Subscribe to Gizbot

19,799 ರೂ.ದರದಲ್ಲಿ ಹೆಚ್‌ಟಿಸಿ ಡಿಸೈರ್‌X ಬಿಡುಗಡೆ

Posted By: Vijeth

19,799 ರೂ.ದರದಲ್ಲಿ ಹೆಚ್‌ಟಿಸಿ ಡಿಸೈರ್‌X ಬಿಡುಗಡೆ

ಮಿಡ್‌ ರೇಂಜ್‌ ಸ್ಮಾರ್ಟ್‌ಪೋನ್‌ ವಲಯದಲ್ಲಿ ಮೈಕ್ರೋಮ್ಯಾಕ್ಸ್‌ ಹಾಗೂ ಸ್ಯಾಮ್ಸಂಗ್‌ ಸಂಸ್ಥೆಗಳು ಹೊರತರುವ ಸ್ಮಾರ್ಟ್‌ಫೋನ್‌ಗಳು ಪರಸ್ಪರ ಹೆಚ್ಚು ಪೈಪೋಟಿಯನ್ನು ಎದುರಿಸುತ್ತವೆ. ಅಂದಹಾಗೆ ಈ ಮಿಡ್‌ ರೇಂಜ್‌ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು ಕೇವಲ ಈ ಎರಡು ಸಂಸ್ಥೆಗಳು ಮಾತ್ರ ಪ್ರಯತ್ನದಲ್ಲಿವೆಯೆ? ಇಲ್ಲಾ ವಿಭಾಗದಲ್ಲಿ ತನ್ನಯ ಪಾಲನ್ನೂ ಪಡೆಯುವ ಸಲುವಾಗಿ ಹೆಚ್‌ಟಿಸಿ ಕೂಡ ಪ್ರಯತ್ನಿಸುತ್ತಿದ್ದು ನಿನ್ನೆಯಷ್ಟೇ ತನ್ನಯ ನೂತನ ಆಂಡ್ರಾಯ್ಡ್‌ ಚಾಲಿತ ಸ್ಮಾರ್ಟ್‌ಫೋನ್‌ ಆದಂತಹ ಹೆಚ್‌ಟಿಸಿ ಡಿಸೈರ್‌ ಎಕ್ಸ್‌ ಬಿಡುಗಡೆ ಮಾಡಿದೆ.

ಥೈವಾನ್‌ ಮೂಲದ ಸ್ಮಾರ್ಟ್‌ಫೋನ್‌ ಯಾರಿಕಾ ಸಂಸ್ಥೆಯಾದ ಹೆಚ್‌ಟಿಸಿ ನಿರಂತರವಾಗಿ ಒಂದಕ್ಕಿಂತಲೂ ಒಂದು ಉತ್ತಮವಾದಂತಹ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳನ್ನು ಮಾರಿಕಣ್ಣುಗೆ ಪರಿಚಯಿಸುತ್ತಾ ಬಂದಿದೆ. ಇದರಿಂದಾಗಿ ಭಾರತದಲ್ಲಿನ ಇತರೇ ಮೊಬೈಲ್‌ ತಯಾರಿಕಾ ಸಂಸ್ಥೆಗಳು ತೀವ್ರ ಪೈಪೋಟಿ ಎದುರಿಸುವಂತಾಗಿದೆ. ಅಂದಹಾಗೆ ಸಂಸ್ಥೆಯು ತನ್ನಯ ನೂತ ಮಿಡ್‌ ರೇಂಜ್‌ ಸ್ಮಾರ್ಟ್‌ಫೋನ್‌ ಆದಂತಹ ಹೆಚ್‌ಟಿಸಿ ಡಿಸೈರ್‌ ಎಕ್ಸ್‌ ಅನ್ನು ರೂ.19,799 ದರದಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಹಾಗಿದ್ದಲ್ಲಿ ಬನ್ನಿ ನೂತನ ಹೆಚ್‌ಟಿಸಿ ಡಿಸೈರ್‌ ಎಕ್ಸ್‌ನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದನ್ನು ತಿಳಿದುಕೊಳ್ಳೋಣ.

ವಿಶೇಷತೆ

ಹೆಚ್‌ಟಿಸಿ ಡಿಸೈರ್‌ X ನಲ್ಲಿ 4 ಇಂಚಿನ S-LCD ಟಚ್‌ಸ್ಕ್ರೀನ್ ದರ್ಶಕ ಹಾಗೂ 480 x 800 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದೆ. ಹಾಗೂ ಡ್ಯುಯೆಲ್‌-ಕೋರ್‌ 1GHz ಕ್ವಾಲ್‌ಕಾಮ್‌ S4 ಪ್ರೊಸೆಸರ್‌, 5MP ಕ್ಯಾಮೆರಾ, 768MB RAM, 4GB ಆಂತರಿಕ ಮೆಮೊರಿ, 2 ವರ್ಷಗಳವರೆಗೆ 25 GB ಯ ಡ್ರಾಪ್‌ಬಾಕ್ಸ್‌ ಕ್ಲೌಡ್‌ ಸ್ಟೋರೇಜ್‌ ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್‌ಸ್ಲಾಟ್‌ ಮೂಲಕಮೆಮೊರಿ ವಿಸ್ತರಿಸಿಕೊಳ್ಳಬಹದಾಗಿದೆ.

ಇದಲ್ಲದೆ ಆಂಡ್ರಾಯ್ಡ್‌ 4.0 ಐಸಿಎಸ್‌ ಆಪರೇಟಿಂಗ್‌ ಸಿಸ್ಟಂ ಹೊಂದಿದ್ದು ಇಂಟಿಗ್ರೇಟೆಡ್‌ ಬೀಟ್‌ ಆಡಿಯೋ ಕೂಡ ಹೊಂದಿದೆ. ಹಾಗೂ 3G, WiFi 802.11 b/g/n, DLNA, ಬ್ಲೂಟೂತ್‌ 4.0 ಜೊತೆಗೆ A2Dp ಹಾಗೂ aptX ಆಡಿಯೋ ಸೇರಿದಂತೆ GPS ನಂತಹ ಕನೆಕ್ಟಿವಿಟಿ ಫೀಚರ್ಸ್‌ಗಳನ್ನು ಹೊಂದಿದ್ದು. 1,650 mAh Li-ion ಬ್ಯಾಟರಿಯೊಂದಿಗೆ 10 ಗಂಟೆಗಳ ಟಾಕ್‌ಟೈಮ್‌ ನೀಡುವುದರ ಜೊತೆಗೆ 750 ಗಂಟೆಗಳ ಸ್ಟ್ಯಾಂಡ್‌ ಬೈ ನೀಡುತ್ತದೆ.

ಬೆಲೆ

ಹೆಚ್‌ಟಿಸಿ ಡಿಸೈರ್‌ X ರೂ.19,799 ರೂ ದರದಲ್ಲಿ ಲಭ್ಯವಿದ್ದು ಆನ್‌ಲೈನ್‌ ಶಾಪಿಂಗ್‌ ಸೈಟ್ಸ್‌ಗಳ ಮೂಲಕ ಖರೀದಿಸ ಬಹುದಾಗಿದೆ.

Read In English...

HTC ಯ ಟಾಪ್‌ 5 ಐಸಿಎಸ್‌ ಸ್ಮಾರ್ಟ್‌ಫೋನ್ಸ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot