ಎಚ್‌ಟಿಸಿ ಒನ್ ಎಮ್ 8 ಅಧಿಕೃತ ಘೋಷಣೆ
ಮೊದಲೇ ನಿರೀಕ್ಷಿಸದ್ದಂತೆ, ಡ್ಯುಯೆಲ್ ಸಿಮ್ ರೂಪಾಂತರದ ಎಚ್‌ಟಿಸಿ ಒನ್ ಎಮ್ 8 ಆಯ್ಕೆಯ ಜಾಗತಿಕ ಮಾರುಕಟ್ಟೆಯನ್ನು ಕೂಡಲೇ ಪ್ರವೇಶಿಸಲಿದೆ. ಇದು ಒಮ್ಮೆ ಲಾಂಚ್ ಆದ ನಂತರ ಭಾರತದೊಂದಿಗೆ ಇದು ಏಷ್ಯಾದ ಮಾರುಕಟ್ಟೆಯನ್ನು ಪ್ರವೇಶಿಸಲಿರುವುದು ಖಾತ್ರಿಯಾಗಿದೆ. ಕಳೆದ ಬಾರಿ ಡ್ಯುಯೆಲ್ ಸಿಮ್ ಆವೃತ್ತಿಯು ರಷ್ಯಾದಲ್ಲಿ ಲೀಕ್ ಆಗಿತ್ತು.
ಎಚ್‌ಟಿಸಿ ತನ್ನ ಫ್ಲ್ಯಾಗ್ ಶಿಪ್ ಉಳ್ಳ ಡ್ಯುಯೆಲ್ ಸಿಮ್ ಹ್ಯಾಂಡ್‌ಸೆಟ್‌ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡುತ್ತಿದ್ದು ಇದೊಂದು ಕಂಪೆನಿಯ ಮೈಲಿಗಲ್ಲು ಎಂದೇ ಹೇಳಬಹುದು. ಇದೇ ಹೆಸರಿನ ಮೂಲ ಎಚ್‌ಟಿಸಿ ಒನ್‌ನ ಡ್ಯುಯೆಲ್ ಸಿಮ್ ಆವೃತ್ತಿಯನ್ನು ಈ ಮೊದಲು ನಾವು ನೋಡಿದ್ದು, ಈ ಸುದ್ದಿ ಅಷ್ಟೊಂದು ಆಶ್ಚರ್ಯಕಾರಿಯಾಗಿ ಬಂದಿಲ್ಲ ಎಂದೇ ಹೇಳಬಹುದು.

ಮುಂದಿನ ವಾರದಲ್ಲೇ ಈ ಡಿವೈಸ್ ಜರ್ಮನಿ, ಆಸ್ಟ್ರೇಲಿಯಾ ಮತ್ತು ಸ್ವಿಟ್ಝರ್‌ಲ್ಯಾಂಡ್‌ನಲ್ಲಿ ಲಭ್ಯವಾಗುತ್ತಿದ್ದು ಇದರ ಅಂದಾಜು ಬೆಲೆ ರೂ 64,941 ಆಗಿದೆ. ಇದು ಒಂದೇ ಬಣ್ಣದಲ್ಲಿ ಲಭ್ಯವಾಗುತ್ತಿದ್ದು ಗನ್‌ಮೆಟಲ್ ಗ್ರೇ ಬಣ್ಣವಾಗಿದೆ.
ಇದು 5 ಇಂಚಿನ ಪೂರ್ಣ HD ಡಿಸ್‌ಪ್ಲೇಯೊಂದಿಗೆ ಬಂದಿದ್ದು, ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಇದರಲ್ಲಿ ಚಾಲನೆಯಾಗುತ್ತಿದೆ. ಡಿವೈಸ್ HTC ಸೆನ್ಸ್ 6.0 UI ನೊಂದಿಗೆ ಬಂದಿದ್ದು ಬ್ಲಿಂಕ್‌ಫೀಡ್ ಲೇಯರ್ ಅನ್ನು ಮೇಲ್ಭಾಗದಲ್ಲಿ ಹೊಂದಿದೆ. ಡಿವಸ್‌ನಲ್ಲಿ ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್‌ನಲ್ಲಿ ಚಾಲನೆಯಾಗುತ್ತಿದ್ದು 2ಜಿಬಿ RAM ಫೋನ್‌ನಲ್ಲಿದೆ. ಇದು ಹೆಚ್ಚುವರಿ ಮೈಕ್ರೋಎಸ್‌ಡಿ ಸ್ಲಾಟ್ ಅನ್ನು ಹೊಂದಿದ್ದು 128 ಜಿಬಿವರೆಗೆ ನಿಮಗೆ ಆಂತರಿಕ ಸಂಗ್ರಹಣೆಯನ್ನು ವಿಸ್ತರಿಸಬಹುದಾಗಿದೆ.
ಇಷ್ಟಲ್ಲದೆ ಎಚ್‌ಟಿಸಿ ಒನ್ ಎಮ್ 8 ಡ್ಯುಯೆಲ್ ಎಲ್‌ಇಡಿ ರಿಯರ್ ಕ್ಯಾಮೆರಾವನ್ನು ಹೊಂದಿದ್ದು ಡ್ಯುಯೆಲ್ ಫ್ಲ್ಯಾಶ್ ಬೆಂಬಲವನ್ನು ಹೊಂದಿದೆ. ಹೊಚ್ಚ ಹೊಸ ಅಲ್ಟ್ರಾ ಪಿಕ್ಸೆಲ್ ಕ್ಯಾಮೆರಾ ಎಂದು ಕಂಪೆನಿ ಇದನ್ನು ಕರೆದಿದೆ. ಪೋನ್‌ನಲ್ಲಿ 5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ ಕೂಡ ಇದ್ದು ಆಕರ್ಷಕ ಫೋಟೋಗಳನ್ನು ತೆಗೆಯಲು ಸಹಕಾರಿಯಾಗಿದೆ. ಫೋನ್‌ನ ಬ್ಯಾಟರಿ ಸಾಮರ್ಥ್ಯ 2,600 mAh ಆಗಿದೆ.
ಗಿಜ್‌ಬಾಟ್‌ಗೆ ಭೇಟಿ ನೀಡುತ್ತಿರಿ!


Click it and Unblock the Notifications








