Subscribe to Gizbot

ನಿಮ್ಮ ಕೈಯ್ಯಲ್ಲೂ ಈ ಹೀರೊ ಇರಲಿ

Posted By: Super
ನಿಮ್ಮ ಕೈಯ್ಯಲ್ಲೂ ಈ ಹೀರೊ ಇರಲಿ

ಮೊಬೈಲ್ ತಯಾರಿಕೆಯಲ್ಲಿ ತನ್ನದೇ ವಿಶಿಷ್ಟ ಛಾಪು ಮೂಡಿಸಿರುವ ಎಚ್ ಟಿ ಸಿ ಕಂಪನಿ ಇದೀಗ ವಿನೂತನ ಶೈಲಿಯ ಮೊಬೈಲನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸಲಿದೆ. HTC Hero S ಮೊಬೈಲ್ ಹಲವು ಆಯ್ಕೆ ಮತ್ತು ಅವಕಾಶಗಳನ್ನು ಹೊತ್ತು ತರುವ ನಿರೀಕ್ಷೆಯಿದೆ.

ಅತ್ಯಾಧುನಿಕ ಆಂಡ್ರಾಯ್ಡ್ 2.3 ಜಿಂಜರ್ ಬರ್ಡ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದ್ದು, 1.2 GHz ಪ್ರೊಸೆಸರ್ ಹೊಂದಿರುವ ಈ ಮೊಬೈಲ್ ಅತ್ಯುನ್ನತ ಕಾರ್ಯವೈಖರಿ ಪ್ರದರ್ಶಿಸುವ ಭರವಸೆಯಿದೆ.

HTC Hero S ಮೊಬೈಲ್ ವಿಶೇಷತೆ:

* 4 ಇಂಚಿನ QHD S-LCD ಟಚ್ ಸ್ಕ್ರೀನ್ ಡಿಸ್ಪ್ಲೇ, 540 x 960 ಪಿಕ್ಸಲ್ ರೆಸೊಲ್ಯೂಷನ್

* 121.5 x 61.9 x 11.8 ಎಂಎಂ ಸುತ್ತಳತೆ, 130 ಗ್ರಾಂ ತೂಕ

* 5 ಮೆಗಾ ಪಿಕ್ಸಲ್ ಕ್ಯಾಮೆರಾ

* 1.3 ಮೆಗಾ ಪಿಕ್ಸಲ್ ಫ್ರಂಟ್ ಕ್ಯಾಮೆರಾ, ಆಟೊ ಫೋಕಸ್ ,ಫ್ಲಾಶ್

* 1280 x 720 ಪಿಕ್ಸಲ್ ರೆಸೊಲ್ಯೂಷನ್ ನಿಂದ 720p ಹೈ ಡೆಫನಿಶನ್ ವಿಡಿಯೋ ಪ್ಲೇಬ್ಯಾಕ್

* 4ಜಿಬಿ ಆಂತರಿಕ ಮೆಮೊರಿ ಸಾಮರ್ಥ್ಯ

* 32ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊ SD ಕಾರ್ಡ್ ಸ್ಲಾಟ್

* 768 ಎಂಬಿ RAM

* ಡಾಟಾ ರೇಟ್ FTP ಮತ್ತು OPP ಜೊತೆ ಬ್ಲೂಟೂಥ್ 3.0, A2DP

* 802.11 b/ g/ n ವೈ-ಫೈ, USB, HDMI ಪೋರ್ಟ್

* 3.5 ಎಂಎಂ ಆಡಿಯೋ ಜ್ಯಾಕ್

ಈ ಹ್ಯಾಂಡ್ ಸೆಟ್ ಆಡಿಯೋ, ವಿಡಿಯೋ ಜೊತೆ MP3, MPEG4 ಮತ್ತು AAC ಫೈಲ್ ಫಾರ್ಮೆಟ್ ಗಳನ್ನು ಬೆಂಬಲಿಸುತ್ತದೆ. ಬ್ರೌಸರ್ ಗೆಂದು  HTML ಮತ್ತು Flash ನೀಡಲಾಗಿದೆ.

1520 mAh ಲಿಥಿಯಂ ಐಯಾನ್ ಬ್ಯಾಟರಿಯ ಹೀರೊ ಮೊಬೈಲ್ 7.25 ಗಂಟೆ ಟಾಕ್ ಟೈಂ ಮತ್ತು 456 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಆದರೆ ನಿರಾಶೆಯ ಸಂಗತಿಯೆಂದರೆ ಈ ಎಚ್ ಟಿಸಿ ಹೀರೊ ಎಸ್ ಮೊಬೈಲ್ ಬೆಲೆ ಸದ್ಯಕ್ಕೆ ಲಭ್ಯವಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot