ಎಚ್‌ಟಿಸಿ ಒನ್ ಎಮ್8 ಕಪ್ಪು ಮೆಟಲ್‌ನಲ್ಲಿ

Written By:

ಈ ವರ್ಷ ಹೆಚ್ಚಿನ ಎಲ್ಲಾ ಬ್ರ್ಯಾಂಡ್ ಡಿವೈಸ್‌ಗಳು ಲಾಂಚ್ ಆಗಿದ್ದನ್ನು ನಾವು ನೋಡಿದ್ದೇವೆ. ಆದರೆ ಇದೆಲ್ಲವೂ ಹೆಚ್ಚು ಪ್ರಮಾಣಿತ ಫ್ಲ್ಯಾಗ್‌ಶಿಪ್ ಡಿವೈಸ್‌ಗಳೆಂದು ಖ್ಯಾತಿಯನ್ನು ಹೊಂದಿದ್ದರೂ ಕೆಲವೊಂದು ಬ್ರ್ಯಾಂಡ್‌ಗಳು ತಮ್ಮ ಹೆಸರನ್ನು ಖ್ಯಾತಿಯ ಪಟ್ಟಿಗೆ ಸೇರಿಸುವ ತುಡಿತದಲ್ಲಿವೆ.

ಈಗ ತೈವಾನ್ ಕಂಪೆನಿ ಎಚ್‌ಟಿಸಿ ಕೂಡ ಈ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಒನ್ M8 ನ ಇನ್ನೊಂದು ಬಣ್ಣದ ಆವೃತ್ತಿಯನ್ನು ಹೊರತರುವ ಸಿದ್ಧತೆಯಲ್ಲಿದೆ. ಈಗಾಗಲೇ ಈ ಕಂಪೆನಿಯ ಡಿವೈಸ್‌ಗಳು ಬೆಳ್ಳಿ, ಗ್ರೇ, ಮತ್ತು ಚಿನ್ನದ ಬಣ್ಣದಲ್ಲಿ ಲಭ್ಯವಿವೆ.

ಎಚ್‌ಟಿಸಿ ಒನ್ ಎಮ್8 ಆಕರ್ಷಕ ಬಣ್ಣದಲ್ಲಿ

ಈ ಬಣ್ಣಗಳ ಸಾಲನ್ನು ಕೆಂಪು ಮತ್ತು ನೀಲಿ ಮಾಡೆಲ್‌ಗಳು ಸೇರಿಕೊಳ್ಳುವ ನಿರೀಕ್ಷೆ ನಮಗಿದ್ದು ನಮ್ಮ ಖಾತರತೆಯನ್ನು ಹೆಚ್ಚಿಸಲಿದೆ. ಎಚ್‌ಟಿಸಿ ಒನ್ M8 ಕ್ಯುಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇತ್ತೀಚಿನ SoC ಯನ್ನು ಕ್ವಾಲ್‌ಕಾಮ್‌ನಿಂದ ಪಡೆದುಕೊಂಡಿದೆ. ಆದ್ದರಿಂದ ಎಚ್‌ಟಿಸಿ ಒನ್ M8 ಕಪ್ಪು ಬಣ್ಣದ ಆವೃತ್ತಿ ಕೂಡ ಇದೇ SoC ಯನ್ನು ಸ್ನ್ಯಾಪ್‌ಡ್ರಾಗನ್ 801 ಬದಲಿಗೆ ಬಳಸಬಹುದು.

ಈ ಹ್ಯಾಂಡ್‌ಸೆಟ್ ಬಗ್ಗೆ ಯಾವುದೇ ಮಾಹಿತಿ ನಮಗೆ ಲಭ್ಯವಾಗಿಲ್ಲ ಮತ್ತು ಇದು ಯಾವಾಗಿನಿಂದ ಬಿಡುಗಡೆಯಾಗಲಿದೆ ಎಂಬುದನ್ನು ಕೂಡ ಕಾದು ನೋಡಬೇಕಾಗಿದೆ. ಎಚ್‌ಟಿಸಿ ಒನ್ M8 ಕಪ್ಪು ಬಣ್ಣದಲ್ಲಿ ಇನ್ನು ಏನಾದರೂ ಬದಲಾವಣೆಗಳನ್ನು ಕಂಪೆನಿ ಮಾಡಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot