ಹೆಚ್‌ಟಿಸಿ ಡಿಸೈರ್‌ ಎಕ್ಸ್‌ VS ಸೋನಿ ಎಕ್ಸಪೀರಿಯಾ ಯು

By Super
|
ಹೆಚ್‌ಟಿಸಿ ಡಿಸೈರ್‌ ಎಕ್ಸ್‌ VS ಸೋನಿ ಎಕ್ಸಪೀರಿಯಾ ಯು

ಭಾರತೀಯ ಮಾರುಕಟ್ಟೆಯಲ್ಲಿನ ಮಧ್ಯಮ ರೇಂಜ್‌ನ ಮೊಬೈಲ್‌ ತಯಾರಿಕಾ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಈಗಾಗಲೇ ಸ್ಥಳೀಯ ತಯಾರಕರುಗಳು ಸೇರಿದಂತೆ ಪ್ರತಿಷ್ಠಿತ ಮೊಬೈಲ್ ತಯಾರಕರುಗಳಾದಂತಹ ನೋಕಿಯಾ ಹಾಗೂ ಸ್ಯಾಮ್ಸಂಗ್‌ ನಂತಹ ಸಂಸ್ಥೆಗಳು ಮುಂಚೂಣಿಯಲ್ಲಿರುವ ಸಂದರ್ಭದಲ್ಲಿ, ಈ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸುವ ಪ್ರಯತ್ನದಲ್ಲಿರುವ ಹೆಚ್‌ಟಿಸಿ ತನ್ನಯ ನೂತನ ಆಂಡ್ರಾಯ್ಡ್‌ ಐಸಿಎಸ್‌ ಚಾಲಿತ ಸ್ಮಾರ್ಟ್‌ಫೋನ್‌ ಆದಂತಹ ಡಿಸೈರ್‌ ಎಕ್ಸ್‌ ಬಿಡುಗಡೆ ಮಾಡಿದೆ.

ಮಿಡ್‌ ರೇಂಜ್‌ ಮಾರುಕಟ್ಟೆಗೆ ರೂ.19,799 ದರದಲ್ಲಿ ಹೆಚ್‌ಟಿಸಿ ಪರಿಚಯಿಸಿರುವ ನೂತನ ಡಿಸೈರ್‌ ಎಕ್ಸ್‌ ಸ್ಮಾರ್ಟ್‌ಫೋನ್‌ಗೆ ಸೋನಿ ಸಂಸ್ಥೆ ಬಿಡುಗಡೆ ಮಾಡಿರುವಂತಹ ಎಕ್ಸಪೀರಿಯಾ ಯು ಸ್ಮಾರ್ಟ್‌ಫೋನ್‌ ಪ್ರಬಲ ಪೈಪೋಟಿ ನೀಡಬಲ್ಲದ್ದಾಗಿದೆ. ಅಂದಹಾಗೆ ನೀವು ಕೂಡ ಈ ಎರಡೂ ಮಿಡ್‌ ರೇಂಜ್‌ ಸ್ಮಾರ್ಟ್‌ಫೋನ್ಸ್‌ಗಳಲ್ಲಿ ಯಾವುದನ್ನಾದರು ಖರೀದಿಸ ಬೇಕೆಂದಿದ್ದಲ್ಲಿ ಅದಕ್ಕೂ ಮುನ್ನ ಇವೆರಡರ ನಡುವಿನ ಹೋಲಿಕೆಯನ್ನು ಓಮ್ಮೆ ಓದಿ ನೋಡಿ ನಂತರ ನಿಮ್ಮ ಆಯ್ಕೆಯ ಸ್ಮಾರ್ಟ್‌ಫೋನ್‌ ಯಾವುದು ಎಂಬುದನ್ನು ನೀವೇ ನಿರ್ಧರಿಸಿ ಖರೀದಿಸಿಕೊಳ್ಳಿ.

ಹಾಗಿದ್ದಲ್ಲಿ ಬನ್ನಿ ಹೆಚ್‌ಟಿಸಿ ಡಿಸೈರ್‌ ಎಕ್ಸ್‌ ಹಾಗೂ ಸೋನಿ ಎಕ್ಸಪೀರಿಯಾ ಯೂ ನಡುವಿನ ಹೋಲಿಕೆಯನ್ನು ಗಮನಿಸೋಣ.

ಗಾತ್ರ ಹಾಗೂ ಸುತ್ತಳತೆ: ಡಿಸೈರ್‌ ಎಕ್ಸ್‌ 118.5 x 62.3 x 9.3 mm ಸುತ್ತಳತೆಯೊಂದಿಗೆ 114 ಗ್ರಾಂ ತೂಕವಿದ್ದರೆ, ಎಕ್ಸಪೀರಿಯಾ ಯು 112 x 54 x 12 mm ಸುತ್ತಳತೆಯೊಂದಿಗೆ 110 ಗ್ರಾಂ ತೂಕವಿದ್ದು ಹೆಚ್‌ಟಿಸಿ ಗಿಂತಲೂ ಕೊಂಚ ಹಗುರವಾಗಿದೆ.

ದರ್ಶಕ: ಡಿಸೈರ್‌ ಎಕ್ಸ್‌ ನಲ್ಲಿ 4 ಇಂಚಿನ ಸೂಪರ್‌ LCD ಟಚ್‌ಸ್ಕ್ರೀನ್‌ ನೊಂದಿಗೆ 800 x 480 ಪಿಕ್ಸೆಲ್ಸ್‌ ಹೊಂದಿದ್ದರೆ. ಮತ್ತೊಂದೆಡೆ ಎಕ್ಸಪೀರಿಯಾ ಯು ನಲ್ಲಿ 3.5 ಇಂಚಿನ ಟಚ್‌ಸ್ಕ್ರೀನ್‌ ದರ್ಶಕ ಹಾಗೂ 854 x 480 ಪಿಕ್ಸೆಲ್‌ ರೆಸೆಲ್ಯೂಷನ್‌ ನೊಂದಿಗೆ BRAVIA ಎಂಜಿನ್‌ ದರ್ಶಕ ಹೊಂದಿದೆ.

ಪ್ರೊಸೆಸರ್‌: ಡಿಸೈರ್‌ ಎಕ್ಸ್‌ ಹಾಗೂ ಎಕ್ಸ್ಪೀರಿಯಾ ಯು ಎರಡೂ ಸ್ಮಾರ್ಟ್‌ಫೋನ್ಸ್‌ಗಳಲ್ಲಿ ಡ್ಯುಯೆಲ್‌ ಕೋರ್‌ 1GHz ಪ್ರೊಸೆಸರ್‌ ಹೊಂದಿವೆ.

ಆಪರೇಟಿಂಗ್‌ ಸಿಸ್ಟಂ: ಈ ವಿಚಾರದಲ್ಲಿಯೂ ಎರಡೂ ಸ್ಮಾರ್ಟ್‌ಫೋನ್ಸ್‌ಗಳಲ್ಲಿ ಆಂಡ್ರಾಯ್ಡ್‌ 4.0 ICS ಆಪರೇಟಿಂಗ್‌ ಸಿಸ್ಟಂ ಹೊಂದಿವೆ.

ಕ್ಯಾಮೆರಾ: ಡಿಸೈರ್‌ ಎಕ್ಸ್‌ ನಲ್ಲಿ 5MP ಹಿಂಬದಿಯ ಕ್ಯಾಮೆರಾ ದೊಂದಿಗೆ, LED ಫ್ಲಾಷ್‌ ಹಾಗೂ BSI ಸೆನ್ಸಾರ್‌ ಇದ್ದು ಕಡಿಮೆ ಬೆಳಕಿನಲ್ಲಿಉತ್ತಮ ಪಿಕ್ಚರ್‌ ತೆಗೆಯ ಬಹುದಾಗಿದೆ. ಅಂದಹಾಗೆ ವಿಡಿಯೋ ಕರೆಗಾಗಿ ಮುಂಬದಿಯ ಕ್ಯಾಮೆರಾ ಇಲ್ಲ. ಮತ್ತೊಂದೆಡೆ ಸೋನಿ ಎಕ್ಸಪೀರಿಯಾದಲ್ಲಿ ಯು ನಲ್ಲಿ 5MP ಹಿಂಬದಿಯ ಕ್ಯಾಮೆರಾ ದೊಂದಿಗೆ ಆಟೋ ಫೋಕಸ್‌ ಹೊಂದಿದ್ದು 16x ಡಿಜಿಟಲ್‌ ಜೂಮಿಂಗ್‌, LED ಫ್ಕಾಷ್‌ ಹಾಗೂ ವಿಡಿಯೋ ಕರೆಗಾಗಿ ಮುಂಬದಿಯ VGA ಕ್ಯಾಮೆರಾ ಹೊಂದಿದೆ.

ಸ್ಟೋರೇಜ್‌: ಡಿಸೈರ್‌ ಎಕ್ಸ್‌ ನಲ್ಲಿ 4GB iಆಂತರಿಕ ಮೆಮೊರಿ, 768MB RAM ಇದ್ದು ಮೈಕ್ರೋ ಎಸ್‌ಡಿ ಕಾರ್ಡ್‌ಸ್ಲಾಟ್‌ ಮೂಲಕ ಮೆಮೊರಿ ವಿಸ್ಥರಿಸಿಕೊಳ್ಳ ಬಹುದಾಗಿದೆ. ಹಾಗೂ ಎಕ್ಸಪೀರಿಯಾ ಯೂನಲ್ಲಿ ಕೊಂಚ ಹೆಚ್ಚಿನ 8GB ಆಂತರಿಕ ಮೆಮೊರಿಯೊಂದಿಗೆ, 512MB RAM ಹೊಂದಿದ್ದು ಮೈಕ್ರೋ ಎಸ್ಡಿ ಕಾರ್ಟ್‌ ಸ್ಲಾಟ್‌ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳ ಬಹುದಾಗಿದೆ.

ಕನೆಕ್ಟಿವಿಟಿ: ಎರಡೂ ಸ್ಮಾರ್ಟ್‌ಫೋನ್ಸಗಳಲ್ಲಿ ಬ್ಲೂಟೂತ್‌ 4.0 ನೊಂದಿಗೆ aptX, Wi-Fi 802.11 b/g/n, DLNA, ಇನ್‌-ಬಿಲ್ಟ್‌ GPS ಹಾಗೂ ಮೈಕ್ರೋ USB 2.0 ಹೊಂದಿವೆ.

ಬ್ಯಾಟರಿ: ಡಿಸೈರ್‌ ಎಕ್ಸ್‌ ನಲ್ಲಿ 1,650 mAh Li-ion ಬ್ಯಾಟರಿ ಇದ್ದು 10 ಗಂಟೆಗಳ ಟಾಕ್‌ ಟೈಮ್‌ 750 ಗಂಡೆಗಳ ಸ್ಟ್ಯಾಂಡ್‌ ಬೈ ನೀಡಿದರೆ, ಎಕ್ಸಪೀರಿಯಾ ಯು ನಲ್ಲಿ 1,320 mAh Li-ion ಬ್ಯಾಟರಿ ಇದ್ದು 6.5 ಗಂಟೆಗಳ ಟಾಕ್‌ ಟೈಮ್‌ ಹಾಗೂ 472 ಗಂಡೆಗಳ ಸ್ಟ್ಯಾಂಡ್‌ ಬೈ ನೀಡುತ್ತದೆ.

ಬೆಲೆ: ಖರೀದಿಸುವುದಾದರೆ ಡಿಸೈರ್‌ ಎಕ್ಸ್‌ ರೂ.19,799 ದರದಲ್ಲಿ ಲಭ್ಯವಿದ್ದರೆ, ಸೋನಿ ಎಕ್ಸಪೀರಿಯಾ ಯು ರೂ.14,999ದರದಲ್ಲಿ ಲಭ್ಯವಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X