ಮಾಡಿಕೊಂಡರೆ, ಇನ್ನೂ ಕೆಲವರು ಗೇಮಿಂಗ್‌ಗೆಂದು ಕಡಿಮೆ RAMನ ಮೊಬೈಲ್ ಖರೀದಿಸುತ್ತಾರೆ. ಬಳಿಕ, ತೊಂದರೆ ಎದುರಿಸುತ್ತಾರೆ. ಹೀಗಾಗಿ, ನೀವು ಮೊಬೈಲ್‌ ಮೊಬೈಲ್‌ ಖರೀದಿಸುವ ಮುನ್ನ ಈ ಮಾಹಿತಿಯನ್ನು ಖಂಡಿತವಾಗಿಯೂ ತಿಳಿದುಕೊಳ್ಳಬೇಕು. ಮುಂದೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

ಹೆಚ್ಚು RAMನಿಂದ ಈ ಸಮಸ್ಯೆ ಪಕ್ಕಾ!: ಇಲ್ಲಿದೆ ಮಾಹಿತಿ

ಹೌದು, ಇಂದು ಎಲ್ಲರ ಕೈಯಲ್ಲೂ ಮೊಬೈಲ್‌ ಇದ್ದೇ ಇರುತ್ತದೆ. ನಾವು ಮೊಬೈಲ್‌ ಅನ್ನು ಕಾಲ್, ಮೆಸೇಜ್, ಬ್ರೌಸಿಂಗ್, ಸೋಷಿಯಲ್ ಮೀಡಿಯಾ ವೀಕ್ಷಣೆಗೆ ಹೆಚ್ಚು ಬಳಸುತ್ತೇವೆ. ಹೀಗಿದ್ದರೆ, 4GB RAM ಇರುವ ಮೊಬೈಲ್‌ ಬೆಸ್ಟ್ ಚಾಯ್ಸ್. ನೀವು ಮೊಬೈಲ್‌ನಲ್ಲಿ ಗೇಮಿಂಗ್, ವಿಡಿಯೋ ಎಡಿಟಿಂಗ್‌ನಂತಹ ಮಲ್ಟಿಟಾಸ್ಕಿಂಗ್ ಮಾಡಲು ಬಯಸಿದರೆ, 6GB ಅಥವಾ 8GB RAMನ ಮೊಬೈಲ್‌ ಕೊಂಡುಕೊಳ್ಳುವುದು ಉತ್ತಮ.

ಹೆಚ್ಚು GB RAMನಿಂದ ಈ ಸಮಸ್ಯೆ ಪಕ್ಕಾ!

ಮಾರುಕಟ್ಟೆಯಲ್ಲಿ ಹೆಚ್ಚು GB RAM ಇರುವ ತರಹೇವಾರಿ ಸ್ಮಾರ್ಟ್‌ಫೋನ್‌ಗಳು ಲಭ್ಯವಿದೆ. ಇವುಗಳ ಬೆಲೆ ದುಬಾರಿ ಇರುತ್ತದೆ. ಇದನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ನೀವೇನಾದರೂ ಅಧಿಕ GB RAM ಇರುವ ಮೊಬೈಲ್‌ಗಳನ್ನು ಖರೀದಿಸಿದರೆ, ಬ್ಯಾಟರಿಯಲ್ಲಿ ಸಮಸ್ಯೆ ಉಂಟಾಗುತ್ತದೆ. ಮೊಬೈಲ್‌ನ ಬ್ಯಾಟರಿ ಡಿಸ್ಚಾರ್ಜ್‌ ಆಗುವ ಸಾಧ್ಯತೆಯಿದ್ದು, ನಿಮ್ಮ ಸ್ಮಾರ್ಟ್‌ಫೋನ್‌ ಬಳಕೆಗೆ ಬರುವುದಿಲ್ಲ.

ಡಿಸ್‌ಪ್ಲೇ ಗುಣಮಟ್ಟ ಚೆಕ್‌ ಮಾಡದಿದ್ರೆ ಅಪಾಯ

ಮೊಬೈಲ್ ಕೊಂಡುಕೊಳ್ಳುವಾಗ RAM ಜೊತೆಗೆ ಡಿಸ್‌ಪ್ಲೇ ಬಗ್ಗೆ ಗಮನಹರಿಸುವುದು ಉತ್ತಮ. ಮೊಬೈಲ್‌ನ ಡಿಸ್‌ಪ್ಲೇಯಲ್ಲಿ ಏನಾದರೂ ಸ್ವಲ್ಪ ವ್ಯತ್ಯಾಸವಾದರೂ, ನಿಮ್ಮ ಮೊಬೈಲ್‌ ಉಪಯೋಗಕ್ಕೆ ಬರುವುದಿಲ್ಲ. ಈ ಬಗ್ಗೆ ಐಡಿಯಾ ಇಲ್ಲದವರು, ಮೊಬೈಲ್ ಡಿಸ್‌ಪ್ಲೇ ಗುಣಮಟ್ಟ ಪರಿಶೀಲೀಸದೇ ಕೊಂಡುಕೊಳ್ಳುತ್ತಾರೆ. ಮಾರುಕಟ್ಟೆಯಲ್ಲಿ ಅನೇಕ ಸ್ಮಾರ್ಟ್‌ಫೋನ್‌ ಲಭ್ಯವಿದ್ದು, ಮೊಬೈಲ್‌ಗಳ ಡಿಸ್‌ಪ್ಲೇ ಗುಣಮಟ್ಟ ಚೇಂಜ್‌ ಆಗುತ್ತಲೇ ಇರುತ್ತದೆ. ಡಿಸ್‌ಪ್ಲೇ ವಿಷಯಕ್ಕೆ ಬಂದಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪಿಕ್ಸೆಲ್, ರೆಸಲ್ಯೂಶನ್, ಪಿಪಿಐ ವಿಚಾರಗಳು ಮುಖ್ಯವಾಗುತ್ತವೆ.

ಎಷ್ಟು GB RAM ಮೊಬೈಲ್ ಖರೀದಿಸಬೇಕು?

ನೀವು ಸಾಮಾನ್ಯವಾಗಿ ಕಾಲ್‌ಗಳು, ಸಂದೇಶಗಳು, ಗೂಗಲ್ ಬ್ರೌಸಿಂಗ್, ಸೋಷಿಯಲ್ ಮೀಡಿಯಾ ಬಳಕೆ ಮಾಡುವುದಾದರೆ, 4GB RAM ಇರುವ ಮೊಬೈಲ್‌ ಖರೀದಿಸುವುದು ಉತ್ತಮ. ಇಲ್ಲ, ನಮ್ಮ ಮೊಬೈಲ್‌ನಲ್ಲಿ ಗೇಮಿಂಗ್, ವಿಡಿಯೋ ಎಡಿಟಿಂಗ್ ಇತ್ಯಾದಿ ಮಾಡುತ್ತೇನೆ ಎಂದರೆ, 6GB ಅಥವಾ 8GB RAM ಇರುವ ಮೊಬೈಲ್ ಕೊಂಡುಕೊಳ್ಳುವುದು ಉತ್ತಮವಾಗಿರುತ್ತದೆ.

ಯುವಜನತೆ ಗೇಮಿಂಗ್‌ಗಾಗಿ ಮೊಬೈಲ್ ಖರೀದಿಸುತ್ತಾರೆ. ದೊಡ್ಡ ಮಟ್ಟದ ಗೇಮಿಂಗ್‌ಗಾಗಿ ಫೋನ್ ಬಳಸಲು ಬಯಸಿದರೆ, 12GB RAMನ ಮೊಬೈಲ್‌ ಖರೀದಿಸಿ. ಇದರಿಂದ 4K ವಿಡಿಯೋ ಎಡಿಟಿಂಗ್ ಸಹ ಮಾಡಬಹುದು. ಇನ್ನೂ, ಮೊಬೈಲ್‌ನ ಸ್ಪೀಡ್‌ನಲ್ಲಿ ಪ್ರೊಸೆಸರ್ ಮುಖ್ಯ. ಒಳ್ಳೆಯ ಪ್ರೊಸೆಸರ್ ಕಡಿಮೆ RAM ನೊಂದಿಗೆ ಹೆಚ್ಚು ಸ್ಫೀಡ್‌ ನೀಡುತ್ತದೆ. ಮೊಬೈಲ್‌ನ ಪ್ರೊಸೆಸರ್ ಹಳೆಯದಾಗಿದ್ರೆ, ಹೆಚ್ಚು RAM ಅಗತ್ಯವಾಗುತ್ತದೆ. ದೀರ್ಘಕಾಲದವರೆಗೆ ಮೊಬೈಲ್‌ ಬಳಸುವುದಾದರೆ, 6 GB RAMನ ಮೊಬೈಲ್‌ ಕೊಂಡುಕೊಳ್ಳುವುದು ಉತ್ತಮ.

Best Mobiles in India

English summary
The most popular phones feature a wide gamut of RAM sizes. The question is, how much RAM do you need when buying a new phone? What’s the ideal amount of RAM for an Android phone? How much do you need to add a little future-proofing? Let’s find out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+