Subscribe to Gizbot

3ಜಿ ಆಯಿತು ಈಗ 4ಜಿ ಲೋಕದಲ್ಲಿ 'ಎಚ್ ಟಿ ಸಿ ಫೈರ್ ಬಾಲ್

Posted By:
3ಜಿ ಆಯಿತು ಈಗ 4ಜಿ ಲೋಕದಲ್ಲಿ 'ಎಚ್ ಟಿ ಸಿ ಫೈರ್ ಬಾಲ್

3ಜಿ ಯನ್ನು ಹಿಂದಿಕ್ಕಿ ಈಗ 4ಜಿ ಮೊಬೈಲ್ ಹೆಚ್ಚಿನ ಜನಪ್ರಿಯತೆಯನ್ನು ಗಳಿಸುತ್ತಿದೆ. 4ಜಿ ಸೌಲಭ್ಯವಿರುವ ಮೊಬೈಲ್ ನಲ್ಲಿ ಪ್ರತಿ ಸೆಕಂಡಿಗೆ 100MB ವೇಗದಲ್ಲಿ ಮಾಹಿತಿಯನ್ನು ರವಾನಿಸುತ್ತದೆ. ಮೊಬೈಲ್ ಫೋನ್ ಮಾತ್ರವಲ್ಲ 4ಜಿ ಸೌಲಭ್ಯ ಹೊಂದಿರುವ ಲ್ಯಾಪ್ ಟಾಪ್, ಟ್ಯಾಬ್ಲೆಟ್ ಕೂಡ ಲಭ್ಯವಿದೆ.

4ಜಿ ತಂತ್ರಜ್ಞಾನ ಬಳಸಿ ತಯಾರಿಸಲಾದ ಮೊಬೈಲ್ ಗಳ ಸಾಲಿಗೆ ಮತ್ತೊಂದು ಸೇರ್ಪಡೆ ಮೊಬೈಲ್ 'ಎಚ್ ಟಿ ಸಿ ಫೈರ್ ಬಾಲ್ ' . ಇದರ ಮಾಡಲ್ ನಂಬರ್ ADR 6410 ಎಂದು ನೀಡಲಾಗಿದೆ. ಈ 4ಜಿ ಮೊಬೈಲ್ ಮೊಟೊರೊಲಾ ಡ್ರಾಯ್ಡ್ ಗೆ ಪ್ರಬಲವಾದ ಸ್ಪರ್ಧಿಯಾಗಿದೆ. ಇದು QWERTY ಸ್ಲೈಡರ್ ಫೋನ್ ಆಗಿದ್ದು ಡಿಸೆಂಬರ್ ಕೊನೆಯ ವಾರದಲ್ಲಿ ಬಿಡುಗಡೆಯಾಗಲಿದೆ.

ಈ ಫೈರ್ ಬಾಲ್ ಗೂ ಎಚ್ ಟಿ ಸಿಗೂ ಸಾಕಷ್ಟು ಸಾಮರಸ್ಯ ಇದೆ ಎಂಬ ಸುದ್ಧಿ ಹೇಳಿ ಬರುತ್ತಿದೆ. ಹೊಸ ವರ್ಷಕ್ಕೆ ಕಂಪನಿಯು ಹೊಸ ನಿರೀಕ್ಷೆಯೊಂದಿಗೆ ಈ ಹೊಸ ಎಚ್ ಟಿ ಸಿ ಫೈರ್ ಬಾಲ್ ಬರುತ್ತಿದೆ. ಇದು ಎಚ್ ಟಿ ಸಿಯ ಇತರ ಮೊಬೈಲ್ ಗಿಂತ ಹೇಗೆ ಭಿನ್ನವಾಗಿದೆ ಎಂದು ಇನ್ನೂ ಕೆಲವೆ ದಿನಗಳಲ್ಲಿ ತಿಳಿದು ಬರಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot