Home
ಮೊಬೈಲ್

ಪೇಟಿಎಂ, ಫೋನ್‌ಪೇ ಮತ್ತು ತೇಜ್‌ ಆಪ್‌ಗಳಲ್ಲಿ ನಿಮ್ಮ ಹಣ ಎಷ್ಟು ಸುರಕ್ಷಿತ?

By Bhaskar N J

ನೀವೀಗ ಡಿಜಿಟಲ್ ವಾಲೆಟ್ ಯುಗಕ್ಕೆ ಕಾಲಿಟ್ಟಿದ್ದರೆ ಮೊಬೈಲ್ ವಾಲೆಟ್‌ಗಳು ಎಷ್ಟು ಪ್ರಯೋಜನಕಾರಿ ಎಂಬುದು ನಿಮಗೆ ಈಗಾಗಲೇ ಅರ್ಥವಾಗಿರುತ್ತದೆ. ಪೇಟಿಎಂ, ಫೋನ್‌ಪೇ, ತೇಜ್ಹ್ ಆಪ್‌ಗಳನ್ನು ಬಳಸುವವರು ಆಪ್‌ನಲ್ಲಿ ಎಷ್ಟು ಸರಾಗವಾಗಿ ಹಣ ವರ್ಗಾವಣೆ ನಡೆಸಬಹುದು ಎಂದು ಆಶ್ಚರ್ಯ ಪಡುತ್ತಾರೆ. ಇಂತಹ ಆಪ್ ಬಹಳ ಪ್ರಯೋಜನಕಾರಿ ಎಂದು ತಿಳಿದಿರುತ್ತಾರೆ.

ಡಿಜಿಟಲ್ ವಾಲೆಟ್ ಆಪ್‌ಗಳನ್ನು ತರುತ್ತಿರುವ ಸಾಕಷ್ಟು ಮೊಬೈಲ್ ವಾಲೆಟ್ ಕಂಪೆನಿಗಳು ಹೆಚ್ಚೆಚ್ಚು ಗ್ರಾಹಕರನ್ನು ಆಕರ್ಷಿಸಲು ನಾನಾ ಆಫರ್‌ಗಳನ್ನು ನೀಡುತ್ತಿವೆ. ಇದರಿಂದ ದಿನದಿಂದ ದಿನಕ್ಕೆ ಡಿಜಿಟಲ್ ವಾಲೆಟ್ ಆಪ್‌ಗಳು ಹೆಚ್ಚು ಜನಪ್ರಿಯವಾಗುತ್ತಿದ್ದು, ಆನ್‌ಲೈನ್‌ ಮೂಲಕವೇ ನಡೆಯುತ್ತಿರುವ ಹಣದ ವಹಿವಾಟು ಕೂಡ ಜೋರಾಗಿರುವುದನ್ನು ನೀವು ನೋಡಬಹುದು.

ಪೇಟಿಎಂ, ಫೋನ್‌ಪೇ ಮತ್ತು ತೇಜ್‌ ಆಪ್‌ಗಳಲ್ಲಿ ನಿಮ್ಮ ಹಣ ಎಷ್ಟು ಸುರಕ್ಷಿತ?

ಹಣ ಸ್ವೀಕಾರ, ಬಿಲ್‌ಗಳ ಪಾವತಿ ಸೇರಿದಂತೆ ಯಾವುದೇ ಹಣಕಾಸು ವ್ಯವಹಾರವಿರಲಿ ಸುಲಭವಾಗಿ ಮೊಬೈಲ್‌ ವ್ಯಾಲೆಟ್‌ಗಳ ಮೂಲಕ ಮಾಡಿ ಮುಗಿಸಬಹುದಾದ ಇಂತಹ ಸಮಯದಲ್ಲಿ ನೀವು ಇವುಗಳ ಉಪಯೋಗಗಳನ್ನು ಮಾತ್ರ ತಿಳಿದರೆ ಹೇಗೆ.? ಹಾಗಾಗಿ, ಇಂದಿನ ಲೇಖನದಲ್ಲಿ ಡಿಜಿಟಲ್ ವಾಲೆಟ್‌ಗಳ ಬಳಕೆ ಸುರಕ್ಷಿತವೇ? ಮೊಬೈಲ್‌ ವ್ಯಾಲೆಟ್ ಬಳಕೆಯಲ್ಲಿ ಎಷ್ಟು ಎಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿಯೋಣ.

ಡಿಜಿಟಲ್ ವ್ಯಾಲೆಟ್ ಸುರಕ್ಷಿತವೇ?

ಡಿಜಿಟಲ್ ವ್ಯಾಲೆಟ್ ಸುರಕ್ಷಿತವೇ?

ಇಲ್ಲಿಯವರೆಗೂ ಆನ್‌ಲೈನ್ ಪ್ರಪಂಚ ಸುರಕ್ಷಿತವಾಗಿಲ್ಲ ಎಂದೇ ಹೇಳಬಹುದಾಗಿದ್ದು, ಡಿಜಿಟಲ್ ವ್ಯಾಲೆಟ್‌ಗಳು ಸಹ ಇವುಗಳಿಂದ ಹೊರತಾಗಿಲ್ಲ. ಕೆಲವು ಡಿಜಿಟಲ್ ವ್ಯಾಲೆಟ್ಗಳು ಹೆಸರಾಂತ ಕಂಪೆನಿಗಳಿಂದ ರೂಪಿತವಾಗಿದ್ದರೆ, ಇನ್ನು ಕೆಲವು ಡಿಜಿಟಲ್ ವ್ಯಾಲೆಟ್ಗಳು ನಂಬಿಕೆಗೆ ಅರ್ಹವಾಗಿಲ್ಲ. ಕೆಲವಂತೂ ತದ್ರೂಪಿ ಮೋಸದ ಆಪ್‌ಗಳು ಸಹ ಹುಟ್ಟಿಕೊಂಡಿವೆ.

ಇತರೆ ಆಪ್‌ಗಳ ಬಗ್ಗೆ ಎಚ್ಚರವಿರಲಿ!

ಇತರೆ ಆಪ್‌ಗಳ ಬಗ್ಗೆ ಎಚ್ಚರವಿರಲಿ!

ಡಿಜಿಟಲ್ ವಾಲೆಟ್‌ಗಳನ್ನು ಬಳಸುವವರು, ನೀವು ಬಳಸುತ್ತಿರುವ ವಾಲೆಟ್ ಆಪ್‌ಗಿಂತಲೂ ಹೆಚ್ಚು ಎಚ್ಚರಿಕೆಯನ್ನು ಇತರೆ ಆಪ್‌ಗಳ ಬಗ್ಗೆ ಹೊಂದಿರಬೇಕು. ಕೆಲವು ಕಳ್ಳ ಆಪ್‌ಗಳು ನೀವು ಡಿಜಿಟಲ್ ಆಪ್‌ ಮೂಲಕ ನಡೆಸಿದ ವ್ಯವಹಾರಗಳನ್ನು ಕದ್ದು ತನ್ನ ನಿರ್ಮಾತೃಗೆ ಕಳುಹಿಸಿಕೊಡಬಹುದು. ಇದರಿಂದ ನಿಮ್ಮ ಬ್ಯಾಂಕ್ ಮಾಹಿತಿಗಳು ಅವರ ಪಾಲಾಗಿಬಿಡಬಹುದು.

ಆಟೋ ಸೇವ್ ಮಾಡದಿರಿ.

ಆಟೋ ಸೇವ್ ಮಾಡದಿರಿ.

ಗೂಗಲ್ ಸೇರಿದಂತೆ ಹಲವು ಆಪ್‌ಗಳು ನಿಮ್ಮ ಪರ್ಸನಲ್ ಹಾಗೂ ಬ್ಯಾಂಕ್ ವಿವರಗಳನ್ನೆಲ್ಲಾ ಆಟೋ ಸೇವ್ ಮಾಡಿಕೊಳ್ಳಲು ಕೇಳಿಕೊಳ್ಳುತ್ತವೆ. ಆದರೆ, ಯಾವುದೇ ಕಾರಣಕ್ಕೂ ನಿಮ್ಮ ಮಾಹಿತಿ ಆಟೋ ಸೇವ್ ಆಗದಂತೆ ನೋಡಿಕೊಳ್ಳಿ. ಆಟೊ ಸೇವ್ ಮಾಡಿದ ಪಕ್ಷದಲ್ಲಿ ಹ್ಯಾಕರ್‌ಗಳ ಕೆಲಸ ಹೆಚ್ಚು ಸುಲಭವಾಗಬಹುದು.!

ಸಾರ್ವಜನಿಕ ವೈಫೈ ಬಳಕೆ ಬೇಡ.

ಸಾರ್ವಜನಿಕ ವೈಫೈ ಬಳಕೆ ಬೇಡ.

ಬಸ್‌ನಿಲ್ದಾಣ, ರೈಲ್ವೆನಿಲ್ದಾಣ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ವೈಫೈ ಸೌಲಬ್ಯವಿರುತ್ತದೆ. ಇಂತಹ ಸ್ಥಳಗಳಲ್ಲಿ ಮೊಬೈಲ್‌ ಬ್ಯಾಂಕಿಂಗ್‌ ವ್ಯವಹಾರಗಳಿಂದ ಸ್ವಲ್ಪ ದೂರವಿರಿ. ಇಲ್ಲವಾದಲ್ಲಿ ನಿಮ್ಮ ಮಾಹಿತಿಗಳು ಖದೀಮರ ಪಾಲಾಗುವುದರಲ್ಲಿ ಎರಡು ಮಾತಿಲ್ಲ.

ಪಾಸ್‌ವರ್ಡ್‌ಗಳನ್ನು ಬದಲಾಯಿಸುತ್ತಿರಿ.

ಪಾಸ್‌ವರ್ಡ್‌ಗಳನ್ನು ಬದಲಾಯಿಸುತ್ತಿರಿ.

ನೀವು ಬಳಕೆ ಮಾಡುತ್ತಿರುವ ಡಿಜಿಟಲ್ ವಾಲೆಟ್‌ಗಳು ಉತ್ತಮವಾಗಿಯೇ ಇದ್ದರೂ ಸಹ ನಿಯಮಿತವಾಗಿ ಆಗಾಗ ಪಾಸ್‌ವರ್ಡ್‌ಗಳನ್ನು ಬದಲಿಸುತ್ತಿರಿ. ಏಕೆಂದರೆ ಶಕ್ತಿಯುತ ಪಾಸ್‌ವರ್ಡ್‌ಗಳನ್ನು ಖದಿಯಲು ಹ್ಯಾಕರ್‌ಗಳಿಗೆ ಬಹಳ ಕಷ್ಟವಾಗುತ್ತದೆ.

ಒಟಿಪಿ ನಿಮಗೆ ಮಾತ್ರ ಗೊತ್ತಿರಲಿ.

ಒಟಿಪಿ ನಿಮಗೆ ಮಾತ್ರ ಗೊತ್ತಿರಲಿ.

ಬ್ಯಾಂಕ್, ಆಪ್‌ಗಳು ಅಥವಾ ಇನ್ನಾವುದೇ ಆನ್‌ಲೈನ್ ವ್ಯವಹಾರಗಳಲ್ಲಿ ನಿಮಗೆ ಬರುವ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಆನ್‌ಲೈನ್ ವ್ಯವಸ್ಥೆಗೆ ಸುರಕ್ಷಿತ ಅಂಶವಾಗಿರುವ ಒಟಿಪಿಯನ್ನು ಫೋನ್‌ ಕರೆ ಅಥವಾ ಎಸ್‌ಎಂಎಸ್‌ ಮೂಲಕ ಹಂಚಿಕೊಂಡರೆ ನಿಮ್ಮ ಕಥೆ ಮುಗಿಯಿತು ಎಂದರ್ಥ.

Best Mobiles in India

English summary
mobile wallets have become one of the most popular digital payment methods in the country, a question that many naturally have is-how safe are they?. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+