ಐಫೋನ್ ಫೇಸ್‌ಲಾಕ್ ಎಷ್ಟು ನಿಖರವಾಗಿದೆ?..ಈ ಪ್ರಶ್ನೆಗೆ ಆಪಲ್ ಹೇಳಿದ್ದು ಹೀಗೆ!!

ಐಫೋನ್ ಎಕ್ಸ್‌ ಮೂಲಕ ಆಪಲ್ ಕಂಪೆನಿ ಹೊರತಂದಿರುವ ನೂತನ ತಂತ್ರಜ್ಞಾನ 'ಫೇಸ್‌ಲಾಕ್' ಬಗ್ಗೆ ಎಲ್ಲೆಡೇ ಟ್ರೋಲ್ ಆಗಿರುವುದು ನಿಮಗೆಲ್ಲಾ ಗೊತ್ತೇ ಇದೆ.!

|

ಐಫೋನ್ ಎಕ್ಸ್‌ ಮೂಲಕ ಆಪಲ್ ಕಂಪೆನಿ ಹೊರತಂದಿರುವ ನೂತನ ತಂತ್ರಜ್ಞಾನ 'ಫೇಸ್‌ಲಾಕ್' ಬಗ್ಗೆ ಎಲ್ಲೆಡೇ ಟ್ರೋಲ್ ಆಗಿರುವುದು ನಿಮಗೆಲ್ಲಾ ಗೊತ್ತೇ ಇದೆ.! ಮೇಕಪ್ ಮಾಡಿದರೆ 'ಫೇಸ್‌ಲಾಕ್' ತನ್ನ ಬಳಕೆದಾರರನ್ನು ಗುರುತಿಸುತ್ತದೆಯೇ? ಇದೂ ಕೂಡ ಹಳೆಯ 'ಫೇಸ್‌ಲಾಕ್' ಆಪ್‌ಗಳಂತೆಯೇ ಇರಬಹುದೆ ಎಂದು 'ಫೇಸ್‌ಲಾಕ್' ಬಗ್ಗೆ ಟ್ರೋಲ್ ಆಗಿತ್ತು.!!

ಇದೇ ರೀತಿಯಲ್ಲಿಯೇ ಐಫೋನ್ ಎಕ್ಸ್‌ನ ಮುಖ ಗುರುತು ಸುರಕ್ಷತಾ ವ್ಯವಸ್ಥೆ ಕುರಿತು ಮತ್ತು ಈ ತಂತ್ರಜ್ಞಾನದ ಅಳವಡಿಕೆ ಕುರಿತು ಅಮೆರಿಕ ಸಂಸತ್‌ ಸದಸ್ಯ ಫ್ರಾಂಕೆನ್ ಸೆಪ್ಟೆಂಬರ್‌ನಲ್ಲಿ ಹಲವು ಪ್ರಶ್ನೆಗಳನ್ನು ಒಳಗೊಂಡ ಪತ್ರವನ್ನು ಆಪಲ್‌ ಸಂಸ್ಥೆಗೆ ರವಾನಿಸಿರೊಳಗೆ ಉತ್ತರಿಸುವಂತೆ ಕೇಳಿದ್ದರು.ಇ ದಕ್ಕೆ ಸಂಸ್ಥೆಯ ಸಿಇಒ ಟಿಮ್‌ ಕುಕ್‌ ಸ್ಪಂದಿಸಿದ್ದಾರೆ.

ಅಮೆರಿಕ ಸಂಸತ್‌ ಸದಸ್ಯ ಫ್ರಾಂಕೆನ್ ಪ್ರಶ್ನೆಗಳಿಗೆ ಆಪಲ್‌ನ ಉಪಾಧ್ಯಕ್ಷ ಸಿಂಥಿಯಾ ಹೋಗನ್‌ ಇದಕ್ಕೆ ಪ್ರತಿಕ್ರಿಯಿಸಿರುವುದಾಗಿ ಆಪಲ್‌ ಇನ್‌ಸೈಡರ್‌ ವರದಿ ಮಾಡಿದೆ. ಹಾಗಾದರೆ, ಆಪಲ್‌ನ ಉಪಾಧ್ಯಕ್ಷ ಸಿಂಥಿಯಾ ಹೋಗನ್ ಈ ಬಗ್ಗೆ ನೀಡಿರುವ ಉತ್ತರ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಆಪಲ್ 'ಫೇಸ್‌ಲಾಕ್' ತೆರೆಯುವುದು ಹೇಗೆ?

ಆಪಲ್ 'ಫೇಸ್‌ಲಾಕ್' ತೆರೆಯುವುದು ಹೇಗೆ?

ಗ್ರಾಹಕರ ಮುಖದ ಗುರುತಿನ ಮಾಹಿತಿಯನ್ನು ಮೊಬೈಲ್‌ ಸಂಗ್ರಹಿಸಿಕೊಂಡಿರುತ್ತದೆ. ಕ್ಯಾಮೆರಾದಿಂದ ಬಳಕೆದಾರರ ಮುಖ ರಚನೆ ಲಕ್ಷಣಗಳ ಮಾಹಿತಿಯನ್ನು ಸುರಕ್ಷತಾ ವಲಯಕ್ಕೆ ರವಾನಿಸುತ್ತದೆ. ಈಗಾಗಲೇ ಗೂಢಲಿಪಿಗೊಂಡಿರುವ ಮಾಹಿತಿಯೊಂದಿಗೆ ಹೋಲಿಸಿ ಫೋನ್‌ ತೆರೆದುಕೊಳ್ಳುತ್ತದೆ.!!

ಮುಖವೇ ಸುರಕ್ಷತೆಯ ಕೇಂದ್ರ

ಮುಖವೇ ಸುರಕ್ಷತೆಯ ಕೇಂದ್ರ

ಮೊಬೈಲ್‌ ಸುರಕ್ಷತೆಗಾಗಿ ಮೊದಲು ಫೇಸ್‌ಲಾಕ್ ಬಗ್ಗೆ ಮಾತುಗಳಿದ್ದರೂ ಸಹ ತಂತ್ರಜ್ಞಾನ ಯಶಸ್ವಿಯಾಗಿರಲಿಲ್ಲ.! ಹಾಗಾಗಿ, ಬೆರಳು ಸ್ಕ್ಯಾನ್‌, ಪಿನ್‌ ಅಥವಾ ಪ್ಯಾಟ್ರಾನ್ ಲಾಕ್ ಅಳವಡಿಸಿಕೊಳ್ಳಲಾಗಿತ್ತು. ಆದರೆ, ಐಫೋನ್ ಎಕ್ಸ್‌ ಮುಖವನ್ನೇ ಸುರಕ್ಷತೆಯ ಕೇಂದ್ರವಾಗಿ ಬಳಸಿದೆ. ಮತ್ತು ಯಶಸ್ವಿಯಾಗಿದೆ.!!

ಐಫೋನ್ ಫೇಸ್‌ಲಾಕ್ ತಂತ್ರಜ್ಞಾನ ಹೀಗಿದೆ.!!

ಐಫೋನ್ ಫೇಸ್‌ಲಾಕ್ ತಂತ್ರಜ್ಞಾನ ಹೀಗಿದೆ.!!

ಐಫೋನ್ ಎಕ್ಸ್ ಸ್ಮಾರ್ಟ್‌ಫೋನ್‌ನಲ್ಲಿ ಸ್ಪಷ್ಟವಾಗಿ ಗುರುತಿಸುವ ಹಾಗೂ ಸಮಗ್ರತೆಯನ್ನು ಅಳೆಯುವಂತಹ ಇನ್ಫ್ರಾರೆಡ್ ಕ್ಯಾಮೆರಾ ಬಳಸಲಾಗಿದೆ ಹಾಗೂ ಎ11 ಬಯೋನಿಕ್‌ ಚಿಪ್‌ ಅಳವಡಿಕೆಯಿಂದಾಗಿ ನಿಖರವಾಗಿ ಮುಖ ಗುರುತಿಸುವುದು ಸಾಧ್ಯವಾಗಿದೆ.

30 ಸಾವಿರ ಡಾಟ್!!

30 ಸಾವಿರ ಡಾಟ್!!

ಎ11 ಬಯೋನಿಕ್‌ ಚಿಪ್‌ ಮತ್ತು ಇನ್ಫ್ರಾರೆಡ್ ಕ್ಯಾಮೆರಾದಿಂದ ಗೋಚರಿಸದ 30 ಸಾವಿರ ಡಾಟ್‌ಗಳಿಂದ ಮುಖವನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗಿದೆ. ಮುಖದಲ್ಲಿ ಸ್ವಲ್ಪ ಬದಲಾವಣೆಗಾಳಾದರೂ ಸಹ ಆಪಲ್ ಫೆಸ್‌ಲಾಕ್ ಸ್ಪಷ್ಟವಾಘಿ ಕಾರ್ಯನಿರ್ವಹಣೆ ನೀಡಲಿದೆ.!!

ಮೊಬೈಲ್‌ನ ಸಂಗ್ರಹವಾಗುವುದಿಲ್ಲ.!!

ಮೊಬೈಲ್‌ನ ಸಂಗ್ರಹವಾಗುವುದಿಲ್ಲ.!!

ಫೇಸ್‌ಲಾಕ್ ಮಾಹಿತಿ ಆಪಲ್‌ ಸಂಸ್ಥೆಗೆ ಅಥವಾ ಮೊಬೈಲ್‌ನಲ್ಲೇ ಸಂಗ್ರಹಗೊಳ್ಳುವುದಿಲ್ಲ. ಈಗಾಗಲೇ ಗುರುತು ಆಗಿರುವ ಬಳಕೆದಾರರ ಮಾಹಿತಿಯೊಂದಿಗೆ ಹೋಲಿಸಿ ಈ ಮಾಹಿತಿಯನ್ನು ಅಳಿಸಿಹಾಕಲಾಗುತ್ತದೆ ಎಂದು ಆಪಲ್‌ನ ಉಪಾಧ್ಯಕ್ಷ ಸಿಂಥಿಯಾ ಹೋಗನ್ ಉತ್ತರಿಸಿದ್ದಾರೆ.!!

ಇದೀಗ ಉಚಿತ ಫೋನ್, 153ರೂ.ಗೆ ಅನ್‌ಲಿಮಿಟೆಡ್‌ ಸೇವೆ!!..ಆಫರ್ ನೀಡಿದ್ದು ಈ ಟೆಲಿಕಾಂ!!ಇದೀಗ ಉಚಿತ ಫೋನ್, 153ರೂ.ಗೆ ಅನ್‌ಲಿಮಿಟೆಡ್‌ ಸೇವೆ!!..ಆಫರ್ ನೀಡಿದ್ದು ಈ ಟೆಲಿಕಾಂ!!

Best Mobiles in India

English summary
Apple can't seem to resist testing the balance between making things easy and making them secure.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X