ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10 – ಭಾರತೀಯ ಮಾರುಕಟ್ಟೆಯಲ್ಲಿ ಮಿಂಚಿನ ಸಂಚಲನ
ಇದೇ ಮೊದಲ ಬಾರಿಗೆ ಸ್ಯಾಮ್ ಸಂಗ್ ತನ್ನ ಗ್ಯಾಲಕ್ಸಿ ಎಸ್ ಸರಣಿಯಲ್ಲಿ ಕಡಿಮೆ ರೇಂಜಿನ ವೇರಿಯಂಟ್ ನ್ನು ಬಿಡುಗಡೆಗೊಳಿಸುತ್ತಿದೆ.ಅದುವೇ ಗ್ಯಾಲಕ್ಸಿ ಎಸ್10ಇ. 209 ನೇ ವರ್ಷದ ಕಂಪೆನಿಯ ಫ್ಲಾಗ್ ಶಿಪ್ ಸ್ಮಾರ್ಟ್ ಫೋನ್ ಗಳಲ್ಲಿ ಅತೀ ಕಡಿಮೆ ಶಕ್ತಿಯುಳ್ಳ ಫೋನ್ಗಳು ಇದಾಗಿದೆ- ಗ್ಯಾಲಕ್ಸಿ ಎಸ್10 ಮತ್ತು ಗ್ಯಾಲಕ್ಸಿ ಎಸ್10+. ಆಪಲ್ ಸಂಸ್ಥೆ ಐಫೋನ್ ಎಕ್ಸ್ಆರ್ ಮತ್ತು ಐಫೋನ್ ಎಸ್ಇಯಲ್ಲಿ ಮಾಡಿದ ತಂತ್ರಗಾರಿಕೆಯನ್ನೇ ಸ್ಯಾಮ್ ಸಂಗ್ ಮಾಡುತ್ತಿರುವಂತಿದೆ.

ಇದರ ಐಡಿಯಾ ಬಹಳ ಸರಳವಾದದ್ದು. ಐಶಾರಾಮಿ ಫೋನ್ ಗಳ ಬದಲಾಗಿ ಕಡಿಮೆ ಬೆಲೆಯಲ್ಲಿ ಅತೀ ಹೆಚ್ಚು ಫೀಚರ್ ಗಳುಳ್ಳ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ತಂತ್ರಗಾರಿಕೆ ಅಷ್ಟೇ. ಹಾಗಾದ್ರೆ ಒಟ್ಟಾರೆ ಮಾರುಕಟ್ಟೆಯನ್ನು ಇದು ಹೇಗೆ ಸಮಸ್ಯೆಗೆ ಸಿಲುಕಿಸಬಹುದು ಎಂಬ ಬಗ್ಗೆ ಕೆಲವು ಮಾತುಕತೆಗಳು ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ನಡೆಯುತ್ತಿದೆ. ಒನ್ ಪ್ಲಸ್, ಹುವಾಯಿ, ಹಾನರ್ ಮತ್ತು ಇತರೆ ಭಾರತೀಯ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿರುವ ಕಂಪೆನಿಗಳಿಗೆ ಸ್ಯಾಮ್ ಸಂಗ್ ಸಂಸ್ಥೆ ದೊಡ್ಡ ಶಾಕ್ ನೀಡುವ ಸಾಧ್ಯತೆ ಇದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10ಇ ಪ್ರೀಮಿಯಂ ಗ್ಯಾಲಕ್ಸಿ ಎಸ್10+ ನಲ್ಲಿರುವಂತಹ ಪ್ರೊಸೆಸರ್ ನ್ನೇ ಹೊಂದಿದೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ 2.7 GHz ಆಕ್ಟಾ-ಕೋರ್ Exynos 9820 (8nm) ಪ್ರೊಸೆಸರ್ ನ್ನು ಹೊಂದಿದೆ. ಇದು ಟಾಪ್ ಎಂಡ್ ಫೋನ್ ಎನ್ನಿಸಿಕೊಂಡಿರುವ ಗ್ಯಾಲಕ್ಸಿ ಎಸ್10+ ನಲ್ಲೂ ಕೂಡ ಲಭ್ಯವಿರುತ್ತದೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ 6ಜಿಬಿ ಮತ್ತು 8ಜಿಬಿ ಮೆಮೊರಿ ಆಯ್ಕೆಗಳನ್ನು ಹೊಂದಿದೆ.
512ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ ನೀಡುವ ಏಕೈಕ ಫೋನ್ ಇಂಟರ್ನಲ್ ಸ್ಟೋರೇಜ್ ಆಯ್ಕೆಗೆ ಬಂದಾಗ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ 128GB ಮತ್ತು 256GB ಎರಡೂ ಆಯ್ಕೆಗಳನ್ನು ಹೊಂದಿದೆ. ಎರಡೂ ವೇರಿಯಂಟ್ ಗಳು 512ಜಿಬಿ ವರೆಗಿನ ಮೈಕ್ರೋ ಎಸ್ ಡಿ ಕಾರ್ಡಿಗೆ ಬೆಂಬಲಿಸುತ್ತದೆ.

ಒನ್ ಪ್ಲಸ್ 6ಟಿ, ಐಫೋನ್ ಎಕ್ಸ್ಆರ್ ಹಾಗೂ ಇತರೆ ಫೋನ್ ಗಳಿಗಿಂತ ಅಟ್ರ್ಯಾಕ್ಟೀವ್ ಆಗಿರುವ ಬೆಲೆ
ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ ಒನ್ ಪ್ಲಸ್ 6ಟಿ ಮೆಕ್ಲಾರೆನ್ ಎಡಿಷನ್ ಅಥವಾ ಐಫೋನ್ ಎಕ್ಸ್ಆರ್ ನ್ನು ಆಕರ್ಷಿಸುವ ಗ್ರಾಹಕರನ್ನು ಸೆಳೆಯುವ ತಾಕತ್ತು ಹೊಂದಿದೆ.

ಉತ್ತಮ ಡಿಸ್ಪ್ಲೇ
ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10ಇ ಉತ್ತಮ ಡಿಸ್ಪ್ಲೇ ಆಯ್ಕೆಯನ್ನು ಹೊಂದಿದೆ. ಇದರಲ್ಲಿ 5.8- ಇಂಚಿನ ಫ್ಲ್ಯಾಟ್ ಡೈನಾಮಿಕ್ ಅನ್ಮೋಲ್ಡ್ ಡಿಸ್ಪ್ಲೇ ಜೊತೆಗೆ ಫುಲ್ HD+ ರೆಸಲ್ಯೂಷನ್ ,19:9 ಅನುಪಾತ ಮತ್ತು 522 ppi ಪಿಕ್ಸಲ್ ಡೆನ್ಸಿಟಿಯನ್ನು ಹೊಂದಿದೆ. ಇನ್ಫಿನಿಟಿ ಓ ಡಿಸ್ಪ್ಲೇ ಜೊತೆಗೆ ಒಂದೇ ಲೆನ್ಸ್ ಇರುವ ಮುಂಭಾಗದ ಕ್ಯಾಮರಾ ವ್ಯವಸ್ಥೆ ಇದೆ. ಈ ಬೆಲೆಯಲ್ಲಿ ಲಭ್ಯವಿರುವ ಅತ್ಯಂತ ಉತ್ತಮವಾಗಿರುವ ಡಿಸ್ಪ್ಲೇ ಇದಾಗಿದೆ.
ದೊಡ್ಡ ಫೋನ್ ಗಳನ್ನು ಇಚ್ಛಿಸದೇ ಇರುವವರಿಗೆ ಇದು ಬೆಸ್ಟ್ ಆಯ್ಕೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ 6.99 x 14.22 x 0.79 cm ಮತ್ತು ತೂಕ 150 ಗ್ರಾನಷ್ಟಿದೆ. ಹಾಗಾಗಿ ಇದೊಂದು ಅತ್ಯಂತ ಉತ್ತಮವಾಗಿರುವ ಕಾಂಪ್ಯಾಕ್ಟ್ ಫ್ಲಾಗ್ ಶಿಪ್ ಫೋನ್ ಆಗಿದೆ.
ಈ ರೇಂಜಿನಲ್ಲಿ ಲಭ್ಯವಿರುವ ಬೆಸ್ಟ್ ಕ್ಯಾಮರಾ ವ್ಯವಸ್ಥೆ ಹೊಂದಿರುವ ಫೋನ್ ಡುಯಲ್ ಲೆನ್ಸ್ ಕ್ಯಾಮರಾ ಸೆಟ್ ಅಪ್ ನ್ನು ಹಿಂಭಾಗದಲ್ಲಿ ಹೊಂದಲಾಗಿದ್ದು ಒಂದು 12MP ಅಗಲ ಮತ್ತು 16MP ಅಲ್ಟ್ರಾ ವೈಡ್ ಸೆನ್ಸರ್ ನ್ನು ಹೊಂದಿದೆ.ಪ್ರೈಮರಿ ಸೆನ್ಸರ್ 12MP 2PD A/F ವೈಡ್ ಆಂಗಲ್ ಜೊತೆಗೆ ಡುಯಲ್ OIS f/1.5 ಮತ್ತು f/2.4 ಅಪರ್ಚರ್ ನ್ನು ಹೊಂದಿದೆ. 77 ಡಿಗ್ರಿ ಫೀಲ್ಡ್ ನಲ್ಲಿ OIS ಗೆ ಬೆಂಬಲಿವಿದೆ. ಸೆಕೆಂಡರಿ ಸೆನ್ಸರ್ 16MP ಫಿಕ್ಸ್ಡ್ ಫೋಕಸ್ ವ್ಯವಸ್ಥೆ ಹೊಂದಿದೆ ಮತ್ತು 123 ಡಿಗ್ರಿ ಫೀಲ್ಡ್ ವ್ಯೂ ಮತ್ತು f/2.2 ಅಪರ್ಚರ್ ನ್ನು ಹೊಂದಿದೆ.

ಬಣ್ಣಗಳ ಆಯ್ಕೆಯೂ ಇದೆ
ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ ಐದು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಹಳದಿ, ಗಾಢ ಬೂದು ಬಣ್ಣ, ಬಿಳಿ, ಹಸಿರು ಮತ್ತು ನೀಲಿ.
ಗ್ಯಾಲಕ್ಸಿ ಎಸ್10ಇ ಖರೀದಿದಾರರಿಗೆ ಸ್ಯಾಮ್ ಸಂಗ್ ಆಕರ್ಷಕ ಆಫರ್ ಕೂಡ ನೀಡಲಿದೆ.


Click it and Unblock the Notifications








