ಉತ್ತಮ ಫೋನ್ ಆಗಿ ಎಚ್‌ಟಿಸಿ ಡಿಸೈರ್ 816 ಡ್ಯುಯೆಲ್ ಸಿಮ್

Posted By:

ಎಚ್‌ಟಿಸಿಯ ಡಿಸೈರ್ ಶ್ರೇಣಿಗಳು ಕೆಲವು ಸಮಯದವರೆಗೆ ಸದ್ದನ್ನು ಉಂಟುಮಾಡಿದ್ದವು ಆದರೆ ಇದು ನಮ್ಮ ಮನಸ್ಸನ್ನು ಅಷ್ಟೊಂದು ಆಕರ್ಷಿಸಿಲ್ಲ. ಎಚ್‌ಟಿಸಿಯ ಇತ್ತೀಚಿನ ಅತ್ಯಾಧುನಿಕ ಹ್ಯಾಂಡ್‌ಸೆಟ್ ತನ್ನ ಡಿಸೈರ್ ಶ್ರೇಣಿಯಲ್ಲೇ ಇದು ಬಿಡುಗಡೆ ಮಾಡುತ್ತಿದ್ದು, ಇದರ ಹೆಸರು ಡಿಸೈರ್ 816 ಎಂದಾಗಿದೆ. ಕೆಲವೊಂದು ಧನಾತ್ಮಕ ಅಂಶಗಳನ್ನು ಮೈಗೂಢಿಸಿಕೊಂಡಿರುವ ಈ ಹ್ಯಾಂಡ್‌ಸೆಟ್ ಮಾರುಕಟ್ಟೆಯಲ್ಲಿ ಮೋಡಿ ಮಾಡುವಂತಿದೆ.

ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ಕಾಂಗ್ರೆಸ್‌ನಲ್ಲಿ ಎಚ್‌ಟಿಸಿ ಡಿಸೈರ್ 816 ಅನ್ನು ಮೂಲತಃ ಉದ್ಘಾಟಿಸಿದೆ. ಈ ಡಿವೈಸ್ ಅನ್ನು ಕಂಪೆನಿಯು ಭಾರತೀಯ ಮಾರುಕಟ್ಟೆಯಲ್ಲಿ ರೂ 23,990 ಕ್ಕೆ ಲಾಂಚ್ ಮಾಡಿದೆ. ಜಿಎಸ್‌ಎಮ್ ಹಾಗೂ 3ಜಿ ಇವೆರಡನ್ನೂ ಜೊತೆಯಾಗಿ ಬೆಂಬಲಿಸುವ ಜಗತ್ತಿನ ಮೊದಲ ಫೋನ್ ಆಗಿದೆ ಎಂದು ತೈವಾನ್ ಮೂಲದ ಕಂಪೆನಿ ಎಚ್‌ಟಿಸಿಯು ಡಿಸೈರ್ 816 ಅನ್ನು ಶ್ಲಾಫಿಸಿದೆ.

ನಿಮ್ಮ ನೋಟವನ್ನು ಸೂರೆಗೊಳ್ಳುವಂತಿರುವ ಎಚ್‌ಟಿಸಿ ಡಿಸೈರ್ 816 ನ ಸವಿವರವಾದ ಮಾಹಿತಿಯನ್ನು ನಾವು ಇಲ್ಲಿ ನೀಡುತ್ತಿದ್ದು ಪ್ರತಿಯೊಂದು ಅಂಶದ ಮೇಲೂ ಇದು ಸ್ಪಷ್ಟವಾದ ಬೆಳಕನ್ನು ಚೆಲ್ಲಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಚ್‌ಟಿಸಿ ಡಿಸೈರ್ 816 ಡ್ಯುಯೆಲ್ ಸಿಮ್

ಎಚ್‌ಟಿಸಿ ಡಿಸೈರ್ 816 ಡ್ಯುಯೆಲ್ ಸಿಮ್

#1

ರಚನಾ ಗುಣಮಟ್ಟ
ಇದರ ಅತ್ಯಾಕರ್ಷಕ ವಿನ್ಯಾಸ ಮತ್ತು ಹ್ಯಾಂಡ್‌ಸಮ್ ನೋಟಕ್ಕಾಗಿ ಎಚ್‌ಟಿಸಿ ಡಿಸೈರ್ 816 ಅನ್ನು ಎಷ್ಟು ಹೊಗಳಿದರೂ ಸಾಲದು. ಇದನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್‌ನಿಂದ ತಯಾರಿಸಲಾಗಿದ್ದು ಇದು ಗಟ್ಟಿಯಾಗಿದೆ. ಆಪಲ್ ಐಫೋನ್ 5c ಯೊಂದಿಗೆ ಇದನ್ನು ಹೋಲಿಸಿದಾಗ ಡಿಸೈರ್ 816 ಅದೇ ರೀತಿಯ ಹೋಲಿಕೆಯನ್ನು ಹೊಂದಿದೆ. ಇದು ವೃತ್ತಾಕಾರದ ಮೂಲೆಗಳನ್ನು ಹೊಂದಿದ್ದು ಸರಾಸರಿ ಫ್ಯಾಬ್ಲೆಟ್‌ಗಿಂತ ಉದ್ದವಾಗಿದೆ. ಎಡ ಬದಿಯಲ್ಲಿ ಇದು ಪವರ್ ಲಾಕ್ ಬಟನ್ ಅನ್ನು ಹೊಂದಿದ್ದು ವ್ಯಾಲ್ಯೂಮ್ ಕೀಯನ್ನು ಒಳಗೊಂಡಿದೆ. ನ್ಯಾನೋ ಸಿಮ್ ಮತ್ತು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಇಲ್ಲಿ ಅಳವಡಿಸಬಹುದಾಗಿದೆ. ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾವನ್ನು ನೀವು ನೋಡಬಹುದಾಗಿದೆ ಮತ್ತು ಇದರೊಂದಿಗೆ ಎಲ್‌ಇಡಿ ಫ್ಲ್ಯಾಶ್ ಕೂಡ ಇದೆ.

ಎಚ್‌ಟಿಸಿ ಡಿಸೈರ್ 816 ಡ್ಯುಯೆಲ್ ಸಿಮ್ ಡ್ಯುಯೆಲ್ ಸಿಮ್ ಡಿಸ್‌ಪ್ಲೇ

ಎಚ್‌ಟಿಸಿ ಡಿಸೈರ್ 816 ಡ್ಯುಯೆಲ್ ಸಿಮ್ ಡ್ಯುಯೆಲ್ ಸಿಮ್ ಡಿಸ್‌ಪ್ಲೇ

#2

ಇದು 5.5 ಇಂಚಿನ ಸೂಪರ್ ಎಲ್‌ಸಿಡಿ 2 ಡಿಸ್‌ಪ್ಲೇಯೊಂದಿಗೆ ಬಂದಿದ್ದು ರೆಸಲ್ಯೂಶನ್ 720 ಪಿ ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದರ ಸ್ಕ್ರೀನ್ ಬ್ರೈಟ್ ಮತ್ತು ಕ್ಲಿಯರ್ ಆಗಿದೆ. ಇದರ ವೀಕ್ಷಣಾ ಮೂಲೆಗಳು ಸುಂದರವಾಗಿದ್ದು ಬಣ್ಣ ಆಕರ್ಷಕವಾಗಿದೆ.

ಎಚ್‌ಟಿಸಿ ಡಿಸೈರ್ 816 ಡ್ಯುಯೆಲ್ ಸಿಮ್

ಎಚ್‌ಟಿಸಿ ಡಿಸೈರ್ 816 ಡ್ಯುಯೆಲ್ ಸಿಮ್

#3

ಕ್ಯಾಮೆರಾ
ಇದು ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾವನ್ನು ಹೊಂದಿದ್ದು ಸಿಂಗಲ್ ಎಲ್‌ಇಡಿ ಫ್ಲ್ಯಾಶ್ ಅನ್ನು ಒಳಗೊಂಡಿದೆ. ಇದರ ಮುಂಭಾಗ ಕ್ಯಾಮೆರಾ ಸಾಮರ್ಥ್ಯ 5 ಮೆಗಾಪಿಕ್ಸೆಲ್ ಆಗಿದೆ.

ಎಚ್‌ಟಿಸಿ ಡಿಸೈರ್ 816 ಡ್ಯುಯೆಲ್ ಸಿಮ್

#4

ವೀಡಿಯೋ ನೋಟ
ಎಚ್‌ಟಿಸಿ ಡಿಸೈರ್ 816 ಡ್ಯುಯೆಲ್ ಸಿಮ್ ಕುರಿತ ಸುಂದರ ವೀಡಿಯೋವನ್ನು ನಾವಿಲ್ಲಿ ನೀಡಿದ್ದು ಇದರ ವೈಶಿಷ್ಟ್ಯಗಳು, ಫೀಚರ್‌ಗಳು ಹೀಗೆ ಪ್ರತಿಯೊಂದರ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells that HTC desire 816 smartphone review and its specifications.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot