ಹೆಚ್‌ಟಿಸಿ 8X vs ನೋಕಿಯಾ ಲೂಮಿಯಾ 920

Posted By: Staff
ಹೆಚ್‌ಟಿಸಿ 8X vs ನೋಕಿಯಾ ಲೂಮಿಯಾ 920
ನ್ಯೂಯಾರ್ಕ್‌ನಲ್ಲಿ ಬುಧವಾರ ನಡೆದ ಸಮಾರಂಭವೊಂದರಲ್ಲಿ HTC ತನ್ನಯ ನೂತನ ವಿಂಡೋಸ್‌ ಫೋನ್‌ 8 ಮಾದರಿಯ ಫೋನ್‌ಗಳಾದ 8X ಹಾಗೂ 8S ಫೋನ್‌ಗಳನ್ನು ಮೈಕ್ರೋಸಾಪ್ಟ್‌ನ ನೆಕ್ಸ್ಟ್‌-ಜೆನ್‌ ವಿಂಡೋಸ್‌ ಫೋನ್‌ 8 ಆಪರೇಟಿಂಗ್‌ ಸಿಸ್ಟಂನ ಅಧಿಕ್ರತ ಬಿಡುಗಡೆಯ ಬಳಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಮಾರುಕಟ್ಟೆಗೆ ಈಗಾಗಲೇ ಪಾದಾರ್ಪಣೆ ಮಾಡಿರುವ ನೋಕಿಯಾದ ಲೂಮಿಯಾ ಸರಣಿಯ ವಿಂಡೋಸ್‌ ಫೋನ್‌ಗಳಾದ 920 ಹಾಗೂ 820 ಯ ಫೀಚರ್ಸ್‌ ಗಳಿಗೆ ಸಾಕಷ್ಟು ಸಮನಾಗಿರುವ HTC ಫೋನ್‌ಗಳು ಪ್ರಬಲ ಪೈಪೋಟಿ ನೀಡಲಿದೆ. ಅಂದಹಾಗೆ ಈ ಫೋನ್‌ಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲ ನಿಮಗಿದೆಯೇ ಹಾಗಿದ್ದಲ್ಲಿ ಗಿಜ್ಬಾಟ್‌ ನಿಮಗಾಗಿ HTC 8X ಹಾಗೂ ನೋಕಿಯಾ ಲೂಮಿಯಾ 920 ವಿಂಡೋಸ್‌ ಫೋನ್‌ 8 ಗಳ ನಡುವಿನ ಹೋಲಿಕೆಯನ್ನು ಇಲ್ಲಿ ತಂದಿದೆ.

 

ವಿನ್ಯಾಸ: HTC 8X, 132.35 x 66.2 x 10.12 mm, ಸುತ್ತಳತೆಯೊಂದಿಗೆ 130 ಗ್ರಾಂ ತೂಕವಿದೆ ಹಾಗೂನೋಕಿಯಾ ಲೂಮಿಯಾ 920, 130.3 x 70.8 x 10.7 mm ಸತ್ತಳತೆಯೊಂದಿಗೆ 185 ಗ್ರಾಂ ತೂಕವಿದೆ. ಒಟ್ಟಾರೆ ಲೂಮಿಯಾ 920 ಗೆ ಹೋಲಿಸಿದರೆ 8X ಕೊಂಚ ಹಗುರ ಹಾಗೂ ತೆಳಗಿದೆ.

ದರ್ಶಕ : HTC 8X ನಲ್ಲಿ 4.3 ಇಂಚಿನ ಸೂಪರ್‌ LCD 2 HD ಸಾಮರ್ತ್ಯದ ಟಚ್‌ಸ್ಕ್ರೀನ್‌ ದರ್ಶಕ, 1280 x 720 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದೆ. ಹಾಗೂ ಲೂಮಿಯಾ 920 ಯಲ್ಲಿ 4.5 ಇಂಚಿನ ಪ್ಯೂರ್‌ ಮೋಷನ್‌ HD+ IPS LCD ಟಚ್‌ಸ್ಕ್ರೀನ್‌ ದರ್ಶಕ ಹೊಂದಿದ್ದು 1280 x 768 ಪಿಕ್ಸೆಲ್‌ ರೆಸೆಲ್ಯೂಷನ್‌ ಇದ್ದು ಎರಡೂ ಫೋನ್‌ಗಳು ಗೊರಿಲ್ಲಾ ಗ್ಲಾಸ್‌ ರಕ್ಷಣೆ ಪಡೆದಿದೆ.

ಆಪರೇಟಿಂಗ್‌ ಸಿಸ್ಟಂ: ಎರಡೂ ಫೊನ್‌ಗಳು ವಿಂಡೋಸ್‌ ಫೋನ್‌ 8 ಆಪರೇಟಿಂಗ್‌ ಸಿಸ್ಟಂ ಚಾಲಿತ ವಾಗಿದೆ.

ಪ್ರೊಸೆಸರ್‌: ಈ ವಿಭಾಗದಲ್ಲಿಯೂ ಕೂಡ ಎರಡೂ ಫೊನ್‌ಗಳು ಡ್ಯುಯೆಲ್‌ ಕೋರ್‌ 1.5GHz ಕ್ವಾಲ್ಕಾಂ ಸ್ನಾಪ್‌ಡ್ರಾಗನ್‌ S4 ಪ್ರೊಸೆಸರ್‌ ಹೊಂದಿವೆ.

ಕ್ಯಾಮೆರಾ: 8X ನಲ್ಲಿ ಆಟೋ ಫೋಕಸ್‌ ಹೊಂದಿರುವ 8MP ಕ್ಯಾಮೆರಾ ಹಾಗೂ 2.1MP ಮುಂಬದಿಯ ಕ್ಯಾಮೆರಾ ಇದ್ದರೆ ಮತ್ತೊಂದೆಡೆ ಲೂಮಿಯಾ 920 ಯಲ್ಲಿ 8.7MP ನ ಹಿಂಬದಿಯ ಕ್ಯಾಮೆರಾ ಹಾಗೂ 1.2MP ಮುಂಬದಿಯ ಕ್ಯಾಮೆರಾ ಇದೆ.

ಸ್ಟೋರೇಜ್‌: 8X ನಲ್ಲಿ 16 GB ಆಂತರಿಕ ಮೆಮೊರಿ ಯೊಂದಿಗೆ 512GB RAM ಒಳಗೊಂಡಿದೆ, ಲೂಮಿಯಾ 920 ಯಲ್ಲಿ 32GB ಆಂತರಿ ಮೆಮೊರಿ ಹಾಗೂ 1GB RAM ಹೊಂದಿದೆ.

ಕನೆಕ್ಟಿವಿಟಿ: ಲೂಮಿಯಾ 920 ಯಲ್ಲಿ NFC, ಬ್ಲೂಟೂತ್‌ 3.1, Wi-Fi 802.11 a/b/g/n, Qi ವೈರ್‌ಲೆಸ್‌ ಚಾರ್ಜರ್‌ ಹಾಗೂ Wi-Fi ಚಾನಲ್‌ ಬಾಂಡಿಂಗ್‌ ಹೊಂದಿದೆ. ಹಾಗೂ 8X ನಲ್ಲಿಯೂ ಕೂಡ NFC, ಬ್ಲೂಟೂತ್‌ v2.1+EDR ಹಾಗೂ Wi-Fi 802.11 a/b/g/n ಗಳಂತಹ ಫೀಚರ್ಸ್‌ಗಳಿವೆ.

ಬ್ಯಾಟರಿ: 8X ನಲ್ಲಿ 1,800 mAh Li-Po ಬ್ಯಾಟರಿ ಇದ್ದರೆ ಲೂಮಿಯಾ 920, 2,000 mAh BP-4GW ಸಾಮರ್ತ್ಯದ ದೊಡ್ಡ್ ಬ್ಯಾಟರಿ ಹೊಂದಿದ್ದು 400 ಗಂಟೆಗಳ ಸ್ಟ್ಯಾಂಡ್‌ ಬೈ ಹಾಗೂ 10 ಗಂಟೆಗಳ ಟಾಕ್‌ಟೈಮ್‌ ನೀಡುತ್ತದೆ.

 

Read In English

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot