ಡಿಸೈರ್ 616 ಲಭ್ಯವಿರುವ ಟಾಪ್ ಆನ್‌ಲೈನ್ ತಾಣಗಳು

By Shwetha
|

ಸ್ವಲ್ಪ ವಾರಗಳ ಹಿಂದೆಯಷ್ಟೇ, ತೈವಾನ್ ಸ್ಮಾರ್ಟ್‌ಫೋನ್ ತಯಾರಕ, ಎಚ್‌ಟಿಸಿ ತನ್ನೆರಡು ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಿದ್ದು ಅದರ ಹೆಸರು ಡಿಸೈರ್ 616 ಮತ್ತು ಒನ್E8 ಎಂದಾಗಿದೆ. ಇವುಗಳ ಬೆಲೆ ರೂ 16,900 ಮತ್ತು ರೂ 34,900 ಎಂದು ನಿಗದಿಪಡಿಸಲಾಗಿದೆ.

ಡಿಸೈರ್ 616 ಮಾರುಕಟ್ಟೆಯಲ್ಲಿ ಇದೀಗ ಲಭ್ಯವಿರುವ ಮಧ್ಯಮ ಶ್ರೇಣಿಯ ಫೋನ್‌ಗಳಿಗೆ ಕಠಿಣ ಪೈಪೋಟಿಯನ್ನು ಒಡ್ಡಿದ್ದು ಇತ್ತೀಚೆಗೆ ಲಾಂಚ್ ಆಗಿರುವ ಕ್ಸಯೋಮಿ Mi3 (ಬೆಲೆ ರೂ 13,999) ಯ ಬಿರುಸಿನ ಪ್ರಭಾವವನ್ನು ಎದುರಿಸಬೇಕಾಗಿದೆ. ಕಳೆದ ವರ್ಷದ ಫ್ಲ್ಯಾಗ್‌ಶಿಪ್ ಪ್ರಮಾಣಪತ್ರವನ್ನು ಹೊಂದಿಕೊಂಡು ಈ ಫೋನ್ ಬಂದಿದ್ದು ಭಾರತದಲ್ಲಿ ಲಭ್ಯವಿರುವ ಇತರ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳು ಒದಗಿಸಿರುವ ವೈಶಿಷ್ಟ್ಯಗಳಿಗೆ ಡಿಸೈರ್ 616 ವಿಶೇಷತೆಗಳು ಕಠಿಣ ಸವಾಲನ್ನು ಒಡ್ಡಲಿವೆ.

ಇಂದಿನ ನಮ್ಮ ಗಿಜ್‌ಬಾಟ್ ಲೇಖನವು ಹತ್ತು ಆನ್‌ಲೈನ್ ಒಪ್ಪಂದಗಳೊಂದಿಗೆ ಬಂದಿದ್ದು ಹೊಸದಾಗಿ ಲಾಂಚ್ ಆಗಿರುವ ಡಿಸೈರ್ 616 ಈ ತಾಣಗಳಲ್ಲಿ ಇದೀಗ ಲಭ್ಯವಾಗಲಿದೆ. ಹ್ಯಾಂಡ್‌ಸೆಟ್ ಉಪಲಬ್ಧವಿರುವ ಮಾಹಿತಿಯನ್ನು ಈ ಸೈಟ್‌ನಲ್ಲಿ ನಿಮಗೆ ತಿಳಿದುಕೊಳ್ಳಬಹುದಾಗಿದೆ.

ಎಚ್‌ಟಿಸಿ ಡಿಸೈರ್ 616: ಪ್ರಮುಖ ವೈಶಿಷ್ಟ್ಯಗಳು
ಇದು 5 ಇಂಚಿನ 720 ಪಿಕ್ಸೆಲ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು, 1.4GHz ಓಕ್ಟಾ - ಕೋರ್ ಸಿಪಿಯು (ARM Cortex A7 octa-core architecture) ಜೊತೆಗೆ 1ಜಿಬಿ RAM ಫೋನ್‌ನಲ್ಲಿದೆ. ಇದರಲ್ಲಿ ಆಂಡ್ರಾಯ್ಡ್ ಓಎಸ್ 4.2.2 (ಜೆಲ್ಲಿ ಬೀನ್) ಚಾಲನೆಯಾಗುತ್ತಿದ್ದು HTC ಸೆನ್ಸ್ 5.5 ಲೇಯರ್ ಅನ್ನು ಡಿವೈಸ್‌ನಲ್ಲಿ ನಮಗೆ ಕಾಣಬಹುದಾಗಿದೆ. ಡಿವೈಸ್ 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಒಳಗೊಂಡಿದ್ದು ಮುಂಭಾಗ ಕ್ಯಾಮೆರಾ ಸಾಮರ್ಥ್ಯ 2 ಮೆಗಾಪಿಕ್ಸೆಲ್ ಆಗಿದೆ. ಸಂಪರ್ಕ ವೈಶಿಷ್ಟ್ಯಗಳೆಂದರೆ ಬ್ಲ್ಯೂಟೂತ್ 4.0, ವೈಫೈ b/g/n, GPS, GPRS/ EDGE ಮತ್ತು 3ಜಿಯಾಗಿದೆ. ಫೋನ್‌ನ ಆಂತರಿಕ ಸಂಗ್ರಹಣಾ ಸಾಮರ್ಥ್ಯ 4ಜಿಬಿಯಾಗಿದ್ದು ಇದು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಒಳಗೊಂಡಿದೆ. ಡ್ಯುಯೆಲ್ ಸಿಮ್ ಹ್ಯಾಂಡ್‌ಸೆಟ್ ಆಗಿರುವ ಡಿಸೈರ್ 616 ನ ಬ್ಯಾಟರಿ ಶಕ್ತಿ 2,000mAh ಆಗಿದೆ.

ಕೆಳಗಿನ ಸ್ಲೈಡ್‌ಗಳಲ್ಲಿ ಫೋನ್ ಲಭ್ಯವಿರುವ ಆನ್‌ಲೈನ್ ತಾಣಗಳನ್ನು ಕಾಣಬಹುದು

Best Mobiles in India

English summary
This article tells that Htc desire 616 top 5 best online deals and its specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X