ಮೊಬೈಲಿಂದ PC ಗೆ ಫೋಟೋ ವರ್ಗಾವಣೆ ಹೇಗೆ ?

ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಕಾಂಟ್ಯಾಕ್ಟ್ ಗಳು ಹಾಗು ಫೋಟೋಗಳು ಬಹುಮುಖ್ಯವಾಗಿರುತ್ತವೆ. ಸ್ಮಾರ್ಟ್ ಫೋನ್ ಏನಾದರೂ ಕಳೆದುಹೋದರೆ ತುಂಬಾ ಕಷ್ಟಪಡಬೇಕಾಗುತ್ತದೆ. ಸ್ಮಶಾನಕ್ಕೆ ಹೋದ ಹೆಣ, ಹುಂಡಿಗೆ ಹಾಕಿದಹಣ ಹೇಗೆ ವಾಪಸ್ ಬರುವುದಿಲ್ಲವೋ ಹಾಗೆಯೇ, ಕಳೆದು ಹೋದ ಫೋನಿನಿಂದ ಕಾಂಟ್ಯಾಕ್ಟ್ ಗಳು ಹಾಗು ಫೋಟೋಗನ್ನು ಮತ್ತೆ ಪಡೆದುಕೊಳ್ಳುವುದಕ್ಕೆ ಆಗುವುದಿಲ್ಲ.
ಹಾಗಾಗಿ ಇವುಗಳನ್ನು ನಿಮ್ಮ ಪಿಸಿಯಲ್ಲಿ ಬ್ಯಾಕ್ ಅಪ್ ಮಾಡಿದರೆ ಒಳ್ಳೆಯದು. ಹಾಗಾಗಿ ನಿಮ್ಮ ಸ್ಮಾರ್ಟ್ ಫೋನಿನಿಂದ ನೇರವಾಗಿ ಕಂಪ್ಯೂಟರಿಗೆ ಬ್ಯಾಕ್ ಅಪ್ ಮಾಡಲು ಬಂಪ್ ಎಂಬ ಉಚಿತ ಆಂಡ್ರಾಯ್ಡ್ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡರೆ ಸಾಕು. ಇದರಲ್ಲಿನ ವಿಶೇಷವೇನೆಂದರೆ ಇದೆಲ್ಲವನ್ನೂ ನೀವು ಯಾವುದೇ ವಯರ್ ನ ಸಂಪರ್ಕವಿಲ್ಲದೆ ಕಂಪ್ಯೂಟರ್ ಗೆ ವರ್ಗಾವಣೆ ಮಾಡಬಹುದು (ನಿಸ್ತಂತು). ಇದಷ್ಟೇ ಅಲ್ಲದೆ ಮತ್ತೊಂದು ಆಂಡ್ರಾಯ್ಡ್ ಫೋನಿಗೆ ನಿಮ್ಮ ಫೋಟೋ, ಕಾಂಟ್ಯಾಕ್ಟ್ ಗಳನ್ನ ವರ್ಗ ಮಾಡಲು ಹಾಗು ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಳ್ಳಲು ಇದನ್ನು ಉಪಯೋಗಿಸಬಹುದು.
ನೀವು ಮಾಡಬೇಕಾಗಿರುವುದು ಇಷ್ಟೇ. ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡ ನಂತರ ನಿಮ್ಮ ಕಂಪ್ಯೂಟರಿನಲ್ಲಿ http://bu.mp ಟೈಪ್ ಮಾಡಿ, ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಈ ಆಪ್ ಅನ್ನು ಓಪನ್ ಮಾಡಿದರೆ ಸಾಕು, ಫೋಟೋಗಳು ವರ್ಗಾವಣೆ ಆಗುತ್ತದೆ.
ಸದ್ಯಕ್ಕೆ ಸಫಾರಿ, ಗೂಗಲ್ ಕ್ರೋಮ್ ಹಾಗು ಫೈರ್ ಫಾಕ್ಸ್ ಬ್ರೌಸರುಗಳಲ್ಲಿ ಇದು ಕೆಲಸ ಮಾಡುತ್ತದೆ. ಇದನ್ನು ನೀವು ಗೂಗಲ್ ಪ್ಲೇ ಅಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.


Click it and Unblock the Notifications








