ಮುಂದಿನ ಕೆಲವು ದಿನಗಳಲ್ಲಿ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಹೇಗೆ ಬರಲಿದೆ ಗೊತ್ತಾ..?

  By GizBot Bureau
  |

  ಕೈಯಲ್ಲಿರುವ ಫೋನ್ ಹೀಗಿರಬೇಕು, ಹಾಗಿರಬೇಕು, ನೋಡಲು ಹೀಗೆ ಕಂಡರೆ ಚೆಂದ, ಹಾಗೆ ಕಂಡರೆ ಚೆಂದ ಅಂತ ಪ್ರತಿಯೊಬ್ಬರು ತಮ್ಮ ಫೋನಿನ ಬಗ್ಗೆ ಕನಸು ಕಂಡಿರುತ್ತಾರೆ. ನಮ್ಮ ದೇಹದಲ್ಲಿ ಮುಖವು ಹೇಗೆ ಎಲ್ಲರ ಆಕರ್ಷಣೆಯ ಕೇಂದ್ರವಾಗಿರುತ್ತದೆಯೋ ಹಾಗೆ ಫೋನಿನಲ್ಲಿ ಅದರ ಡಿಸ್ಪ್ಲೇ ಎಲ್ಲರೂ ಮೊದಲು ಗಮನಿಸುವ ಅಂಗವಾಗಿದೆ. ಹಾಗಾಗಿ ಅದರ ಬಗ್ಗೆ ಫೋನ್ ತಯಾರಿಕಾ ಕಂಪೆನಿಗಳೂ ಕೂಡ ಸಾಕಷ್ಟು ಬದಲಾವಣೆಗಳನ್ನು ಇತ್ತೀಚಿನ ದಿನಗಳಲ್ಲಿ ಮಾಡಿದೆ.

  ಮುಂದಿನ ಕೆಲವು ದಿನಗಳಲ್ಲಿ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಹೇಗೆ ಬರಲಿದೆ ಗೊತ್ತಾ..?

  ಕಳೆದ ಕೆಲವು ತಿಂಗಳಿನಲ್ಲಿ ಸ್ಮಾರ್ಟ್ ಫೋನ್ ಡಿಸೈನ್ ನಲ್ಲಿ ಆಗಿರುವ ಬದಲಾವಣೆಗಳು ಊಹಿಸಲೂ ಅಸಾಧ್ಯ. ಸ್ಕ್ರೀನಿನ ಸೈಜ್ ದೊಡ್ಡದಾಯಿತು, ಡಿಸ್ಪ್ಲೇ ಡಿಸೈನ್ ಬದಲಾವಣೆಯಾಯ್ತು. ಇನ್ನು ಕೆಲವೇ ದಿನಗಳಲ್ಲಿ ಗ್ರಾಹಕರು ಬಗ್ಗಿಸಬಹುದಾದ ಡಿಸ್ಪ್ಲೇ ಇರುವ ಫೋನ್ ಗಳನ್ನೂ ಕೂಡ ಖರೀದಿಸಬಹುದಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಹೊಸ ಯುಗಕ್ಕೆ ಕಾರಣವಾಗಬಹುದು ಮಡಚಬಹುದಾದ ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್ ಫೋನ್ ಗಳು

  ಕಳೆದ ಕೆಲವು ವರ್ಷಗಳಿಂದ ಸ್ಕ್ರೀನ್ ನ್ನು ಬಗ್ಗಿಸಬಹುದಾದ ಸ್ಮಾರ್ಟ್ ಫೋನ್ ತಯಾರಿಕೆ ಮಾಡಬೇಕು ಎಂದು ಫೋನ್ ತಯಾರಕರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಎಲ್ ಜಿ ಜಿ ಫ್ಲೆಕ್ಸ್ ಈ ನಿಟ್ಟಿನಲ್ಲಿ ಯಶಸ್ವಿಯಾಗಿದ್ದು ಜಗತ್ತಿಗೆ ಬಾಗಿದ ಡಿಸ್ಪ್ಲೇ ಇರುವ ಫೋನ್ ಪರಿಚಯವಾಗುತ್ತಿದೆ. ಹೆಚ್ಚಿನ ಫ್ಲ್ಯಾಗ್ ಶಿಪ್ ನ ಸ್ಯಾಮ್ ಸಂಗ್ ಫೋನ್ ಗಳು ಬದಿಯಲ್ಲಿ ಬಾಗಿದ ಡಿಸ್ಪ್ಲೇಯನ್ನು ಹೊಂದಿದೆ. ಆದರೆ ಇನ್ನು ಕೆಲವೇ ದಿನಗಳಲ್ಲಿ ನಿಜಕ್ಕೂ ಬೆಂಡ್ ಆಗಿರುವ ಸ್ಕ್ರೀನ್ ಹೊಂದಿರುವ ಫೋನ್ ಗಳು ಮಾರುಕಟ್ಟೆಯಲ್ಲಿ ಹೊಸಯುಗಕ್ಕೆ ಕಾರಣವಾದರೂ ಆಗಬಹುದು.

  ಐಎಚ್ಎಸ್ ಮಾರ್ಕಿಟ್ ನ ಅಧ್ಯಯನಕಾರರಾಗಿರುವ ಡೇವಿಡ್ ಹೆಸಿವ್ ಅವರ ಅಭಿಪ್ರಾಯದಂತೆ ಈ ವರ್ಷಾಂತ್ಯಕ್ಕೆ ಮಡಚಬಹುದಾದ AMOLED ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್ ಫೋನ್ ಗಳು ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ. ಚೀನಾ ಮೂಲದ ಡಿಸ್ಪ್ಲೇ ತಯಾರಿಕಾ ಕಂಪೆನಿ ಬಿಓಇ 7.56 ಇಂಚಿನ ಮಡಚಬಹುದಾದ AMOLED ಡಿಸ್ಪ್ಲೇಯನ್ನು ತಯಾರಿಸಿದೆ ಇದನ್ನು ಸುಮಾರು 100,000 ಬಾರಿ ಯಾವುದೇ ಬ್ರೇಕಿಂಗ್ ಇಲ್ಲದಂತೆ ಮಡಚಲು ಅವಕಾಶ ನೀಡುತ್ತದೆ.

  ಥೈವಾನಿನ ಎಲೆಕ್ಟ್ರಾನಿಕ್ ಕಂಪೆನಿ AUO 5 ಇಂಚಿನ AMOLED ಡಿಸ್ಪ್ಲೇಯನ್ನು ತಯಾರಿಸಿದೆ ಮತ್ತು ಇದು ಸುಮಾರು 1.5 ಮಿಲಿಯನ್ ಗಿಂತಲೂ ಹೆಚ್ಚು ಬಾರಿ ಯಾವುದೇ ಬ್ರೇಕಿಂಗ್ ಇಲ್ಲದೇ ಮಡಚಲು ಅವಕಾಶ ನೀಡುತ್ತದೆ. BOE ಈಗಾಗಲೇ ಹುವಾಯಿ ಕಂಪೆನಿಯೊಂದಿಗೆ ಮಾತುಕತೆ ನಡೆಸುತ್ತಿದ್ದು ಈ ತಂತ್ರಜ್ಞಾನವನ್ನು ಮಾರುಕಟ್ಟೆಗೆ ತರುವ ನಿಟ್ಟಿನಲ್ಲಿ ಸರ್ವ ಪ್ರಯತ್ನವನ್ನು ಮಾಡಲಾಗುತ್ತಿದೆ.ಸ್ಯಾಮ್ ಸಂಗ್ ಸಂಸ್ಥೆಯೂ 7 ಇಂಚಿನ ಡಿಸ್ಪ್ಲೇ ತಯಾರಿಕೆಗಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದು ಈ ವರ್ಷದ ನಂತರದ ದಿನಗಳಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆ ಇದೆ.

  ಚೂರುಗಳಾಗದ ಡಿಸ್ಪ್ಲೇ ಅಥವಾ ಬೇಗನೆ ಶಟರ್ ಆಗದ ಡಿಸ್ಪ್ಲೇ

  ಬಾಗಿದ ಪರದೆ ಅಥವಾ ಡಿಸ್ಪ್ಲೇಯ ಪ್ರಮುಖ ತೊಂದರೆ ಎಂದರೆ ಅದು ಬೇಗನೆ ಶಟರ್ ಆಗುವುದು. ಟೊಲುಮಾ ನಡೆಸಿರುವ ಇತ್ತೀಚೆಗಿನ ಅಧ್ಯಯನದ ಪ್ರಕಾರ, ಸರಾಸರಿಯಾಗಿ ವರ್ಷಕ್ಕೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸ್ಮಾರ್ಟ್ ಫೋನ್ ನ್ನು 7 ಬಾರಿ ಬೀಳಿಸಿಕೊಳ್ಳುತ್ತಾರೆ ಮತ್ತು 1 ಮೀಟರ್ ಅಥವಾ ಅದಕ್ಕಿಂತ ಕಡಿಮೆ ಎತ್ತರದಿಂದಲೂ ಬೀಳಿಸಿಕೊಳ್ಳುತ್ತಾರೆ.

  ಸ್ಯಾಮ್ ಸಂಗ್ ಪ್ಲಾಸ್ಟಿಕ್ ಓವರ್ ಲೇ ನಿಂದ ಒಡೆಯಲು ಅಸಾಧ್ಯವಾಗುವ ಒಂದು ಬಗ್ಗಿಸಬಹುದಾದ OLED ಪೆನಲ್ ನ್ನು ಒಳಗೊಂಡ ಸ್ಕ್ರೀನ್ ತಯಾರಿಸುತ್ತಿದೆ ಮತ್ತು ಇದು ಗ್ಲಾಸ್ ನ ಮೇಲ್ಮೈನ ಬಾಗುವ ಪರದೆಯನ್ನು ಸ್ವಲ್ಪ ಒರಟಾಗುವಂತೆ ಮಾಡುತ್ತದೆ. ಈ ಹೊಸ ಸ್ಕ್ರೀನ್ ಅಂಡರ್ ರೈಟರ್ಸ್ ಲ್ಯಾಬೋರೇಟರಿ ಇಂಕ್ ನಿಂದ ಪ್ರಮಾಣಿಕರಿಸಲಾಗಿದೆ. ಈ ಸಂಸ್ಥೆ ಯುಎಸ್ ನ ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ಆಡಳಿತ ನಿರ್ವಹಣೆ ಮಾಡುವ ಒಂದು ಸಂಸ್ಥೆಯಾಗಿದೆ. ಇದರಿಂದ ಪ್ರಮಾಣೀಕರಿಸಲಾಗಿದೆ ಎಂದರೆ ಹೊಸ ಸ್ಮಾರ್ಟ್ ಫೋನ್ ತಯಾರಿಕೆಗೆ ಸಿದ್ಧ ಎಂದರ್ಥ. ಈ ಸ್ಕ್ರೀನ್ ನ್ನು 26 ಬಾರಿ 1.2 ಮೀಟರ್ ಎತ್ತರದಿಂದ ಬೀಳಿಸಿ ಪರೀಕ್ಷೆ ಮಾಡಲಾಗಿದೆ. ಎರಡು ವರ್ಷದ ಹಿಂದೆ ಗೋರಿಲ್ಲಾ ಗ್ಲಾಸ್ ಹವಾ ಸೃಷ್ಟಿ ಮಾಡಿತ್ತು. ಇನ್ನು ಮುಂದೆ ಬಾಗಿದ ಸ್ಕ್ರೀನ್ ಗಳ ಹವಾ ಆರಂಭವಾದರೆ ಆಶ್ಚರ್ಯ ಪಡಬೇಕಿಲ್ಲ

  ದೊಡ್ಡ ಡಿಸ್ಪ್ಲೇ ತಯಾರಿಕೆ ಒಂದು ರೂಢಿಯಾಗುತ್ತಿದೆ

  5.5 ಇಂಚಿನ ಸ್ಕ್ರೀನ್ ಡಿಸ್ಪ್ಲೇ ಈಗ ಡೀಫಾಲ್ಟ್ ಸ್ಕ್ರೀನ್ ಡಿಸ್ಪ್ಲೇ ಆಗಿ ಉಳಿದಿಲ್ಲ. ಆಪಲ್ ಸಂಸ್ಥೆ ಈ ಸಂಪ್ರದಾಯಕ್ಕೆ ನಾಂದಿ ಹಾಡಿ ಹೊಸ ಹೊಸ ಸ್ಕ್ರೀನ್ ಸೈಜಿನ ಐಫೋನ್ ಗಳನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ ಇದೀಗ ಎಲ್ಲಾ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿಗಳು ಯಾವುದೇ ಒಂದು ಸೈಜಿನ ಸ್ಕ್ರೀನ್ ಸೈಜ್ ಗೆ ನಿಗದಿಗೊಳ್ಳದೆ ಒಂದೊಂದು ಸ್ಮಾರ್ಟ್ ಫೋನ್ ನ್ನು ಒಂದು ಡಿಸ್ಪ್ಲೇ ಸೈಜ್ ನಲ್ಲಿ ಬಿಡುಗಡೆಗೊಳಿಸುತ್ತಿದೆ.ವಿವೋ ಮತ್ತು ಓಪೋ ಫೋನ್ ತಯಾರಿಕಾ ಕಂಪೆನಿಗಳು bezel-less ಸ್ಕ್ರೀನ್ ನ್ನು ಹೊಂದಿದ್ದು ಸೆಲ್ಫೀ ಕ್ಯಾಮರಾ ಗಳಿಗೆ ಆದ್ಯತೆ ನೀಡಿವೆ.

  ಡಿಸ್ಪ್ಲೇ ಜೊತೆಗೆ ಇನ್ ಬಿಲ್ಟ್ ಬೆರಳಚ್ಚು ತಂತ್ರಜ್ಞಾನ 

  ತೆಳುವಾದ bezel ಡಿಸೈನ್ ಫೋನ್ ತಯಾರಕರಿಗೆ ಬೆರಳಚ್ಚು ತಂತ್ರಜ್ಞಾನವನ್ನು ಹಿಂಭಾಗಕ್ಕೆ ಸರಿಸಲು ಮತ್ತು ಫೇಸ್ ಅನ್ ಲಾಕ್ ತಂತ್ರಜ್ಞಾನವನ್ನು ಅಳವಡಿಸುವುದಕ್ಕೆ ಹೆಚ್ಚು ಅನುಕೂಲಕರವಾಗಿದೆ. ಆದರೆ ಇದು ಇನ್ನು ಕೆಲವೇ ದಿನಗಳಲ್ಲಿ ಬದಲಾಗುತ್ತಿದ್ದು ಬೆರಳಚ್ಚು ತಂತ್ರಜ್ಞಾನವನ್ನು ಸ್ಕ್ರೀನ್ ನ ಒಳಭಾಗದಲ್ಲಿ ಎಂಬೆಡೆಡ್ ಮಾಡುವ ತಂತ್ರಗಾರಿಕೆಯನ್ನು ಫೋನ್ ತಯಾರಿಕಾ ಸಂಸ್ಥೆಗಳು ಕಂಡುಹಿಡಿದುಕೊಂಡಿವೆ.

  ಐಎಚ್ಎಸ್ ಮಾರ್ಕಿಟ್ ಎಂಬ ಹಣಕಾಸು ಸೇವೆಯ ಸಂಸ್ಥೆಯೊಂದರ ವರದಿಯ ಅನ್ವಯ 2019 ರ ವೇಳೆಗೆ ಸುಮಾರು 1000 ಮಿಲಿಯನ್ ಸ್ಮಾರ್ಟ್ ಫೋನ್ ಗಳು ಈ ರೀತಿ ಡಿಸ್ಪ್ಲೇ ಅಡಿಭಾಗದಲ್ಲಿ ಬೆರಳಚ್ಚು ತಂತ್ರಗಾರಿಕೆಯನ್ನು ಒಳಗೊಂಡಿರುವ ಫೋನ್ ಗಳು ಮಾರುಕಟ್ಟೆಯನ್ನು ಪ್ರವೇಶಿಸಲಿವೆಯಂತೆ. ಸ್ಯಾಮ್ ಸಂಗ್ ಮತ್ತು ಆಪಲ್ ಗಳು ಈಗಾಗಲೇ ಈ ರೀತಿಯ ಅಲ್ಟ್ರಾಸಾನಿಕ್ ಸೆನ್ಸರ್ ನ್ನು ಒಳಗೊಂಡ ಡಿಸ್ಪ್ಲೇ ಇರುವ ಫೋನ್ ತಯಾರಿಕೆಗೆ ಆಸಕ್ತಿ ತೋರಿವೆ. ವಿವೋ ಈಗಾಗಲೇ ಇಂತಹ ಎರಡು ಫೋನ್ ಗಳನ್ನು ಬಿಡುಗಡೆಗೊಳಿಸಿದೆ ಎಕ್ಸ್ 21 ಮತ್ತು ನೆಕ್ಸ್ . ಶಿಯೋಮಿ ಇಂತಹ ಎಂಐ8 ಎಕ್ಸ್ ಪ್ಲೋರ್ ಎಡಿಷನ್ ನ್ನು ಚೀನಾದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿದೆ.

  ಇತ್ತೀಚಿನ ವರ್ಷಗಳಲ್ಲಿ ಫೋನಿನ ಸ್ಕ್ರೀನ್ ವಿಚಾರದಲ್ಲಿ ಸಾಕಷ್ಟು ಬದಲಾವಣೆ ಮತ್ತು ಬೆಳವಣಿಗೆ ಆಗಿದೆ. ಅದು ಗ್ರಾಹಕರ ಹಿತದೃಷ್ಟಿಯಿಂದ ಮಾಡಲಾಗಿರುವ ಬದಲಾವಣೆಗಳಾಗಿದ್ದು, ಅದು ಬಳಕೆದಾರ ಸ್ನೇಹಿಯಾಗಿ ದಿನದಿಂದ ದಿನಕ್ಕೆ ಹೆಚ್ಚು ಪ್ರಸಿದ್ಧಿಯೂ ಆಗುತ್ತಿದೆ. ದೊಡ್ಡ ದೊಡ್ಡ ಸ್ಕ್ರೀನ್ ಗಳ ಜೊತೆಜೊತೆಗೆ ಹೆಚ್ಚು ವೈಶಿಷ್ಟ್ಯತೆಗಳನ್ನು ಒಳಗೊಂಡು ಸ್ಕ್ರೀನ್ ಗಳು ಬಳಕೆದಾರರಿಗೆ ಸಾಕಷ್ಟು ಅನುಕೂಲತೆಯನ್ನೂ ಮಾಡುತ್ತಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  How smartphone displays will look like over the next few months. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more