ಆಂಡ್ರಾಯ್ಡ್ 2.3.5ಗೆ ಎಚ್ ಟಿಸಿ ಇನ್ ಕ್ರೆಡಿಬಲ್ ಎಸ್ ಪರಿಷ್ಕರಣೆ

ಸ್ಮಾರ್ಟ್ ಫೋನ್ ವಿಷಯಕ್ಕೆ ಬಂದರೆ ಎಚ್ ಟಿಸಿಯ ಹೆಸರು ಹೆಚ್ಚು ಕೇಳಿಬರುತ್ತೆ. ಹಲವು ಅತ್ಯಾಕರ್ಷಕ ಫೋನ್ ಗಳನ್ನು ಪರಿಚಯಿಸಿರುವ ಮತ್ತು ಹೆಚ್ಚು ಬೇಡಿಕೆ ಹೊಂದಿರುವ ಎಚ್ ಟಿಸಿ ಕಂಪನಿ ತಂತ್ರಜ್ಞಾನದಲ್ಲೂ ತುಂಬಾ ಮುಂದಿದೆ. ಎಚ್ ಟಿಸಿ ಫೋನ್ ಗಳಲ್ಲಿ ಹೆಸರು ಮಾಡಿರುವ ಇನ್ನೊಂದು ಉತ್ತಮ ಅಂಶವೆಂದರೆ ಅದರಲ್ಲಿರುವ ಇಂಟರ್ ಫೇಸ್.
ಬಳಕೆದಾರರಿಗೆಂದು ಎಚ್ ಟಿಸಿ ಉತ್ತಮ ಇಂಟರ್ ಫೇಸನ್ನು ಸೃಷ್ಟಿಸಿದೆ. ಇದೀಗ ಎಚ್ ಟಿಸಿ ಕಂಪನಿಯ ಎಚ್ ಟಿಸಿ ಇನ್ ಕ್ರೆಡಿಬಲ್ ಎಸ್ ಎಂಬ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಪರಿಷ್ಕ್ರತಗೊಳ್ಳುತ್ತಿರುವುದಾಗಿ ಕಂಪನಿ ತಿಳಿಸಿದೆ. ಇದು ಆಂಡ್ರಾಯ್ಡ್ 2.3.5 ಆಯಾಮಕ್ಕೆ ಪರಿಷ್ಕ್ರತಗೊಳ್ಳುತ್ತಿದ್ದು, ಇದರಲ್ಲಿನ ಸೆನ್ಸ್ ಯೂಸರ್ ಇಂಟರ್ ಫೇಸ್ ಕೂಡ 3.0 ಆಯಾಮಕ್ಕೆ ಪರಿಷ್ಕ್ರತಗೊಳ್ಳುತ್ತಿದೆ.
ಈ ಸ್ಮಾರ್ಟ್ ಫೋನ್ ನಲ್ಲಿನ ಪರಿಷ್ಕರಣೆ ಬಗ್ಗೆ ಅನೇಕ ಮೂಲಗಳಿಂದ ಸುದ್ದಿ ಬರುತ್ತಿದ್ದು, ಯುರೋಪ್ ನಿಂದ ಹೆಚ್ಚು ಸುದ್ದಿ ಬರುತ್ತಿರುವುದರಿಂದ ಮೊದಲು ಯುರೋಪ್ ದೇಶಗಳಲ್ಲಿ ಪರಿಷ್ಕರಣೆ ಪರಿಚಯಗೊಂಡು ನಂತರ ಇನ್ನಿತರ ಕಡೆಗಳಿಗೆ ತಲುಪಲಿದೆ ಎನ್ನಲಾಗಿದೆ.
ಪರಿಷ್ಕ್ರತ ಮಾದರಿ ಗ್ರಾಹಕರಿಗೆ ಇನ್ನೂ ಹೆಚ್ಚು ಸೌಲಭ್ಯ ನೀಡಲಿದೆ. ಈ ಪರಿಷ್ಕರಣೆ ಆದ ನಂತರವೇ ಮೊಬೈಲ್ ಗಳಿಗೆ ನೋಟಿಫಿಕೇಶನ್ ತಲುಪಲಿದೆ. ಈ ಪರಿಷ್ಕರಣೆ ಬಗ್ಗೆ ಮಾಹಿತಿ ಬಂದಿಲ್ಲವೆಂದರೆ ಸೆಟ್ಟಿಂಗ್ ಆಯ್ಕೆಯಲ್ಲಿ ‘About phone’ ಆಯ್ಕೆಯನ್ನು ಆರಿಸಿಕೊಂಡರೆ ಪರಿಷ್ಕರಣೆ ಬಗ್ಗೆ ಮಾಹಿತಿ ದೊರೆಯುತ್ತದೆ.
ಹಾಗೆಯೇ HTC ಡಿಸೈರ್ HD ಎಂಬ ಮೊಬೈಲ್ ಕೂಡ ಪರಿಷ್ಕರಣೆಗೊಳ್ಳುತ್ತಿರುವುದಾಗಿ ತಿಳಿದುಬಂದಿದೆ. ಹೊಸ ಮೊಬೈಲ್ ಗಳನ್ನು ಬಿಡುಗಡೆಗೊಳಿಸಿದ ನಂತರ ಹಳೆಯ ಮೊಬೈಲ್ ಗಳ ಬಗ್ಗೆ ಹೆಚ್ಚು ಚಿಂತಿಸದೆ ಅದನ್ನು ಹಾಗೆಯೇ ಬಿಡುವ ಕಂಪನಿಗಳಿಗಿಂತ HTC ವಿಭಿನ್ನವಾಗಿದೆ.


Click it and Unblock the Notifications








