ಎಚ್‌ಟಿಸಿ ಒನ್ M8 ಭಾರತದಲ್ಲಿ ರೂ 35,999ಕ್ಕೆ

Written By:

ಕಳೆದ ಬಾರಿ, ಪ್ರೀಮಿಯಮ್ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿ ಎಚ್‌ಟಿಸಿ ತನ್ನ ಅತಿ ದೊಡ್ಡ ಸ್ಮಾರ್ಟ್‌ಫೋನ್ ಒನ್ E8 ಅನ್ನು ಭಾರತದಲ್ಲಿ ಲಾಂಚ್ ಮಾಡಿದ್ದು ಇದರ ಬೆಲೆ ಮತ್ತು ಲಭ್ಯತೆಯ ಕುರಿತು ಯಾವುದೇ ಮಾಹಿತಿಯನ್ನು ಕಂಪೆನಿ ಇದುವರೆಗೆ ತಿಳಿಸಿಲ್ಲ.

ಅದಾಗ್ಯೂ, ಇದೇ ರೀತಿಯ ಹ್ಯಾಂಡ್‌ಸೆಟ್ ಅನ್ನು ಖರೀದಿಸುವ ಯೋಜನೆಯಲ್ಲಿ ನೀವಿದ್ದರೆ ಚಿಂತಿಸದಿರಿ, ಸ್ಮಾರ್ಟ್‌ಫೋನ್ ಅನ್ನು ಕಂಪೆನಿಯು ಫ್ಲಿಪ್‌ಕಾರ್ಟ್ ಮೂಲಕ ರೂ 35,999 ಮೌಲ್ಯದಲ್ಲಿ ಮಾರಾಟ ಮಾಡುತ್ತಿದೆ. ಇತರ ಮೂರನೇ ವ್ಯಕ್ತಿ ರೀಟೈಲರ್‌ಗಳು ಕೂಡ ವಿವಿಧ ಬೆಲೆಯಲ್ಲಿ ಇದೇ ಹ್ಯಾಂಡ್‌ಸೆಟ್ ಅನ್ನು ಮಾರಾಟ ಮಾಡುತ್ತಿದ್ದಾರೆ.

ಡ್ಯುಯಲ್ ಸಿಮ್‌ನೊಂದಿಗೆ ಎಚ್‌ಟಿಸಿ ಒನ್ M8 ಫ್ಲಿಪ್‌ಕಾರ್ಟ್‌ನಲ್ಲಿ

ಇನ್ನು ಫೋನ್ ಕುರಿತು ವಿವಿರವಾದ ಮಾಹಿತಿಯನ್ನು ಹೇಳಬೇಕೆಂದರೆ, ಎಚ್‌ಟಿಸಿ ಒನ್ E8 ಇದೇ ಕಂಪೆನಿಯ ಒನ್ M8 ನ ಪ್ಲಾಸ್ಟಿಕ್ ಅವತರಣಿಕೆಯಾಗಿದೆ. ಇದು 5 ಇಂಚಿನ ಸೂಪರ್ LCD3 ಡಿಸ್‌ಪ್ಲೇಯೊಂದಿಗೆ ಬಂದಿದ್ದು ರೆಸಲ್ಯೂಶನ್ 1080 x 1920 ಪಿಕ್ಸೆಲ್‌ಗಳಾಗಿವೆ. ಇನ್ನು ಕ್ವಾಲ್‌ಕಾಮ್ MSM8975AC ಸ್ನ್ಯಾಪ್‌ಡ್ರಾಗನ್ 801 ಕ್ವಾಡ್ ಕೋರ್ 2.5 GHz Krait 400 CPU ಮತ್ತು Adreno 330 GPU ಸಂಯೋಜನೆಗೊಂಡಿದ್ದು ಪೋನ್ 2 GB RAMನಲ್ಲಿದೆ. ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್) ಫೋನ್‌ನಲ್ಲಿದೆ ಎಂಬುದೇ ಧನಾತ್ಮಕ ಅಂಶವಾಗಿದೆ.

ಫೋನ್ ಅತ್ಯುನ್ನತ ಕ್ಯಾಮೆರಾ ಅಂಶವನ್ನು ನೀಡದಿದ್ದರೂ ನಿಯಮಿತ 13MP ಕ್ಯಾಮೆರಾ ಸ್ವಯಂ ಫೋಕಸ್ ಹಾಗೂ LED ಫ್ಲ್ಯಾಶ್ ಇದರೊಂದಿಗೆ 5MP ಮುಂಭಾಗ ಕ್ಯಾಮೆರಾದೊಂದಿಗೆ ಬಂದಿದೆ. ಫೋನ್ 4 ಜಿಬಿ ಆಂತರಿಕ ಸಂಗ್ರಹಣೆಯನ್ನು ಹೊಂದಿದ್ದು ಇದನ್ನು 128 ಜಿಬಿಗೆ ವಿಸ್ತರಿಸಬಹುದು. ಇನ್ನು ಇತರ ಅಂಶಗಳೆಂದರೆ ಡ್ಯುಯಲ್ ಸಿಮ್, GPRS, USB, WiFi, 3G ಹಾಗೂ DLNA ಆಗಿದೆ. ಇದರ ಬ್ಯಾಟರಿ ಸಾಮರ್ಥ್ಯ Li-Po 2600 mAh ಆಗಿದ್ದು ಇದನ್ನು ತೆಗೆಯಲಾಗುವುದಿಲ್ಲ.

ಉತ್ತಮ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಗುಣಮಟ್ಟದೊಂದಿಗೆ ಎಚ್‌ಟಿಸಿ ಒಂದು ಉತ್ತಮ ಫೋನ್ ಆಗಿ ಮೂಡಿಬಂದಿದೆ. ಇಲ್ಲಿಯವೆರೆಗೆ, ಒನ್ M8 ಯಲ್ಲಿ ಎಚ್‌ಟಿಸಿ ಹೆಚ್ಚು ಹಣವನ್ನು ಮಾಡುತ್ತಿತ್ತು. ಇದರೊಂದಿಗೆ ಡಿಸೈರ್ 816 ಕೂಡ ಬಿಸಿ ಬಿಸಿ ದೋಸೆಯಂತೆ ಮಾರಾಟವಾಗುತ್ತಿರುವ ಹ್ಯಾಂಡ್‌ಸೆಟ್ ಆಗಿದೆ ಎಂದೇ ಹೇಳಬಹುದು. ಇನ್ನು ಈ ಫೋನ್ ಖರೀದಿಯಲ್ಲಿ ನೀವು ತೊಡಗಿದ್ದೀರಿ ಎಂದಾದಲ್ಲಿ ಈ ಅಂಶಗಳತ್ತ ಕೂಡ ನೀವು ಗಮನಹರಿಬೇಕಾದ್ದು ಅನಿವಾರ್ಯವಾಗಿದೆ.

Read more about:
English summary
This article tells about HTC One E8 With Dual-SIM Support Now Available in India for Rs 35,999.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot