ಎಚ್‌ಟಿಸಿ ಡಿಸೈರ್ ಐ ಭಾರತದಲ್ಲಿ ರೂ 35,9990 ಕ್ಕೆ

By Shwetha
|

ಎಚ್‌ಟಿಸಿ ಡಿಸೈರ್ ಐ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದು ರೂ 35,990 ಕ್ಕೆ ದೊರೆಯುತ್ತಿದೆ ಎಂದು ಕಂಪೆನಿ ಘೋಷಿಸಿದೆ. ಎಚ್‌ಟಿಸಿ ಡಿಸೈರ್ ಐ ಭಾರತವನ್ನು ಈಗಾಗಲೇ ಪ್ರವೇಶಿಸಿದ್ದು ಬೆಲೆಯನ್ನು ಪ್ರಸ್ತುತಪಡಿಸಿರಲಿಲ್ಲ. ಅಮೆಜಾನ್ ಇಂಡಿಯಾದಲ್ಲಿ ಈ ಡಿವೈಸ್ ಇದೀಗ ಲಭ್ಯವಾಗುತ್ತಿದ್ದು ವೆಬ್‌ಸೈಟ್ ತನ್ನ ತಾಣಗಳಲ್ಲಿ "ಶೀಘ್ರ ಬರಲಿದೆ" ಎಂಬ ಹಣೆಪಟ್ಟಿಯ ಮೂಲಕ ಜಾಹೀರಾತನ್ನು ನೀಡುತ್ತಿದೆ.

ಫೋನ್‌ನಲ್ಲಿ ಹೆಚ್ಚು ಗಮನ ಸೆಳೆಯುವ ಅಂಶವೆಂದರೆ ಅದರ ಕ್ಯಾಮೆರಾ ಆಗಿದೆ. ರಿಯರ್ ಕ್ಯಾಮೆರಾದಂತೆ ಅದರ ಮುಂಭಾಗ ಕ್ಯಾಮೆರಾದ ಗುಣಮಟ್ಟವೂ ಒಂದೇ ರೀತಿಯದಾಗಿದೆ. ಈ ಎರಡೂ ಕ್ಯಾಮೆರಾಗಳು 13 ಮೆಗಾಪಿಕ್ಸೆಲ್‌ಗಳಾಗಿವೆ. ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಅನ್ನು ಎರಡೂ ಕ್ಯಾಮೆರಾಗಳು ಪಡೆದುಕೊಂಡಿವೆ.

ಸೆಲ್ಫೀಗೆ ಸೂಕ್ತ ಎಚ್‌ಟಿಸಿಯ ಡಿಸೈರ್ ಐ

ಇನ್ನು ಈ ಎರಡೂ ಕ್ಯಾಮೆರಾಗಳನ್ನು ಬಳಸಿಕೊಂಡು 080p@30fps ವೀಡಿಯೊಗಳನ್ನು ಶೂಟ್ ಮಾಡಬಹುದು. ರಿಯರ್ ಕ್ಯಾಮೆರಾ f/2.0 ಅಪಾರ್ಚರ್ ಅನ್ನು ಪಡೆದುಕೊಂಡಿದ್ದರೆ ಮುಂಭಾಗ ಕ್ಯಾಮೆರಾ f/2.2 ಅಪಾರ್ಚರ್ ಅನ್ನು ಹೊಂದಿದೆ.

ಇನ್ನು ಕ್ಯಾಮೆರಾದ ಇತರ ವಿಶೇಷತೆಗಳತ್ತ ಗಮನ ಹರಿಸುವುದಾದರೆ ಸ್ಪಿಲ್ಟ್ ಕ್ಯಾಪ್ಚರ್, ಕ್ರಾಪ್ ಮಿ ಇನ್ ಮುಂತಾದ ವಿಶೇಷತೆಗಳನ್ನು ಹೊಂದಿದೆ. ಮುಂಭಾಗ ಮತ್ತು ರಿಯರ್ ನಡುವೆ 50/50 ಚಿತ್ರವನ್ನು ವಿಭಾಗಿಸುವ ಸಾಮರ್ಥ್ಯವನ್ನು ಸ್ಪಿಲ್ಟ್ ಕ್ಯಾಪ್ಚರ್ ಪಡೆದುಕೊಂಡಿದ್ದರೆ ಕ್ರಾಪ್ ಮಿ ಇನ್ ಯೂಸರ್ ಇಮೇಜ್ ಹಾಗೂ ಚಿತ್ರವನ್ನು ಇನ್ನಷ್ಟು ಆಕರ್ಷಕವನ್ನಾಗಿಸುವ ಕಾರ್ಯವನ್ನು ಮಾಡುತ್ತದೆ.

ಫೋನ್ 5.2 ಇಂಚಿನ ಪೂರ್ಣ ಎಚ್‌ಡಿ ಎಲ್‌ಸಿಡಿ ಡಿಸ್‌ಪ್ಲೇಯನ್ನು ಪಡೆದುಕೊಂಡು, ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್; 2ಜಿಬಿ RAM ಅನ್ನು ಫೋನ್ ಪಡೆದುಕೊಂಡಿದೆ. ಫೋನ್‌ನ ಆಂತರಿಕ ಸಂಗ್ರಹ 16ಜಿಬಿಯಾಗಿದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿ 128ಜಿಬಿಗೆ ವಿಸ್ತರಿಸಬಹುದು. ಇದರ ಬ್ಯಾಟರಿ ಸಾಮರ್ಥ್ಯ 2400mAh ಆಗಿದೆ. ಫೋನ್‌ನ ಸ್ಟಿರಿಯೊ ಸ್ಪೀಕರ್ಸ್ ಎಚ್‌ಟಿಸಿ ಬೂಮ್ ಸೌಂಡ್ ತಂತ್ರಜ್ಞಾನದಲ್ಲಿದ್ದರೆ ಹ್ಯಾಂಡ್‌ಸೆಟ್‌ನ ಸಾಮರ್ಥ್ಯವನ್ನು ಇದು ಪ್ರತಿನಿಧಿಸುತ್ತದೆ.

Best Mobiles in India

English summary
This article tells about The HTC Desire Eye pricing for India has been tipped at Rs. 35,990 on Wednesday by a Mumbai-based retailer, who also claimed the smartphone is now available, ahead of an official announcement by the company.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X