ಕ್ವಾಡ್ ಕೋರ್ ಟೆಗ್ರಾ 3 ಪ್ರೊಸೆಸರ್ ಎಡ್ಜ್ ಬರುತಿದೆ ನೋಡಿ

By Super
|
ಕ್ವಾಡ್ ಕೋರ್ ಟೆಗ್ರಾ 3 ಪ್ರೊಸೆಸರ್ ಎಡ್ಜ್ ಬರುತಿದೆ ನೋಡಿ

ಥೈವಾನ್ ಮೂಲದ ಎಚ್ ಟಿಸಿ ಕಂಪನಿ ಇದೀಗ ಇಡೀ ಜಗತ್ತೇ ಅದರತ್ತ ತಿರುಗಿ ನೋಡುವಂತೆ ಮಾಡಿದೆ. ಎಚ್ ಟಿಸಿ ಕ್ವಾಡ್ ಕೋರ್ ಟೆಗ್ರಾ 3 ಫೋನ್ ಪರಿಚಯಿಸಲಿದೆ ಎಂಬ ಸುದ್ದಿ ಇಡೀ ಜಗತ್ತಿಗೇ ಆಶ್ಚರ್ಯ ತಂದಿದೆ. ಈ ಮೊಬೈಲ್ ಬಿಡುಗಡೆಯಾದರೆ ಕ್ವಾಡ್ ಕೋರ್ ಟೆಗ್ರಾ 3 ಪ್ರೊಸೆಸರ್ ಹೊಂದಿರುವ ಮೊಟ್ಟಮೊದಲ ಸ್ಮಾರ್ಟ್ ಫೋನ್ ಎಚ್ ಟಿಸಿ ಎಡ್ಜ್ ಆಗಲಿದೆ.

ಅತಿಯಾದ ವೇಗ ಮತ್ತು ಮಲ್ಟಿ ಟಾಸ್ಕಿಂಗ್ ಗೆ ಸಹಾಯ ಮಾಡುವ ಈ ಕ್ವಾಡ್ ಕೋರ್ ಟೆಗ್ರಾ 3 ಪ್ರೊಸೆಸರನ್ನು NVIDIA ತಯಾರು ಮಾಡಿದೆ. ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಗಳಿಗೆಂದೇ ಈ ವಿಶೇಷ ಪ್ರೊಸೆಸರನ್ನು ವಿನ್ಯಾಸಗೊಳಿಸಲಾಗಿದೆ.

ಸಾಮಾನ್ಯ ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೆ ಕ್ವಾಡ್ ಪ್ರೊಸೆಸರ್ ಸ್ಮಾರ್ಟ್ ಫೋನ್ ನಾಲ್ಕು ಪಟ್ಟು ಹೆಚ್ಚು ವೇಗವಿರುತ್ತೆ. ಈ ಪ್ರೊಸೆಸರನ್ನು ಆಂಡ್ರಾಯ್ಡ್ ಫೋನ್ ಗಳಿಗೆ ಬಳಸಿದರೆ ಕಾರ್ಯವೈಖರಿ ಇನ್ನೂ ಜೋರಿರುತ್ತೆ.

ಕೆಲವು ಮೂಲದಿಂದ ದೊರೆತಿರುವ ಮಾಹಿತಿ ಪ್ರಕಾರ ಈ ಮೊಬೈಲ್ ನ ಕೆಲವು ಗುಣಲಕ್ಷಣವನ್ನು ತಿಳಿಯಬಹುದಾಗಿದೆ. ಆಂಡ್ರಾಯ್ಡ್ 4.0 ಆಯಾಮದ ಆಪರೇಟಿಂಗ್ ಸಿಸ್ಟಮ್ (ಐಸ್ ಕ್ರೀಂ ಸ್ಯಾಂಡ್ ವಿಚ್ ಆಯಾಮ) ಹೊಂದಿರುವ ಈ ಮೊಬೈಲ್ ಎಚ್ ಟಿಸಿ 4.0 ಯೂಸರ್ ಇಂಟರ್ ಫೇಸ್ ಪಡೆದುಕೊಂಡಿದ್ದು, ಮೊದಲೇ ಹೇಳಿದಂತೆ ವಿಶೇಷವಾದ 1.5 GHz ವೇಗದ NVIDIA AP30 Tegra 3 ಕ್ವಾಡ್ ಕೋರ್ ಪ್ರೊಸೆಸರ್ ಅಳವಡಿಸಲಾಗಿದೆ. ಈ ಫೋನಿನ ಸಿಸ್ಟಮ್ ಮೆಮೊರಿ 1 ಜಿಬಿ ಇದೆ.

ಎಚ್ ಟಿಸಿ ಎಡ್ಜ್ ವಿಶೇಷತೆ:

* 4.7 ಇಂಚಿನ ಡಿಸ್ಪ್ಲೇ

* 8.0 ಮೆಗಾ ಪಿಕ್ಸಲ್ ಕ್ಯಾಮೆರಾ

* f/2.2 ಲೆನ್ಸ್ ಮತ್ತು ವಿಡಿಯೋ ರೆಕಾರ್ಡಿಂಗ್

* 720 p ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯ

* 32ಜಿಬಿ ಆಂತರಿಕ ಮೆಮೊರಿ ಸಾಮರ್ಥ್ಯ

* ಬ್ಲೂಟೂಥ್ 4.0, 21Mbps ವೇಗದ HSDPA

ಮನರಂಜನೆಗೆಂದು ಈ ಮೊಬೈಲಿನಲ್ಲಿ ಆಯ್ಕೆಗಳಿಗೇನೂ ಕಡಿಮೆಯಿಲ್ಲ. 2012 ರ ಆರಂಭದಲ್ಲಿ ಬಿಡುಗಡೆಗೊಳ್ಳಲಿರುವ ಈ ಮೊಬೈಲ್ ಬೆಲೆ ನಿಖರವಾಗಿ ತಿಳಿದುಬಂದಿಲ್ಲ. ಆದರೆ ಸರಾಸರಿ ಅತ್ಯುನ್ನತ ಸ್ಮಾರ್ಟ್ ಫೋನ್ ಗಳ ಬೆಲೆಯಷ್ಟೇ ಈ ಸ್ಮಾರ್ಟ್ ಫೋನ್ ಬೆಲೆಯೂ ಇರುತ್ತದೆ ಎನ್ನಲಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X