ಎಂಟು ವಿಧಾನಗಳಲ್ಲಿ ನಿಮ್ಮ ಮೊಬೈಲ್‌ನಿಂದ ಹಣ ಉಳಿಸಿ

Written By:

ಏನು ಮೊಬೈಲ್ ಹಣ ಉಳಿಸುತ್ತದೆಯೇ? ಹೌದು ಈ ಲೇಖನವನ್ನು ಓದಿದ ನಂತರ ನಿಮಗೆ ಇದರ ಅರಿವು ಖಂಡಿತ ಉಂಟಾಗುತ್ತದೆ. ನಿಮ್ಮ ಕೈಯಲ್ಲಿ ಸ್ಮಾರ್ಟ್‌ ಫೋನ್ ಇದೆ ಅಂದರೆ ನಿಮ್ಮ ಪರ್ಸ್‌ನಲ್ಲಿರುವ ಹಣ ನಿಮ್ಮದಾಗುತ್ತದೆ.

ನೀವು ಶಾಪಿಂಗ್‌ಗೆ ಹೋಗುತ್ತೀರಿ ಎಂದಾದಲ್ಲಿ ನಿಮ್ಮ ಕೈಯಲ್ಲಿರುವ ಮೊಬೈಲ್ ನೀವು ಖರೀದಿ ಮಾಡುವ ಉತ್ಪನ್ನದ ಬಗೆಗೆ ನಿಖರವಾದ ಮಾಹಿತಿಯನ್ನು ನೀಡುತ್ತದೆ. ಅದರ ಬೆಲೆ, ಬೇರೆ ಮಾರುಕಟ್ಟೆಯಲ್ಲಿ ಅದಕ್ಕಿರುವ ದರ ಹೀಗೆ ಪ್ರತಿಯೊಂದು ಮಾಹಿತಿಯನ್ನು ನಿಮಗೆ ನೀಡುತ್ತದೆ.

ಹಾಗಿದ್ದರೆ ನಿಮ್ಮ ಫೋನ್ ನಿಮಗೆ ತಿಳಿಸಿಕೊಡುವ ಮಾಹಿತಿ ಯಾವುದು ಮತ್ತು ಅದು ನಿಮಗೆ ಹೇಗೆ ಸಹಕಾರಿ ಎಂಬುದನ್ನು ಮುಂದೆ ತಿಳಿದುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ ಹೋಲಿಕೆ

ಬೆಲೆ ಹೋಲಿಕೆ

#1

ನೀವು ಬೆಲೆಯನ್ನು ತಿಳಿದುಕೊಳ್ಳಲು ಹೆಚ್ಚಿನ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬೇಕಾದ ಅಗತ್ಯವಿಲ್ಲ ನಿಮ್ಮ ಹಸ್ತದಲ್ಲೇ ಬೆಲೆಗಳ ಕುರಿತ ಹೋಲಿಕೆಯನ್ನು ನಿಮಗೆ ಮಾಡಬಹುದು. ನಿಮ್ಮ ಮೊಬೈಲ್‌ನಲ್ಲಿರುವ ಅಂತರ್ಜಾಲಕ್ಕೆ ಹೋಗಿ ಮತ್ತು ವಿವಿಧ ಸೈಟ್‌ಗಳನ್ನು ತೆರೆಯಿರಿ ಮತ್ತು ಅವುಗಳು ಕೂಡಲೇ ಬೆಲೆ ಹೋಲಿಕೆಯನ್ನು ನಿಮಗೆ ತಿಳಿಸುತ್ತದೆ.
ಉದಾ: ಅಮೆಝಾನ್ ಮೊಬೈಲ್ ಮೊಬೈಲ್ ವಸ್ತುವಿನ ಬಾರ್ ಕೋಡ್ ಅನ್ನು ಸ್ಕ್ಯಾನ್ ಮಾಡುತ್ತದೆ ಹಾಗೂ ಅಮೆಝಾನ್. ಕಾಮ್‌ ನಲ್ಲಿ ಆ ವಸ್ತುವಿಗೆ ನಿಗದಿ ಮಾಡಿರುವ ಬೆಲೆಯನ್ನು ತೋರಿಸುತ್ತದೆ.

ಬೆಲೆ ಹೊಂದಿಸುವಿಕೆ

ಬೆಲೆ ಹೊಂದಿಸುವಿಕೆ

#2

ರೀಟೈಲ್ ವೆಬ್‌ಸೈಟ್‌ಗಳಿಗೆ ಹೋಗಿ ಮತ್ತು ನೀವು ಖರೀದಿಸಹೊರಟ ವಸ್ತುವಿನ ಬೆಲೆಯನ್ನು ಅಲ್ಲಿಗೆ ಹೊಂದಿಸಿ. ಈ ವೆಬ್‌ಸೈಟ್‌ಗಳನ್ನು ನಿಮ್ಮ ಫೋನ್‌ನಲ್ಲಿ ನೀವು ಇರಿಸಿಕೊಳ್ಳುವುದು ನಿಮ್ಮ ಖರೀದಿಗೆ ಸಹಾಯ ಮಾಡುತ್ತದೆ. Amazon.com, Walmart.com, BestBuy.com ಮತ್ತು ToysRUs.com ಹೀಗೆ ವಿವಿಧ ವೆಬ್‌ಸೈಟ್‌ಗಳು ನಿಮ್ಮ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನಿಮಗೆ ದೊರೆಯುವುದು ಖಂಡಿತ.

ಕೂಪನ್ ಬೇಟೆ

ಕೂಪನ್ ಬೇಟೆ

#3

ನಿಮ್ಮ ಸ್ಮಾರ್ಟ್‌ಫೋನ್ ನಿಮ್ಮ ಕೂಪನ್ ಬೇಟೆಗೆ ಸಹಕಾರಿಯಾಗಿದೆ. RetailMeNot ಒಂದು ಕೂಪನ್ ಆಧಾರಿತ ಅಪ್ಲಿಕೇಶನ್‌ ಆಗಿದ್ದು ಕೂಪನ್‌ಗಳನ್ನು ಖರೀದಿಸಲು ಮತ್ತು ಕೂಪನ್ ಕೋಡ್‌ಗಳನ್ನು ಹೊಂದಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಅಪ್ಲಿಕೇಶನ್ ಒದಗಿಸುವ ಮೊಬೈಲ್ ಕೂಪನ್ ಅನ್ನು ಬಳಸಲು ರಿಜಿಸ್ಟರ್‌ನಲ್ಲಿ ಕೂಪನ್ ಅನ್ನು ಸುಮ್ಮನೆ ಫ್ಲ್ಯಾಶ್ ಮಾಡಿ.

ಸಂಘಟಿತರಾಗಿರಿ

ಸಂಘಟಿತರಾಗಿರಿ

#4

ಯಾವಾಗಲೂ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಸಂಘಟಿತರಾಗುವುದು ಮುಖ್ಯವಾಗಿರುತ್ತದೆ. ಎಲ್ಲಾ ವೆಬ್‌ಸೈಟ್‌ಗಳು ರೀಟೈಲ್ ತಾಣಗಳು ನೀಡುವ ಮಾಹಿತಿಯ ಬಗ್ಗೆ ಕಣ್ಣಾಡಿಸುತ್ತಿರಿ. ನಿಮಗೆ ಮಾಹಿತಿ ನೀಡುವ ಎಲ್ಲಾ ಅಪ್ಲಿಕೇಶನ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲೇ ಲಭ್ಯವಿದ್ದು ನೀವು ಬೇರೆಯವರನ್ನು ಹೊಂದಿರಬೇಕಾಗಿಲ್ಲ.

ಕೊಡುಗೆಗಳನ್ನು ಪಡೆಯುವುದು

ಕೊಡುಗೆಗಳನ್ನು ಪಡೆಯುವುದು

#5

ಕೆಲವೊಂದು ಅಪ್ಲಿಕೇಶನ್‌ಗಳು ನಿಮಗೆ ಶಾಪಿಂಗ್ ಮಾಡಿದ್ದಕ್ಕಾಗಿ ಕೊಡುಗೆಗಳನ್ನು ನೀಡುತ್ತದೆ. ಬಳಕೆದಾರರಿಗೆ ಸಹಾಯಕವಾಗಿರುವ ಒಂದು ಅಪ್ಲಿಕೇಶನ್ Shopkick ನಲ್ಲಿ ಗ್ರಾಹಕರು ಕೊಡುಗೆಗಳನ್ನು ಗೆಲ್ಲಬಹುದಾಗಿದೆ.

ಬೆಲೆಗಳ ಲೆಕ್ಕಾಚಾರ

ಬೆಲೆಗಳ ಲೆಕ್ಕಾಚಾರ

#6

ಬೆಲೆಗಳ ಲೆಕ್ಕಾಚಾರವನ್ನು ಯೋಚಿಸಿ ಯೋಚಿಸಿ ಕಂಗೆಟ್ಟಿರುವಿರಾ? ಹಾಗಿದ್ದರೆ ನಿಮಗೆ Apples2Oranges ಅಪ್ಲಿಕೇಶನ್ ಈ ಸಮಸ್ಯೆ ನಿವಾರಿಸುವಲ್ಲಿ ಸಹಕಾರಿಯಾಗಿದೆ. ಇದು ಸರಳ ಹಾಗೂ ತ್ವರಿತವಾಗಿ ಬೆಲೆಗಳ ಲೆಕ್ಕಾಚಾರವನ್ನು ನಿಮಗೆ ತಿಳಿಸುತ್ತದೆ.

ಉತ್ಪನ್ನ ಮತ್ತು ಕಂಪೆನಿಗಳನ್ನು ಪರಿಶೋಧಿಸುವುದು

ಉತ್ಪನ್ನ ಮತ್ತು ಕಂಪೆನಿಗಳನ್ನು ಪರಿಶೋಧಿಸುವುದು

#7

ನೀವು ಖರೀದಿಗೆ ಹೋಗುವ ಮುನ್ನ ಆ ಕಂಪೆನಿ ಮತ್ತು ಅದರ ಉತ್ಪನ್ನಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಅಗತ್ಯವಾಗಿರುತ್ತದೆ. Buycott ಅಪ್ಲಿಕೇಶನ್ ನಿಮ್ಮ ಉತ್ಪನ್ನದ ಬಗ್ಗೆ ಮಾಹಿತಿಯನ್ನು ನಿಮಗೆ ನೀಡುತ್ತದೆ ಹಾಗೂ ಆ ಉತ್ಪನ್ನ ತಯಾರಿಕಾ ಕಂಪೆನಿಯ ಬಗೆಗೂ ನಿಮಗೆ ಅರಿವನ್ನು ನೀಡುತ್ತದೆ

ಉತ್ಪನ್ನಗಳಿಗೆ ಪಾವತಿಸುವುದು

ಉತ್ಪನ್ನಗಳಿಗೆ ಪಾವತಿಸುವುದು

#8

ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಉತ್ಪನ್ನಕ್ಕೆ ಪಾವತಿಸುವ ನರವನ್ನೂ ಕೆಲವೊಂದು ರೀಟೈಲ್ ಶಾಪ್‌ಗಳು ಮಾಡುತ್ತವೆ. Square Wallet ನಂತಹ ಅಪ್ಲಿಕೇಶನ್‌ಗಳು ನಿಮ್ಮ ಬ್ಯಾಂಕ್ ಹಾಗೂ ಡೆಬಿಟ್ ಕಾರ್ಡ್ ಮಾಹಿತಿಯನ್ನು ಸಂಗ್ರಹಿಸುತ್ತದೆ. ಇದರಿಂದ ಮಳಿಗೆಗಳಿಗೆ ಪಾವತಿಯನ್ನು ನಿಮ್ಮ ಫೋನ್ ಮೂಲಕವೇ ನಿಮಗೆ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot